Ayodhya Land Grab : 2 ಕೋಟಿ ಮೌಲ್ಯದ ಭೂಮಿ ಕೆಲವೇ ನಿಮಿಷದಲ್ಲಿ 18 ಕೋಟಿಗೆ ಮಾರಾಟ!

Suvarna News   | Asianet News
Published : Dec 23, 2021, 04:20 PM IST
Ayodhya Land Grab :  2 ಕೋಟಿ ಮೌಲ್ಯದ ಭೂಮಿ ಕೆಲವೇ ನಿಮಿಷದಲ್ಲಿ 18 ಕೋಟಿಗೆ ಮಾರಾಟ!

ಸಾರಾಂಶ

ಅಯೋಧ್ಯೆಯಲ್ಲಿ ನಡೆದ ಭೂ ಅಕ್ರಮದ ಬಗ್ಗೆ ಕಾಂಗ್ರೆಸ್ ಕಿಡಿ ವಿವರವಾದ ಮಾಹಿತಿ ನೀಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಈ ಕುರಿತಂತೆ ಈಗಾಗಲೇ ತನಿಖೆ ಆದೇಶಿಸಿರುವ ಉತ್ತರ ಪ್ರದೇಶ ಸರ್ಕಾರ

ಲಖನೌ (ಡಿ. 23): ಹಲವು ವರ್ಷಗಳ ಹೋರಾಟದ ಬಳಿಕ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ (Ram Temple) ಸುತ್ತಮುತ್ತ ನಡೆದಿದೆ ಎನ್ನಲಾದ ಭೂ ಅಕ್ರಮದ ಕುರಿತಾಗಿ ಕಾಂಗ್ರೆಸ್ (Congress )ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಗುರುವಾರ ಅತ್ಯಂತ ವಿವರವಾದ ಮಾಹಿತಿ ನೀಡಿದರು. ಬಿಜೆಪಿಯ ಮುಖಂಡರ (BJP leaders) ಸಂಬಂಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು  ದೇವಸ್ಥಾನದ ಸುತ್ತಮುತ್ತಲೂ ಅಕ್ರಮವಾಗಿ ಭೂಮಿ ಖರೀದಿ ಮಾಡಿದ್ದರ ಕುರಿತಾಗಿ ಬಂದಿರುವ ಪ್ರತ್ಯೇಕ ಆರೋಪಗಳ ಬಗ್ಗೆ ಉತ್ತರ ಪ್ರದೇಶ ಸರ್ಕಾರ (Uttar Pradesh government) ಈಗಾಗಲೇ ತನಿಖೆಯನ್ನೂ ಆರಂಭ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಆಸ್ತಿ ಮಾರಾಟದ ದಾಖಲೆಗಳನ್ನು ತೋರಿಸಿದರು.  ರಾಮಮಂದಿರ ಸುತ್ತಮುತ್ತಲಿನ ಜಾಗ ಅಂದಾಜು 2 ಕೋಟಿ ರೂಪಾಯಿ ಮೌಲ್ಯದ್ದಾಗಿದ್ದು, ಇದನ್ನು ಎರಡು ಬಾರಿ ಮಾರಾಟ ಮಾಡಲಾಗಿದೆ. ಮೊದಲ ಬಾರಿಗೆ ಇದನ್ನು 8 ಕೋಟಿಗೆ ಮಾರಾಟ ಮಾಡಲಾಗಿದ್ದರೆ, 2ನೇ ಬಾರಿಗೆ 18.5 ಕೋಟಿ ರೂಪಾಯಿಗೆ 2020ರಲ್ಲಿ ಕೇಂದ್ರ ಸರ್ಕಾರ ನಿರ್ಮಿಸಿರುವ ರಾಮಮಂದಿರ ಟ್ರಸ್ಟ್ ಗೆ ಮಾರಾಟ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

2017ರಲ್ಲಿ ನಿರ್ದಿಷ್ಟ ವ್ಯಕ್ತಿಗೆ ಮಾರಾಟ ಮಾಡಲಾಗಿದ್ದ ಒಂದು ತುಂಡು ಭೂಮಿಯನ್ನು ಆ ವ್ಯಕ್ತಿ ಎರಡು ಭಾಗಗಳಲ್ಲಿ ಮಾರಾಟ ಮಾಡಿದ್ದಾನೆ. ಮೊದಲ ಭಾಗವನ್ನು ರಾಮಮಂದಿರ ಟ್ರಸ್ಟ್ ಗೆ ನೇರವಾಗಿ 8 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಇನ್ನು 2ನೇ ಭಾಗವನ್ನು ಇದಾದ 19 ನಿಮಿಷಗಳ ನಂತರ ರವಿ ಮೋಹನ್ ತಿವಾರಿ (Ravi Mohan Tiwari) ಎನ್ನುವ ವ್ಯಕ್ತಿಗೆ 2 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಐದು ನಿಮಿಷದ ಬಳಿಕ ರವಿ ಮೋಹನ್ ತಿವಾರಿ 2 ಕೋಟಿ ರೂ. ಮೌಲ್ಯದ ಈ ಭೂಮಿಯನ್ನು 18.5 ಕೋಟಿ ರೂಪಾಯಿಗೆ ರಾಮಮಂದಿರ ಟ್ರಸ್ಟ್ ಗೆ ಮಾರಾಟ ಮಾಡುತ್ತಾರೆ. ಕೇವಲ 2 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚಿನ ಮೌಲ್ಯವಿರುವ ಈ ಭೂಮಿಯನ್ನು ರಾಮಮಂದಿರ ಟ್ರಸ್ಟ್ ಗೆ 8 ಕೋಟಿ ಹಾಗೂ 18.5 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
 


ಇದು ವಿಶ್ವದಲ್ಲಿಯೇ ನಡೆದ ಅತ್ಯಂತ  ವೇಗದ ಭೂ ಮೌಲ್ಯವರ್ಧನೆಯಾಗಿದೆ. ಕೆಲವೇ ನಿಮಿಷಗಳಲ್ಲಿ ಭೂಮೀಯ ಮಾಲೀಕರು ಬದಲಾದ ಹಂತದಲ್ಲಿ ನಿಮಿಷಗಳಲ್ಲಿಯೇ ಇದರ ಮೌಲ್ಯ ಕೋಟಿ ಕೋಟಿಗಳಲ್ಲಿ ಹೆಚ್ಚಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ (Randeep Surjewala) ಆರೋಪ ಮಾಡಿದ್ದಾರೆ.

UP Elections: ದೇಶದ ಮಹಿಳೆಯರಿಗೆ ಒಂದಾಗಲು ಪ್ರಿಯಾಂಕಾ ಗಾಂಧಿ ಕರೆ, ನಾವು ದೇಶದ ರಾಜಕೀಯ ಬದಲಾಯಿಸೋಣ!
ಇಲ್ಲಿ ಮಾರಾಟವಾಗಿರುವ ಜಮೀನು ವಿವಾದದಲ್ಲಿದೆ. ಈ ಕುರಿತಾಗಿ ಪೊಲೀಸ್ ಪ್ರಕರಣ ಕೂಡ ದಾಖಲಾಗಿದ್ದು, ವಿವಾದಿತ ಪ್ರದೇಶವನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡುವಂತಿಲ್ಲ ಎಂದು ಉಲ್ಲೇಖಿಸಲಾಗಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಇಲ್ಲಿ ಭೂಮಿಯನ್ನು ಒಬ್ಬ ವ್ಯಕ್ತಿಗೆ 8 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ಇದೇ ವ್ಯಕ್ತಿ ಐದು ನಿಮಿಷದ ಬಳಿಕ ಇದೇ ವ್ಯಕ್ತಿ ಈ ಭೂಮಿಯನ್ನು 18.5 ಕೋಟಿ ರೂಪಾಯಿಗೆ ಮಾರಾಟ ಮಾಡುತ್ತಾನೆ. ಇದು ಸ್ಕ್ಯಾಮ್ ಅಲ್ಲದೇ ಮತ್ತೇನು? ಎಂದು ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರದ ಮುಖ್ಯಸ್ಥೆ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

Ramesh Kumar Rape Remark: ರಮೇಶ್ ಕುಮಾರ್ ಹೇಳಿಕೆಗೆ ಪ್ರಿಯಾಂಕ ಗಾಂಧಿ ಗರಂ
ಈ ಭೂ ವ್ಯವಹಾರಗಳಿಗೆ ಸಾಕ್ಷಿಗಳು ಯಾರು ಗೊತ್ತೇ? ಒಬ್ಬರು ಆರ್ ಎಸ್ಎಸ್ ನ ಉನ್ನತ ಸದಸ್ಯರು ಹಾಗೂ ರಾಮಮಂದಿರ ಸಮಿತಿಯ ಟ್ರಸ್ಟಿ. ಇನ್ನೊಬ್ಬರು ಅಯೋಧ್ಯೆಯ ಮೇಯರ್ ಎಂದು ಪ್ರಿಯಾಂಕಾ ಗಾಂಧಿ ಹೇಳುವ ಮೂಲಕ ಅಕ್ರಮದಲ್ಲಿ ಆರ್ ಎಸ್ಎಸ್ ನ ಪಾಲೂ ಇದೆ ಎಂದು ಹೇಳಿದ್ದಾರೆ. ಉತ್ತರ ಪ್ರದೇಶ ಸರ್ಕಾರವು ಈ ವಿಷಯವನ್ನು ತನಿಖೆ ಮಾಡಲು ಜಿಲ್ಲಾ ಪರಿಷತ್ ಮಟ್ಟದ ಅಧಿಕಾರಿಗೆ ವಹಿಸಲಾಗಿದೆ. ಆದರೆ, ರಾಮಮಂದಿರ ವಿಚಾರವನ್ನು ಸುಪ್ರೀಂ ಕೋರ್ಟ್ ವಿಚಾರಣೆ ಮಾಡುತ್ತಿರುವ ಕಾರಣ ಈ ತನಿಖೆಯೂ ಸುಪ್ರೀಂ ಕೋರ್ಟ್ ವ್ಯಾಪ್ತಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ. ಸಮಾಜವಾದಿ ಪಕ್ಷ  ( Samajwadi Party ) ಹಾಗೂ ಆಪ್ (Aam Aadmi Party) ಕೂಡ ಈ ವರ್ಷದ ಜೂನ್ ನಲ್ಲಿ ಇದೇ ಆರೋಪವನ್ನು ಮಾಡಿದ್ದರೆ, ರಾಮ ಮಂದಿರ ಟ್ರೆಸ್ಟ್ ಮಾತ್ರ ಈ ಆರೋಪಗಳನ್ನು ಅಲ್ಲಗಳೆದಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?