ಡೆನ್ಮಾರ್ಕ್ ಪ್ರಧಾನಿಯ ಭಾರತ ಪ್ರವಾಸ, ಉಸ್ತುವಾರಿಗಾಗಿ ಸಚಿವರ ಗುದ್ದಾಟ; ಅ.9ರ ಟಾಪ್ 10 ಸುದ್ದಿ!

By Suvarna NewsFirst Published Oct 9, 2021, 4:37 PM IST
Highlights

ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಡೆನ್ಮಾರ್ಕ್ ಪ್ರಧಾನಿ , ನರೇಂದ್ರ ಮೋದಿ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಡ್ರಗ್ಸ್ ಬಳಸಿರುವುದಾಗಿ ಆರ್ಯನ್ ಖಾನ್ ಒಪ್ಪಿಕೊಂಡಿದ್ದಾರೆ. ಆರ್‌ಸಿಬಿ ವಿರುದ್ಧ ಅಂತಿಮ ಓವರ್‌ನಲ್ಲಿ ಕೈಸುಟ್ಟುಕೊಂಡ ಅವೇಶ್ ಖಾನ್ ಟ್ರೋಲ್ ಆಗಿದ್ದಾರೆ. ಬೊಮ್ಮಾಯಿ ನಡ್ಡಾ ಭೇಟಿಯಾದ ಬೆನ್ನಲ್ಲೇ ಉಸ್ತುವಾರಿ ಸಚಿವ ಸ್ಥಾನಕ್ಕೆ ಗುದ್ದಾಟ ಆರಂಭಗೊಂಡಿದೆ. ಗ್ರಾಹಕರಿಗೆ RBI ಗುಡ್‌ನ್ಯೂಸ್, ದಿನವೂ ದೇವರಿಗೆ ಪ್ರಾರ್ಥನೆ ಸಲ್ಲಿಸು ನಟಿ ಸೇರಿದಂತೆ ಅಕ್ಟೋಬರ್ 9ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಡೆನ್ಮಾರ್ಕ್ ಪ್ರಧಾನಿ ಫ್ರೆಡೆರಿಕ್ಸನ್‌ಗೆ ಆತ್ಮೀಯ ಸ್ವಾಗತ ನೀಡಿದ ಮೋದಿ, ಮಹತ್ವದ ದ್ವಿಪಕ್ಷೀಯ ಮಾತುಕತೆ!

ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸನ್ ಇಂದು(ಅ.09) ಭಾರತಕ್ಕೆ ಆಗಮಿಸಿದ್ದಾರೆ. ಫ್ರೆಡೆರಿಕ್ಸನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಫ್ರೆಡೆರಿಕ್ಸನ್ ಅವರನ್ನು ಸ್ವಾಗತಿಸಿದ ಮೋದಿ ಮಹತ್ವದ ಮಾತುಕತೆ ನಡೆಸಿದರು.

1 ಕ್ವಾರ್ಟರ್‌ ಅಂದ್ರೆ ಎಷ್ಟು? ಟೀಚರ್‌ ಪ್ರಶ್ನೆಗೆ ವಿದ್ಯಾರ್ಥಿಯ ಶಾಕಿಂಗ್ ಉತ್ತರ!

ಕೊರೋನಾದಿಂದಾಗಿ(Covid 19) ವಿದ್ಯಾರ್ಥಿಗಳ ಶಾಲಾ ಬದುಕಿಗೆ ಬ್ರೇಕ್ ಬಿದ್ದಿದ್ದು, ಆನ್‌ಲೈನ್ ಶಿಕ್ಷಣ(Online Class) ವ್ಯವಸ್ಥೆ ಜಾರಿಗೆ ಬಂದಿದೆ. ಹೀಗಿರುವಾಗ ಅನೇಕ ಚಿತ್ರ ವಿಚಿತ್ರ ವಿಡಿಯೋಗಳು ಆಗಾಗ್ಗೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. 

ಡ್ರಗ್ಸ್ ಬಳಸಿದ್ದನ್ನು ಒಪ್ಪಿಕೊಂಡ ಆರ್ಯನ್: NCB ಹೇಳಿದ್ದಿಷ್ಟು

ಮುಂಬೈ ಐಷರಾಮಿ ಹಡಗಿನಲ್ಲಿ ನಡೆದ ಡ್ರಗ್ಸ್ ದಾಳಿಯಲ್ಲಿ ಶಂಕಿತ ಆರ್ಯನ್ ಖಾನ್ ಚರಸ್ (ಗಾಂಜಾ) ಸೇವಿಸುತ್ತಿರುವುದನ್ನು ಒಪ್ಪಿಕೊಂಡಿದ್ದಾನೆ. ಆತನ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಆರು ಗ್ರಾಂ ನಿಷೇಧಿತ ಮಾದಕವಸ್ತುವನ್ನು ತನ್ನೊಂದಿಗೆ ಕೊಂಡೊಯ್ದಿದ್ದರು ಎಂದು ಎನ್‌ಸಿಬಿ ಪಂಚನಾಮ ತಿಳಿಸಿದೆ.

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ: ಗ್ರಾಹಕರಿಗೆ RBI ಗುಡ್‌ನ್ಯೂಸ್!

ಇಮ್ಮಿಡಿಯೆಟ್‌ ಪೇಮೆಂಟ್‌ ಸವೀರ್‍ಸ್‌ (Immediate Payment Service) ಅಡಿ ಒಂದು ಸಲಕ್ಕೆ ವರ್ಗಾವಣೆ ಮಾಡಬಹುದಾದ ಹಣದ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್‌(Reserve Bank Of India) 2 ಲಕ್ಷ ರು.ದಿಂದ 5 ಲಕ್ಷ ರು.ಗೆ ಏರಿಕೆ ಮಾಡಿದೆ.

IPL 2021: ನಿನಗಿದು ಬೇಕಿತ್ತಾ ಮಗನೇ..? ಆವೇಶ್ ಖಾನ್ ಫುಲ್ ಟ್ರೋಲ್‌..!

 14ನೇ ಆವೃತ್ತಿಯ ಐಪಿಎಲ್ (IPL 2021) ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡಗಳು ಮುಖಾಮುಖಿಯಾಗಿದ್ದವು.

Sai Pallavi: ಕೂದಲು ಉದುರದಿರಲಿ ಎಂದು ದಿನವೂ ದೇವ್ರಿಗೆ ಪ್ರಾರ್ಥಿಸ್ತಾರೆ ಪ್ರೇಮಂ ನಟಿ

ನಟನೆ ಮಾತ್ರವಲ್ಲದೆ ನಟಿ ಸಾಯಿ ಪಲ್ಲವಿ ತನ್ನ ಸಹಜ ಸೌಂದರ್ಯದಿಂದಲೇ ಫೇಮಸ್. ನಟಿಯ ನ್ಯಾಚುರಲ್ ತ್ವಚೆ, ಲಾಂಗ್ ಹೇರ್ ಸಖತ್ ಎಟ್ರಾಕ್ಟಿವ್. ಮುದ್ದು ಮುಖದ ಚೆಲುವೆಗೆ ಲಾಂಗ್ ಹೇರ್ ಹೆಚ್ಚಿಗೆ ಮೆರುಗು.

ಅತ್ತ ಸಿಎಂ ನಡ್ಡಾ ಭೇಟಿ, ಇತ್ತ ಬೆಂಗಳೂರು ಉಸ್ತುವಾರಿಗಾಗಿ ಸಚಿವರ ಗುದ್ದಾಟ

ಅತ್ತ ನದೆಹಲಿಯಲ್ಲಿ ಸಿಎಂ ಬಸವರಜ ಬೊಮ್ಮಾಯಿ (Basavaraj Bommai) ಅವರು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರನ್ನ ಭೇಟಿ ಮಾಡಿದ್ರೆ, ಇತ್ತ ರಾಜ್ಯದಲ್ಲಿ ಬೆಂಗಳೂರು ಉಸ್ತುವಾರಿಗೆ ಇಬ್ಬರು ಸಚಿವರುಗಳ ನಡುವೆ ಹಗ್ಗಾಜಗ್ಗಾಟ ಶುರುವಾಗಿದೆ.

ATMನಲ್ಲಿ ಹಣವಿಲ್ಲದಿದ್ದರೆ ಬ್ಯಾಂಕ್‌ಗೆ ದಂಡ ವಿಧಿಸುವ ಪ್ರಸ್ತಾವನೆ ಪರಿಶೀಲನೆ: ಆರ್‌ಬಿಐ

ತಮ್ಮ ವ್ಯಾಪ್ತಿಯ ಎಟಿಎಂ ಮಿಷಿನ್‌ಗಳಿಗೆ(ATM Machine) ನಿರ್ದಿಷ್ಟಸಮಯದಲ್ಲಿ ಹಣ ಭರ್ತಿ ಮಾಡದ ಬ್ಯಾಂಕ್‌ಗಳ ಮೇಲೆ ದಂಡ ವಿಧಿಸುವ ಕುರಿತಾಗಿ ಭಾರತೀಯ ರಿಜರ್ವ್ ಬ್ಯಾಂಕ್‌(Reserve Bank Of India) ಪರಿಶೀಲನೆ ನಡೆಸುತ್ತಿದೆ.
 

click me!