ಪಂಜಾಬ್(ಜ.18): ಆಮ್ ಆದ್ಮಿ ಪಾರ್ಟಿಯೂ ಪಂಜಾಬ್ ಸಿಎಂ ಅಭ್ಯರ್ಥಿಯಾಗಿ ಆಪ್ ಸಂಸದ ಭಗವಂತ್ ಮಾನ್ ಅವರನ್ನು ಈಗಾಗಲೇ ಆಯ್ಕೆ ಮಾಡಿದೆ. ಆದರೆ ಅಭ್ಯರ್ಥಿಯ ಘೋಷಿಸಲು ಎಎಪಿ ಹಾಸ್ಯಮಯ ವಿಡಿಯೋ ಪೋಸ್ಟ್ ಮಾಡಿತ್ತು. ಆಮ್ ಆದ್ಮಿ ಪಾರ್ಟಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಭಗವಂತ್ ಮಾನ್ ಅವರನ್ನು ಘೋಷಿಸಲು ಈ ವೀಡಿಯೊವನ್ನು ಪೋಸ್ಟ್ ಮಾಡಿದೆ.
ಎಎಪಿ ಹಂಚಿಕೊಂಡ ಈ ವೀಡಿಯೊದಲ್ಲಿ ಶಾರುಖ್ ಖಾನ್ (Shah Rukh Khan), ಅಕ್ಷಯ್ ಕುಮಾರ್ (Akshay Kumar), ರಿತೇಶ್ ದೇಶಮುಖ್ (Riteish Deshmukh) ಮತ್ತು ವಿದ್ಯಾ ಬಾಲನ್ (Vidya Balan) ನಟಿಸಿರುವ ಮಸ್ತ್ ಕಲಂದರ್ ಹಾಡಿನ ದೃಶ್ಯ ಇದೆ. 2007ರ ಸಿನಿಮಾ ಹೇಯ್ ಬೇಬಿಯ ಹಾಡು ಇದಾಗಿದೆ. ಇಲ್ಲಿ ನಟರ ಬದಲಿಗೆ ಅವರ ಮುಖಗಳಿಗೆ ಕಣದಲ್ಲಿರುವ ನಾಯಕರ ಮುಖವನ್ನು ಅಂಟಿಸಲಾಗಿದೆ.
Punjab's next CM is in the house! pic.twitter.com/E2EIcxwVep
— AAP (@AamAadmiParty)
undefined
ನವಜೋತ್ ಸಿಂಗ್ ಸಿಧು (Navjot Singh Sidhu) ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ(Charanjit Singh Channi), ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ (Arvind Kejriwal), ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ಅಂತಿಮವಾಗಿ ಭಗವಂತ್ ಮಾನ್ (Bhagwant Mann) ಅವರ ಮುಖಗಳನ್ನು ಗ್ರಾಫಿಕ್ಸ್ ಮೂಲಕ ಅಂಟಿಸಲಾಗಿದೆ. ಎಎಪಿ ನಿರ್ಮಿಸಿರುವ ಈ ವಿಡಿಯೋದಲ್ಲಿ ನಟಿ ವಿದ್ಯಾ ಬಾಲನ್ ಪಾತ್ರವು ಸಿಎಂ ಕುರ್ಚಿಯನ್ನು ಪ್ರತಿನಿಧಿಸುತ್ತದೆ. ವಿಡಿಯೋದ ಕೊನೆಯಲ್ಲಿ ಕೇಕ್ ಅನ್ನು ತೆಗೆದುಕೊಳ್ಳುವ ದೃಶ್ಯದಲ್ಲಿ ಭಗವಂತ್ ಮಾನ್ ಅವರ ಗ್ರ್ಯಾಂಡ್ ಎಂಟ್ರಿಯಾಗಿದೆ.
Punjab Elections: ಆಪ್ ಸಂಸದ ಭಗವಂತ್ ಮಾನ್ ಮುಂದಿನ ಸಿಎಂ ಅಭ್ಯರ್ಥಿ!
ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ತಕ್ಷಣದಿಂದಲೇ ಈ ವಿಡಿಯೋ ವೈರಲ್ ಆಗಿದ್ದು, ಒಂದು ಗಂಟೆಯೊಳಗೆ 1 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಭಗವಂತ್ ಮಾನ್ ಅವರನ್ನು ಪಂಜಾಬ್‌ನ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ನಂತರ ಮಾತನಾಡಿದ ಅವರು, ನಾನು ಸೈನಿಕ ಎಂದು ನಾನು ಯಾವಾಗಲೂ ಹೇಳುತ್ತೇನೆ. ನಾನು ಪಂಜಾಬ್ ಸಿಎಂ ಆಗಿರುವವರೆಗೂ ಪೋಸ್ಟರ್ ಬಾಯ್‌ನ ಕರ್ತವ್ಯವನ್ನು ನಾನು ಮಾಡುತ್ತೇನೆ ಎಂದು ಹೇಳಿದರು. ಅಲ್ಲದೇ ತಾವು ರಾಜಕೀಯಕ್ಕೆ ಬಂದ ಮೇಲೆ ನನ್ನ ಜೀವನವೇ ಬದಲಾಯಿತು ಎಂದು ಮಾನ್ ಹೇಳಿದ್ದಾರೆ. ನಾನು ಹಾಸ್ಯ ಮಾಡುತ್ತಿದ್ದಾಗ ಜನ ನನ್ನತ್ತ ನೋಡಿ ನಗುತ್ತಿದ್ದರು. ಈಗ ಜನರು ನನ್ನ ಮೇಲೆ ಭರವಸೆ ಹೊಂದಿದ್ದಾರೆ. ಅವರು ನನ್ನನ್ನು ನೋಡಿದಾಗ ಅಳುತ್ತಾರೆ ಮತ್ತು ನಮ್ಮನ್ನು ಉಳಿಸಿ ಎಂದು ಹೇಳುತ್ತಾರೆ ಎಂದು ಮಾನ್ ಹೇಳಿದರು.
Punjab Elections: ಚುನಾವಣೆಗೂ ಮೊದಲೇ ಸಿಧುಗೆ ಬಿಗ್ ಶಾಕ್, ಸದ್ದು ಮಾಡುತ್ತಿದೆ ಸೋನು ಸೂದ್ ಹೇಳಿಕೆ!
ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಕೂಡ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾದ ಭಗವಂತ್ ಮಾನ್ ಅವರಿಗೆ ಟ್ವಿಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಎಎಪಿಯು 2022 ರ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಭಗವಂತ್ ಮಾನ್ ನೇತೃತ್ವದಲ್ಲಿ ಹೋರಾಡಲಿದೆ. ಪಂಜಾಬ್‌ನಲ್ಲಿ ಎಎಪಿ ಬಹುಮತ ಪಡೆದರೆ, ಆಗ ಭಗವತ್ ಮಾನ್ ಮುಖ್ಯಮಂತ್ರಿಯಾಗಲಿದ್ದಾರೆ. ಎಎಪಿ ಸಿಎಂ ಅಭ್ಯರ್ಥಿ ಯಾರಾಗಬೇಕೆಂದು ತಿಳಿಯುವ ನಿಟ್ಟಿನಲ್ಲಿ ಫೋನ್ ಸಂಖ್ಯೆಯನ್ನು ನೀಡುವ ಮೂಲಕ ಸಾರ್ವಜನಿಕರ ಅಭಿಪ್ರಾಯವನ್ನು ಕೇಳಿದೆ ಎಂಬುವುದು ಉಲ್ಲೇಖನೀಯ.