
ಹರ್ಯಾಣ[ಡಿ.15]: ಹರ್ಯಾಣದ ಡಿಸಿಎಂ ದುಷ್ಯಂತ್ ಚೌಟಾಲಾರ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಸಚಿವ ಚೌಟಾಲಾ ಟಾರ್ಚ್ ಲೈಟ್ ಬೆಳಕಿನಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡಬಹುದು. ಸದ್ಯ ತಾವೇ ಖುದ್ದು ಈ ಫೋಟೋ ಶೇರ್ ಮಾಡಿ ಸಚಿವ ದುಷ್ಯಂತ್ ಟ್ರೋಲಿಗರಿಗೆ ಆಹಾರವಾಗಿದ್ದಾರೆ.
ತಮ್ಮ ಫೋಟೋ ಶೇರ್ ಮಾಡಿಕೊಂಡಿರುವ ಡಿಸಿಎಂ ದುಷ್ಯಂತ್ ಚೌಟಾಲಾ 'ತಡ ರಾತ್ರಿ 11.30ರವರೆಗೆ ಕೆಲಸ ಮಾಡುತ್ತಿರುತ್ತೀರಿ, ಆಫೀಸ್ ಸಿಬ್ಬಂದಿ ಎಲ್ಲಾ ಫೈಲ್ ಗಳನ್ನು ಅಂದೇ ಕ್ಲಿಯರ್ ಮಾಡಲಿಚ್ಛಿಸುತ್ತಾರೆ. ಹೀಗಿರುವಾಗ ವಿದ್ಯುತ್ ಸಂಪರ್ಕ ಹೋದ್ರೆ ನಾವು ಹೀಗೆ ಕೆಲಸ ಮಾಡುತ್ತೇವೆ' ಎಂದು ತಾವು ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಪೋಟೋ ಶೇರ್ ಮಾಡಿಕೊಂಡಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಸಿಬ್ಬಂದಿ ಸಚಿವರಿಗೆ ಸಹಿ ಹಾಕಲು ಕಾಣುವಂತೆ ತಮ್ಮ ಮೊಬೈಲ್ ಟಾರ್ಚ್ ಆನ್ ಮಾಡಿರುವ ದೃಶ್ಯ ಈ ಫೋಟೋದಲ್ಲಿದೆ.
ಆದರೀಗ ಈ ಫೋಟೋ ಸದ್ಯ ಟ್ರೋಲಿಗರ ಆಹಾರವಾಗಿದೆ. ಫೋಟೋ ಶೇರ್ ಮಾಡಿಕೊಂಡಿರುವ ಸಚಿವರಿಗೆ, ನಿಮ್ಮ ಕಚೇರಿಯಲ್ಲೂ ವಿದ್ಯುತ್ ಸಮಸ್ಯೆ ಇರುತ್ತಾ? 24 ಗಂಟೆ ವಿದ್ಯುತ್ ಒದಗಿಸುತ್ತೇವೆಂಬ ಭರವಸೆ ನೀಡುವ ಹರ್ಯಾಣ ಸರ್ಕಾರದ ಅದ್ಭುತ ದೃಶ್ಯ ಎಂದು ಕಾಲೆಳೆದಿದ್ದಾರೆ.
ಆದರೆ ಇನ್ನು ಕೆಲವರು ಧನಾತ್ಮಕ ಕಮೆಂಟ್ ಹಾಕಿದ್ದು, ನೀವು ಎಲ್ಲಾ ನಾಯಕರಿಗೂ ಆದರ್ಶರು ಎಂದು ಹೊಗಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ