ದೆಹೆಲಿ ಸಂಸದರ ಫ್ಲ್ಯಾಟ್‌ನಲ್ಲಿ ಹೊತ್ತಿಕೊಂಡ ಬೆಂಕಿ, ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳ, ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ತೀವ್ರತೆಗೆ ಫ್ಲ್ಯಾಟ್ ಸಂಪೂರ್ಣ ಸುಟ್ಟುಕರಕಲಾಗಿದೆ. ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ.
ನವದೆಹಲಿ (ಅ.08) ರಾಷ್ಟ್ರ ರಾಜಧಾನಿ ದೆಗಲಿಯ ರಾಜ್ಯಸಭಾ ಸದಸ್ಯರ ಫ್ಲ್ಯಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಫ್ಲ್ಯಾಟ್ ಸಂಪೂರ್ಣ ಸುಟ್ಟು ಕಲಕರಲಾಗಿದೆ. ಬೆಂಕಿಯ ಕೆನ್ನಾಲಗೆ ಅಕ್ಕ ಪಕ್ಕದ ಫ್ಲ್ಯಾಟ್‌ಗೂ ವ್ಯಾಪಿಸಿದೆ. 6 ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ತೀವ್ರಗೊಳ್ಳುತ್ತಿದ್ದಂತೆ ಅಕ್ಕ ಪಕ್ಕದ ಫ್ಲ್ಯಾಟ್‌ನಲ್ಲಿದ್ದವರನ್ನು ತುರ್ತುಗಾಗಿ ಹೊರಗೆ ಕಳುಹಿಸಲಾಗಿದೆ. ಅದೃಷ್ಠ ಪ್ರಕಾರ ಯಾವುದೇ ಸಾವು ನೋವು ಸಂಭಿವಿಸಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ.
ಹಲವು ಫ್ಲ್ಯಾಟ್‌ಗೆ ಆವರಿಸಿಕೊಂಡ ಬೆಂಕಿ
ರಾಜ್ಯಸಭಾ ಸದಸ್ಯರ ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ ಅಕ್ಕ ಪಕ್ಕದ ಫ್ಲ್ಯಾಟ್‌ಗೂ ಹಬ್ಬಿದೆ. 6 ಅಗ್ನಿಶಾಮಕ ದಳ ಹಾಗೂ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸುರಕ್ಷಿತಾ ಕ್ರಮವಾಗಿ ಇತರ ಫ್ಲ್ಯಾಟ್‌ಗಳಿಂದ ಜನರನ್ನು ಸುರಕ್ಷಿತವಾಗಿ ಹೊರಗೆ ತರೆತರಲಾಗಿದೆ. ಇದೀಗ ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿದಿದೆ. ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಕಾರಣ ನಂದಿಸುವ ಕಾರ್ಯಾಚರಣೆ ವಿಳಂಬವಾಗಿದೆ.
ಸಂಸತ್ತಿನಿಂದ 200 ಮೀಟರ್ ದೂರದಲ್ಲಿರುವ ಸಂಸರದ ಅಪಾರ್ಟ್‌ಮೆಂಟ್
ದೆಹೆಲಿಯ ಸಂಸತ್ತಿನಿಂದ ಕೇವಲ 200 ಮೀಟರ್ ದೂರದಲ್ಲಿರುವ ಸಂಸದರ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪೊಲೀಸರು ಅಲರ್ಟ್ ಆಗಿದ್ದಾರೆ. ಇತ್ತ ಟ್ರಾಫಿಕ್ ಮಾರ್ಗ ಬದಲಿಸಲಾಗಿದೆ. ಅಗ್ನಿಶಾಮಕ ದಳ ಹಾಗೂ ಪೊಲೀಸರ ಕಾರ್ಯಾಚರಣೆಗೆ ಅನುವು ಮಾಡಿಕೊಡಲಾಗಿದೆ.
ಅದೃಷ್ಠವಶಾತ್ ಯಾರಿಗೂ ನೋವಾಗಿಲ್ಲ
ಬೆಂಕಿ ಕಾಣಿಸಿಕೊಂಡ ಫ್ಲ್ಯಾಟ್ನನಲ್ಲಿ ಅಗ್ನಿಗೆ ಯಾರು ಸಿಲುಕಿಲ್ಲ. ಅಕ್ಕ ಪಕ್ಕದ ಫ್ಲ್ಯಾಟ್‌ನಲ್ಲಿದ್ದವರನ್ನೂ ಹೊರಗೆ ಕಳುಹಿಸಿರುವ ಕಾರಣ ಯಾವುದೇ ಪ್ರಾಣ ಹಾನಿಯಾಗಿಲ್ಲ. ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
2020ರಲ್ಲಿ ಮೋದಿ ಉದ್ಘಾಟನೆ ಮಾಡಿದ್ದ ಫ್ಲ್ಯಾಟ್
ಸಂಸದರಿಗೆ ವಸತಿ ಸಮುಚ್ಚಯ ಕಟ್ಟವಾಗಿದೆ. ಹಲವು ಮನೆಗಳಿರುವ ಸಂಸರದ ಅಪಾರ್ಟ್‌ಮೆಂಟ್ ಒಂದು ಫ್ಲ್ಯಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. 2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಸದರ ಹೊಸ ವಸತಿ ಸಮುಚ್ಚಯ ಉದ್ಘಾಟಿಸಿದ್ದರು. ಇದರಲ್ಲಿ 76 ಫ್ಲ್ಯಾಟ್‌ಗಳಿವೆ. 80 ವರ್ಷಕ್ಕೂ ಹಳೇ 8 ಬಂಗಲೆಗಳನ್ನು ಮರು ಅಭಿವೃದ್ಧಿ ಮಾಡಿ ಈ ವಸತಿ ಸಮುಚ್ಚಯ ಕಟ್ಟಲಾಗಿತ್ತು. ಈ ವಸತಿ ಸಮುಚ್ಚಯಗಳಿಂದ ಶೇಕಡಾ 14ರಷ್ಟು ವೆಚ್ಚ ಸಂಸರದ ವೆಚ್ಚ ಕಡಿಮೆಯಾಗುತ್ತಿದೆ ಎಂದು ವರದಿಗಳು ಹೇಳುತ್ತಿದೆ.


