ಮಗಳ ವಿಚಾರದಲ್ಲಿ ತಪ್ಪು ಮಾಡಬೇಡಿ, ಐವರ ಮೇಲೆ ಕಣ್ಣಿಟ್ಟ RCB; ಡಿ.15ರ ಟಾಪ್ 10 ಸುದ್ದಿ!

By Suvarna News  |  First Published Dec 15, 2019, 5:48 PM IST

ರಾಕಿಂಗ್ ಸ್ಟಾರ್ ಯಶ್ ಹೊಸ ಮನವಿ ಮಾಡಿದ್ದಾರೆ. ತನ್ನ ಮಗಳ ವಿಚಾರದಲ್ಲಿ ಯಾರೂ ಕೂಡ ತಪ್ಪನ್ನು ಮಾಡಬಾರದು ಎಂದಿದ್ದಾರೆ. ಯಶ್ ಮನವಿ ಇದೀಗ ಅಭಿಮಾನಿಗಳ ಮನ ಗೆದ್ದಿದೆ. ಇತ್ತ ಐಪಿಎಲ್ ಹರಾಜಿಗೆ ಸಜ್ಜಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐವರು ವಿದೇಶಿ ಆಟಗಾರರ ಮೇಲೆ ಕಣ್ಣಿಟ್ಟಿದೆ. ಸಿಎಂ ಯಡಿಯೂರಪ್ಪಗೆ ಹೊಸ ಭರವಸೆ ನೀಡಿದ ಅಮಿತ್ ಶಾ, ಡಿಕೆ ಸಹೋದರರ ಕ್ಷೇತ್ರಕ್ಕೆ ಕೇಂದ್ರದಿಂದ ಬಂಪರ್ ಸೇರಿದಂತೆ ಡಿಸೆಂಬರ್ 15ರ ಟಾಪ್ 10 ಸುದ್ದಿ ಇಲ್ಲಿವೆ.

Kannada actor yash to IPL auction top 10 news of December 15

ಕ್ರಿಸ್‌ಮಸ್‌ ಆದ್ಮೇಲೆ ಚರ್ಚಿಸೋಣ: ಸಿಎಂ ಗೆ ಅಮಿತ್ ಶಾ ಹೇಳಿದ ಗುಟ್ಟೇನು?

Kannada actor yash to IPL auction top 10 news of December 15

Tap to resize

Latest Videos

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮೇಘಾಲಯದಲ್ಲಿ ಪ್ರತಿಭಟನೆ ಜೋರಾಗಿದ್ದು, ಕಾಯ್ದೆಯ ವಿಮರ್ಶಾತ್ಮಕ ಚರ್ಚೆಗೆ ಸಿಎಂ ಕೋನಾರ್ಡ್ ಸಂಗ್ಮಾ ಜೊತೆ ಮಾತುಕತೆ ನಡೆಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ

'ನಾನು, ಸಿದ್ದು ಭಾರತ-ಪಾಕ್‌ ಅಲ್ಲ; ನಮ್ಮನ್ನು ಶತ್ರುಗಳೆಂದು ಕರೆಯಬೇಡಿ

ನಾನು ಹಾಗೂ ಸಿದ್ದರಾಮಯ್ಯ ಶತ್ರುಗಳಲ್ಲ. ನಮ್ಮಿಬ್ಬರ ನಡುವೆ ರಾಜಕೀಯ ಭೇದ ಹಾಗೂ ಯೋಚನಾ ಲಹರಿಯಲ್ಲಿ ವ್ಯತ್ಯಾಸಗಳಿರಬಹುದು. ಆದರೆ ನಾವು ಪಾಕಿಸ್ತಾನ-ಭಾರತದ ರೀತಿ ಶತ್ರುಗಳಲ್ಲ. ನನಗೆ ಸಿದ್ದರಾಮಯ್ಯ ಅವರ ಮೇಲೂ ಪ್ರೀತಿ ಇದೆ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ್‌ ಹೇಳಿದ್ದಾರೆ. 

ಡಿಕೆ ಸಹೋ​ದ​ರರ ಸ್ವ ಕ್ಷೇತ್ರಕ್ಕೆ ಸಿಕ್ತು ಕೇಂದ್ರದಿಂದ ಬಂಪರ್!

ಡಿಕೆ ಸಹೋದರರ ಕ್ಷೇತ್ರಕ್ಕೆ ಇದೀಗ ಕೇಂದ್ರದಿಂದ ಬಂಪರ್ ಕೊಡುಗೆ ಸಿಕ್ಕಿದೆ. ಇದೀಗ ಕನಕಪುರವು ಮಾದರಿ ಎನಿಸಿಕೊಂಡಿದೆ.  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲಿ ಕನಕಪುರ ಇದೀಗ ದೇಶದ ಗಮನಸೆಳೆದಿದೆ.

ನಕಲಿ ಮನೆ ನೀಡಿದರೆ ಹುಷಾರ್‌ : ವಿ.ಸೋಮಣ್ಣ ಎಚ್ಚರಿಕೆ!

ಯಾವುದೇ ಒತ್ತಡ ರಾಜಕೀಯಗಳಿಗೆ ಒಳಗಾಗದೆ ನಿಜವಾದ ಫಲಾನುಭವಿಗಳನ್ನು ಗುರುತಿಸಿ ಮನೆಗಳನ್ನು ಮಂಜೂರು ಮಾಡಬೇಕು. ಇಲ್ಲದಿದ್ದರೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದ್ದಾರೆ.

ಐವರು ವಿದೇಶಿ ಆಟಗಾರರನ್ನು ಖರೀದಿಸಲು ಮುಂದಾದ RCB, ಇಲ್ಲಿದೆ ವಿವರ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ 12 ಆವೃತ್ತಿಗಳಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಇದೀಗ 13ನೇ ಆವೃತ್ತಿಯಲ್ಲಿ ತಂಡದಲ್ಲಿ ಕೆಲ ಬದಲಾವಣೆ  ಮಾಡಿ ಕಣಕ್ಕಿಳಿಯಲು ನಿರ್ಧರಿಸಿದೆ. ಈಗಾಗಲೇ 12 ಆಟಗಾರರನ್ನು ರಿಲೀಸ್ ಮಾಡಿ ಇದೀಗ ಹರಾಜು ಕಣಕ್ಕೆ ಧುಮುಕಿದೆ. ತಂಡದ ಬೌಲಿಂಗ್ ಹಾಗೂ ಮಧ್ಯಮ ಕ್ರಮಾಂಕವನ್ನು ಬಲಪಡಿಸಲು RCB ಮುಂದಾಗಿದೆ. ಇದಕ್ಕಾಗಿ ಐವರು ವಿದೇಶಿ ಆಟಾಗರರ ಮೇಲೆ ಕಣ್ಣಿಟ್ಟಿದೆ.

ನನ್ನ ಮಗಳ ವಿಚಾರದಲ್ಲಿ ಯಾವತ್ತೂ ಈ ತಪ್ಪು ಮಾಡಬೇಡಿ ಎಂದು ಯಶ್! ಏನದು?

ಕೆಜಿಎಫ್ ಬಿಗ್ ಹಿಟ್ ನಂತರ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದಾರೆ. ಅವರಾಡುವ ಮಾತು, ಹೇಳಿಕೆ, ಫ್ಯಾಮಿಲಿ ವಿಚಾರ ಎಲ್ಲದರ ಬಗ್ಗೆಯೂ ಒಂದು ಗಮನವಿದ್ದೇ ಇರುತ್ತದೆ. ಅವರಾಡುವ ಕೆಲವು ಮಾತುಗಳು ಬಹಳ ಇಷ್ಟವಾಗಿ ಬಿಡುವಂತಿರುತ್ತದೆ. ಹೋದಲ್ಲೆಲ್ಲಾ ಮಗಳು ಐರಾ ಬಗ್ಗೆ ಕೇಳುವವರಿಗೆ ಯಶ್ ಕೊಟ್ಟಿರುವ ಉತ್ತರ ಅಭಿಮಾನಿಗಳ ಮನ ಗೆದ್ದಿದೆ. 

ಜ.22ಕ್ಕೆ ಟಾಟಾ ಅಲ್ಟ್ರೋಝ್ ಕಾರು ಬಿಡುಗಡೆ; ಬುಕಿಂಗ್ ಬೆಲೆ 21 ಸಾವಿರ!

ಜಿನೆವಾ ಮೋಟಾರು ಶೋ 2018ರಲ್ಲಿ ಪರಿಚಯಿಸಲಾದ ಟಾಟಾ ಅಲ್ಟ್ರೋಜ್ ಕಾರು ಒಂದೇ ವರ್ಷದಲ್ಲಿ ಅನಾವರಣಗೊಂಡಿದೆ. ಹ್ಯಾಚ್ ಬ್ಯಾಕ್ ಕಾರಿನಲ್ಲಿ ಹಲವು ವಿಶೇಷತೆಗಳೊಂದಿಗೆ ನೂತನ ಅಲ್ಟ್ರೋಜ್ ಬಿಡುಗಡೆಗೆ ಸಜ್ಜಾಗಿದೆ.   2020ರ ಜನವರಿ 22 ರಂದು ಅಲ್ಟ್ರೋಝ್ ಕಾರು ಬಿಡುಗಡೆಯಾಗುತ್ತಿದೆ. ಈಗಾಗಲೇ ಅಲ್ಟ್ರೋಝ್ ಕಾರಿನ ಬುಕಿಂಗ್ ಆರಂಭಗೊಂಡಿದೆ. 

ಟಾಯ್ಲೆಟ್‌ನಲ್ಲೇ ಪ್ರಳಾಯಂತಕನ ನೆದರ್ಲ್ಯಾಂಡ್ ಗಾಂಜಾ ಕೃಷಿ..!

ಹಲ್ಲಿದ್ದವನಿಗೆ ಕಡಲೆ ಇಲ್ಲ,  ಕಡಲೆ ಇದ್ದರೆ ತಿನ್ನೋಕೆ ಹಲ್ಲಿರಲ್ಲ. ಅದೇ ಕತೆ ಇದು... ಅಪ್ಪ - ಅಮ್ಮ ಮಗ ಚೆನ್ನಾಗಿ ಓದಲಿ ಅಂತ ಕೇಳಿದ್ದನ್ನು ಕೊಡಿಸಿದ್ರು. ಬೇಕಾಗಿದ್ದನ್ನು ಮಾಡಿದ್ರು. ಆದ್ರೆ ಇವನದ್ದು ಓದೋ ಟೈಮಲ್ಲಿ ಬಿಸಿನೆಸ್ಸು. ಫಾರಿನ್ ಇಂದ ಇಂಪೋರ್ಟ್, ಇಲ್ಲಿ ಫಾರ್ಮಿಂಗು. ಟಾಯ್ಲೆಟ್ನಲ್ಲೇ ನೆದರ್ಲ್ಯಾಂಡ್ನ ಹೈಡ್ರೋ ಗಾಂಜಾ ಬೆಳೆದಿದ್ದ ಪ್ರಳಯಾಂತಕನ, ಗಾಂಜಾ ಕಹಾನಿ

ಗಲ್ಲು ಶಿಕ್ಷೆ ಜಾರಿ ಬಹಳ ಕಷ್ಟ ಏಕೆ? 20 ವರ್ಷದಲ್ಲಿ 4 ಜನರಿಗೆ ಮಾತ್ರ ಶಿಕ್ಷೆ ಜಾರಿ!

ಕ್ರಿಮಿನಲ್‌ ಪ್ರಕರಣವೊಂದರಲ್ಲಿ ಆರೋಪಿಯು ನ್ಯಾಯಾಲಯದಲ್ಲಿ ಅಪರಾಧಿ ಎಂದು ಸಾಬೀತಾದ ಬಳಿಕ ಆ ಅಪರಾಧವು ವಿರಳಾತಿವಿರಳ ಪ್ರಕರಣವಾಗಿದ್ದರೆ ಅಪರಾಧಿಗೆ ಸಾವಿನ ಶಿಕ್ಷೆ ನೀಡುವುದೇ ಮರಣದಂಡನೆ. ಭಾರತೀಯ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಮರಣದಂಡನೆಯು ಅತ್ಯುಗ್ರ ಶಿಕ್ಷೆ.

ಧಾರವಾಡ: ಭತ್ತದ ಚೀಲ ಕದ್ದು 36 ವರ್ಷಗಳಿಂದ ಎಸ್ಕೇಪ್ ಆಗಿದ್ದವ ಸಿಕ್ಕಿಬಿದ್ದ!

ಇದು ಬರೋಬ್ಬರಿ 36 ವರ್ಷದ ಹಿಂದಿನ ಪ್ರಕರಣ. ಧಾರವಾಡ ಪೊಲೀಸರು ಕಾರ್ಯಾಚರಣೆ ನಡೆಸಿ ಭತ್ತದ ಚೀಲ ಕದ್ದು ಹೊರ ರಾಜ್ಯದಲ್ಲಿ ತಲೆಮರಿಸಿಕೊಂಡಿದ್ದ  ಆರೋಪಿಯನ್ನು  ಬಂಧಿಸಿದ್ದಾರೆ.

vuukle one pixel image
click me!
vuukle one pixel image vuukle one pixel image