ಪಹಲ್ಗಾಮ್‌ ದಾಳಿಯ ನಂತರ ಕಾಶ್ಮೀರಿ ಮುಸ್ಲಿಂ ಯುವಕನೋರ್ವನ ವೀಡಿಯೋ ಸಖತ್ ವೈರಲ್: ಆತ ಹೇಳಿದ್ದೇನು

Published : Apr 25, 2025, 10:58 AM ISTUpdated : Apr 25, 2025, 11:16 AM IST
ಪಹಲ್ಗಾಮ್‌ ದಾಳಿಯ ನಂತರ ಕಾಶ್ಮೀರಿ ಮುಸ್ಲಿಂ ಯುವಕನೋರ್ವನ ವೀಡಿಯೋ ಸಖತ್ ವೈರಲ್: ಆತ ಹೇಳಿದ್ದೇನು

ಸಾರಾಂಶ

ಜಮ್ಮು ಕಾಶ್ಮೀರದಲ್ಲಿ ಇಬ್ಬರು ವಿದೇಶಿಯರು ಸೇರಿದಂತೆ 26 ಪ್ರವಾಸಿಗರನ್ನು ಬಲಿ ಪಡೆದ ಪಹಲ್ಗಾಮ್  ಭಯೋತ್ಪಾದಕ ದಾಳಿಯ ನಂತರ ಕಾಶ್ಮೀರಿ ಯುವಕನೋರ್ವನ ಈ ಘಟನೆಯ ಬಗ್ಗೆ ಮಾತನಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಆತ ಏನು ಹೇಳಿದ್ದಾನೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಶ್ರೀನಗರ:  ಜಮ್ಮು ಕಾಶ್ಮೀರದಲ್ಲಿ ಇಬ್ಬರು ವಿದೇಶಿಯರು ಸೇರಿದಂತೆ 26 ಪ್ರವಾಸಿಗರನ್ನು ಬಲಿ ಪಡೆದ ಪಹಲ್ಗಾಮ್  ಭಯೋತ್ಪಾದಕ ದಾಳಿಯ ನಂತರ ಕಾಶ್ಮೀರಿ ಯುವಕನೋರ್ವನ ಈ ಘಟನೆಯ ಬಗ್ಗೆ ಮಾತನಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಆತ ಏನು ಹೇಳಿದ್ದಾನೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ನಡೆದಾಗಲೆಲ್ಲಾ, ಅದು ಪಾಕಿಸ್ತಾನದವರು ಮಾಡಿದ್ದು, ಇದರಲ್ಲಿ ಸ್ಥಳೀಯರ ಯಾವುದೇ ಪಾತ್ರವಿಲ್ಲ ಎಂದು ಕಾಶ್ಮೀರಿ ಸ್ಥಳೀಯರಿಂದ ಹಿಡಿದು ಅಲ್ಲಿನ ಬಹುತೇಕ ಎಲ್ಲಾ ರಾಜಕಾರಣಿಗಳು ಒಕ್ಕೊರಲಿನಿಂದ ಹೇಳುತ್ತಲೇ ಬಂದಿದ್ದಾರೆ. ಇಲ್ಲಿಯವರೆಗೆ ಕಾಶ್ಮೀರದಲ್ಲಿ ಪ್ರತಿ ಬಾರಿಯೂ ದಾಳಿ ಸಂಭವಿಸಿದಾಗಲೆಲ್ಲ ಜಮ್ಮುಕಾಶ್ಮೀರದ ರಾಜಕೀಯ ನಾಯಕರ ಬಾಯಲ್ಲಿ ಹಾಗೂ ಸ್ಥಳೀಯರಲ್ಲಿ ಇದೊಂದು ಡೈಲಾಗ್ ಬಂದೇ ಬರುತ್ತದೆ. ಈ ದಾಳಿಗೂ ನಮಗೂ ಸಂಬಂಧ ಇಲ್ಲ, ಇದೇನಿದ್ದರೂ ಪಾಕಿಸ್ತಾನದ ಕೃತ್ಯ ಎಂದು ಬಾಯಿಬಡಿದುಕೊಳ್ಳುವುದು ಸಾಮಾನ್ಯವಾಗಿದೆ ಆದರೆ ಅಲ್ಲಿನ ದಾಳಿಗೆ ನಿಜವಾಗಿಯೂ ಕಾರಣ ಯಾರು ಎಂಬ ಬಗ್ಗೆ ಈ ಯುವಕ ಹೇಳಿದ್ದಾನೆ. 

ಇದನ್ನೂ ಓದಿ:ಪಹಲ್ಗಾಮ್‌ನಲ್ಲಿ ನಡೆದದ್ದು ಹಮಾಸ್‌ ಮಾದರಿ ದಾಳಿ, ಪಾಕ್ ISI ನಿರ್ನಾಮಕ್ಕೆ ಸಲಹೆ

(ಜಬ್ ಭಿ ಕಾಶ್ಮೀರ ಮೇ ಐಸಾ ಟೆರರಿಸ್ಟ್ ಅಟ್ಯಾಕ್ ಹೋತಾ ಹೈ, ತೋ ಕಾಶ್ಮೀರ ಕೆ ಪೊಲಿಟಿಷಿಯನ್, ಔರ್ ಲೋಗ್ ಬೋಲ್ನೆ ಲಗ್ತೇ ಹೈನ್  'ಕಾಶ್ಮೀರ್, ಇನ್ಸಾನಿಯತ್' - ಔರ್ ಕೆಹತೇ ಹೈ ಕಿ  ಹಮೇ ಇಸ್ಸೆ ಕುಚ್ ಲೆನಾ ದೇನಾ ನಹೀ ಹೈ, ಯೇ ತೋ ಟೆರರಿಸ್ಟ್ ಅಟ್ಯಾಕ್‌ತಾ ಅಗರ್ ಆಪ್ ಪಿಚ್ಲೆ 10-12 ಸಾಲ್ ಕೆ ಟಾಪ್ ಹೈ-ಪ್ರೊಫೈಲ್ ಟೆರರಿಸ್ಟ್‌ ಕೋ ದೇಖೇನ್ ವೋ ಕಾಶ್ಮೀರ್ ಸೆ ಹೇ, ತೋ ವೋ ಪಾಕಿಸ್ತಾನ್ ಸೇ ನಹೀ ಆಯೆ ಹೋತೇ, ವೋ ಕಾಶ್ಮೀರ್‌ ಬೋರ್ನ್ ಹೋತೇ ಹೈ ಜೋ ಬಾದ್ ಮೇ ಕಿಸಿ ಟೆರರಿಸ್ಟ್ ಗ್ರೂಪ್ಸೆ ಜುಡ್ ಜಾತೇ ಹೈ.) ಅಂದರೆ ಆತ ಏನು ಹೇಳಿದ್ದಾನೆ ಎಂದರೆ ಕಾಶ್ಮೀರದಲ್ಲಿ ದಾಳಿಯಾದಾಗಲೆಲ್ಲಾ ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ, ಅವರು ನಮ್ಮವರಲ್ಲ, ಅವರಲ್ಲಿ ನಮಗೆ ಕೊಡುವುದಕ್ಕೂ ತೆಗೆದುಕೊಳ್ಳುವುದಕ್ಕೂ ಏನು ಇರುವುದಿಲ್ಲ, ಹಾಗೆ ಹೀಗೆ ಅಂತ ಇಲ್ಲಿನ ರಾಜಕಾರಣಿಗಳು, ಸ್ಥಳೀಯರು ಹೇಳುತ್ತಲೇ ಬಂದಿದ್ದಾರೆ. ಆದರೆ ಕಳೆದ 12 ವರ್ಷಗಳಲ್ಲಿ ಇಲ್ಲಿ ಹತ್ಯೆಯಾದ ಹೈ ಪ್ರೊಫೈಲ್ ಭಯೋತ್ಪಾದಕರು ಯಾರು? ಇವರು ಯಾರು ಅಂತ ನೋಡಲು ಹೋದರೆ ಇವರು ಯಾರು ಕೂಡ ಪಾಕಿಸ್ತಾನದಿಂದ ಬಂದವರಲ್ಲ, ಇವರೆಲ್ಲರೂ ಕಾಶ್ಮೀರದಲ್ಲಿಯೇ ಹುಟ್ಟಿ ಬೆಳೆದವರು. ಅವರೆಲ್ಲರೂ ನಂತರ ಭಯೋತ್ಪಾದಕ ಸಂಘಟನೆಗಳಿಗೆ ಸೇರಿಕೊಳ್ಳುತ್ತಾರೆ.

ಇದನ್ನೂ ಓದಿ:ಪೆಹಲ್ಗಾಮ್ ದಾಳಿಯಲ್ಲಿ ಅಪ್ರಾಪ್ತ ಉಗ್ರರು, ಅವರ ಸೆಲ್ಫಿ ಕ್ರೌರ್ಯ ಬಿಚ್ಚಿಟ್ಟ ಕುಟುಂಬ

ಇವತ್ತು ಒಬ್ಬ ಕಾಶ್ಮೀರಿಪ್ರವಾಸಿಗರಿಂದ ಪ್ರವಾಸೋದ್ಯಮದಿಂದ ಹಣ ಸಂಪಾದಿಸುತ್ತಿದ್ದರೆ, ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಕೂಡ ನಿಮ್ಮ ಜವಾಬ್ದಾರಿಯಾಗಿದೆ. ನಿಮ್ಮ ಮಗ ಭಯೋತ್ಪಾದಕ ಗುಂಪಿಗೆ ಸೇರಿದರೆ ಸಾಯುವುದು, ಸಾಯಬೇಕಾಗಿರುವುದು  ನಿಮ್ಮ ಮಗನೇ ಹೊರತು ಕರ್ನಾಟಕದ ಕಾರ್ಪೋರೇಟ್‌ ಸಂಸ್ಥೆಯಲ್ಲಿ ದಣಿವಿಲ್ಲದೇ ದುಡಿದು ಹಣ ಸಂಪಾದಿಸಿ ಕಾಶ್ಮೀರಕ್ಕೆ ಬರುವ ವ್ಯಕ್ತಿ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ಆತ ಹೇಳಿದ್ದಾನೆ. (ಬಚ್ಚೆ ಬೋಲ್ತೆ ಹೈಂ ಕಾಶ್ಮೀರ್ ಘೂಮ್ನೆ ಜಾಯೇಂಗೆ, ಪರ್ ಉನ್‌ಕೆ ಮಾ-ಬಾಪ್ ಕೆಹತೇ ಹೈ ಸೇಫ್ ನಹೀ ಹೈ. ಲೇಕಿನ್ ಫಿರ್ ವೋ ಲೋಗ್ ಜಾತೇ ಹೈ, ಔರ್ ಫಿರ್ ಉನ್ಹೇ ಗೋಲಿ ಲಗ್ ಜಾತಿ ಹೈ.. )ಅಂದರೆ ಮಕ್ಕಳು ಕಾಶ್ಮೀರಕ್ಕೆ ತಿರುಗಾಡಲು ಹೋಗುತ್ತೇವೆ ಎಂದು ಹೇಳುತ್ತಾರೆ. ಆದರೆ ಪೋಷಕರು ಬೇಡ ಆ ಪ್ರದೇಶ ಸುರಕ್ಷಿತವಲ್ಲ ಎಂದು ಹೇಳುತ್ತಾರೆ.  ಆದರೂ ಮಕ್ಕಳು ಮಾತು ಕೇಳದೇ ಬಂದು ಇಲ್ಲಿ ಗುಂಡಿಗೆ ಬಲಿಯಾಗುತ್ತಾರೆ ಎಂದು ಆ ಯುವಕ  ವೀಡಿಯೋದಲ್ಲಿ ಭಾವುಕನಾಗಿ ನುಡಿದಿದ್ದಾನೆ.

ಈ ಯುವಕನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅನೇಕರು ಆ ಯುವಕನ ಮಾತಿಗೆ ಹೌದೌದು ಎಂದಿದ್ದರೆ ಮತ್ತೆ ಕೆಲವರು ಈತನ ಮಾತಿಗೆ ಒಪ್ಪಿಗೆ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಹೌದು ಈತ ಕಾಶ್ಮೀರದ ಮುಸಲ್ಮಾನ ಯುವಕ ಈತ ಹೇಳಿರುವುದರಲ್ಲಿ ಸತ್ಯಾಂಶ ಇದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಹೌದು ಈತ ಕಾಶ್ಮೀರದಲ್ಲಿ ಹುಟ್ಟಿ ಬೆಳೆದವ, ಕಾಶ್ಮೀರದ ಸ್ಥಳೀಯರ ಬೆಂಬಲವಿಲ್ಲದೇ ಈ ಘಟನೆ ನಡೆಯಲು ಸಾಧ್ಯವಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಈ ಘಟನೆಗೆ ಎಲ್ಲಾ ಕಾಶ್ಮೀರಿ ಜನರನ್ನು ದೂರಬೇಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಇಲ್ಲಿರುವ ಎಲ್ಲಾ ಕಾಶ್ಮೀರಿಗಳು ಹಾಗೆಯೇ ಎಂದು ಸಾಮಾನ್ಯಗೊಳಿಸಲಾಗುತ್ತಿದೆ ಆದರೆ ಹಾಗಲ್ಲ, ಎಲ್ಲರನ್ನು ಒಂದೇ ರೀತಿ ನೋಡಬೇಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌
ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ