ಅಕ್ರಮ ಸಂಬಂಧ: ಗೆಳೆಯನೊಂದಿಗೆ ಸೇರಿ ಗಂಡನ ಉಸಿರುಕಟ್ಟಿಸಿ ಕೊಂದ ನರ್ಸ್...

Published : Feb 22, 2023, 01:07 PM IST
ಅಕ್ರಮ ಸಂಬಂಧ: ಗೆಳೆಯನೊಂದಿಗೆ ಸೇರಿ ಗಂಡನ ಉಸಿರುಕಟ್ಟಿಸಿ ಕೊಂದ ನರ್ಸ್...

ಸಾರಾಂಶ

25 ವರ್ಷ ಪ್ರಾಯದ ನರ್ಸ್ ಓರ್ವಳು ಗೆಳೆಯನೊಂದಿಗೆ ಸೇರಿ ತನ್ನ ಗಂಡನನ್ನು ಉಸಿರುಕಟ್ಟಿಸಿ ಕೊಂದ ಆಘಾತಕಾರಿ ಘಟನೆ ನೆರೆಯ ತಮಿಳುನಾಡಿನ ತಿರುವಲ್ಲೂರ್‌ನಲ್ಲಿ ನಡೆದಿದೆ.

ಚೆನ್ನೈ: 25 ವರ್ಷ ಪ್ರಾಯದ ನರ್ಸ್ ಓರ್ವಳು ಗೆಳೆಯನೊಂದಿಗೆ ಸೇರಿ ತನ್ನ ಗಂಡನನ್ನು ಉಸಿರುಕಟ್ಟಿಸಿ ಕೊಂದ ಆಘಾತಕಾರಿ ಘಟನೆ ನೆರೆಯ ತಮಿಳುನಾಡಿನ ತಿರುವಲ್ಲೂರ್‌ನಲ್ಲಿ ನಡೆದಿದೆ.  ಗೆಳೆಯ ಹಾಗೂ ಆತನ ಇಬ್ಬರು ಸ್ನೇಹಿತರ ಜೊತೆ ಸೇರಿ ಮಹಿಳೆ ತನ್ನ ಗಂಡನನ್ನು ಉಸಿರುಕಟ್ಟಿಸಿ ಕೊಲೆ ಮಾಡಿದ್ದಾಳೆ. ತಿರುವಲ್ಲೂರ್‌ ಜಿಲ್ಲೆಯ ತಿರುತ್ತನಿ (Tiruttani) ಬಳಿ ಈ ಸೋಮವಾರ ರಾತ್ರಿ ಘಟನೆ ನಡೆದಿದೆ.  ಎಲ್ಲರೂ ಸೇರಿ ಗಂಡನನ್ನು ಕೊಲೆ ಮಾಡಿ ಬಳಿಕ ಶವವನ್ನು ಸೀಲಿಂಗ್ ಫ್ಯಾನ್‌ಗೆ ನೇತು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದಾರೆ. 

ಮೃತ ವ್ಯಕ್ತಿಯನ್ನು 29 ವರ್ಷ ಪ್ರಾಯದ ಯುವರಾಜ್ ಎಂದು ಗುರುತಿಸಲಾಗಿದೆ.  ಈತ ತಿರುತ್ತನಿ ಬಳಿಯ ಆರ್‌ ಕೆ ಪೇಟೆ ನಿವಾಸಿಯಾಗಿದ್ದಾನೆ.  ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವರಾಜ್ ಪತ್ನಿ ಗಾಯತ್ರಿ (Gayathri) ಪತ್ನಿಯ ಗೆಳೆಯ 30 ವರ್ಷದ ಶ್ರೀನಿವಾಸನ್ (Srinivasan) ಹಾಗೂ ಆತನ ಸ್ನೇಹಿತರಾದ 28 ವರ್ಷ ಪ್ರಾಯದ ಮಣಿಕಂಡನ್ (Manikandan) 22 ವರ್ಷ ಪ್ರಾಯದ ಹೇಮನಾಥನ್ (Hemanathan) ಎಂಬುವವರನ್ನು ಪೊಲೀಸರು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ.

ಬೆಂಗಳೂರಿನಲ್ಲಿ ಪತ್ನಿ ಅನೈತಿಕ ಸಂಬಂಧ ಅನುಮಾನ: ಡಂಬಲ್ಸ್‌ನಿಂದ ಹೊಡೆದು ಕೊಲೆ

ಮೃತ ಯುವರಾಜ್ ಮನ್ನೂರ್‌ಪೇಟ್‌ನಲ್ಲಿ (Mannurpet) ಕಾರಿನ ಬಿಡಿಭಾಗಗಳ ತಯಾರಿಕ ಘಟಕದಲ್ಲಿ ಕೆಲಸ ಮಾಡುತ್ತಿದ್ದ.  ಪತ್ನಿ ಗಾಯತ್ರಿ ತಿರುತ್ತನಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಳು. ಇವರಿಬ್ಬರು ಸಂಬಂಧಿಗಳೇ ಆಗಿದ್ದು, ಐದು ವರ್ಷದ ಹಿಂದೆ ಮದುವೆಯಾಗಿದ್ದು,  ಒಂದು ಮಗುವೂ ಇದೆ ಎಂದು ಪೊಲೀಸರು ಹೇಳಿದ್ದಾರೆ.  ಭಾನುವಾರ ರಾತ್ರಿ ಯುವರಾಜ ಬರುವ ಮೊದಲೇ ಮನೆಗೆ ಆರೋಪಿಗಳಾದ ಶ್ರೀನಿವಾಸನ್, ಮಣಿಕಂಡನ್, ಹೇಮನಾಥನ್ ಬಂದು ಮನೆಯಲ್ಲಿ  ಅಡಗಿಕೊಂಡಿದ್ದರು. ನಂತರ ಯುವರಾಜ್ ಮನೆಗೆ ಬರುತ್ತಿದ್ದಂತೆ ಅವನ ಮೇಲೆ ದಾಳಿಗೆ ಮುಂದಾದ ಶ್ರೀನಿವಾಸನ್ ಆತನನ್ನು ಬೆಡ್ ಮೇಲೆ ನೂಕಿದ್ದಾನೆ. ಈ ವೇಳೆ ಮಣಿಕಂಡನ್ ಹಾಗೂ ಹೇಮನಾಥನ್ ಯುವರಾಜ್‌ನ ಕಾಲುಗಳನ್ನು ಹಿಡಿದುಕೊಂಡಿದ್ದಾರೆ. ಈ ವೇಳೆ ಶ್ರೀನಿವಾಸನ್‌ ಆತನ ಮುಖಕ್ಕೆ ದಿಂಬಿಂಟ್ಟು ಉಸಿರುಕಟ್ಟಿಸಿ ಸಾಯಿಸಿದ್ದಾರೆ. ನಂತರ ಎಲ್ಲರೂ ಸೇರಿ ಯುವರಾಜ್ ಮೃತದೇಹವನ್ನು ಸೀಲಿಂಗ್ ಫ್ಯಾನ್‌ಗೆ ನೇತು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ್ದಾರೆ. 

ಇದಾದ ಬಳಿಕ ಯುವರಾಜ್ ತಂದೆ ಅರ್ಮುಗಂ (Arumugham) ಅವರಿಗೆ ಕರೆ ಮಾಡಿದ ಗಾಯತ್ರಿ ಯುವರಾಜ್ ತಾನು ನಿದ್ದೆ ಮಾಡಿದ್ದ ವೇಳೆ ನೇಣಿಗೆ ಶರಣಾಗಿದ್ದಾನೆ. ಪೊಲೀಸರು ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆದರೆ ತನ್ನ ಮಗನ ಸಾವಿನ ಬಗ್ಗೆ ಸಂಶಯ ಬಂದ ಹಿನ್ನೆಲೆಯಲ್ಲಿ ಯುವರಾಜ್ ತಂದೆ ಅರ್ಮುಗಂ ಪೊಲೀಸರಿಗೆ ದೂರು ನೀಡಿದ್ದಾರೆ. 

Bengaluru: ಆರು ವಾರದ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ್ದ ಪತಿ ಅರೆಸ್ಟ್!

ಇದಾದ ಬಳಿಕ ಪ್ರಕರಣ ದಾಖಲಿಸಿಕೊಂಡ ಆರ್‌.ಕೆ ಪೇಟೆ ಪೊಲೀಸರು, ಯುವರಾಜ್ ಕಾಲಿನಲ್ಲಿ ಹಾಗೂ ಕೈಗಲ್ಲಿ ಗಾಯದ ಗುರುತು ಇರುವುದನ್ನು ಗಮನಿಸಿ ಪತ್ನಿ ಗಾಯತ್ರಿಯನ್ನು ಪ್ರಶ್ನಿಸಲು ಶುರು ಮಾಡಿದ್ದಾರೆ.  ಈ ವೇಳೆ ಆತ್ಮಹತ್ಯೆಗೆ ಯತ್ನಿಸಿದಂತೆ ಮಾಡಿದ ಗಾಯತ್ರಿ ನಂತರ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ.  ಅಲ್ಲದೇ ಆರೋಪಿ ಶ್ರೀನಿವಾಸನ್ ಹಾಗೂ ಈಕೆ ಚೆನ್ನೈನ ನರ್ಸಿಂಗ್ ಕಾಲೇಜಿನಲ್ಲಿ ಒಟ್ಟಿಗೆ ವ್ಯಾಸಂಗ ಮಾಡಿದ್ದು,  ಕಳೆದ 7 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಗಾಯತ್ರಿಯ ಮದುವೆಯ ನಂತರವೂ ಇಬ್ಬರೂ ಸಂಪರ್ಕದಲ್ಲಿದ್ದರು.  ಇತ್ತೀಚೆಗೆ ಗಾಯತ್ರಿ ಕೆಲಸ ಮಾಡುವಲ್ಲಿಯೇ ಶ್ರೀನಿವಾಸನ್ ಕೆಲಸಕ್ಕೆ ಸೇರಿಕೊಂಡಿದ್ದು, ದಿನವೂ ಒಬ್ಬರನ್ನೊಬ್ಬರು ಭೇಟಿ ಆಗುತ್ತಿದ್ದರು.  ಇತ್ತೀಚೆಗೆ ಯುವರಾಜ್‌ಗೆ ತನ್ನ ಪತ್ನಿ ಫೋನ್ ನೋಡಿದಾಗ ಶ್ರೀನಿವಾಸನ್ ಜೊತೆ ಆಕೆಗೆ ಸಂಬಂಧವಿರುವುದು ಗೊತ್ತಾಗಿತ್ತು.  ಅಲ್ಲದೇ ಈ ಸಂಬಂಧವನ್ನು ಬಿಟ್ಟು ಬಿಡುವಂತೆ ಆತ ಪತ್ನಿಗೆ ಬುದ್ದಿ ಹೇಳಿದ್ದ. ಆದರೆ ಗಾಯತ್ರಿ ತನ್ನ ಅಕ್ರಮ ಸಂಬಂಧವನ್ನು ಕೊನೆಗಾಣಿಸುವ ಬದಲು ಗಂಡನನ್ನೇ ಮುಗಿಸಿದ್ದಳು.

ಬೆಂಗಳೂರು: ತಂಗಿ ಜತೆ ಅಕ್ರಮ ಸಂಬಂಧ ಶಂಕೆ, ಬಾಮೈದನ ಕೊಂದ ಭಾವ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೀದಿನಾಯಿ ಇಷ್ಟ ಆದ್ರೆ ಮನೇಲಿ ಸಾಕಿ: ಸುಪ್ರೀಂ
India Latest News Live: ಬೆಂಗಳೂರು ಫ್ಯಾನ್ಸ್‌ಗೆ ಬಿಗ್ ಶಾಕ್ - ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲು ಆರ್‌ಸಿಬಿಯೇ ಹಿಂದೇಟು?