Published : Sep 05, 2026, 05:50 AM ISTUpdated : Sep 05, 2026, 11:44 PM IST

National News Live: 20 ವರ್ಷದ ಯುವತಿ ಹೊಟ್ಟೆಯಲ್ಲಿ 1.16 ಕೆಜಿ ಕೂದಲು; 11 ವರ್ಷಗಳಿಂದ ತನ್ನ ಕೂದಲನ್ನೇ ತಿನ್ನುತ್ತಿದ್ದ ಹುಡುಗಿ

ಸಾರಾಂಶ

ನವದೆಹಲಿ (ಸೆ.5): ಭೀಕರ ಪ್ರವಾಹದಿಂದ ಸಾವಿರಾರು ಮಂದಿ ಬಲಿಯಾಗಿರುವ ನೇಪಾಳದಲ್ಲಿ ವೀರೋಚಿತ ರಕ್ಷಣಾ ಕಾರ್ಯವೊಂದು ಶುಕ್ರವಾರ ನಡೆದಿದೆ. ಕಳೆದ 10 ದಿನದಿಂದ ತ್ರಿಶೂಲಿ ಜಲವಿದ್ಯುತ್ ಯೋಜನೆಯ ಸುರಂಗದೊಳಗೆ 170 ಮೀ. ಆಳದಲ್ಲಿ ಸಿಲುಕಿದ್ದ ಇಬ್ಬರನ್ನು ಜೀವಂತವಾಗಿ ಪವಾಡಸದೃಶ ರೀತಿಯಲ್ಲಿ ರಕ್ಷಿಸಲಾಗಿದೆ. ವಿಶೇಷವೆಂದರೆ ರಕ್ಷಣೆಗೆ ಒಳಗಾದ ಸಿಬ್ಬಂದಿಯಲ್ಲಿ ಒಬ್ಬರು, 'ನಾನು ಇತರ ಸಿಬ್ಬಂದಿಯನ್ನು ರಕ್ಷಿಸಿ ಅಲ್ಲೇ ಸಿಲುಕಿದೆ. ಕೊನೆಗೆ ಹರೇಕೃಷ್ಣ ಮಂತ್ರ ಪಠಿಸುತ್ತ ಜೀವಂತವಾಗಿ ಬದುಕಿದೆ' ಎಂದಿದ್ದಾರೆ. ಇವರು ರಕ್ಷಣೆಗೆ ಒಳಗಾಗಿದ್ದು ಕೃಷ್ಣ ಜನ್ಮಾಷ್ಟಮಿಯಂದು ಎಂಬುದು ವಿಶೇಷ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌.

 

11:44 PM (IST) Sep 05

20 ವರ್ಷದ ಯುವತಿ ಹೊಟ್ಟೆಯಲ್ಲಿ 1.16 ಕೆಜಿ ಕೂದಲು; 11 ವರ್ಷಗಳಿಂದ ತನ್ನ ಕೂದಲನ್ನೇ ತಿನ್ನುತ್ತಿದ್ದ ಹುಡುಗಿ

ದೆಹಲಿಯ ದ್ವಾರಕಾದಲ್ಲಿರುವ ಮಣಿಪಾಲ್ ಆಸ್ಪತ್ರೆಯ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ 20 ವರ್ಷದ ವಿದ್ಯಾರ್ಥಿನಿಯೊಬ್ಬಳ ಹೊಟ್ಟೆಯಿಂದ ಸುಮಾರು 1.16 ಕೆಜಿ ತೂಕದ ಬೃಹತ್ ಕೂದಲಿನ ಉಂಡೆಯನ್ನು ಹೊರತೆಗೆದಿದ್ದಾರೆ.

Read Full Story

10:23 PM (IST) Sep 05

ಪಾಕಿಸ್ತಾನ ಕೇವಲ 55 ರನ್‌ಗೆ ಆಲೌಟ್, 7 ವಿಕೆಟ್ ಗೆಲುವು ದಾಖಲಿಸಿ ದಾಖಲೆ ಬರೆದ ಭಾರತ ಮಹಿಳಾ ತಂಡ

ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಕೇವಲ 55 ರನ್‌ಗೆ ಆಲೌಟ್ ಮಾಡಿದ ಭಾರತ ಓವರ್‌ಗಳಲ್ಲಿ ಪಂದ್ಯ ಗೆದ್ದುಕೊಂಡಿದೆ.ಭಾರತ ಮಹಿಳೆಯರ ಸಾಧನೆಗೆ ಹಲವು ದಾಖಲೆ ನಿರ್ಮಾಣವಾಗಿದೆ.

Read Full Story

10:06 PM (IST) Sep 05

ಅನ್ನ ನೀರು ಬಿಟ್ಟು ಕೂತ ಕುಟುಂಬ; ಕಾಣೆಯಾದ ಪ್ರೀತಿಯ ನಾಯಿ ಹುಡುಕಿ ಕೊಟ್ಟವರಿಗೆ ಬಹುಮಾನ

ಪ್ರೀತಿಯಿಂದ ಸಾಕಿದ್ದ ಮುದ್ದಿನ ನಾಯಿ ಪಟಾಕಿ ಸದ್ದಿಗೆ ಮನೆ ಬಿಟ್ಟು ಓಡಿ ಹೋಗಿದೆ. ನಾಯಿ ಮನೆಯಿಂದ ಹೋಗಿದ್ದೇ ಹೋಗಿದ್ದು, ಮಾಲೀಕರು ಅನ್ನ ನೀರು ಬಿಟ್ಟು ಕೂತಿದ್ದಾರಂತೆ. ಅಷ್ಟಕ್ಕೂ ಇದು ಎಲ್ಲಿ ನಡೆದಿರೋದು ಗೊತ್ತಾ?

Read Full Story

09:32 PM (IST) Sep 05

bigg boss ಗ್ರ್ಯಾಂಡ್ ಲಾಂಚ್; ಮುಖ್ಯ ಅತಿಥಿಯಾಗಿ ಬರಲಿದ್ದಾರೆ ಈ ಸ್ಟಾರ್ ನಟ

ತೆಲುಗು ಬಿಗ್ ಬಾಸ್ 10ನೇ ಸೀಸನ್ ಸೆಪ್ಟೆಂಬರ್ 6 ರಂದು ನಾಗಾರ್ಜುನ್ ನಿರೂಪಣೆಯಲ್ಲಿ ಆರಂಭವಾಗಲಿದೆ. ಉದ್ಘಾಟನಾ ಸಂಚಿಕೆಗೆ ನಟ ಕಾರ್ತಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಕುತೂಹಲ ಮೂಡಿಸಿದೆ.
Read Full Story

09:03 PM (IST) Sep 05

ನಿಮ್ಗೆ ಇಷ್ಟ ಆಗದವರು ಆಗಾಗ WhatsApp ಪ್ರೊಫೈಲ್ ಫೋಟೋ ನೋಡ್ತಾರಾ? ಅವ್ರಿಗೆ Hide ಮಾಡಲು ಈ ಟ್ರಿಕ್ಸ್

ಕೆಲವ್ರಿಗೆ ಅದೇನೋ ಒಂಥರಾ ಚಟ. ಆಗಾಗ ವಾಟ್ಸಪ್ ಪ್ರೊಫೈಲ್‌ ಫೋಟೋ ನೋಡ್ತಾ ಇರುತ್ತಾರೆ. ಅದು ನಿಮ್ಗೆ ಇಷ್ಟ ಆಗಲ್ಲ ಅಂತಿದ್ರೆ ಇನ್ಮುಂದೆ ನೀವು ಅವರನ್ನ ದೂರ ಇಡಬಹುದು. ಅವರಿಗೆ ನಿಮ್ಮ ವಾಟ್ಸಪ್ ಪ್ರೊಫೂಲ್ ಫೋಟೋ ಕಾಣದ ರೀತಿಯಲ್ಲಿ ಹೈಡ್ ಮಾಡಬಹುದು. ಅದು ಹೇಗೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story

06:57 PM (IST) Sep 05

ಬಿಗ್ ಬಾಸ್ ಮನೆಯಲ್ಲಿ ಹಾವು, ಶಾರ್ಕ್, ವಿಲಕ್ಷಣ ಮಶ್ರೂಮ್‌ಗಳು.. ಇವುಗಳ ಅರ್ಥವೇನು? ವಾಸ್ತು ತಜ್ಞರ ವಿಶ್ಲೇಷಣೆ

'ಬಿಗ್ ಬಾಸ್ 20' ಮನೆಯ ವಿಶಿಷ್ಟ ವಿನ್ಯಾಸವು ಸ್ಪರ್ಧಿಗಳ ಮೇಲೆ ಮನೋವೈಜ್ಞಾನಿಕ ಪರಿಣಾಮ ಬೀರುತ್ತದೆ. ವಾಸ್ತು ತಜ್ಞರ ಪ್ರಕಾರ, ಮನೆಯಲ್ಲಿರುವ ಶಾರ್ಕ್, ಹಾವು, ಮತ್ತು ಟೀಪಾಟ್‌ನಂತಹ ವಸ್ತುಗಳು ಸ್ಪರ್ಧಿಗಳ ಆಟದ ಶೈಲಿ ಮತ್ತು ಮಾನಸಿಕ ಸ್ಥಿತಿಯನ್ನು ಪ್ರಭಾವಿಸುತ್ತವೆ, ಇದರಲ್ಲಿ ಕೆಲವು ಸಕಾರಾತ್ಮಕ ಮತ್ತು ಕೆಲವು ನಕಾರಾತ್ಮಕ ಶಕ್ತಿಯನ್ನು ಬಿಂಬಿಸುತ್ತವೆ.
Read Full Story

05:35 PM (IST) Sep 05

ಯುವ ರೈತನ ಅದ್ಭುತ ಪ್ಲ್ಯಾನ್! ಯೂಟ್ಯೂಬ್ ನೋಡಿ ಲಕ್ಷ ಲಕ್ಷ ಲಾಭ, ಇಲ್ಲಿ ಸೀಕ್ರೆಟ್!

ದಕ್ಷಿಣ ಭಾರತದ ರೈತರು ಸಾಂಪ್ರದಾಯಿಕ ಕೃಷಿಯನ್ನು ಬಿಟ್ಟು ಲಾಭದಾಯಕ ಆವಕಾಡೊ ಕೃಷಿಯತ್ತ ಮುಖಮಾಡುತ್ತಿದ್ದಾರೆ. ಯೂಟ್ಯೂಬ್‌ನಂತಹ ಆಧುನಿಕ ಮಾಧ್ಯಮಗಳಿಂದ ಮಾಹಿತಿ ಪಡೆದು, ಅಂತರ್ ಬೆಳೆಯಂತಹ ಹೊಸ ಪದ್ಧತಿಗಳನ್ನು ಅಳವಡಿಸಿಕೊಂಡು ಯಶಸ್ಸು ಕಾಣುತ್ತಿದ್ದು, ಇದು ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಿದೆ.

Read Full Story

04:55 PM (IST) Sep 05

ಕೆಟ್ಟ ಸೇಡು, ಬಿಸಿಯೂಟಕ್ಕೆ ಸಗಣಿ ಪುಡಿ ಬೆರೆಸಿದ ಪಾಪಿ - ಪವಾಡ ರೀತಿಯಲ್ಲಿ 50 ಮಕ್ಕಳ ರಕ್ಷಿಸಿದ ಶಿಕ್ಷಕಿ

ಹೆಂಡತಿಯನ್ನ ಕೆಲಸದಿಂದ ತೆಗೆದಿರೋದಕ್ಕೆ ಪಾಪಿಯೊಬ್ಬ ಮಾಡಬಾರದ ಕೆಲಸ ಮಾಡಿ ಲಾಕ್‌ ಆಗಿದ್ದಾನೆ. 50 ಕ್ಕೂ ಹೆಚ್ಚು ಮಕ್ಕಳ ಬದುಕಿಗೆ ಕಂಟಕವಾಗುತ್ತಿದ್ದ ದುರಂತವನ್ನು ಶಾಲಾ ಶಿಕ್ಷಕಿಯೊಬ್ಬರ ಸಮಯೋಚಿತ ನಿರ್ಧಾರದಿಂದ ತಪ್ಪಿದೆ. ಅಷ್ಟಕ್ಕೂ ಆ ಶಾಲೆಯಲ್ಲಿ ಆಗಿದ್ದೇನು? ಇಲ್ಲಿದೆ ವಿವರ.

Read Full Story

03:28 PM (IST) Sep 05

IRCTC Tour - ಅರುಣಾಚಲಂನಿಂದ ರಾಮೇಶ್ವರಂವರೆಗೂ, ಜಸ್ಟ್‌ 16 ಸಾವಿರಕ್ಕೆ ಏಳು ಪುಣ್ಯಕ್ಷೇತ್ರಗಳ ದರ್ಶನ

ಐಆರ್‌ಸಿಟಿಸಿ 'ದಿವ್ಯ ದಕ್ಷಿಣ ಯಾತ್ರೆ ವಿತ್ ಅರುಣಾಚಲಂ' ಹೆಸರಿನಲ್ಲಿ 9 ದಿನಗಳ ವಿಶೇಷ ಪ್ರವಾಸವನ್ನು ಆಯೋಜಿಸಿದೆ. ಈ ಯಾತ್ರೆಯು ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಮೂಲಕ ತಮಿಳುನಾಡಿನ ಅರುಣಾಚಲಂ, ರಾಮೇಶ್ವರಂ, ಮಧುರೈ ಸೇರಿದಂತೆ ಏಳು ಪ್ರಮುಖ ಪುಣ್ಯಕ್ಷೇತ್ರಗಳ ದರ್ಶನವನ್ನು ಒದಗಿಸುತ್ತದೆ.

Read Full Story

01:43 PM (IST) Sep 05

ಬಿಸಿ ಅನ್ನ Vs ತಣ್ಣನೆಯ ಅನ್ನ - ಆರೋಗ್ಯಕ್ಕೆ ಯಾವುದು ಬೆಸ್ಟ್? ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ

ಬಿಸಿ ಬಿಸಿ ಅನ್ನ ತಿನ್ನೋಕೆ ಎಲ್ಲರಿಗೂ ಇಷ್ಟ. ಆದರೆ ಬಿಸಿ ಅನ್ನಕ್ಕಿಂತ ತಣ್ಣಗಾದ ಅನ್ನವೇ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು ಅಂತಾರೆ ತಜ್ಞರು. ಯಾಕೆ? ಇದರ ಹಿಂದಿನ ಸೀಕ್ರೆಟ್ ಏನು? ತಿಳಿಯೋಣ ಬನ್ನಿ.

Read Full Story

01:09 PM (IST) Sep 05

ನೀಮ್ ಕರೋಲಿ ಬಾಬಾ ಸಂನ್ಯಾಸಿಯಾದ ಮೇಲೆ ಅವರ ಹೆಂಡತಿಯ ಜೀವನ ಏನಾಯ್ತು?

ವಿಶ್ವಪ್ರಸಿದ್ಧ ಸಂತ ನೀಮ್ ಕರೋಲಿ ಬಾಬಾ ಅವರ ಆಧ್ಯಾತ್ಮಿಕ ಬದುಕಿನಾಚೆಗಿನ ಸಂಸಾರಿಕ ಜೀವನದ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ. ಅವರ ಪತ್ನಿ ರಾಮ್ ಬೇಟಿ ದೇವಿ ಅವರ ತ್ಯಾಗಮಯ ಬದುಕು ಮತ್ತು ಸಂನ್ಯಾಸದ ನಂತರವೂ ಬಾಬಾ ಅವರು ತಮ್ಮ ಕುಟುಂಬದೊಂದಿಗೆ ಹೊಂದಿದ್ದ ಸಂಬಂಧದ ಕುರಿತಾದ ಅಪರೂಪದ ಮಾಹಿತಿ ಇಲ್ಲಿದೆ.
Read Full Story

01:04 PM (IST) Sep 05

‘ಸೂಪರ್‌ಸ್ಟಾರ್ ತಯಾರಾಗುತ್ತಿದ್ದಾನೆ’; ವೈಭವ್ ಸೂರ್ಯವಂಶಿ ಬಗ್ಗೆ ಕೃಷ್ಣಮಾಚಾರಿ ಶ್ರೀಕಾಂತ್ ಭರ್ಜರಿ ಭವಿಷ್ಯ

15ರ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ದುಲೀಪ್ ಟ್ರೋಫಿಯಲ್ಲಿ ದಾಖಲೆ ಬರೆದು ಸಂಚಲನ ಮೂಡಿಸಿದ್ದಾರೆ. ಮಾಜಿ ಕ್ರಿಕೆಟಿಗ ಶ್ರೀಕಾಂತ್‌ರಿಂದ 'ಸೂಪರ್‌ಸ್ಟಾರ್' ಎಂದು ಹೊಗಳಿಸಿಕೊಂಡಿರುವ ವೈಭವ್, ಇದೀಗ ಕೋಚ್ ಗೌತಮ್ ಗಂಭೀರ್‌ರ ನಿರ್ಧಾರದಿಂದಾಗಿ ಫೈನಲ್ ಪಂದ್ಯದಿಂದ ಹೊರಗುಳಿಯುವ ಆತಂಕದಲ್ಲಿದ್ದಾರೆ.
Read Full Story

12:23 PM (IST) Sep 05

₹46 ಲಕ್ಷದ ಅಮೆಜಾನ್ ಕೆಲಸ ತೊರೆದು ಸೇನೆಗೆ ಸೇರಿದ ಟೆಕ್ಕಿ - ಶರದೇಂದು ತಿವಾರಿ ದೇಶಪ್ರೇಮಕ್ಕೆ ಸಲಾಂ!

ವಾರ್ಷಿಕ ₹46 ಲಕ್ಷ ಸಂಬಳದ ಕಾರ್ಪೊರೇಟ್ ಉದ್ಯೋಗವನ್ನು ತೊರೆದು, ಲಖನೌದ 27 ವರ್ಷದ ಶರದೇಂದು ತಿವಾರಿ ಭಾರತೀಯ ಸೇನೆಗೆ ಅಧಿಕಾರಿಯಾಗಿ ಸೇರ್ಪಡೆಗೊಂಡಿದ್ದಾರೆ. ತಂದೆಯ ಹಾದಿಯಲ್ಲಿ ಸಾಗಿ, ಸತತ 8ನೇ ಪ್ರಯತ್ನದಲ್ಲಿ ಯಶಸ್ಸು ಗಳಿಸಿದ ಅವರ ಈ ಸ್ಪೂರ್ತಿದಾಯಕ ಪಯಣ ಯುವಜನತೆಗೆ ಪ್ರೇರಣೆಯಾಗಿದೆ.
Read Full Story

09:05 AM (IST) Sep 05

ಅಮೆರಿಕ-ಇರಾನ್‌ ಯುದ್ಧದ ನಡುವೆಯೂ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ ಭಾರತದ ವಿದೇಶಿ ವಿನಿಮಯ ಮೀಸಲು

ಆಗಸ್ಟ್ 28ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ನಿಧಿ $11.475 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿ, ಸಾರ್ವಕಾಲಿಕ ಗರಿಷ್ಠ ಮಟ್ಟವಾದ $740.803 ಬಿಲಿಯನ್ ಡಾಲರ್‌ಗೆ ತಲುಪಿದೆ.

Read Full Story

07:25 AM (IST) Sep 05

ಮಹಿಳಾ ಏಷ್ಯಾಕಪ್‌ ಟಿ20 - ಇಂದು ಭಾರತ ಎದುರು ಪಾಕಿಸ್ತಾನಕ್ಕೆ ಡು ಆರ್ ಡೈ ಮ್ಯಾಚ್! ಎಷ್ಟು ಗಂಟೆಗೆ ಆರಂಭ? ನೇರ ಪ್ರಸಾರ ಎಲ್ಲಿ?

ಮಹಿಳಾ ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಶನಿವಾರ ಮುಖಾಮುಖಿಯಾಗಲಿವೆ. ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿರುವ ಭಾರತಕ್ಕೆ ಇದು ಪ್ರತಿಷ್ಠೆಯ ಪಂದ್ಯವಾದರೆ, ಸೆಮಿಫೈನಲ್‌ ರೇಸ್‌ನಲ್ಲಿ ಉಳಿಯಲು ಪಾಕಿಸ್ತಾನಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.
Read Full Story

06:54 AM (IST) Sep 05

Baleno Facelift - ಟಾಟಾ ಆಲ್ಟ್ರೋಜ್, i20ಗೆ ಟಕ್ಕರ್ ಕೊಡಲು ಹೊಸ ಬಲೆನೊ ರೆಡಿ; ಏನೆಲ್ಲಾ ಅಪ್‌ಡೇಟ್?

2026ರ ಮಾರುತಿ ಬಲೆನೊ ಫೇಸ್‌ಲಿಫ್ಟ್ ಸೆಪ್ಟೆಂಬರ್ 5 ರಂದು ಬಿಡುಗಡೆಯಾಗಲಿದ್ದು, ಇದು ಮಹತ್ವದ ಅಪ್‌ಡೇಟ್ ಪಡೆಯಲಿದೆ. ಕಾರಿನ ಹೊರ ಹಾಗೂ ಒಳ ವಿನ್ಯಾಸದಲ್ಲಿ ಪ್ರಮುಖ ಬದಲಾವಣೆಗಳಾಗಲಿದ್ದು, ಸ್ವಿಫ್ಟ್‌ನಲ್ಲಿರುವ ಹೊಸ Z-ಸೀರೀಸ್ ಎಂಜಿನ್, ದೊಡ್ಡ ಟಚ್‌ಸ್ಕ್ರೀನ್ ಮತ್ತು ADAS ನಂತಹ ಫೀಚರ್‌ಗಳನ್ನು ನಿರೀಕ್ಷಿಸಲಾಗಿದೆ.
Read Full Story

06:13 AM (IST) Sep 05

ಹರೇಕೃಷ್ಣ ಮಂತ್ರ ಜಪಿಸುತ್ತಾ ನೇಪಾಳ ಸುರಂಗದಲ್ಲಿ 10 ದಿನ ಇದ್ದ ಇಬ್ಬರ ವೀರೋಚಿತ ರಕ್ಷಣೆ

ನೇಪಾಳದ ತ್ರಿಶೂಲಿ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ 10 ದಿನಗಳಿಂದ ಸಿಲುಕಿದ್ದ ಇಬ್ಬರು ಕಾರ್ಮಿಕರನ್ನು ಪವಾಡಸದೃಶವಾಗಿ ಜೀವಂತವಾಗಿ ರಕ್ಷಿಸಲಾಗಿದೆ. ಪ್ರವಾಹದಿಂದಾಗಿ 170 ಮೀಟರ್ ಆಳದಲ್ಲಿ ಸಿಲುಕಿದ್ದ ಇವರಲ್ಲಿ ಒಬ್ಬರು, ಹರೇಕೃಷ್ಣ ಮಂತ್ರ ಪಠಿಸಿ ಬದುಕುಳಿದೆ ಎಂದು ಹೇಳಿದ್ದಾರೆ.
Read Full Story

More Trending News