ವೀಕೆಂಡ್ ಕರ್ಫ್ಯೂ ಹಿಂತೆಗೆಯಲು ಹೋರಾಟ, CSKಗೆ ಜಡೇಜಾ ನಾಯಕ?ಜ.18ರ Top 10 News!

By Suvarna NewsFirst Published Jan 18, 2022, 6:18 PM IST
Highlights

ಕರ್ನಾಟಕದಲ್ಲಿ ಜಾರಿಗೊಳಿಸಿರುವ ವೀಕೆಂಡ್ ಕರ್ಫ್ಯೂ ಹಿಂತೆಗಯಲು ಇದೀಗ ಹೊಟೆಲ್ ಹಾಗೂ ಬಾರ್ ಮಾಲೀಕರು ಹೋರಾಟಕ್ಕೆ ಇಳಿದಿದ್ದಾರೆ. ಒಂದೆಡೆ ಪಂಜಾಬ್ ಚುನಾವಣೆಗೆ ಆಪ್ ಸಿಎಂ ಅಭ್ಯರ್ಥಿ ಘೋಷಿಸಿದ್ದರೆ, ಇತ್ತ ಚೆನ್ನೈ ಸೂಪರ್ ಕಿಂಗ್ಸ್‌ಗೆ ಜಡೇಜಾ ನಾಯಕ ಎಂದು ಹೇಳಲಾಗುತ್ತಿದೆ. ರಿಷಿಕುಮಾರ್ ಸ್ವಾಮೀಜಿ ವಿವಾದಿತ ಹೇಳಿಕೆ, ಸ್ತಬ್ಧಚಿತ್ರ ಕುರಿತು ರಾಜನಾಥ್ ಸಿಂಗ್ ಪತ್ರ ಸೇರಿದಂತೆ ಜನವರಿ 18ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Tableau Controversy: ಸ್ಟಾಲಿನ್, ದೀದಿಗೆ ಪತ್ರ ಬರೆದ ರಾಜನಾಥ್ ಸಿಂಗ್!

 ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಶ್ಚಿಮ ಬಂಗಾಳದ ಟ್ಯಾಬ್ಲೋವನ್ನು ಸೇರಿಸದ ವಿಚಾರವಾಗಿ ಮಮತಾ ಬ್ಯಾನರ್ಜಿ ಮತ್ತು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ಪತ್ರಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

Punjab Elections: ಆಪ್ ಸಂಸದ ಭಗವಂತ್ ಮಾನ್ ಮುಂದಿನ ಸಿಎಂ ಅಭ್ಯರ್ಥಿ!

 ಪಂಜಾಬ್ ವಿಧಾನಸಭೆ ಚುನಾವಣೆಗೂ ಮುನ್ನ ಆಮ್ ಆದ್ಮಿ ಪಕ್ಷ ಕೊನೆಗೂ ತನ್ನ ಸಿಎಂ ಅಭ್ಯರ್ಥಿಯನ್ನು ಘೋಷಿಸಿದ್ದು, ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ. ಪಕ್ಷವು 2022 ರ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಭಗವಂತ್ ಮಾನ್ ನೇತೃತ್ವದಲ್ಲಿ ಹೋರಾಡಲಿದೆ. 

IPL 2022: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ರವೀಂದ್ರ ಜಡೇಜಾ ಹೊಸ ನಾಯಕ?

ಐಪಿಎಲ್‌ನ 4 ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ (Chenai Super Kings) ತಂಡಕ್ಕೆ ತಾರಾ ಆಲ್ರೌಂಡರ್‌ ರವೀಂದ್ರ ಜಡೇಜಾ (Ravindra Jadeja) ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Sreeja Marriage in Trouble: ರಜನಿಕಾಂತ್ ನಂತರ ಚಿರಂಜೀವಿ ಮಗಳ ಡಿವೋರ್ಸ್ ಸೂಚನೆ

ಸೌತ್‌ ಸಿನಿ ಇಂಡಸ್ಟ್ರಿಯಲ್ಲಿ ಸೆಲೆಬ್ರಿಟಿ ಜೋಡಿಗಳ ವಿಚ್ಚದನೆ ಪ್ರಕರಣಗಳು ಹೆಚ್ಚಾಗುತ್ತಿದೆ. ನಾಗ ಚೈತನ್ಯ ಹಾಗು ಸಮಂತಾ ನಂತರ ಧನುಷ್ ಹಾಗೂ ರಜನೀಕಾಂತ್ ಪುತ್ರಿ ಐಶ್ವರ್ಯಾ ಅವರು ಬೇರ್ಪಟ್ಟಿದ್ದಾರೆ. ಇದೀಗ ಮೆಗಾಸ್ಟಾರ್ ಚಿರಂಜೀವಿ ಅವರ ಮಗಳ ವಿಚ್ಚೇದನೆ ಸುದ್ದಿ ಕೇಳಿಬರುತ್ತಿದೆ. ಚಿರಂಜೀವಿ ಅವರ ಮಗಳು ಹಾಗೂ ಅಳಿಯ ಬೇರೆಯಾಗುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದು ಇದಕ್ಕೆ ಪೂರಕವಾಗುವಂತ ಬೆಳವಣಿಗೆಗಳು ನಡೆದಿವೆ.

Weekend Curfew ಹಿಂತೆಗೆತಕ್ಕೆ ಹೋಟೆಲ್‌ ಮಾಲೀಕರ ಸಂಘ, ಮದ್ಯ ವ್ಯಾಪಾರಿಗಳಿಂದ ಆಗ್ರಹ!

ರಾಜ್ಯ ಸರ್ಕಾರ ವಾರಾಂತ್ಯದ ಕರ್ಫ್ಯೂ (Weekend Curfew) ಮುಂದುವರಿಸದೆ ಮಹಾರಾಷ್ಟ್ರ ಮಾದರಿಯಲ್ಲಿ ಕೊರೋನಾ ನಿಯಂತ್ರಣಕ್ಕೆ (Covid 19) ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ಮಹಾನಗರ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್‌ ಮನವಿ ಮಾಡಿದ್ದಾರೆ.

Tata Car Price Hike ಭರ್ಜರಿ ಡಿಸ್ಕೌಂಟ್ ಬೆನ್ನಲ್ಲೇ ಕಾರು ಬೆಲೆ ಹೆಚ್ಚಿಸಿದ ಟಾಟಾ ಮೋಟಾರ್ಸ್!

ದೇಶದಲ್ಲಿನ ಹಲವು ಆಟೋಕಂಪನಿಗಳು ಕಾರುಗಳ ಬೆಲೆ ಹೆಚ್ಚಳ ಮಾಡಿದೆ. ಹೊಸ ವರ್ಷದ(New Year 2022) ಆರಂಭದಲ್ಲಿ ಟಾಟಾ ಮೋಟಾರ್ಸ್(Tata Motors) ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿತ್ತು. ಇದೀಗ ಟಾಟಾ ಕಾರುಗಳ ಬೆಲೆ ಹೆಚ್ಚಳ ಘೋಷಿಸಿದೆ. ಬುಧವಾರದಿಂದ(ಜ.19)ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವಾಹನಗಳ ಬೆಲೆ(Car Price Hike) ಹೆಚ್ಚಳವಾಗುತ್ತಿದೆ. ಟಾಟಾ ತನ್ನ ಕಾರುಗಳ ಬೆಲೆಯನ್ನು ಶೇಕಡಾ 0.9 ರಷ್ಟು ಏರಿಕೆ ಮಾಡಲು ನಿರ್ಧರಿಸಿದೆ.

ಬಾಬರಿ‌ ಮಸೀದಿ ರೀತಿ ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ಒಡೆಯಬೇಕು: ರಿಷಿಕುಮಾರ್ ಸ್ವಾಮೀಜಿ!

ಶ್ರೀರಂಗಪಟ್ಟಣದ ಜಾಮೀಯಾ (Srirangapatna) ಮಸೀದಿ ಬಗ್ಗೆ ಕಾಳಿಮಠದ ಋಷಿಕುಮಾರ್ ಸ್ವಾಮೀಜಿ (Rishikumar Swamiji ) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಾಬರಿ‌ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ಒಡೆಯಬೇಕು ಎಂದು  ರಿಷಿಕುಮಾರ್ ಸ್ವಾಮೀಜಿ ಹೇಳಿದ್ದಾರೆ. 

ED Raid: ಯುಪಿ ಬೆನ್ನಲ್ಲೇ ಪಂಜಾಬ್‌ನಲ್ಲೂ ಇಡಿ ಅಧಿಕಾರಿಗಳ ಬೇಟೆ, ಹತ್ತು ಮಂದಿ ಮೇಲೆ ದಾಳಿ!

ಪಂಜಾಬ್ ವಿಧಾನಸಭೆ ಚುನಾವಣೆಗೆ ಮುನ್ನ ಜಾರಿ ನಿರ್ದೇಶನಾಲಯ (ಇಡಿ) ಮಹತ್ವದ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಇಡಿ ದಾಳಿ ನಡೆಸಿದೆ. ಇದರಲ್ಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಸೇರಿದಂತೆ 10 ಜನರ ಸ್ಥಳಗಳಲ್ಲಿ ತನಿಖೆ ನಡೆಯುತ್ತಿದೆ.

ಶೈಲು' ಚಿತ್ರದ ನಟಿ Bhama ಆತ್ಮಹತ್ಯೆ ಯತ್ನ, ನಟಿಯಿಂದಲೇ ಸ್ಪಷ್ಟನೆ!

ಮೊದಸಲ, ಶೈಲು,ಒಂದು ಕ್ಷಣದಲ್ಲಿ, ಆಟೋ ರಾಜ (Auto Raja) ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಮಲಯಾಳಂ ನಟಿ ಭಾಮಾ (Bhama) ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ, ನಿದ್ರೆ ಮಾತ್ರೆ ಸೇವಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

click me!