ಮುಂಬೈ ಟೆಸ್ಟ್‌ನಲ್ಲಿ ಮಯಾಂಕ್ ಶತಕ, ಓಮಿಕ್ರಾನ್ ಮಾರ್ಗಸೂಚಿ ಪ್ರಕಟ:ಡಿ.3ರ ಟಾಪ್ 10 ಸುದ್ದಿ!

By Suvarna News  |  First Published Dec 3, 2021, 5:40 PM IST

ನ್ಯೂಜಿಲೆಂಡ್ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಶತಕ ಸಿಡಿಸಿ ಮಿಂಚಿದ್ದಾರೆ. ಇತ್ತ ಬೆಂಗಳೂರಿಗೆ ಬಂದಿದ್ದ ಸೌತ್ ಆಫ್ರಿಕಾದ 10 ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. ಕರ್ನಾಟಕದಲ್ಲಿ ಓಮಿಕ್ರಾನ್ ಆತಂಕ ಹೆಚ್ಚಾದ ಕಾರಣ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ. ಶುಭಾ ಪೂಂಜಾ ಮದುವೆ ಡೇಟ್ ಫಿಕ್ಸ್, ಆಸ್ಟ್ರೇಲಿಯಾಗೆ ಕುಡುಕ ದೇಶ ಪಟ್ಟ ಸೇರಿದಂತೆ ಡಿಸೆಂಬರ್ 3ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.


Omicron ಆತಂಕದ ನಡುವೆ ದ. ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ 10 ಪ್ರಯಾಣಿಕರು ನಾಪತ್ತೆ!

Latest Videos

undefined

ಒಮಿಕ್ರಾನ್ ಭೀತಿ ನಡುವೆ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಹತ್ತು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕುವ ಯತ್ನ ಆರಮಭಿಸಲಾಗಿದೆಯಾದರೂ, ಈವರೆಗೆ ಒಬ್ಬರೂ ಪತ್ತೆಯಾಗಿಲ್ಲ. ಈ ಎಲ್ಲಾ ವಿದೇಶಿಗರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ಇಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದರಿಂದ ಆರೋಗ್ಯ ಇಲಾಖೆ ಮತ್ತು ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಅಸಮಾಧಾನಗೊಂಡಿದ್ದಾರೆ.

21st Annual Summit: ಜಾಗತಿಕ ಮಟ್ಟದಲ್ಲಿ ಏರಿರುವ ಭಾರತದ ಘನತೆಯನ್ನು ಒಪ್ಪಿದ ರಷ್ಯಾ ಅಧ್ಯಕ್ಷ

 ಜಾಗತಿಕ ಮಟ್ಟದಲ್ಲಿ ಎತ್ತರಕ್ಕೇರಿರುವ ಭಾರತದ ಘನತೆಯನ್ನು ಒಪ್ಪಿಕೊಂಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌(Vladimir Putin),ಭಾರತವನ್ನು 'ಬಹುಧ್ರುವ  ಹೊಂದಿರುವ ಪ್ರಪಂಚದ ಅಧಿಕೃತ ಕೇಂದ್ರ ಎಂದು ಕರೆದಿದ್ದಾರೆ. ವ್ಲಾದಿಮಿರ್‌ ಪುಟಿನ್ ಸದ್ಯದಲ್ಲಿಯೇ ಭಾರತಕ್ಕೆ ಆಗಮಿಸಿದ್ದಾರೆ.

Global Survey: ವಿಶ್ವದ ಅತ್ಯಂತ ಕುಡುಕ ದೇಶ ಆಸ್ಟ್ರೇಲಿಯಾ!

ಜಾಗತಿಕ ಸಮೀಕ್ಷೆಯೊಂದು (Global Survey) ಪ್ರಪಂಚದಲ್ಲಿ ಅತಿ ಹೆಚ್ಚು ಅಲ್ಕೋಹಾಲ್ ಸೇವನೆಯನ್ನು ಪ್ರೀತಿಸುವ ದೇಶವನ್ನು ಬಹಿರಂಗಪಡಿಸಿದೆ. ಆಶ್ಚರ್ಯಕರ ಎಂಬಂತೆ ಆಸ್ಟ್ರೇಲಿಯಾ (Australia) ಈ ಗೌರವವನ್ನು ಪಡೆದುಕೊಂಡಿದೆ.

Mayank Agarwal Hits Century: ಶತಕ ಸಿಡಿಸಿ ಘರ್ಜಿಸಿದ ಕನ್ನಡಿಗ ಮಯಾಂಕ್ ಅಗರ್‌ವಾಲ್..!

ಟೀಂ ಇಂಡಿಯಾ (Team India) ಆರಂಭಿಕ ಬ್ಯಾಟರ್‌, ಕನ್ನಡಿಗ ಮಯಾಂಕ್‌ ಅಗರ್‌ವಾಲ್‌ (Mayank Agarwal), ನ್ಯೂಜಿಲೆಂಡ್ ಎದುರಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆಕರ್ಷಕ ಸಿಡಿಸಿ ಅಬ್ಬರಿಸಿದ್ದಾರೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಮಯಾಂಕ್‌ ಅಗರ್‌ವಾಲ್ ತಮ್ಮ ಟೆಸ್ಟ್‌ ವೃತ್ತಿ ಜೀವನದ 4ನೇ ಟೆಸ್ಟ್ ಶತಕ ಬಾರಿಸಿ ಘರ್ಜಿಸಿದ್ದಾರೆ. ಬರೋಬ್ಬರಿ ಎರಡು ವರ್ಷಗಳ ಬಳಿಕ ಮಯಾಂಕ್‌ ಅಗರ್‌ವಾಲ್‌ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Raataan Lambiyan song: 'ಶೇರ್ಷಾ' ಚಿತ್ರದ ಹಾಡಿಗೆ ಲಿಪ್ ಸಿಂಕ್ ಮಾಡಿದ ಆಫ್ರಿಕಾದ ಅಣ್ಣ-ತಂಗಿ

ಬಾಲಿವುಡ್‌ನ (Bollywood) 'ಶೇರ್ಷಾ' (Shershaah) ಚಿತ್ರದ 'ರಾತನ್ ಲಂಬಿಯಾನ್' (Raataan Lambiyan) ಹಾಡು ಯೂಟ್ಯೂಬ್‌ನಲ್ಲಿ 454 ಮಿಲಿಯನ್ ವೀಕ್ಷಣೆಗಳೊಂದಿಗೆ ಸೂಪರ್ ಹಿಟ್ ಆಗಿದ್ದು, ಎಲ್ಲೆಲ್ಲೂ ಈ ಹಾಡು ವೈರಲ್ (Viral) ಆಗುತ್ತಿದೆ. ಇದರ ಜನಪ್ರಿಯತೆ ಭಾರತದಿಂದಾಚೆಗೂ ಹರಡಿದೆ. 

Wedding Countdown:ಡಿಸೆಂಬರ್‌ ಕೊನೆಗೆ ನಟಿ ಶುಭಾ ಪೂಂಜಾ ಮದುವೆ!

ಬಿಗ್‌ಬಾಸ್‌ ನಂತರ ಶುಭಾ ಪೂಂಜಾ ಸಿನಿಮಾಗಳಲ್ಲಿ ಬ್ಯುಸಿ, ಜೊತೆಗೆ ಮದುವೆ ಸಿದ್ಧತೆಯೂ ನಡೀತಿದೆ. ಸದ್ಯ ಅಜಿತ್‌ ಕುಮಾರ್‌ ನಿರ್ದೇಶನದ ‘ರೈಮ್ಸ್‌ ’ ಚಿತ್ರ ಡಿ.10ಕ್ಕೆ ತೆರೆ ಕಾಣಲಿದೆ. ಇದರಲ್ಲಿ ಕ್ರೈಮ್‌ ರಿಪೋರ್ಟರ್‌ ಆವಂತಿಕಾ ಪಾತ್ರದಲ್ಲಿ ಶುಭಾ ಕಾಣಿಸಿಕೊಂಡಿದ್ದಾರೆ. ಪಾತ್ರದ ಬಗ್ಗೆ, ಮದುವೆ ಬಗ್ಗೆ ಶುಭಾ ಮಾತಾಡಿದ್ದಾರೆ.

Omicron Guidelines: ಕರ್ನಾಟಕದಲ್ಲಿ ಒಮಿಕ್ರಾನ್ ಆತಂಕ, ಹೊಸ ಮಾರ್ಗಸೂಚಿ ಪ್ರಕಟ

ಕರ್ನಾಟಕದಲ್ಲಿ ಒಮಿಕ್ರಾನ್(omicron) ಪತ್ತೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಇಂದು (ಡಿ.03) ಕರೆದಿದ್ದ ಮಹತ್ವದ ಸಭೆ ಅಂತ್ಯವಾಗಿದ್ದು, ಸಭಯಲ್ಲಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಹತ್ವದ ಚರ್ಚೆಯಾಗಿದೆ. 

ATM Transactions: ಜ.1ರಿಂದ ಎಟಿಎಂ ಹಣ ವಿತ್ ಡ್ರಾ ಶುಲ್ಕ ಹೆಚ್ಚಳ

ಹೊಸ ವರ್ಷದ ಮೊದಲ ದಿನದಿಂದ ಬ್ಯಾಂಕ್ ಗ್ರಾಹಕರು ಎಟಿಎಂ ಮಾಸಿಕ ಉಚಿತ ವಹಿವಾಟುಗಳ ಮಿತಿ ಮೀರಿದ್ರೆ ಪ್ರಸ್ತುತವಿರೋದಕ್ಕಿಂತ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ. ಈ ಬಗ್ಗೆ ರಿಸರ್ವ್ ಬ್ಯಾಂಕ್  ಈಗಾಗಲೇ ಅಧಿಸೂಚನೆ ಹೊರಡಿಸಿದ್ದು,ಕೆಲವು ಬ್ಯಾಂಕ್ ಗಳು ಕೂಡ ಗ್ರಾಹಕರಿಗೆ ಮಾಹಿತಿ ರವಾನಿಸಿವೆ.

Hydrogen Fuel:ಸವಾರರಿಗೆ ಸಿಹಿ ಸುದ್ದಿ, ಪೆಟ್ರೋಲ್ ಡೀಸೆಲ್ ಬೇಕಿಲ್ಲ, ಬಂದಿದೆ ಘನತ್ಯಾಜ್ಯ, ಕೊಳಚೆ ನೀರಿನಿಂದ ಓಡುವ ವಾಹನ!

 ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ(Nitin Gadkari) ಹೊಸ ಕಾರೊಂದನ್ನು ಖರೀದಿಸಿದ್ದಾರೆ. ಅದರಲ್ಲೇನು ವಿಶೇಷ, ಸಚಿವರು ದುಡ್ಡಿದೆ ಖರೀದಿಸುತ್ತಾರೆ ಎಂದು ಸುಮ್ಮನಾಗಬೇಡಿ. ಗಡ್ಕರಿ ಖರೀದಿಸಿದ ಕಾರು ಸಾಮಾನ್ಯ ಕಾರಲ್ಲ. ಹಾಗಂತ ದುಬಾರಿ ಕಾರಲ್ಲ. ಇದು ಘನ ತ್ಯಾಜ್ಯ, ಚರಂಡಿಯ ಕೊಳಚೆ ನೀರಿನಿಂದ ಉತ್ಪಾದಿಸುವ ಗ್ರೀನ್ ಹೈಡ್ರೋಜನ್‌ನಿಂದ(Green Hydrogen) ಚಲಿಸುವ ಕಾರು.  ಈ ಕಾರಿಗೆ(Car) ಪೆಟ್ರೋಲ್, ಡೀಸೆಲ್ ಬೇಕಿಲ್ಲ

click me!