ಹರ್ಯಾಣದ ಶಿಖೋಪುರದಲ್ಲಿ 2008ರಲ್ಲಿ ನಡೆಸಲಾದ ಭೂ ಖರೀದಿ ಅವ್ಯವಹಾರ ಸಂಬಂಧ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ ಆರೋಪಪಟ್ಟಿ ದಾಖಲಿಸಿದೆ. ಜೊತೆಗೆ ವಾದ್ರಾಗೆ ಸೇರಿದ 38 ಕೋಟಿ ರು. ಮೌಲ್ಯದ ಆಸ್ತಿ ಜಪ್ತಿ ಮಾಡಿದೆ. ಕ್ರಿಮಿನಲ್ ಪ್ರಕರಣವೊಂದರಲ್ಲಿ ವಾದ್ರಾ ವಿರುದ್ಧ ಆರೋಪಪಟ್ಟಿ ಸಲ್ಲಿಕೆ ಇದೇ ಮೊದಲು. 2008ರಲ್ಲಿ ವಾದ್ರಾ ನಿರ್ದೇಶಕರಾಗಿದ್ದ ಸ್ಕೈಲೈನ್ ಕಂಪನಿ, ಹರ್ಯಾಣದ ಗುರುಗ್ರಾಮ ಬಳಿಕ ಮನೇಸರ್- ಶಿಖೋಪುರ್ ಪ್ರದೆಶದಲ್ಲಿ 3.5 ಎಕರೆ ಜಾಗವನ್ನು 7.5 ಕೋಟಿ ರು.ಗೆ ಖರೀದಿಸಿತ್ತು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿತ್ತು. 2012ರಲ್ಲಿ ಇದೇ ಜಾಗವನ್ನು ವಾದ್ರಾ, ಡಿಎಲ್‌ಎಫ್ ಸಂಸ್ಥೆಗೆ ಭರ್ಜರಿ 58 ಕೋಟಿ ರು.ಗೆ ಮಾರಾಟ ಮಾಡಿದ್ದರು. ಇದು ಡಿಎಲ್‌ಎಫ್‌ಗೆ ಕಾಂಗ್ರೆಸ್ ಸರ್ಕಾರ ನೆರವು ನೀಡಿದ್ದಕ್ಕೆ ಅದು ಲಂಚದ ರೂಪದಲ್ಲಿ ಹೆಚ್ಚಿನ ಹಣ ನೀಡಿ ವಾದ್ರಾರಿಂದ ಭೂಮಿ ಖರೀದಿಸಿದೆ ಎಂದು ವಿಪಕ್ಷ ಬಿಜೆಪಿ ಆರೋಪಿಸಿತ್ತು.

09:35 PM (IST) Jul 18
09:13 PM (IST) Jul 18
ಮಣಿಪುರದ ಸ್ಥಳೀಯ ಹಾವೊಫಾ ಶ್ವಾನವೀಗ ದೇಶ ಸೇವೆಗೆ ಸಿದ್ಧಗೊಳ್ಳುತ್ತಿದ್ದು, ಅಸ್ಸಾಂ ರೈಫಲ್ಸ್ ವಿಭಾಗವನ್ನು ಸೇರಲಿದೆ. ಹಾವೊಫಾ ತಳಿಯ ಶ್ವಾನವು ಮಣಿಪುರ ತಂಗ್ಖುಲ್ ಪ್ರದೇಶದ ದೇಶಿಯ ತಳಿಯ ಶ್ವಾನವಾಗಿದೆ.
07:41 PM (IST) Jul 18
ಶ್ವಾನವೊಂದು ಐಷಾರಾಮಿ ಲ್ಯಾಂಬೋರ್ಘಿನಿ ಕಾರನ್ನೇ ಅಡ್ಡಗಟ್ಟಿ ಓಡಿಸಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
07:02 PM (IST) Jul 18
ಹೈದರಾಬಾದ್ ಸುತ್ತ ಮತ್ತೊಂದು ಓಆರ್‌ಆರ್ ಬರ್ತಿದೆ... ಆದೆರೆ ಇದು ಔಟರ್ ರಿಂಗ್ ರೋಡ್ ಅಲ್ಲ, ಔಟರ್ ರಿಂಗ್ ರೈಲು. ಇದು ಭಾರತದಲ್ಲಿಯೇ ಮೊದಲ ಪ್ರಾಜೆಕ್ಟ್ ಆಗಿದೆ. ಹಾಗಾದರೆ, ಏನಿದು ಪ್ರಾಜೆಕ್ಟ್? ಇದರಿಂದ ಆಗೋ ಲಾಭಗಳೇನು? ಇಲ್ಲಿ ತಿಳ್ಕೊಳ್ಳೋಣ.
05:52 PM (IST) Jul 18
04:55 PM (IST) Jul 18
04:53 PM (IST) Jul 18
04:23 PM (IST) Jul 18
ತೆಲುಗು ಖ್ಯಾತ ನಟ ಗುಮ್ಮಡಿ ವೆಂಕಟೇಶ್ವರ ರಾವ್ ಅವರ ಪುತ್ರಿ ಶಾರದಾ, ಚಿರಂಜೀವಿ ಅವರ ಬಗ್ಗೆ ಹೇಳಿದ ಮಾತುಗಳು ವೈರಲ್ ಆಗಿವೆ. ತಮ್ಮ ಊರಿಗೆ ಚಿರಂಜೀವಿ ಮಾಡಿದ ಸಹಾಯ ಶತಮಾನಗಳವರೆಗೆ ನೆನಪಿನಲ್ಲಿ ಉಳಿಯುತ್ತದೆ ಎಂದಿದ್ದಾರೆ. ಏನದು ಸಹಾಯ ಅಂತ ತಿಳ್ಕೊಳ್ಳೋಣ.
04:17 PM (IST) Jul 18
ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ವಾಯುಪಡೆಯು ಪಾಕ್‌ನ ವಾಯುನೆಲೆಯ ಮೇಲೆ ನಡೆಸಿದ ನಿಖರವಾದ ದಾಳಿ ಎಷ್ಟು ಪರಿಣಾಮ ಬೀರಿದೆ ಎಂದರೆ, ಅಲ್ಲಿನ ಏಕೈಕ ರನ್‌ವೇಯ ಮಧ್ಯದಲ್ಲಿ ಸುಮಾರು 19 ಅಡಿ ಅಗಲದ (43 ಅಡಿ ವ್ಯಾಸ) ಬೃಹತ್ ಕುಳಿಯನ್ನು ಸೃಷ್ಟಿಸಿದೆ. ಅಂದಿನಿಂದ ಈವರೆಗೂ ಈ ಏರ್‌ಬೇಸ್ ನಿರುಪಯುಕ್ತವಾಗಿದೆ.
03:34 PM (IST) Jul 18
03:18 PM (IST) Jul 18
02:19 PM (IST) Jul 18
ದೂರು ನೀಡಿದ ರೈಲ್ವೆ ಪ್ರಯಾಣಿಕರ ಮೇಲೆ ಕೆಟರಿಂಗ್ ಸಿಬ್ಬಂದಿ ಪ್ರಯಾಣಿಕರ ಪಿಎನ್‌ಆರ್ ನಂಬರ್ ನೋಡಿಬಂದು ಹಲ್ಲೆ ಮಾಡಿದಂತಹ ಆಘಾತಕಾರಿ ಘಟನೆ ರೈಲೊಂದರಲ್ಲಿ ನಡೆದಿದ್ದು, ಇದರ ವೀಡಿಯೋ ಈಗ ಭಾರಿ ವೈರಲ್ ಆಗಿದೆ.
01:50 PM (IST) Jul 18
ಕೋಲ್ಡ್ ಪ್ಲೇ ಕಾನ್ಸರ್ಟ್‌ನ ಕಿಸ್ ಕ್ಯಾಮ್ ಶೋನಲ್ಲಿ ಆಸ್ಟ್ರೋನಾಮರ್ ಕಂಪನಿ ಸಿಇಒ ಬೈರಾನ್ ಮತ್ತು ಅವರ ಸಹೋದ್ಯೋಗಿ ಕ್ರಿಸ್ಟಿನ್ ಕ್ಯಾಬೋಟ್ ಅವರ ಸಂಬಂಧದ ವಿಡಿಯೋ ವೈರಲ್ ಆಗಿದೆ.
01:12 PM (IST) Jul 18
ಕೋಲ್ಡ್ ಪ್ಲೇ ಮ್ಯೂಸಿಕ್ ಬ್ಯಾಂಡ್‌ನ ಕ್ರಿಸ್ ಮಾರ್ಟಿನ್ ಅಚಾನಕ್ ಆಗಿ ಆಸ್ಟ್ರೋನಾಮರ್ ಕಂಪನಿಯ ಸಿಇಒ ಆಂಡಿ ಬೈರಾನ್ ಅದೇ ಕಂಪನಿಯ ಎಚ್‌ಆರ್ ಜೊತೆಗಿನ ರಿಲೇಷನ್‌ಷಿಪ್‌ಅನ್ನು ದೈತ್ಯ ಪರದೆಯ ಮೇಲೆ ಬಹಿರಂಗ ಮಾಡಿದ್ದಾರೆ.
01:06 PM (IST) Jul 18
ಬೈಕ್‌ಗೆ ಅಡ್ಡ ಬಂದ ಬೀದಿನಾಯಿಯ ಜೀವ ಉಳಿಸಲು ಹೋಗಿ 17 ವರ್ಷದ ತರುಣ ಸಾವನ್ನಪ್ಪಿದ್ದ ಮನಕಲುಕುವ ಘಟನೆ ಛತ್ತೀಸ್‌ಗಢದ ಬಿಲಾಯಿಯಲ್ಲಿ ನಡೆದಿದ್ದು, ಘಟನೆಯ ವೀಡಿಯೋ ಸ್ಥಳೀಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
12:02 PM (IST) Jul 18
11:58 AM (IST) Jul 18
08:57 AM (IST) Jul 18
ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಗರ್ಭದಲ್ಲೇ ಮೃತಪಟ್ಟಿದೆ ಗರ್ಭಪಾತ ಮಾಡಿ ಎಂದು ಘೋಷಿಸಿದ ಬಳಿಕ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
08:48 AM (IST) Jul 18
ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಜಮೀನು ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ನ್ಯಾಯಾಂಗ ನಿಂದನೆ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.