Top 10 News ಸಿಎಂ ಬದಲಾವಣೆ ಗುಸು ಗುಸು, ಇಳಿಕೆಯಾಯ್ತು ಓಮಿಕ್ರಾನ್ ಕೇಸು!

Published : Dec 23, 2021, 04:44 PM ISTUpdated : Dec 23, 2021, 08:53 PM IST
Top 10 News ಸಿಎಂ ಬದಲಾವಣೆ ಗುಸು ಗುಸು, ಇಳಿಕೆಯಾಯ್ತು ಓಮಿಕ್ರಾನ್ ಕೇಸು!

ಸಾರಾಂಶ

ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿದೆ. ಈ ಕುರಿತು ಬೆಳಗಾವಿ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸಂಚಲನ ಸೃಷ್ಟಿಯಾಗಿದೆ. ಅನಾರೋಗ್ಯ ಕಾರಣ ಸಿದ್ದರಾಮಯ್ಯ ವಿಶ್ರಾಂತಿಗೆ ಜಾರಿದ್ದಾರೆ. ಐಪಿಎಲ್ ಹರಾಜು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಹೇಳಿದೆ. ಉರ್ಫಿ ಜಾವೇದ್ ಮದುವೆ ಮಾತು, ಲೂಧಿಯಾನ ಸ್ಫೋಟ ಸೇರಿದಂತೆ ಡಿಸೆಂಬರ್ 23ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Karnataka Cabinet Expansion : ರಾಜಕೀಯ ಕ್ರಾಂತಿ - ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ ಐವರು

ರಾಜ್ಯ  ರಾಜಕಾರಣದ (Politics) ಬಿಗ್ ನ್ಯೂಸ್ ಇದು. ರಾಜ್ಯ ರಾಜಕೀಯದಲ್ಲಿ ಸಂಕ್ರಾಂತಿ ನಂತರ ರಾಜಕೀಯ ಕ್ರಾಂತಿ ಆಗಲಿದೆ ಎನ್ನಲಾಗುತ್ತಿದೆ.  ಹೊಸ ವರ್ಷದ ಹೊಸ್ತಿಲಲ್ಲೇ    ಬಸವರಾಜ ಬೊಮ್ಮಾಯಿ (Basavaraj Bommai) ಅವರ ಸಂಪುಟಕ್ಕೆ ಮೇಜರ್ ಆಗಲಿದೆ ಎನ್ನಲಾಗುತ್ತಿದೆ.  

ಲೂಧಿಯಾನದ ಕೋರ್ಟ್‌ನಲ್ಲಿ ಸ್ಫೋಟ : ಇಬ್ಬರ ದುರ್ಮರಣ

ಪಂಜಾಬ್‌ನ ಲೂಧಿಯಾನದ ಕೋರ್ಟ್‌ನಲ್ಲಿ ಸ್ಫೋಟ ಸಂಭವಿಸಿದ್ದು, ದುರಂತದಲ್ಲಿ ಇಬ್ಬರು ಸಾವಿಗೀಡಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ಬಾತ್‌ರೂಮ್‌ನ ಗೋಡೆಗೆ ಹಾನಿಯಾಗಿದ್ದು, ಹತ್ತಿರದ ಕಿಟಕಿಗಳ ಗಾಜುಗಳು ಛಿದ್ರಗೊಂಡಿವೆ. ಯಾವ ಕಾರಣಕ್ಕೆ ಸ್ಫೋಟ ಸಂಭವಿಸಿದೆ ಎಂಬುದು ತಿಳಿದು ಬಂದಿಲ್ಲ.

Karnataka Politics : ಹೊಸ ವರ್ಷದಲ್ಲಿ ರಾಜ್ಯ ರಾಜಕೀಯದಲ್ಲಿ ಸಂಚಲನ -ಸಿಎಂ ಬದಲು

ಹೊಸ ವರ್ಷದಲ್ಲಿ ರಾಜ್ಯ ರಾಜಕೀಯದಲ್ಲಿ (Politics) ಸಂಚಲನ ಮೂಡುತ್ತಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಬದಲಾವಣೆ ಗುಸು ಗುಸು ಆರಂಭವಾಗಿದೆ. ಬೆಳಗಾವಿಯಲ್ಲಿ (Belagavi) ರಾಜಕೀಯ ಮೇಲಾಟ ರಂಗೇರಿದ್ದು ತೆರೆ ಮರೆಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡೆಯುತ್ತಿದ್ದು ಇದರ ಬೆನ್ನಲ್ಲೇ   ಸಚಿವರ ಸಭೆ ನಡೆಯುತ್ತಿದೆ. 

Congress Leader Siddaramaiah : ಸಿದ್ದರಾಮಯ್ಯಗೆ ಅನಾರೋಗ್ಯ : ವಿಶ್ರಾಂತಿ

 ಕೊಂಚ ಅನಾರೋಗ್ಯದ ಕಾರಣ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ (Suddaramaiah) ಬುಧವಾರದ ಕಲಾಪದಲ್ಲಿ ಸುಮಾರು 15 ನಿಮಿಷಗಳ ಕಾಲ ಮಾತ್ರ ಭಾಗವಹಿಸಿ ವಿಶ್ರಾಂತಿ ಪಡೆದರು. ಸಾಮಾನ್ಯವಾಗಿ ಕಲಾಪದಲ್ಲಿ ಪೂರ್ಣ ಪ್ರಮಾಣದಲ್ಲಿ ಪಾಲ್ಗೊಳ್ಳುವ ಸಿದ್ದರಾಮಯ್ಯ  ಅವರಿಗೆ ಆರೋಗ್ಯದಲ್ಲಿ (Health) ಸ್ವಲ್ಪ ವ್ಯತ್ಯಾಸ ಕಂಡು ಬಂದಿತು. 

Omicron In South Africa: ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರೋನ್‌ ಅಂತ್ಯ?, ಹೊಸ ಕೇಸು ಭಾರೀ ಇಳಿಕೆ!

 ಜಗತ್ತಿನಲ್ಲೇ ಮೊದಲು ಒಮಿಕ್ರೋನ್‌ ಕೊರೋನಾ ರೂಪಾಂತರಿ ತಳಿ ಪತ್ತೆಯಾಗಿ ಇಡೀ ವಿಶ್ವಕ್ಕೆ ಆತಂಕ ಹುಟ್ಟಿಸಿದ್ದ ದಕ್ಷಿಣ ಆಫ್ರಿಕಾದಲ್ಲಿ ಇದೀಗ ‘ಒಮಿಕ್ರೋನ್‌ ಅಲೆ’ ಹೆಚ್ಚು ಹಾನಿ ಮಾಡದೆ ತನ್ನ ಗರಿಷ್ಠ ಮಟ್ಟಮುಟ್ಟಿಇಳಿಕೆಯ ಹಾದಿಯಲ್ಲಿ ಸಾಗಿರುವ ಶುಭ ಸುದ್ದಿ ಬಂದಿದೆ.

Breaking News: ಆಟಗಾರರ ಹರಾಜಿನ ಡೇಟ್‌ ಫಿಕ್ಸ್‌, ಬೆಂಗಳೂರಲ್ಲೇ ನಡೆಯಲಿದೆ IPL Auction 2022

ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2022) ಟೂರ್ನಿಗೆ ಈಗಿನಿಂದಲೇ ಭರದ ಸಿದ್ದತೆಗಳು ಆರಂಭವಾಗಿವೆ. ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಆರಂಭಕ್ಕೂ ಮುನ್ನ ಮೆಗಾ ಹರಾಜು (IPL Mega Auction) ನಡೆಯಲಿದ್ದು, ಯಾವ ಆಟಗಾರರು, ಯಾವ ತಂಡದ ತೆಕ್ಕೆಗೆ ಜಾರಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.

Sara Ali Khan Dance: ಕರಣ್ ಬಾತ್‌ರೂಮ್‌ನಲ್ಲಿ ಸಾರಾ ಡ್ಯಾನ್ಸ್.! ಏನ್ ಕಥೆ ?

Sara Ali Khan: ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಬಾತ್‌ರೂಂನಲ್ಲಿ ಸಾರಾ ಅಲಿ ಖಾನ್ ಡ್ಯಾನ್ಸ್ ಮಾಡಿದ್ದಾರೆ. ಇದನ್ನು ಸ್ವತಃ ನಟಿಯೇ ಹೇಳಿದ್ದಾರೆ. ಇದೇನು ಹೊಸ ಕಥೆ ?

Petrol Diesel Rate:ಕ್ರಿಸ್ಮಸ್ ರಜೆಗೆ ಪ್ರವಾಸ ಹೊರಡೋ ಮುನ್ನ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಚೆಕ್ ಮಾಡಿ

ದೇಶದಲ್ಲಿ ಹಣದುಬ್ಬರ ಏರಿಕೆ ಹಾದಿಯಲ್ಲಿದ್ದರೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿರೋದು ಸದ್ಯದ ಮಟ್ಟಿಗೆ ವಾಹನ ಸವಾರರಿಗೆ ನೆಮ್ಮದಿ ಒದಗಿಸಿದೆ. 

Yezdi Roadking Teaser ಭಾರತದ ರಸ್ತೆಗಿಳಿಯಲು ಸಜ್ಜಾದ ಐಕಾನಿಕ್ ಯೆಜ್ಡಿ ರೋಡ್‌ಕಿಂಗ್, ಟೀಸರ್ ಲಾಂಚ್!

ಭಾರತದಲ್ಲಿ ಐಕಾನಿಕ್ ಬೈಕ್‌‌ಗಳು ಮತ್ತೆ ವಿಜೃಂಭಿಸಲು ಆರಂಭಿಸಿದೆ. ಈಗಾಗಲೇ ಜಾವಾ ಮೋಟಾರ್‌ಸೈಕಲ್(Jawa bike) ಭಾರತದ ರಸ್ತೆಗಳಲ್ಲಿ ಮಿಂಚಿನ ಸಂಚಲನ ಮೂಡಿಸಿದೆ.

Urfi Javed Speaks About Marriage: ಮುಸ್ಲಿಂ ವ್ಯಕ್ತಿಯನ್ನ ಮಾತ್ರ ಮದ್ವೆಯಾಗಲ್ಲ ಎಂದ ಉರ್ಫಿ ಜಾವೇದ್..!

ವಿಚಿತ್ರ ಬಟ್ಟೆಗಳನ್ನು ಧರಿಸಿಯೇ ಹೆಡ್‌ಲೈನ್‌ನಲ್ಲಿ ಸ್ಥಾನ ಪಡೆಯುತ್ತಿರುವ ಯುವ ಕಲಾವಿದೆಯ ಫ್ಯಾಷನ್ ಸೆನ್ಸ್‌ ಬಗ್ಗೆ ಜನ ಎಷ್ಟೇ ಟೀಕಿಸಿದ್ರೂ ಈಕೆ ಮಾತ್ರ ಒಂಚೂರು ಕ್ಯಾರೇ ಅನ್ನಲ್ಲ. ಈಗ ಮದುವೆ ಬಗ್ಗೆ ಮಾತನಾಡಿದ್ದಾರೆ. ತಾವು ಮದುವೆಯಾಗೋರು ಹೇಗಿರಬೇಕು ಎಂಬುದನ್ನು ರಿವೀಲ್ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್