ಮುಂಬೈನ ಧಾರಾವಿ ಸ್ಲಮ್‌ನಲ್ಲಿ ಬೆಂಕಿ ಅವಘಡ : ಸಂಚಾರ ಬದಲಾವಣೆ

Published : Feb 22, 2023, 12:18 PM ISTUpdated : Feb 22, 2023, 12:28 PM IST
ಮುಂಬೈನ ಧಾರಾವಿ ಸ್ಲಮ್‌ನಲ್ಲಿ ಬೆಂಕಿ ಅವಘಡ : ಸಂಚಾರ ಬದಲಾವಣೆ

ಸಾರಾಂಶ

ಮುಂಬೈನ ಧಾರಾವಿ ಕೊಳಗೇರಿ ಪ್ರದೇಶದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಈ ಕಾರಣಕ್ಕೆ ವಾಹನ ಸಂಚಾರ ಮಾರ್ಗಗಳನ್ನು ಬದಲಾಯಿಸಲಾಗಿದೆ.  ಇಂದು ಮುಂಜಾನೆ ಧಾರಾವಿ ಸ್ಲಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಮುಂಬೈ: ಮುಂಬೈನ ಧಾರಾವಿ ಕೊಳಗೇರಿ ಪ್ರದೇಶದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಈ ಕಾರಣಕ್ಕೆ ವಾಹನ ಸಂಚಾರ ಮಾರ್ಗಗಳನ್ನು ಬದಲಾಯಿಸಲಾಗಿದೆ.  ಇಂದು ಮುಂಜಾನೆ ಧಾರಾವಿ ಸ್ಲಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೊದಲಿಗೆ ಕಮಲನಗರದ  ಸ್ಲಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,  ಇದು ನಂತರ ಬೆಂಕಿ ಗುಡಿಸಲುಗಳು, ಗೋಡೌನ್‌ಗಳು, ಬೇಕರಿ ಮತ್ತು ಗಾರ್ಮೆಂಟ್ ಫ್ಯಾಕ್ಟರಿಗಳಿಗೆ ಆವರಿಸಿದೆ.  ಮುಂಜಾನೆ 4.15 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ತಹಬದಿಗೆ ತರಲು ಸುಮಾರು 4 ಗಂಟೆಗಳೇ ಬೇಕಾಯಿತು.  ಮುಂಬೈ ಅಗ್ನಿ ಶಾಮಕ ದಳ ಇದನ್ನು ಸಣ್ಣ ಪ್ರಮಾಣದ ಬೆಂಕಿ ಎಂದು ಹೇಳಿಕೊಂಡಿದೆ.  ಬೆಂಕಿಯಿಂದಾಗಿ ಹಲವು 2, 3 ಹಾಗೂ 4 ಮಹಡಿಯ ಕಟ್ಟಡಗಳು ಬೆಂಕಿಯಿಂದ ಸುಟ್ಟು ಹೋಗಿವೆ. 

ಈ ಬೆಂಕಿಯನ್ನು ನಂದಿಸಲು 12 ಅಗ್ನಿ ಶಾಮಕ ವಾಹನಗಳು ಹಾಗೂ 8 ಎಂಟು ಜಂಬೋ ಟ್ಯಾಂಕರ್‌ಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು.  ಆದರೆ ಬೆಂಕಿ ಈ ರೀತಿ ಹಬ್ಬಿಕೊಳ್ಳಲು ಕಾರಣ ಏನು ಎಂಬುದಿನ್ನು ತಿಳಿದು ಬಂದಿಲ್ಲ. ವಿದ್ಯುತ್ ವೈರಿಂಗ್, ವಿದ್ಯುತ್ ಸ್ಥಾಪಕಗಳು, ಬಟ್ಟೆಗಳು, ಕಾಗದಗಳು, ಕಾರ್ಖಾನೆಗಳಲ್ಲಿನ ಉಡುಪುಗಳು ಮತ್ತು ಗೃಹೋಪಯೋಗಿ ವಸ್ತುಗಳು ಇರುವ ಪ್ರದೇಶ ಇದಾಗಿದೆ. ಬೆಂಕಿ ಧಗ ಧಗನೇ ಹೊತ್ತಿ ಉರಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಧಾರಾವಿ ಕಮಲಾ ನಗರದಲ್ಲಿ ಕಾಣಿಸಿಕೊಂಡ ಈ ಬೆಂಕಿಯಿಂದಾಗಿ  ರಸ್ತೆಯಲ್ಲಿ  90 ಅಡಿ ದೂರದ ರಸ್ತೆಯನ್ನು ಮುಚ್ಚಲಾಗಿತ್ತು ಹಾಗೂ ಸಂಚಾರವನ್ನು ಸಂತ ರೋಹಿದಾಸ್ ಮಾರ್ಗಕ್ಕೆ ತಿರುಗಿಸಲಾಯಿತು. 

Palamu Violence ಮಹಾಶಿವರಾತ್ರಿ ತಯಾರಿ ವೇಳೆ ಕೋಮುಗಲಭೆ, ಮನೆಗೆ ಬೆಂಕಿ, ಶಾಲೆಯಲ್ಲಿ ಸಿಲುಕಿದ 25 ಮಕ್ಕಳು!

ಸಕಲೇಶಪುರದಲ್ಲಿ ಕಾಡ್ಗಿಚ್ಚು: ಗಾಯಾಳುಗಳನ್ನು 12 ಕಿ.ಮೀ ಹೊತ್ತು ತಂದು ತಂದರು..!

ಪಶ್ಚಿಮಘಟ್ಟ ಅರಣ್ಯಕ್ಕೆ ಬಿದ್ದಿದ್ದ ಬೆಂಕಿ ನಂದಿಸಲು ಹೋದ ಮೂವರು ಅರಣ್ಯ ಇಲಾಖೆ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಕಾಡುಮನೆ ಎಸ್ಟೇಟ್‌ ಬಳಿ ಫೆ.16 ರಂದು ನಡೆದಿತ್ತು. ತಾಲೂಕಿನ ಕಾಡುಮನೆ ಸಮೀಪ ಮಣಿಬೀಡು ದೇವಸ್ಥಾನದ ಸಮೀಪವಿರುವ ಪಶ್ಚಿಮಘಟ್ಟದ ಕಾಡಿನಲ್ಲಿ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ ನಂದಿಸಲು ಹೋದ ಅರಣ್ಯ ಇಲಾಖೆಯ ಅರಣ್ಯ ವೀಕ್ಷಕ ಸುಂದರೇಶ್‌ ಗಂಭೀರವಾಗಿ ಸುಟ್ಟಗಾಯಗಳಿಂದಾಗಿ ಸಾವನ್ನಪ್ಪಿದ್ದರು.  ಫಾರೆಸ್ಟರ್‌ ಮಂಜುನಾಥ್‌, ಮತ್ತೊಬ್ಬ ಅರಣ್ಯ ವೀಕ್ಷಕ ತುಂಗೇಶ್‌ ತುಸು ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದರು.

ಸುಟ್ಟಗಾಯಗಳಿಂದ ಗಾಯಗೊಂಡ ಸಿಬ್ಬಂದಿಯನ್ನು ಕಾಡಿನಿಂದ ಗ್ರಾಮಸ್ಥರು ಹಾಗೂ ಇತರ ಅರಣ್ಯ ಇಲಾಖೆ ಸಿಬ್ಬಂದಿ ನೆರವಿನಿಂದ ಸುಮಾರು 12 ಕಿ.ಮೀ. ದೂರ ಎತ್ತಿಕೊಂಡು ಬಂದು ನಂತರ ಆ್ಯಂಬುಲೆನ್ಸ್‌ ಮುಖಾಂತರ ಪಟ್ಟಣದ ಕ್ರಾಫರ್ಡ್‌ ಅಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿತ್ತು. ಆದರೆ ಗಂಭೀರ ಗಾಯಗೊಂಡ ಸುಂದರೇಶ್ ಚಿಕಿತ್ಸೆ ಫಲಿಸದೇ ಫೆ.19 ರಂದು ಸಾವನ್ನಪ್ಪಿದ್ದರು.

Hassan: ಕಾಡ್ಗಿಚ್ಚಿಗೆ ಬೆಂದು ಹೋದ ಫಾರೆಸ್ಟ್ ಗಾರ್ಡ್ ಮೃತ: ಇಂದು ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ನಾವು ದೇಶಕ್ಕಾಗಿ, ನೀವು ಚುನಾವಣೆಗಾಗಿ: ಬಿಜೆಪಿ. ಮೋದಿ ವಿರುದ್ದ ಪ್ರಿಯಾಂಕಾ ಗಾಂಧಿ ವಾಗ್ದಾಳಿ
18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು