New year ಮಸ್ತಿಯಲ್ಲಿ ಹೆಬ್ಬಾಳ್ಕರ್, ಕುಡುಕರಿಗೆ ಆಫರ್; 2019ರ ವಿದಾಯ ದಿನದ ಟಾಪ್ 10 ಸುದ್ದಿ!

Suvarna News   | Asianet News
Published : Dec 31, 2019, 05:31 PM ISTUpdated : Dec 31, 2019, 05:39 PM IST
New year ಮಸ್ತಿಯಲ್ಲಿ ಹೆಬ್ಬಾಳ್ಕರ್, ಕುಡುಕರಿಗೆ ಆಫರ್; 2019ರ ವಿದಾಯ ದಿನದ ಟಾಪ್ 10 ಸುದ್ದಿ!

ಸಾರಾಂಶ

2019ಕ್ಕೆ ಗುಡ್ ಬೈ ಹೇಳಿ 2020ರ ಹೊಸ ವರ್ಷವನ್ನು ಬರಮಾಡಿಕೊಳ್ಳಲು ವಿಶ್ವವೇ ಸಜ್ಜಾಗಿದೆ. 2019ನೇ ವರ್ಷದ ಕೊನೆಯ ದಿನವಾದ ಇಂದು ರಾಜಕೀಯ, ಕ್ರೀಡೆ, ಸ್ಯಾಂಡಲ್‌ವುಡ್ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಹಲವು ಸುದ್ದಿಗಳು ಸಂಚಲನ ಮೂಡಿಸಿದೆ. ಕುಡುಕರಿಗೆ ಹೊಸವರ್ಷಕ್ಕೆ ಸಬ್ಸಿಡಿ ಮದ್ಯ, ಹೊಸ ವರ್ಷದ ಮಸ್ತಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಡಿಸೆಂಬರ್ 31ರ ಟಾಪ್ 10 ಸುದ್ದಿ ಇಲ್ಲಿವೆ. 

ಕುಡುಕರಿಗೆ ಸಬ್ಸಿಡಿ ಮದ್ಯ, ಹೊಸವರ್ಷದ ವೇಳೆ ಸರ್ಕಾರದ ಗಿಫ್ಟ್!

ಬಡ ಕುಡುಕರಿಗೆ ಕಿಕ್ಕೇರಿಸಲು ಸರ್ಕಾರ ಮುಂದಾಗಿದೆ. ಸಬ್ಸಿಡಿ ದರದಲ್ಲಿ ಮದ್ಯ ನೀಡಲು ಸರ್ಕಾರ ಮುಂದಾಗಿದೆ ಎಂದು ಖುದ್ದು ಅಬಕಾರಿ ಸಚಿವ ನಾಗೇಶ್ ತಿಳಿಸಿದ್ದಾರೆ.

ಗೋವಾದಲ್ಲಿ ಹೊಸವರ್ಷದ ಮೋಜಿಗೆ ಖೋತಾ, ಯಾಕೇಂತ..?

ಸೀಫುಡ್, ಬೀಚ್ ಸೌಂದರ್ಯದಿಂದಲೇ ಪ್ರವಾಸಿಗರನ್ನು ಸೆಳೆಯುವ ಗೋವಾ ವರ್ಷದ ಬಹುತೇಕ ದಿನಗಳಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ಆದರೆ 2019ರಲ್ಲಿ ಗೋವಾ ಪ್ರವಾಸೋದ್ಯಮಕ್ಕೆ ಬಲವಾದ ಹೊಡೆತ ಬಿದ್ದಿದೆ. ಹೊಸವರ್ಷಕ್ಕೆ ಪ್ರವಾಸಿಗರೇ ತುಂಬಿರುವ ಗೋವಾದಲ್ಲಿ ಪ್ರವಾಸಿಗರ ಸಂಖ್ಯೆ ಶೇ.50ರಷ್ಟು ಇಳಿಕೆಯಾಗಿದೆ.

ಗುಡ್ ಬೈ 2019: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ 5 ಅಪರಾಧ ಪ್ರಕರಣಗಳು!

ಇಡೀ ವಿಶ್ವವೇ 2019ಕ್ಕೆ ವಿದಾಯ ಹೇಳಲು ಸಜ್ಜಾಗಿದೆ ಹಾಗೂ ಪ್ರತಿ ವರ್ಷದಂತೆ  ಈ ವರ್ಷವೂ ಹಲವಾರು ನೆನಪುಗಳನ್ನು ಬಿಟ್ಟು ಹೋಗುತ್ತಿದೆ. ಆದರೆ ಈ ವರ್ಷ ನಡೆದ ಕೆಲ ವಿದ್ಯಮಾನಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಕರಾಳ ನೆನಪುಗಳಾಗಿ ಉಳಿದಿದೆ. 

ಅಮಿತ್‌ ಶಾ ಮುಗಿಸಿ: ಎಸ್‌ಡಿಪಿಐ ಸಭೆಯಲ್ಲಿ ಕರೆ!

ಕರ್ನಾಟಕ ಮತ್ತು ಉತ್ತರಪ್ರದೇಶದಲ್ಲಿ ಇತ್ತೀಚೆಗೆ ನಡೆದ ಪೌರತ್ವ ವಿರೋಧಿ ಹಿಂಸಾಚಾರದಲ್ಲಿ ಎಸ್‌ಡಿಪಿಯ ಸಂಘಟನೆಯ ಕೈವಾಡ ಬೆಳಕಿಗೆ ಬಂದ ಬೆನ್ನಲ್ಲೇ, ಇಲ್ಲಿ ನಡೆದ ಪೌರತ್ವ ವಿರೋಧಿ ಪ್ರತಿಭಟನೆಯೊಂದರಲ್ಲಿ, ಕಾಯ್ದೆಯ ರೂವಾರಿಗಳಾದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಚಿವ ಅವರನ್ನು ಮುಗಿಸಿ ಎಂದು ಕರೆ ಕೊಟ್ಟಿರುವ ಆಘಾತಕಾರಿ ಘಟನೆ ನಡೆದಿದೆ.

ಚಿತ್ರಗಳು: ಹೊಸ ವರ್ಷದ ಮಸ್ತಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್

ಹೊಸ ವರ್ಷವನ್ನು ಹೊಸ ಜೀವನದೊಂದಿಗೆ ಆರಂಭಿಸಲು ಜನತೆ ಬಯಸುತ್ತದೆ. ಅದು ಮಾನವನ ಸಹಜ ಸ್ವಭಾವ. ಜನರು ಹೊಸತಿನ ಬಗ್ಗೆ ಹೊಸ ವಿಷಯಗಳನ್ನು ನಿರೀಕ್ಷಿಸುತ್ತಾರೆ.  ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ.  ಕೊಂಚ ರಾಜಕೀಯದಿಂದ ಬಿಡುವು ಮಾಡಿಕೊಂಡು ಕುಟುಂಬದ ಸದಸ್ಯರ ಜತೆ ನ್ಯೂ ಇಯರ್ ಸೆಲೆಬ್ರೇಟ್ ಮಾಡಲು ಟ್ರಿಪ್ ಹೋಗಿದ್ದಾರೆ.

2020 ಸ್ವಾಗತಕ್ಕೆ ಬೆಂಗಳೂರು ಸಜ್ಜು : ಈ ರೋಡ್‌ಗಳಲ್ಲಿ ಹೋಗ್ಬೇಡಿ

 ನೂತನ ಸಂವತ್ಸರವನ್ನು ಸ್ವಾಗತಿಸುವ ಸಂಭ್ರಮದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗ ಳು ನಡೆಯದಂತೆ ಮುಂಜಾಗ್ರತವಾಗಿ ರಾಜಧಾನಿಯ ಲ್ಲಿ 10 ಸಾವಿರಕ್ಕೂ ಅಧಿಕ ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ. ಹಲವು ಮಾರ್ಗಗಳು ಬಂದ್ ಮಾಡಲಾಗಿದೆ.

ಭಾರತ ಪ್ರವಾಸಕ್ಕೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ...

ಟೀಂ ಇಂಡಿಯಾ 3 ಪಂದ್ಯಗಳ ಏಕದಿನ ಸರಣಿಯಾಡಲು ಆಸ್ಟ್ರೇಲಿಯಾ ತಂಡವು ಜನವರಿಯಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಗೆ ಬಲಿಷ್ಠ ಆಸೀಸ್ ತಂಡ ಪ್ರಕಟಿಸಲಾಗಿದೆ. 

ರಶ್ಮಿಕಾ ಡ್ಯಾನ್ಸ್‌ ನೋಡಿ 'ಸೋ ಸ್ವೀಟ್' ಎಂದ ಬಾಲಿವುಡ್‌ ಡ್ಯಾನ್ಸಿಂಗ್ ಸ್ಟಾರ್

ರಶ್ಮಿಕಾ ಮಂದಣ್ಣ ಟಾಲಿವುಡ್‌ನಲ್ಲಿ 'ಭೀಷ್ಮ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್ ಸಮಯದಲ್ಲಿ ವಾರ್ ಸಿನಿಮಾದ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ನ್ಯೂ ಇಯರ್ ಪಾರ್ಟಿ ಜೋಶ್ ಹೆಚ್ಚಿಸಲು ಇಲ್ಲಿದೆ ಸಾಂಗ್!

ಹೊಸವರ್ಷದ ಸಡಗರ, ಸಂಭ್ರಮ ಶುರುವಾಗಿದೆ.  ಹೊಸವರ್ಷವನ್ನು ಬರಮಾಡಿಕೊಳ್ಳಲು ಸಿದ್ಧತೆಯೂ ಜೋರಾಗಿದೆ. ಹೊಸ ವರ್ಷದ ಪಾರ್ಟಿ ಜೋಶ್ ಹೆಚ್ಚಿಸಲು ಜೋಶ್ ತುಂಬುವ ಹಾಡೊಂದು ಇಲ್ಲದಿದ್ದರೆ ಹೇಗೆ? ಪಾರ್ಟಿ ಮಜಾ ಹೆಚ್ಚಿಸಲು ಯುವಕರ ತಂಡವೊಂದು ಹಾಡನ್ನು ಕಂಪೋಸ್ ಮಾಡಿದೆ.  

ಗುಡ್ ಬೈ 2019: ದೇಶದ ವ್ಯಾಪಾರ ಕ್ಷೇತ್ರ, ಹಣದಾಟದ ಕುರುಕ್ಷೇತ್ರ!.

2019 ಮುಗಿದು 2020ರ ಕಾಲಘಟಕ್ಕೆ ಭಾರತ ಕಾಲಿಡುತ್ತಿದೆ. ಈ ಮೂಲಕ ಸ್ವತಂತ್ರ್ಯ ಭಾರತದ ಇತಿಹಾಸಕ್ಕೆ ಮತ್ತೊಂದು ವರ್ಷ ಸೇರ್ಪಡೆಗೊಂಡಿದೆ. ಅದರಂತೆ 2019ರ ಘಟನಾವಳಿಗಳ ಹಿನ್ನೋಟ ಕೂಡ ಅಷ್ಟೇ ಪ್ರಮುಖವಾಗಿದ್ದು, ಅಂತ್ಯ ಕಂಡ 2019ರಲ್ಲಿ ನಡೆದ ಸಿಹಿ-ಕಹಿ ಘಟನೆಗಳತ್ತ ಭಾರತ ದೃಷ್ಟಿ ಹರಿಸುವುದು ಅವಶ್ಯ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಭಾರತದಲ್ಲಿ ಭರ್ಜರಿ ಹೂಡಿಕೆಯ ಘೋಷಣೆ ಮಾಡಿದ ದೈತ್ಯ ಕಂಪನಿಗಳು
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ