Published : Apr 10, 2026, 07:21 AM ISTUpdated : Apr 11, 2026, 12:08 AM IST

India latest news live: ಐಪಿಎಲ್ 2026 - ವಿಡಿಯೋ ಗೇಮ್‌ ಕ್ರಿಕೆಟ್‌ ಆಡಿದ ವೈಭವ್‌ ಸೂರ್ಯವಂಶಿ, ಧ್ರುವ್‌ ಜುರೆಲ್; ಕಂಗೆಟ್ಟ ಆರ್‌ಸಿಬಿ ಬೌಲರ್ಸ್‌

ಸಾರಾಂಶ

ಕೋಲ್ಕತಾ: ಪ.ಬಂಗಾಳದಲ್ಲಿ ಚುನಾವಣಾಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ 7ನೇ ವೇತನ ಆಯೋಗ ಜಾರಿ ಸೇರಿ 6 ಗ್ಯಾರಂಟಿಗಳನ್ನು ಗುರುವಾರ ಘೋಷಿಸಿದ್ದಾರೆ. ಹಲ್ಲಿಯಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, 'ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾನೂನು ಸುವ್ಯವಸ್ಥೆ ಸ್ಥಾಪಿಸುತ್ತೇವೆ. ಒಳನುಸುಳುಕೋರರನ್ನು ಹೊರಹಾಕುತ್ತೇವೆ, 7ನೇ ವೇತನ ಆಯೋಗ ಜಾರಿಗೆ ತರುತ್ತೇವೆ, ಮಹಿಳಾ ಸುರಕ್ಷತೆಗೆ ಆದ್ಯತೆ ನೀಡುತ್ತೇವೆ. ಇವು ಮೋದಿಯ ಗ್ಯಾರಂಟಿ' ಎಂದು ಹೇಳಿದರು.

 

12:08 AM (IST) Apr 11

ಐಪಿಎಲ್ 2026 - ವಿಡಿಯೋ ಗೇಮ್‌ ಕ್ರಿಕೆಟ್‌ ಆಡಿದ ವೈಭವ್‌ ಸೂರ್ಯವಂಶಿ, ಧ್ರುವ್‌ ಜುರೆಲ್; ಕಂಗೆಟ್ಟ ಆರ್‌ಸಿಬಿ ಬೌಲರ್ಸ್‌

ಆರ್‌ಸಿಬಿ ನೀಡಿದ್ದ 202 ರನ್‌ಗಳ ಬೃಹತ್ ಗುರಿಯನ್ನು ರಾಜಸ್ಥಾನ ರಾಯಲ್ಸ್, ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸುಲಭವಾಗಿ ಬೆನ್ನಟ್ಟಿತು. ಕೇವಲ 26 ಎಸೆತಗಳಲ್ಲಿ 78 ರನ್ ಸಿಡಿಸಿದ ವೈಭವ್ ಹಾಗೂ ಅಜೇಯ 81 ರನ್ ಬಾರಿಸಿದ ಧ್ರುವ್ ಜುರೆಲ್ ತಂಡದ ಭರ್ಜರಿ ಗೆಲುವಿಗೆ ಕಾರಣರಾದರು.
Read Full Story

11:04 PM (IST) Apr 10

ಡಾನ್ಸ್ ಮಾಡುತ್ತಾ ಗಂಡಿಗೆ ಮೊಟ್ಟೆ ವರ್ಗಾಯಿಸೋ ಹೆಂಡ್ತಿ - 2 ಸಾವಿರ ಮಕ್ಕಳ ಹೆರುವ ಏಕಪತ್ನಿ ವೃತಸ್ಥ! Video ನೋಡಿ

ಸಮುದ್ರ ಕುದುರೆಗಳಲ್ಲಿ, ಹೆಣ್ಣು ತನ್ನ ಮೊಟ್ಟೆಗಳನ್ನು ಗಂಡಿನ ಹೊಟ್ಟೆಯಲ್ಲಿರುವ 'ಬ್ರೂಡ್ ಪೌಚ್' ಎಂಬ ಚೀಲಕ್ಕೆ ವರ್ಗಾಯಿಸುತ್ತದೆ. ನಂತರ ಗಂಡು ಸಮುದ್ರ ಕುದುರೆಯು ಆ ಮೊಟ್ಟೆಗಳನ್ನು ಫಲವತ್ತಾಗಿಸಿ, ಸುಮಾರು 25-30 ದಿನಗಳ ಕಾಲ ಹೊತ್ತುಕೊಂಡು ನೂರಾರು ಮರಿಗಳಿಗೆ ಜನ್ಮ ನೀಡುತ್ತದೆ. ಸಿಂಗನಾತಿಡೆ ಕುಟುಂಬಕ್ಕೆ ಸೇರಿದ ಈ ಜೀವಿಗಳು ಅತಿಯಾದ ಮೀನುಗಾರಿಕೆ ಮತ್ತು ಸಾಂಪ್ರದಾಯಿಕ ಔಷಧಗಳಲ್ಲಿನ ಬಳಕೆಯಿಂದಾಗಿ ಅಳಿವಿನಂಚಿನಲ್ಲಿವೆ.
Read Full Story

10:53 PM (IST) Apr 10

ಮಹಿಳಾ ಸಹೋದ್ಯೋಗಿಯ ಎದೆ ದಿಟ್ಟಿಸೋದು ಅಸಭ್ಯ ವರ್ತನೆ, ಕಾಮಪ್ರಚೋದಿತ ಕೃತ್ಯವಲ್ಲ ಎಂದ ಹೈಕೋರ್ಟ್‌

ಮಹಿಳಾ ಸಹೋದ್ಯೋಗಿಯ ಎದೆಯನ್ನು ದಿಟ್ಟಿಸಿ ನೋಡಿದ ಆರೋಪದ ಮೇಲೆ ದಾಖಲಾಗಿದ್ದ ಎಫ್‌ಐಆರ್ ಅನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ. ಕಚೇರಿಯಲ್ಲಿ ನಡೆದ ಈ ಘಟನೆಯು 'ದುರ್ನಡತೆ' ಎನಿಸಿದರೂ, ಕಾನೂನಿನ ಪ್ರಕಾರ ಇದನ್ನು 'ವಾಯುರಿಸಂ' (ಸೆಕ್ಷನ್ 354-C) ಎಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
Read Full Story

10:05 PM (IST) Apr 10

ಕಾರ್ಗಿಲ್ ವೀರ, ‘ಲಯನ್‌ ಆಫ್‌ ಲಡಾಖ್ ’ ಕರ್ನಲ್ ಸೋನಮ್ ವಾಂಗ್ಚುಕ್ ನಿಧನ - ಭಾರತದ ಹೆಮ್ಮೆಯ ಪುತ್ರನಿಗೆ ಕಂಬನಿ

ಕಾರ್ಗಿಲ್ ಯುದ್ಧದ ಹೀರೋ, 'ಲಡಾಖ್ ಸಿಂಹ' ಖ್ಯಾತಿಯ ಮಹಾವೀರ ಚಕ್ರ ಪುರಸ್ಕೃತ ಕರ್ನಲ್ ಸೋನಮ್ ವಾಂಗ್ಚುಕ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. 1999ರ 'ಆಪರೇಷನ್ ವಿಜಯ್' ಕಾರ್ಯಾಚರಣೆಯಲ್ಲಿ ತೋರಿದ ಅದಮ್ಯ ಸಾಹಸಕ್ಕಾಗಿ ಅವರು ಪ್ರಸಿದ್ಧರಾಗಿದ್ದರು.

Read Full Story

09:18 PM (IST) Apr 10

ದೋಸೆ ಹಿಟ್ಟು ತಿಂದು ಸತ್ತ ಪ್ರಕರಣಕ್ಕೆ ಶಾಕಿಂಗ್​ ಟ್ವಿಸ್ಟ್​ - ಸಾವಿನ ಹಿಂದೆ ಬೇರೆಯದ್ದೇ ಕಾರಣ?

ಅಹಮದಾಬಾದ್‌ನಲ್ಲಿ ದೋಸೆ ಹಿಟ್ಟು ಸೇವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆಗೆ ಆಘಾತಕಾರಿ ತಿರುವು ಸಿಕ್ಕಿದೆ. ಇದು ಫುಡ್ ಪಾಯ್ಸನಿಂಗ್ ಅಲ್ಲ, ಬದಲಿಗೆ ಕೀಟನಾಶಕ ಸೇವನೆಯಿಂದಾದ ಸಾವು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದಂಪತಿಯ ಅನುಮಾನಾಸ್ಪದ ನಡವಳಿಕೆ ಮತ್ತು ಹೇಳಿಕೆಗಳು ಇದೊಂದು ಕುಟುಂಬ ಆತ್ಮಹ*ತ್ಯಾ ಯತ್ನವಿರಬಹುದೆಂಬ ಶಂಕೆಯನ್ನು ಹುಟ್ಟುಹಾಕಿದೆ.

Read Full Story

08:40 PM (IST) Apr 10

ಆನ್‌ಲೈನ್ ಪೇಮೆಂಟ್‌ನಲ್ಲಿ ಬಿಗ್ ಚೇಂಜ್ - ₹10,000 ಮೇಲ್ಪಟ್ಟ ಹಣ ವರ್ಗಾವಣೆ ಇನ್ನು 1 ಗಂಟೆ ಲೇಟ್‌!

ಡಿಜಿಟಲ್ ವಂಚನೆ ತಡೆಯಲು, ಆರ್‌ಬಿಐ ₹10,000 ಕ್ಕಿಂತ ಹೆಚ್ಚಿನ ಆನ್‌ಲೈನ್ ಹಣ ವರ್ಗಾವಣೆಗೆ ಒಂದು ಗಂಟೆಯ ವಿಳಂಬವನ್ನು ಪ್ರಸ್ತಾಪಿಸಿದೆ. ಈ ಹೊಸ ನಿಯಮವು ಗ್ರಾಹಕರಿಗೆ ತಪ್ಪಾದ ವಹಿವಾಟುಗಳನ್ನು ರದ್ದುಗೊಳಿಸಲು ಅವಕಾಶ ನೀಡಲಿದೆ.

Read Full Story

08:08 PM (IST) Apr 10

Durandhar-2 ಸಕ್ಸಸ್​ ಬೆನ್ನಲ್ಲೇ ಕ್ಷಮೆ ಕೋರಿ ಕರ್ನಾಟಕ ಹೈಕೋರ್ಟ್​ಗೆ ನಟ ರಣವೀರ್ ಸಿಂಗ್​ - ಆಗಿದ್ದೇನು?

ಚಾವುಂಡಿ ದೈವವನ್ನು ಅನುಕರಿಸಿ ಅಪಹಾಸ್ಯ ಮಾಡಿದ ಪ್ರಕರಣದಲ್ಲಿ ನಟ ರಣವೀರ್ ಸಿಂಗ್ ಕರ್ನಾಟಕ ಹೈಕೋರ್ಟ್‌ಗೆ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಹಿಂದಿನ ಕ್ಷಮೆಯಾಚನೆ ಪ್ರಾಮಾಣಿಕವಾಗಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ, ಪರಿಷ್ಕೃತ ಅಫಿಡವಿಟ್ ಸಲ್ಲಿಸಿ, ‘ದೇವಸ್ಥಾನಕ್ಕೆ ಭೇಟಿ ನೀಡುವುದಾಗಿಯೂ ತಿಳಿಸಿದ್ದಾರೆ.

Read Full Story

07:22 PM (IST) Apr 10

'ನೀನು ಕರಿಯ, ನನಗೆ ಬೆಳ್ಳಗಿದ್ದವನು ಬೇಕಿತ್ತು..' ಲವರ್‌ ಜೊತೆ ಸೇರಿ ಗಂಡನ ಕೊ*ಲೆಗೈದು ಆಸ್ಕರ್ ರೇಂಜ್ ಆಕ್ಟಿಂಗ್‌ ಮಾಡಿದ ಪತ್ನಿ

ಮಧ್ಯಪ್ರದೇಶದ ಧಾರ ಜಿಲ್ಲೆಯಲ್ಲಿ, ಪತಿಯ ಕಪ್ಪು ಬಣ್ಣವನ್ನು ದ್ವೇಷಿಸುತ್ತಿದ್ದ ಪತ್ನಿ, ತನ್ನ ಪ್ರಿಯಕರನೊಂದಿಗೆ ಸೇರಿ ಸುಪಾರಿ ಕಿಲ್ಲರ್ ಮೂಲಕ ಗಂಡನನ್ನು ಕೊಲೆ ಮಾಡಿಸಿದ್ದಾಳೆ. ನಂತರ ದರೋಡೆಯ ನಾಟಕವಾಡಿ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದರೂ, ತನಿಖೆಯ ವೇಳೆ ಆಕೆಯ ಅಸಲಿ ಮುಖ ಬಯಲಾಗಿದೆ.
Read Full Story

06:41 PM (IST) Apr 10

ಬೃಂದಾವನದ ಯಮುನಾ ನದಿಯಲ್ಲಿ ಪ್ರವಾಸಿಗರಿದ್ದ ದೋಣಿ ಉರುಳಿ ಭೀಕರ ದುರಂತ, 10 ಸಾವು

ಬೃಂದಾವನದ ಯಮುನಾ ನದಿಯಲ್ಲಿ ಪ್ರವಾಸಿಗರಿದ್ದ ದೋಣಿಯೊಂದು ಮಗುಚಿ ಬಿದ್ದು, ಪಂಜಾಬ್ ಮೂಲದ 10 ಮಂದಿ ಸಾವನ್ನಪ್ಪಿದ್ದಾರೆ. ಬಲವಾದ ಗಾಳಿಯಿಂದ ನಿಯಂತ್ರಣ ತಪ್ಪಿದ ದೋಣಿ ಪಾಂಟೂನ್ ಸೇತುವೆಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
Read Full Story

05:37 PM (IST) Apr 10

ದಳಪತಿ ವಿಜಯ್ 'ಜನ ನಾಯಗನ್' ವಿಡಿಯೋ ಲೀಕ್; ಈ ದುಷ್ಕೃತ್ಯದ ಹಿಂದೆ ಭಾರೀ ಷಡ್ಯಂತ್ರ ಇದೆಯಾ?

ಅಭಿಮಾನಿಗಳ ಪಾಲಿಗೆ ಇದು ಕೇವಲ ಸಿನಿಮಾವಲ್ಲ, ಇದು ತಮ್ಮ ನೆಚ್ಚಿನ ನಟನ ಸಿನಿರಂಗದ 'ಲಾಸ್ಟ್ ಶೋ'. ಇಂತಹ ಭಾವನಾತ್ಮಕ ಚಿತ್ರಕ್ಕೆ ಈ ರೀತಿ ಸೋರಿಕೆ ಮತ್ತು ಕಾನೂನು ವಿಘ್ನಗಳು ಎದುರಾಗುತ್ತಿರುವುದು ವಿಜಯ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಚಿತ್ರತಂಡವು ಶೀಘ್ರದಲ್ಲೇ ಈ ಎಲ್ಲಾ ಅಡೆತಡೆಗಳನ್ನು ದಾಟಿ ಬರುತ್ತದೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

Read Full Story

05:02 PM (IST) Apr 10

'ತಮ್ಮದು ರಾಧಾಕೃಷ್ಣ ಲವ್‌ ಸ್ಟೋರಿ..' ಎಂದಿದ್ದ ಕುಂಭಮೇಳ ಗರ್ಲ್‌ ಮೋನಾಲಿಸಾ ಅಪ್ರಾಪ್ತೆ; ಮುಸ್ಲಿಂ ಪತಿಯ ವಿರುದ್ಧ ಪೋಕ್ಸೋ ಕೇಸ್

ಕುಂಭಮೇಳದಲ್ಲಿ ಖ್ಯಾತಿ ಪಡೆದಿದ್ದ ಮೋನಾಲಿಸಾಳ ವಿವಾಹವು ಇದೀಗ ವಿವಾದಕ್ಕೆ ಕಾರಣವಾಗಿದೆ. ತನಿಖೆಯಲ್ಲಿ ಆಕೆ ಅಪ್ರಾಪ್ತೆ ಎಂದು ದೃಢಪಟ್ಟಿದ್ದು, ಆಕೆಯ ಪತಿ ಫರ್ಮಾನ್‌ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. 

Read Full Story

04:38 PM (IST) Apr 10

ಪೊಲೀಸ್ ಅಧಿಕಾರಿಯ 80 ಕೋಟಿ ಬೇನಾಮಿ ಆಸ್ತಿಗೆ ಮನೆಗೆಲಸದವಳೇ ಬಾಸ್ - ರೀಲ್ಸ್ ನೋಡಿ ಬೆಚ್ಚಿಬಿದ್ದ ತನಿಖಾ ತಂಡ!

ಭ್ರಷ್ಟಾಚಾರದ ಆರೋಪದ ಮೇಲೆ ಅಮಾನತುಗೊಂಡಿರುವ ಕಿಶನ್‌ಗಂಜ್ ಎಸ್‌ಡಿಪಿಒ ಗೌತಮ್ ಕುಮಾರ್ ಅವರ ಮನೆಯ ಕೆಲಸದಾಕೆ ಪಾರೋ, ಅವರ ಬೇನಾಮಿ ಆಸ್ತಿಯನ್ನು ನಿರ್ವಹಿಸುತ್ತಿದ್ದಳು. ಸೋಷಿಯಲ್ ಮೀಡಿಯಾ ರೀಲ್ಸ್‌ನಿಂದ ಆಕೆಯ ಅದ್ದೂರಿ ಜೀವನ ಬಯಲಾಗಿದೆ.

Read Full Story

03:39 PM (IST) Apr 10

ಟ್ರಾಫಿಕ್ ಚಲನ್ ನೀಡಿದ ಸುಳಿವು - ಕದ್ದ ವಾಹನವನ್ನು ರಾಜಾರೋಷವಾಗಿ ಓಡಿಸ್ತಿದ್ದ ಕಳ್ಳನ ಕಡೆಗೂ ಬಂಧಿಸಿದ ಪೊಲೀಸರು

ಕೆಲ ದಿನಗಳ ಹಿಂದೆ ಹೈದರಾಬಾದ್ ವ್ಯಕ್ತಿಯೊಬ್ಬರು ಹಾಕಿದ್ದ ಟ್ವಿಟ್ಟರ್ ಪೋಸ್ಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ತಮ್ಮ ಮೂರು ತಿಂಗಳ ಹಿಂದೆ ಕಳವಾದ ಸ್ಕೂಟರ್‌ಗೆ ಸಂಬಂಧಿಸಿದಂತೆ ಅವರಿಗೆ ಬಂದ ಟ್ರಾಫಿಕ್ ಚಲನ್‌ಗೆ ಸಂಬಂಧಿಸಿದ ಪೋಸ್ಟ್ ಅದಾಗಿತ್ತು. ಇದಾದ ಬಳಿಕ ಈಗ ಕಡೆಗೂ ಕಳ್ಳನ ಬಂಧನವಾಗಿದೆ.

Read Full Story

03:04 PM (IST) Apr 10

ನಾಸಾದ ಚಂದ್ರಯಾನದಲ್ಲಿ ಗಗನಯಾತ್ರಿಗಳ ಜೊತೆ ಬಾಹ್ಯಾಕಾಶಕ್ಕೆ ಹಾರಿದ ಭಾರತದ ಡಲ್ಕೋಫ್ಲೆಕ್ಸ್!

ನಾಸಾದ ಐತಿಹಾಸಿಕ 'ಆರ್ಟೆಮಿಸ್ 2' ಬಾಹ್ಯಾಕಾಶ ಯಾನದಲ್ಲಿ ಗಗನಯಾತ್ರಿಗಳ ಮಲಬದ್ಧತೆ ನಿವಾರಣೆಗೆ 'ಡಲ್ಕೋಫ್ಲೆಕ್ಸ್' ಔಷಧವನ್ನು ಸೇರಿಸಲಾಗಿದೆ. ಗುರುತ್ವಾಕರ್ಷಣೆ ಇಲ್ಲದಿರುವುದರಿಂದ ಬಾಹ್ಯಾಕಾಶದಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದ್ದು, ದಶಕಗಳಿಂದ ನಂಬಿಕೆ ಗಳಿಸಿರುವ ಈ ಔಷಧವು ಸುರಕ್ಷಿತ ಪರಿಹಾರವಾಗಿದೆ. ಭಾರತದಲ್ಲಿಯೂ ಲಭ್ಯವಿರುವ ಈ ಔಷಧದ ವಿವಿಧ ರೂಪಗಳ ಬಗ್ಗೆ ಲೇಖನವು ವಿವರಿಸುತ್ತದೆ.
Read Full Story

12:51 PM (IST) Apr 10

ಸುಪ್ರಿಯಾ, ನಿಮಗಿಂತ ಹೆಚ್ಚು ಬ್ಲಾಕ್‌ಬಸ್ಟರ್ ಯಶಸ್ಸಿಗೆ ಬೇರೆ ಯಾರೂ ಅರ್ಹರಿಲ್ಲ; ಸಮಂತಾ ಹೇಳಿಕೆ ವೈರಲ್!

ಸಮಂತಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ 'ಡಕಾಯಿತ' ಚಿತ್ರದ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಚಿತ್ರದ ನಿರ್ಮಾಪಕಿ ಸುಪ್ರಿಯಾ ಯರ್ಲಾಗಡ್ಡ ಅವರನ್ನು ವಿಶೇಷವಾಗಿ ಕೊಂಡಾಡಿದ್ದಾರೆ. "ನಿಮ್ಮ ಕೆಲಸ, ನಿಮ್ಮ ಛಲ ಮತ್ತು ಸಿನಿಮಾದ ಮೇಲಿರುವ ನಿಮ್ಮ ಪ್ರೀತಿಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಸುಪ್ರಿಯಾ, ನಿಮಗಿಂತ ಹೆಚ್ಚು ಬ್ಲಾಕ್‌ಬಸ್ಟರ್ ಯಶಸ್ಸಿಗೆ ಬೇರೆ ಯಾರೂ ಅರ್ಹರಿಲ್ಲ' ಎಂದಿದ್ದಾರೆ.

Read Full Story

11:51 AM (IST) Apr 10

ಸಲ್ಮಾನ್ ಖಾನ್ ಹೆಗಲ ಮೇಲೆ ಕೈ ಹಾಕಿದ ಅಪರಿಚಿತ ವ್ಯಕ್ತಿ; ಬಿಷ್ಣೋಯ್ ಗ್ಯಾಂಗ್ ಕಡೆಯವ್ನಾ ಆಗುಂತಕ?

ಸದ್ಯ ಸಲ್ಮಾನ್ ಖಾನ್ ಅವರು ತಮ್ಮ ಮುಂಬರುವ ಯುದ್ಧ ಆಧಾರಿತ ಚಿತ್ರ 'ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್' ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಶುಕ್ರವಾರವಷ್ಟೇ ಚಿತ್ರದ ಹೊಸ ಹಾಡು 'ಮೇರಾ ಜೀ ನಹೀ ಭರಾ' ಬಿಡುಗಡೆಯಾಗಿದ್ದು, ಚಿತ್ರದಲ್ಲಿನ ಹೊಸ ಪ್ರತಿಭೆಗಳನ್ನು ಈ ಹಾಡಿನ ಮೂಲಕ ಪರಿಚಯಿಸಲಾಗಿದೆ.

Read Full Story

11:06 AM (IST) Apr 10

ಪಾಕ್ ಎಡವಟ್ಟಿನಿಂದ ಲೆಬನಾನ್ ಗೊಂದಲ - ಬೇರೆ ಬೇರೆ ಸಂಧಾನ ಪ್ರತಿ ಹಂಚಿ ಎಡವಟ್ಟು - ಇಸ್ರೇಲ್ ದಾಳಿಗೆ ಲೆಬನಾನ್‌ಲ್ಲಿ 300 ಬಲಿ

US-Iran ceasefire deal : ಅಮೆರಿಕ-ಇರಾನ್ ನಡುವೆ ಬುಧವಾರ ಏರ್ಪಟ್ಟ 2 ವಾರಗಳ ತಾತ್ಕಾಲಿಕ ಕದನ ವಿರಾಮ ಕುರಿತ ಗೊಂದಲ ಗುರುವಾರವೂ ಮುಂದುವರಿದಿದೆ. ಈ ಗೊಂದಲಕ್ಕೆ ಕಾರಣ ಮಧ್ಯವರ್ತಿಯಾಗಿ ಕೆಲಸ ಮಾಡಿದ ಪಾಕಿಸ್ತಾನ ಎಂಬ ಆರೋಪ ಕೇಳಿ ಬರುತ್ತಿದೆ.

Read Full Story

09:37 AM (IST) Apr 10

COVID ಟೈಂನಲ್ಲಿ ಡಿಎಂಕೆ ಅಧಿಕಾರದಲ್ಲಿದ್ದಿದ್ರೆ ಸ್ಟಾಲಿನ್ ಸತ್ತೋಗಿರ್ತಿದ್ರು; ಪಳನಿಸ್ವಾಮಿ

ಕೊರೋನಾ ಸಮಯದಲ್ಲಿ ಡಿಎಂಕೆ ಅಧಿಕಾರದಲ್ಲಿದ್ದರೆ ಸಿಎಂ ಸ್ಟಾಲಿನ್‌ ಸಾಯುತ್ತಿದ್ದರು ಎಂದು ಎಡಪ್ಪಾಡಿ ಪಳನಿಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸ್ಟಾಲಿನ್, ‘ಜನರಿಗಾಗಿ ಸಾಯಲು ಹೆದರುವುದಿಲ್ಲ’ ಎಂದು ಹೇಳಿದ್ದಾರೆ.

Read Full Story

09:16 AM (IST) Apr 10

ಹೋರ್ಮುಜ್ ಮೂಲಕ ನಿತ್ಯ 15 ಹಡಗು ಸಾಗಲು ಇರಾನ್ ಅಸ್ತು - ಹೋರ್ಮುಜ್ ಜಲಸಂಧಿ ರಕ್ಷಣೆಗೆ ಧಾವಿಸಿ - ಇ.ಯು.ಗೆ ಟ್ರಂಪ್ ಕರೆ

ಅಮೆರಿಕ, ಇರಾನ್ ಮತ್ತು ಇಸ್ರೇಲ್ ನಡುವಿನ ಕದನವಿರಾಮದ ಅನ್ವಯ, ಹೋರ್ಮುಜ್ ಜಲಸಂಧಿಯಲ್ಲಿ ದಿನಕ್ಕೆ 15 ಹಡಗುಗಳಿಗೆ ಇರಾನ್ ಅನುಮತಿಯೊಂದಿಗೆ ಸಾಗಲು ಅವಕಾಶ ನೀಡಲಾಗಿದೆ. ಆದರೆ, ಜಲಸಂಧಿಯ ರಕ್ಷಣೆಗೆ ಮುಂದಾಗುವಂತೆ ಅಮೆರಿಕ ಅಧ್ಯಕ್ಷ ಟ್ರಂಪ್ ಯುರೋಪಿಯನ್ ಒಕ್ಕೂಟಕ್ಕೆ ಕರೆ ನೀಡಿದ್ದಾರೆ.

Read Full Story

08:51 AM (IST) Apr 10

ಪಂಚರಾಜ್ಯ ಚುನಾವಣೆ - ಕೇರಳ, ಪುದುಚೇರಿ, ಅಸ್ಸಾಂನಲ್ಲಿ ದಾಖಲೆಯ ಮತದಾನ

ಕೇರಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳಲ್ಲಿ ಗುರುವಾರ ದಾಖಲೆಯ ಮತದಾನ ನಡೆದಿದೆ. ಪುದುಚೇರಿಯಲ್ಲಿ ಸಾರ್ವಕಾಲಿಕ ಗರಿಷ್ಠ ಶೇ.89.08, ಅಸ್ಸಾಂನಲ್ಲಿ ಶೇ.85.04 ಮತ್ತು ಕೇರಳದಲ್ಲಿ ಶೇ.78 ರಷ್ಟು ಮತದಾನವಾಗಿದ್ದು, ಸಣ್ಣಪುಟ್ಟ ಗಲಾಟೆಗಳನ್ನು ಹೊರತುಪಡಿಸಿ ಮತದಾನ ಪ್ರಕ್ರಿಯೆ ಶಾಂತಿಯುತವಾಗಿತ್ತು.
Read Full Story

08:26 AM (IST) Apr 10

ಸ್ವಂತ ಕಾರೂ ಇಲ್ಲದ ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ - ದೀದಿ ಆಸ್ತಿ ಬರೀ 15.4 ಲಕ್ಷ

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಎನಿಸಿಕೊಂಡಿದ್ದು, ಕಳೆದ 5 ವರ್ಷಗಳಲ್ಲಿ ಅವರ ಆಸ್ತಿ 1.35 ಲಕ್ಷ ರು. ಇಳಿಕೆಯಾಗಿದೆ. ಚುನಾವಣಾ ಅಫಿಡವಿಟ್ ಪ್ರಕಾರ, ಅವರ ಪ್ರಸ್ತುತ ಆಸ್ತಿ ಕೇವಲ 15.37 ಲಕ್ಷ ರು. ಅವರ ಬಳಿ ಸ್ವಂತ ವಾಹನವಿಲ್ಲ ಮತ್ತು ಯಾವುದೇ ಹೂಡಿಕೆ ಇಲ್ಲ.

Read Full Story

07:42 AM (IST) Apr 10

Supreme Court on temple entry - ಕೆಲವು ಪಂಗಡಗಳಿಗೆ ದೇಗುಲ ಪ್ರವೇಶ ನಿರ್ಬಂಧ ಹಿಂದೂ ಧರ್ಮಕ್ಕೆ ಮಾರಕ - ಸುಪ್ರೀಂ

ಎಲ್ಲಾ ದೇವಾಲಯ ಮತ್ತು ಮಠಗಳಿಗೆ ಪ್ರತಿಯೊಬ್ಬರಿಗೂ ಪ್ರವೇಶವಿರಬೇಕು ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಶಬರಿಮಲೆ ಸೇರಿದಂತೆ ದೇಗುಲ ಪ್ರವೇಶ ನಿರ್ಬಂಧಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ, ಯಾವುದೇ ಪಂಗಡವನ್ನು ಹೊರಗಿಡುವುದು ಹಿಂದೂ ಧರ್ಮಕ್ಕೆ ಹಾನಿಕಾರಕ  ಎಂದು ಸಾಂವಿಧಾನಿಕ ಪೀಠ ಹೇಳಿದೆ.

Read Full Story

More Trending News