ಪೆಹಲ್ಗಾಂ ದಾಳಿ ಹಿಂದೆ 26/11 ದಾಳಿ ಮಾಸ್ಟರ್ ಮೈಂಡ್ ಹಫೀಜ್ ಸೈಯಿದ್ ಪಾತ್ರ

Published : Apr 25, 2025, 10:43 AM ISTUpdated : Apr 25, 2025, 10:53 AM IST
ಪೆಹಲ್ಗಾಂ ದಾಳಿ ಹಿಂದೆ 26/11 ದಾಳಿ ಮಾಸ್ಟರ್ ಮೈಂಡ್ ಹಫೀಜ್ ಸೈಯಿದ್ ಪಾತ್ರ

ಸಾರಾಂಶ

ಪೆಹಲ್ಗಾಂ ಭಯೋತ್ಪಾದಕ ದಾಳಿ ಹಿಂದೆ 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಲಷ್ಕರ್ ಇ ತೈಬಾ ಮುಖ್ಯಸ್ಥ ಹಫೀಸ್ ಸಯೀದ್ ಪಾತ್ರವಿದೆ ಅನ್ನೋ ಮಾಹಿತಿ ಬಹಿರಂಗವಾಗಿದೆ.

ನವದೆಹಲಿ(ಏ.25) ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆಯುತ್ತಿರುವ  ಹಲವು ಉಗ್ರ ದಾಳಿ ಹಿಂದೆ ಪಾಕಿಸ್ತಾನ ಕೈವಾಡವಿರುವುದು ಸ್ಪಷ್ಟವಾಗಿದೆ. ಇದೀಗ ಪೆಹಲ್ಗಾಂ ಉಗ್ರರ ದಾಳಿ ಕೂಡ ಪಾಕಿಸ್ತಾನ ಕುಮ್ಮುಕ್ಕಿನಿಂದ ನಡೆದಿದೆ ಅನ್ನೋದರಲ್ಲಿ ಅನುಮಾನವಿಲ್ಲ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸೇನೆ ಸಹಕಾರದೊಂದಿಗೆ ಉಗ್ರರ ತರಬೇತಿ ಶಿಬಿರ ಸಕ್ರೀಯವಾಗಿದೆ. ಇದೇ ಶಿಬಿರದಿಂದ ಉಗ್ರರು ಭಾರತಕ್ಕೆ ನುಗ್ಗಿ ದಾಳಿ ಮಾಡುತ್ತಿದ್ದಾರೆ. ಇದಕ್ಕೆ ಸ್ಥಳೀಯ ಉಗ್ರರು ಸಾಥ್ ನೀಡುತ್ತಿದ್ದಾರೆ. ಇದೀಗ ಪೆಹಲ್ಗಾಂನಲ್ಲಿ ನಡೆದ ದಾಳಿ ಹಿಂದೆ ಭಾರತದ ಮೋಸ್ಟ್ ವಾಂಟೆಡ್ ಉಗ್ರ, ಲಷ್ಕರ್ ಇ ತೈಬಾ ಉಗ್ರ ಸಂಘಟನ ಮುಖ್ಯಸ್ಥ ಹಫೀಜ್ ಸಯೀದ್ ಪಾತ್ರ ಬಹಿರಂಗವಾಗಿದೆ.

ಕಾಶ್ಮೀರ ಕಣಿವೆಯಲ್ಲಿ ಲಷ್ಕರ್ ಸಕ್ರಿಯ
ಮೂಲಗಳ ಪ್ರಕಾರ ಈ ರೀತಿಯ ದಾಳಿಯ ಉಗ್ರರ ತಂಡ ಕಳೆದ ಕೆಲ ತಿಂಗಳುಗಳಿಂದ ಕಾಶ್ಮೀರದ ಕಣಿವೆಯಲ್ಲಿ ಸಕ್ರಿಯವಾಗಿದೆ. ಕುರಿತು ಭಾರತೀಯ ಸೇನೆ ಕೂಡ ಕಾರ್ಯಾಚರಣೆ ನಡೆಸುತ್ತಿದೆ. ಇದೇ ತಂಡದ ಭಾಗದ ಹಲವು ದಾಳಿಯನ್ನು ಸೇನೆ ವಿಫಲಗೊಳಿಸಿದೆ. ಈ ವೇಳೆ ಭಾರತೀಯ ಸೇನೆಯ ಯೋಧರು ಕೂಡ ಹುತಾತ್ಮರಾಗಿದ್ದಾರೆ. ಇದೀಗ ಪೆಹೆಲ್ಗಾಂ ದಾಳಿ ಪಕ್ಕಾ ಪ್ಲಾನ್ ಮಾಡಿ ಕಾರ್ಯಗತಗೊಳಿಸಿದ ದಾಳಿಯಾಗಿದೆ. ಹಫೀಸ್ ಸಯೀದ್ ನೆರವು ಪಡೆದು ಈ ದಾಳಿ ನಡೆಸಲಾಗಿದೆ ಅನ್ನೋ ಮಾಹಿತಿಗಳು ಬಹಿರಂಗವಾಗಿದೆ.

ಪಹಲ್ಗಾಮ್‌ನಲ್ಲಿ ನಡೆದದ್ದು ಹಮಾಸ್‌ ಮಾದರಿ ದಾಳಿ, ಪಾಕ್ ISI ನಿರ್ನಾಮಕ್ಕೆ ಸಲಹೆ

ಹಫೀಜ್  ಸಯೀದ್ ಸೂಚನೆ
ಸೋನ್‌ಮಾರ್ಗ್, ಭೂಟಾ ಪಥ್ರಿ ಹಾಗೂ ಗಂದೆರ್ಬಲ್‌ನಲ್ಲಿ ಇದೇ ರೀತಿ ದಾಳಿ ನಡೆದಿತ್ತು. 2024ರ ಅಕ್ಟೋಬರ್ ತಿಂಗಳಲ್ಲಿ ಭೂಟಾ ಫತ್ರಿಯಲ್ಲಿ ನಡೆದ ದಾಳಿಯನ್ನು ಭಾರತೀಯ ಸೇನೆ ನಿಯಂತ್ರಿಸುವಲ್ಲಿ ಸಫಲಗೊಂಡಿತ್ತು. ಆದರೆ ಈ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದರು. ಇಬ್ಬರು ಉಗ್ರರ ಸೇನೆ ಸದಬಡಿದಿತ್ತು. ಇನ್ನು ಇದೇ ಅಕ್ಟೋಬರ್ ತಿಂಗಳಲ್ಲಿ ಸೋನ್‌ಮಾರ್ಗ್‌ದಲ್ಲಿ ಸುರಂಗ ಕಾಮಗಾರಿ ವೇಳೆ ಉಗ್ರರು ದಾಳಿ ನಡೆಸಿ ವೈದ್ಯ ಸೇರಿ 6 ಕಾರ್ಮಿಕರ ಹತ್ಯೆ ಮಾಡಿದ್ದರು.ಸೋನ್‌ಮಾರ್ಗ್ ದಾಳಿಯ ಪ್ರಮುಖ ರೂವಾರಿ ಉಗ್ರ ಜುನೈದ್ ಅಹಮ್ಮದ್ ಭಟ್‌ನ ಭಾರತೀಯ ಸೇನೆ ಡಿಸೆಂಬರ್ ತಿಂಗಳಲ್ಲಿ ಹೊಡೆದುರುಳಸಿತ್ತು. ಈ ವೇಳೆ ಈತನ ಜೊತೆಗಿದ್ದ ಸಹಚರು ತಪ್ಪಿಸಿಕೊಂಡಿದ್ದರು. ಹೀಗೆ ತಪ್ಪಿಸಿಕೊಂಡು ಕಾಡಿನಲ್ಲಿ ಅಡಗಿಕುಳಿತ ಉಗ್ರರು, ಇದೀಗ ಪೆಹಲ್ಗಾಂ ದಾಳಿ ನಡೆಸಿದ್ದಾರೆ. ಇದು ಲಷ್ಕರ್ ಉಗ್ರರು ಪ್ರಮುಖವಾಗಿ ಮುಂದಾಳತ್ವ ವಹಿಸಿ ನಡೆಸಿದ ದಾಳಿಯಾಗಿದೆ. ಇದರ ಹಿಂದೆ ಹಫೀಸ್ ಸಯೀದ್ ಕೈವಾಡವಿದ ಅನ್ನೋದು ಮಾಹಿತಿಗಳು ಬಹಿರಂಗವಾಗಿದೆ.

ಪೆಹಲ್ಗಾಂ ದಾಳಿಗೆ ಆಕ್ರೋಶ
ಪೆಹಲ್ಗಾಂ ದಾಳಿಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಈ ದಾಳಿಯನ್ನು ಖಂಡಿಸಿ ಭಾರತಕ್ಕೆ ಬೆಂಬಲ ನೀಡಿದೆ. ಇತ್ತ ಭಾರತ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಇದಕ್ಕೆ ಪ್ರತ್ಯುತ್ತರವಾಗಿ ಪಾಕಿಸ್ತಾನ ಕೂಡ ಮಿಲಿಟರಿ ತಾಲೀಮು ಆರಂಭಿಸಿದೆ. ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನೆ ಪ್ರತ್ಯುತ್ತರ ನೀಡಿದೆ. ಇನ್ನು ಕ್ಷಿಪಣಿ ಪರೀಕ್ಷೆ ಸೇರಿದಂತೆ ಹಲವು ಪ್ರಯೋಗವನ್ನು ಪಾಕಿಸ್ತಾನ ಸೇನೆ ನಡೆಸುತ್ತಿದೆ. ಪಾಕಿಸ್ತಾನ ಸೇನೆ ತುರ್ತು ಸಭೆ ನಡೆಸಿ ಗಡಿಯಲ್ಲಿ ಮಿಂಚಿನ ಕಾರ್ಯಾಚರಣೆಗೆ ಸರ್ವಸನ್ನದ್ಧವಾಗಿದೆ. ಆದರೆ ಭಾರತ ಊಹೆಗೂ ನಿಲಕುದ ರೀತಿಯಲ್ಲಿ ದಾಳಿಗೆ ಸಜ್ಜಾಗಿದೆ.

ಪೆಹಲ್ಗಾಮ್ ದಾಳಿಯಲ್ಲಿ ಅಪ್ರಾಪ್ತ ಉಗ್ರರು, ಅವರ ಸೆಲ್ಫಿ ಕ್ರೌರ್ಯ ಬಿಚ್ಚಿಟ್ಟ ಕುಟುಂಬ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!