Top 10 News ಪಂಚಭೂತಗಳಲ್ಲಿ ರಾವತ್ ಲೀನ, BCCI ವಿರುದ್ಧ ರವಿ ಶಾಸ್ತ್ರಿ ಅಸಮಾಧಾನ!

Published : Dec 10, 2021, 06:10 PM ISTUpdated : Dec 10, 2021, 10:23 PM IST
Top 10 News ಪಂಚಭೂತಗಳಲ್ಲಿ ರಾವತ್ ಲೀನ, BCCI ವಿರುದ್ಧ ರವಿ ಶಾಸ್ತ್ರಿ ಅಸಮಾಧಾನ!

ಸಾರಾಂಶ

ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಪತ್ನಿ ಮಧುಲಿಕಾ ರಾವತ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಮಿಲಿಟರಿ ಗೌರವದೊಂದಿಗೆ ಅಂತ್ಯಕ್ರಿಯೆ ನೇರವೇರಿದೆ. ಬ್ರಿಟನ್ ಪ್ರಧಾನಿ 57ರ ಹರೆಯದಲ್ಲಿ ತಂದೆಯಾಗಿದ್ದಾರೆ. ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕಿದ ಮಾಜಿ ಕೋಚ್ ರವಿ ಶಾಸ್ತ್ರಿ,  ಇಂಟರ್ನೆಟ್ ಬ್ಯಾಂಕಿಂಗ್ ಸೇವೆ 300 ನಿಮಿಷ ಸ್ಥಗಿತ ಸೇರಿದಂತೆ ಡಿಸೆಂಬರ್ 10ರ ಟಾಪ್ 10 ಸುದ್ದಿ.

Bipin Rawat Cremation ಪಂಚಭೂತಗಳಲ್ಲಿ ರಾವತ್ ಲೀನ, ಮಿಲಿಟರಿ ಗೌರವದೊಂದಿಗೆ ಅಂತ್ಯಕ್ರಿಯೆ!

ಭಾರತದ ಮಿಲಿಟರಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ, ಶತ್ರು ರಾಷ್ಟ್ರಗಳು, ಭಯೋತ್ಪಾದಕರಿಗೆ ದುಸ್ವಪ್ನವಾಗಿದ್ದ ಭಾರತದ ಹೆಮ್ಮೆಯ ವೀರ ಸಿಡಿಎಸ್ ಜನರಲ್ ಬಿಪಿನ್ ರಾವತ್‌ಗೆ(CDS Gen Bipin Rawat) ದೇಶ ಅಂತಿಮ ನಮನ ಸಲ್ಲಿಸಿದೆ. ದೆಹಲಿಯ ಬ್ರಾರ್ ಸ್ಕ್ವೇರ್ ರುದ್ರಭೂಮಿಯಲ್ಲಿ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕ(Madhulika Rawat) ಅಂತ್ಯಕ್ರಿಯೆ ನಡೆದಿದೆ.

57ರ ವಯಸ್ಸಲ್ಲಿ 7 ನೇ ಬಾರಿ ತಂದೆಯಾದ ಬ್ರಿಟನ್ ಪ್ರಧಾನಿ Boris Johnson, ಮಗುವಿಗೆ ಜನ್ಮ ಕೊಟ್ಟ 3ನೇ ಹೆಂಡತಿ!

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಪತ್ನಿ ಕ್ಯಾರಿ ಅವರು ಪ್ರಧಾನಿಯ ಏಳನೇ ಮಗುವಿಗೆ ಜನ್ಮ ನೀಡಿದ್ದಾರೆ. ಕ್ಯಾರಿ ಜಾನ್ಸನ್‌ರಿಂದ ಬ್ರಿಟನ್ ಪ್ರಧಾನಿಗೆ ವಿಲ್ಫ್ರೆಡ್ ಹೆಸರಿನ ಒಂದು ಗಂಡು ಮಗು ಸೇರಿದಂತೆ ಇಬ್ಬರು ಮಕ್ಕಳಿದ್ದಾರೆ. ಬೋರಿಸ್ ಜಾನ್ಸನ್ ಅವರ ಎರಡನೇ ಪತ್ನಿ ಮರೀನಾ ಅವರೊಂದಿಗೆ ಅವರಿಗೆ ನಾಲ್ಕು ಮಕ್ಕಳಿದ್ದಾರೆ. ಪ್ರಧಾನಿ ಬೋರಿಸ್ ಜಾನ್ಸನ್ ಅವರ ಪತ್ನಿ ಲಂಡನ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

Tejashwi Yadav Wedding: ಹೃದಯ ಕದ್ದ ಬಾಲ್ಯದ ಗೆಳತಿ, ಈಕೆಗಾಗಿ 44 ಸಾವಿರ ಸಂಬಂಧ ತಿರಸ್ಕರಿಸಿದ್ದ ಲಾಲೂ ಪುತ್ರ!

ನಾಯಕ ಲಾಲು ಪ್ರಸಾದ್‌ ಯಾದವ್‌ ಅವರ ಪುತ್ರ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರ ಮದುವೆ ಗುರುವಾರ ದೆಹಲಿಯಲ್ಲಿ ನೆರವೇರಿತು. ಹರ್ಯಾಣ ಮೂಲದ ಉದ್ಯಮಿಯ ಪುತ್ರಿ, ಬಾಲ್ಯದ ಗೆಳತಿ ರಚೆಲ್‌ ಅವರನ್ನು ತೇಜಸ್ವಿ ವಿವಾಹವಾಗಿದ್ದಾರೆ. ಹಲಿಯ ಸೈನಿಕ್‌ ಫಾಮ್‌ರ್‍ನಲ್ಲಿ ಅತ್ಯಂತ ಬಿಗಿ ಭದ್ರತೆಯಲ್ಲಿ ಹಾಗೂ ಖಾಸಗಿಯಾಗಿ ನಡೆದ ಮದುವೆ ಕಾರ್ಯಕ್ರಮಕ್ಕೆ ಕನಿಷ್ಠ ಸಂಖ್ಯೆಯ ಅತಿಥಿಗಳನ್ನು ಆಹ್ವಾನಿಸಲಾಗಿತ್ತು

Ravi Shastri : ಬಿಸಿಸಿಐ ಒಳಗಿನವರೇ ನನಗೆ ಕೆಲಸ ಸಿಗದಂತೆ ನೋಡಿಕೊಂಡಿದ್ದರು!

ಟೀಮ್ ಇಂಡಿಯಾ (Team India) ಮಾಜಿ ಕೋಚ್ ರವಿಶಾಸ್ತ್ರಿ(Ravi Shastri ) 2017ರಲ್ಲಿ ತಾವು ಕೋಚ್ ಆದ ದಿನಗಳನ್ನು ನೆನೆಸಿಕೊಂಡಿದ್ದು, ನನ್ನನ್ನು ಕೋಚ್ ಆಗಿ ಬಿಸಿಸಿಐ (BCCI) ಆಯ್ಕೆ ಮಾಡಿದ್ದು, ಅಂದು ಕ್ರಿಕೆಟ್ ಮಂಡಳಿಯ ಒಳಗಿನ ಕೆಲ ವ್ಯಕ್ತಿಗಳಿಗೆ ಬಹಳ ಇರಿಸುಮುರಿಸು ಉಂಟುಮಾಡಿತ್ತು. 

Anniversary Selfie: ರಾಧಿಕಾ ಪಂಡಿತ್ ಸೆಲ್ಫಿ ಕ್ಲಿಕ್ ಮಾಡುತ್ತಿರುವಾಗ ಯಶ್ ತುಂಟಾಟ ಹೇಗಿತ್ತು ನೋಡಿ!

ಸರಳವಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಯಶ್ ಮತ್ತು ರಾಧಿಕಾ. ಪ್ರತಿ ವರ್ಷವೂ ವಿಶೇಷ ಹೀಗಾಗಿ ಈ ವರ್ಷ ಎಲ್ಲಿದ್ರಿ ಎಂದ ನೆಟ್ಟಿಗರು...

Most Downloaded App: 2021ರಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಮಾಡಲಾದ ಆ್ಯಪ್ : ಟಿಕ್ ಟಾಕ್‌ಗೆ ಅಗ್ರಸ್ಥಾನ!

2021 ಅಂತ್ಯಕ್ಕೆ ಇನ್ನು ಸ್ವಲ್ಪ ದಿನಗಳು ಉಳಿದಿದ್ದು, 2022ರ ಸ್ವಾಗತಕ್ಕೆ ಎಲ್ಲರೂ ಸಜ್ಜಾಗಿದ್ದಾರೆ. ಈ ಹಿನ್ನಲೆಯಲ್ಲಿ 2021ರಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಮತ್ತು ಇನ್ಸ್‌ಟಾಲ್‌ ಆದ ಆಪ್‌ಗಳ ಪಟ್ಟಿಯನ್ನು ತಯಾರಿಸಲಾಗಿದೆ. ಈ ಪಟ್ಟಿ ಪ್ರಕಾರ, ಟಿಕ್‌ಟಾಕ್ (TikTok), ಫೇಸ್‌ಬುಕ್ (Facebook), ವಾಟ್ಸಾಪ್ (WhatsApp), ಪಬ್‌ಜಿ (PUBG) ಅಗ್ರ ಸ್ಥಾನದಲ್ಲಿವೆ.

SBI Alert: ಗ್ರಾಹಕರೇ ಗಮನಿಸಿ, ನಾಳೆ, ನಾಡಿದ್ದು ಇಂಟರ್ನೆಟ್ ಬ್ಯಾಂಕಿಂಗ್ ಸೇವೆ 300 ನಿಮಿಷ ಸ್ಥಗಿತ

ಭಾರತದ ಅತಿದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆ ಗಳಿಸಿರೋ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ನಾಳೆ (ಡಿ.11) ನಿರ್ದಿಷ್ಟ ಅವಧಿ ಕಾರ್ಯನಿರ್ವಹಿಸೋದಿಲ್ಲ. ನಿಗದಿತ ನಿರ್ವಹಣಾ ಚಟುವಟಿಕೆಯ ಹಿನ್ನೆಲೆಯಲ್ಲಿ ಎಸ್ ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳ (Internet banking services) ಬಳಕೆದಾರರು ಇಂಟರ್ನೆಟ್ ಬ್ಯಾಂಕಿಂಗ್ ( Internet Banking), ಯೋನೋ (YONO), ಯೋನೋ ಲೈಟ್ (YONO Lite),ಯುಪಿಐ (UPI) ಮುಂತಾದ ಸೇವೆಗಳನ್ನು ಶನಿವಾರ (ಡಿ.11) ಹಾಗೂ ಭಾನುವಾರ (ಡಿ.12) ಒಟ್ಟು 300 ನಿಮಿಷಗಳ ಕಾಲ ಬಳಸಲು ಸಾಧ್ಯವಾಗೋದಿಲ್ಲ.

Elon Musk Job ಉದ್ಯೋಗಕ್ಕೆ ತೊರೆಯಲು ನಿರ್ಧರಿಸಿದ ವಿಶ್ವದ ಶ್ರೀಮಂತ, ಮುಂದಿನ ವೃತ್ತಿ ಮತ್ತಷ್ಟು ಕುತೂಹಲ!

ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಟೆಸ್ಲಾ ಎಲೆಕ್ಟ್ರಿಕ್(Tesla Electric car) ಕಾರು ಕಂಪನಿ ಸಿಇಓ ಎಲನ್ ಮಸ್ಕ್(Elon Musk) ಇದೀಗ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಕಂಪನಿ ಸಿಇಓ ಆಗಿರುವ ಮಸ್ಕ್, ಇದೀಗ ಉದ್ಯೋಗ(Jobs) ತೊರೆದು ಹೊಸ ವೃತ್ತಿ ಆರಂಭಿಸುವ ಸೂಚನೆ ನೀಡಿದ್ದಾರೆ. ಹೌದು, ಟ್ವೀಟ್(Tweet) ಮೂಲಕ ಉದ್ಯೋಗ ತೊರೆಯುವುದಾಗಿ ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Morphing Wing: ಹಾರಾಡುವಾಗಲೇ ಕ್ಷಣ ಮಾತ್ರದಲ್ಲಿ ಬದಲಾಗುತ್ತೆ ಫೈಟರ್‌ ಜೆಟ್‌ ಶೇಪ್‌, ಹೊಸ ಟೆಕ್ನಾಲಜಿ ಪರೀಕ್ಷಿಸಿದ ಡಿಆರ್‌ಡಿಓ
ವೈರಲ್ ಮೀಮ್ಸ್ ಆಗಿದ್ದ ಯುವಕನ ಫೋಟೋದ ಹಿಂದಿದೆ ನೋವಿನ ಕತೆ: 38 ವರ್ಷ ಬರೀ ದ್ರವಾಹಾರದಲ್ಲೇ ಬದುಕಿದ್ದ ಪಂಚಾಲ್