
ಪ್ಯಾರಾಗ್ಲೈಡಿಂಗ್ ಸಾಹಸ ಮಾಡಲು ಹೋದ ಮಹಿಳೆ ಭಯಗೊಂಡು ಬೊಬ್ಬೆ ಹೊಡೆದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ಯಾರಾಗ್ಲೈಡಿಂಗ್ ಸಾಹಸ ಪ್ರತಿಯೊಬ್ಬರಿಗೂ ಒಗ್ಗುವಂತದ್ದಲ್ಲ. ಮೊದಲ ಬಾರಿ ಪ್ಯಾರಾಗ್ಲೈಡಿಂಗ್ ಮಾಡಲು ಹೋಗಿ ಆತಂಕಕ್ಕೊಳಗಾದ ಪ್ಯಾರಾಗ್ಲೈಡರ್‌ಗಳು ಕಿರುಚುತ್ತಾ ತಮ್ಮ ಮಾರ್ಗದರ್ಶಕರಿಗೆ (ಲ್ಯಾಂಡ್ ಕರ ದೇ) ಒಮ್ಮೆ ಕೆಳಗೆ ಇಳಿಸಿ ಎಂದು ಮನವಿ ಮಾಡುವ ಹಲವಾರು ವೀಡಿಯೊಗಳು ಈಗಾಗಲೇ ವೈರಲ್ ಆಗಿದ್ದು, ಈ ಸಾಹಸ ಧೈರ್ಯಶಾಲಿಗಳಿಗೆ ಮಾತ್ರ ಎಂಬುದನ್ನು ಸಾಬೀತುಪಡಿಸಿದೆ.
ಮಹಿಳೆಯೊಬ್ಬರು ಪ್ಯಾರಾಗ್ಲೈಡಿಂಗ್ ಮಾಡುವಾಗ ಹೀಗೆ ಭಯಗೊಂಡು ಬೊಬ್ಬೆ ಹಾಕಿದ ಮತ್ತೊಂದು ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪ್ಯಾರಾಗ್ಲೈಡಿಂಗ್ ಮಾಡಲು ಹೊರಟ ಈ ಅಪರಿಚಿತ ಮಹಿಳೆ ಸಂಪೂರ್ಣ ಭಯಗೊಂಡಿದ್ದಳು. ಆಕೆಯ ಭಯ ನಿವಾರಿಸಲು ಪ್ಯಾರಾಗ್ಲೈಡಿಂಗ್ ಟ್ರೈನರ್ ಆಕೆಯೊಂದಿಗೆ ಮಾತನಾಡುತ್ತಲೇ ಇದ್ದ. ಆದರೂ ಅದ್ಯಾವುದು ಪರಿಣಾಮ ಬೀರಿಲ್ಲ. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಎಂವಿ ರಾವ್ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, 2,000 ಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಮಹಿಳೆ ಭಯಭೀತರಾಗಿರುವಂತೆ ತೋರುತ್ತಿದೆ ಮತ್ತು ಪ್ಯಾರಾಗ್ಲೈಡಿಂಗ್ ಟ್ರೈನರ್ ಜೊತೆ ಆಕೆ, (ಭಯ್ಯಾ, ಮುಜೆ ಬೋಹೋತ್ ಡರ್ ಲಾಗ್ ರಹಾ ಹೈ) ಅಣ್ಣ ನನಗೆ ತುಂಬಾ ಭಯವಾಗುತ್ತಿದೆ ಎಂದು ಹೇಳುತ್ತಾಳೆ. ಆತಂಕ, ಭಯದಿಂದಾಗಿ ಪ್ಯಾರಾಗ್ಲೈಡಿಂಗ್‌ನ ಮಜವನ್ನು ಅನುಭವಿಸಲು ಆಕೆಗೆ ಸಾಧ್ಯವಾಗಿಲ್ಲ. ಆದರೆ ಟ್ರೈನರ್ ಆಕೆಯ ಭಯವನ್ನು ಹೊಗಲಾಡಿಸಲು ಯತ್ನಿಸುತ್ತಲೇ ಇದ್ದಾನೆ.
Parasailing Rope Cuts Off: ತುಂಡಾದ ರೋಪ್... ಸಮುದ್ರಕ್ಕೆ ಬಿದ್ದ ಇಬ್ಬರು ಮಹಿಳೆಯರು
ಪ್ಯಾರಾಗ್ಲೈಡಿಂಗ್ ಅದ್ಭುತವಾಗಿದೆ, ಅಲ್ಲವೇ? ಎಂದು ಶೀರ್ಷಿಕೆ ನೀಡಿ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಈ ವೀಡಿಯೊ 2019 ರಲ್ಲಿ ವೈರಲ್ ಆದ ವಿಪಿನ್ ಸಾಹು ಎಂಬುವರ ಪ್ಯಾರಾಗ್ಲೈಡಿಂಗ್ ದೃಶ್ಯವನ್ನು ನೆನಪಿಸುತ್ತಿದೆ. ಅವರ ವಿಡಿಯೋ ವೈರಲ್ ಆದ ನಂತರ ರಾತ್ರೋರಾತ್ರಿ ವಿಪಿನ್ ಸಾಹು ಇಂಟರ್ನೆಟ್ ಸೆನ್ಸೇಷನ್ ಆಗಿದ್ದರು. ಅದರಲ್ಲಿ ಅವರು 'ಲ್ಯಾಂಡ್ ಕರಾ ದೇ (ದಯವಿಟ್ಟು ಕೆಳಗಿಳಿಸಿ) ಎಂದು ಮಾರ್ಗದರ್ಶಿಗೆ ವಿನಂತಿಸಿದರು.
ಜಾಲಿಯಾಗಿ ಪಾರಾಗ್ಲೈಡಿಂಗ್ ಮಾಡಿದ ನಾಯಿ: ವಿಡಿಯೋ ವೈರಲ್
ಆಕಾಶದಲ್ಲಿ ಪ್ಯಾರಾ ಸೈಲಿಂಗ್ ಮಾಡುತ್ತಿದ್ದ ವೇಳೆ ಪ್ಯಾರಾ ಸೈಲಿಂಗ್ ಉಪಕರಣದ ರೋಪ್( ಹಗ್ಗ) ತುಂಡಾಗಿ ಮಹಿಳೆಯರಿಬ್ಬರು ಸಮುದ್ರಕ್ಕೆ ಬಿದ್ದಂತಹ ಆಘಾತಕಾರಿ ಘಟನೆ ಕೆಲ ದಿನಗಳ ಹಿಂದೆ ಮುಂಬೈನ ಅಲಿಬಾಗ್ (Alibaug)ನಲ್ಲಿ ನಡೆದಿತ್ತು. ಈ ದುರಂತದ ಭಯಾನಕ ವಿಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಮಹಿಳೆಯರಿಬ್ಬರು ಪ್ಯಾರಾ ಸೈಲಿಂಗ್ ರೈಡ್‌ಗಾಗಿ ಸಿದ್ದಗೊಂಡು, ಪ್ಯಾರಾಸೈಲಿಂಗ್ ರೈಡ್ (parasailing ride) ಆರಂಭಿಸುತ್ತಾರೆ. ರೈಡ್ ಆರಂಭವಾಗುತ್ತಿದ್ದಂತೆ ಎಲ್ಲವೂ ಸರಿ ಇದೆ ಎಂದು ಕಾಣ ಬಂತು. ಆದರೆ ತಕ್ಷಣದಲ್ಲೇ ಪ್ಯಾರಾಚೂಟ್‌ಗೆ ಜೋಡಣೆಗೊಂಡಿದ್ದ ಹಗ್ಗವೊಂದು ಕಡಿದುಕೊಂಡ ಪರಿಣಾಮ ಇಬ್ಬರು ಮಹಿಳೆಯರು ಸಮುದ್ರಕ್ಕೆ ಬಿದ್ದಿದ್ದಾರೆ. ಇದು ನೋಡುಗರಲ್ಲಿ ಭಯ ಹುಟ್ಟಿಸಿದೆ.
ಈ ಭಯಾನಕ ವಿಡಿಯೋವನ್ನು 4.1 ಮಿಲಿಯನ್ ಗೂ ಹೆಚ್ಚು ಜನ ವೀಕ್ಷಿಸಿದ್ದು, ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ. ಈ ಅವಘಡದ ಬಗ್ಗೆ ಕೆಲವರು ಆಘಾತಕ್ಕೊಳಗಾಗಿದ್ದರೆ, ಮತ್ತು ಕೆಲವರು ಪ್ಯಾರಾ ಸೈಲಿಂಗ್ ಕ್ರೀಡೆಯನ್ನು ವ್ಯವಹಾರವಾಗಿಸಿಕೊಂಡವರು ತಮ್ಮ ಸೇವೆಗಳನ್ನು ಪ್ರವಾಸಿಗರಿಗೆ ನೀಡುವ ಮೊದಲು ಅದರಲ್ಲಿ ಪ್ರವಾಸಿಗರ ಭದ್ರತೆಗೆ ಸಂಬಂಧಿಸಿದಂತೆ ಪರಿಶೀಲನೆಗಳನ್ನು ಏಕೆ ಮಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ