ನವದೆಹಲಿ(ಡಿ.10): ಭಾರತದ ಮಿಲಿಟರಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ, ಶತ್ರು ರಾಷ್ಟ್ರಗಳು, ಭಯೋತ್ಪಾದಕರಿಗೆ ದುಸ್ವಪ್ನವಾಗಿದ್ದ ಭಾರತದ ಹೆಮ್ಮೆಯ ವೀರ ಸಿಡಿಎಸ್ ಜನರಲ್ ಬಿಪಿನ್ ರಾವತ್‌ಗೆ(CDS Gen Bipin Rawat) ದೇಶ ಅಂತಿಮ ನಮನ ಸಲ್ಲಿಸಿದೆ. ದೆಹಲಿಯ ಬ್ರಾರ್ ಸ್ಕ್ವೇರ್ ರುದ್ರಭೂಮಿಯಲ್ಲಿ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕ(Madhulika Rawat) ಅಂತ್ಯಕ್ರಿಯೆ ನಡೆದಿದೆ. ಸಕಲ ಮಿಲಿಟರಿ ಗೌರವದೊಂದಿಗೆ(ull Military Honor) ರಾವತ್ ಅಂತ್ಯಕ್ರಿಯೆ ಮಾಡಲಾಗಿದೆ. ಅಂತ್ಯಕ್ರಿಯೆಲ್ಲಿ ರಾವತ್ ಪುತ್ರಿಯರಾದ ಕೃತಿಕಾ ರಾವತ್ ಹಾಗೂ ತಾರಿಣಿ ರಾವತ್ ಅಂತಿಮ ವಿಧಿವಿಧಾನಗಳನ್ನು ನೇರವೇರಿಸಿ, ಚಿತಿಗೆ ಅಗ್ನಿಸ್ಪರ್ಶ ಮಾಡಿದರು.
17 ಸುತ್ತು ಕುಶಾಲತೋಪು ಸಿಡಿಸಿ ರಾವತ್‌ಗೆ ಗೌರವ ನೀಡಲಾಯಿತು. ಇನ್ನು 6 ಲೆಫ್ಟಿನೆಂಟ್ ಜನರಲ್‌ಗಳಿಂದ ಸೇನಾ ಗೌರವ ಅರ್ಪಿಸಲಾಗಿದೆ. 3 ಸೇನೆಯ 900 ಸೇನಾಧಿಕಾರಿಗಳು ರಾವತ್ ಅಂತ್ಯಕ್ರಿಯೆಲ್ಲಿ ಪಾಲ್ಗೊಂಡು ಸೇನಾ ಗೌರವ ಸಲ್ಲಿಸಿದ್ದಾರೆ. 3 ಸೇನೆಯ 33 ಸಿಬ್ಬಂದಿಗಳಿಂದ ವಾದ್ಯ ಸಂಗೀತದ ಮೂಲಕ ಗೌರವ ನಮನ ಸಲ್ಲಿಸಲಾಗಿದೆ.
Bipin Rawat Final Journey ಪಾರ್ಥೀವ ಶರೀರದ ಅಂತಿಮ ಯಾತ್ರೆಯಲ್ಲಿ ಜನಸಾಗರ, ಅಮರ್ ರಹೇ ಘೋಷಣೆ!
ಬ್ರಿಟೀಷ್ ಹೈಕಮಿಶನ್, ಭಾರತದಲ್ಲಿ ಫ್ರಾನ್ಸ್ ರಾಯಭಾರಿ ಇಮ್ಯಾನ್ಯುಯೆಲ್ ಕೂಡ ರಾವತ್ ಅಂತ್ಯಕ್ರಿಯೆಲ್ಲಿ ಪಾಲ್ಗೊಂಡು ಪಾಲ್ಗೊಂಡು ನಮನ ಸಲ್ಲಿಸಿದ್ದಾರೆ. ಬಿಪಿನ್ ರಾವತ್ ದಂಪತಿ ಅಂತ್ಯಕ್ರಿಯೆಲ್ಲಿ ವಿದೇಶಿಗಳ ಸೇನಾ ಕಮಾಂಡರ್, ಬ್ರಿಗೇಡಿಯರ್ ಕೂಡ ಪಾಲ್ಗೊಂಡು ಗೌರವ ನಮನ ಸಲ್ಲಿಸಿದರು. ಶ್ರೀಲಂಕಾ ರಕ್ಷಣಾ ಮುಖ್ಯಸ್ಥ, ಹಾಗೂ ಲಂಕಾ ಸೇನಾ ಕಮಾಂಡರ್ ಜನರಲ್ ಶವೇಂದ್ರ ಸಿಲ್ವಾ, ನಿವೃತ್ತ ಅಡ್ಮಿರಲ್ ರವೀಂದ್ರ ಚಂದ್ರಸಿರಿ ವಿಜೆಗುಣರತ್ನ ರಾವತ್ ದಂಪತಿ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಸೇನಾ ಗೌರವ ನೀಡಿದ್ದಾರೆ. ಇನ್ನು ರಾಯಲ್ ಭೂತಾನ್ ಸೇನೇ ಉಪ್ಯ ಮುಖ್ಯ ಕಾರ್ಯಾಚರಣೆ ಅಧಿಕಾರಿ ಬ್ರಿಗೇಡಿಯರ್ ದೋರ್ಜಿ ರಿಂಚನ್, ನೇಪಾಳ ಲೆಫ್ಟಿನೆಂಟ್ ಜನರಲ್ ಬಾಲಕೃಷ್ಣ ಕರ್ಕಿ, ಬಾಂಗ್ಲಾದೇಶ ಸಶಸ್ತ್ರ ಪಡೆ ವಿಭಾಗದ ಲೆಫ್ಟಿನೆಂಟ್ ಜನರಲ್ ವಕಾರ್ UZ ಜಮಾನ್ ಕೂಡ ಸೇನಾ ಗೌರವ ಸಲ್ಲಿಸಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಂತ್ಯಕ್ರಿಯೆಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ಇನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಬಿಪಿನ್ ರಾವತ್ ದಂಪತಿಗೆ ಅಂತಿಮ ಗೌರವ ನಮನ ಸಲ್ಲಿಸಿದರು. ಉತ್ತರಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಕೂಡ ಪಾಲ್ಗೊಂಡು ಗೌರವ ನಮನ ಸಲ್ಲಿಸಿದರು.
Bipin Rawat Chopper Crash: 2 ವಿಚಕ್ಷಣಾ ವಿಮಾನ ಕಳಿಸಿದ್ವಿ ಎಂದ ಸೂಲೂರ್ ಬೇಸ್, ನಿರಾಕರಿಸಿದ ಮದ್ರಾಸ್ ರೆಜಿಮೆಂಟ್!
ಬಳಿಕ ರಾವತ್ ಹಾಗೂ ಮಧುಲಿಕ ಕುಟುಂಬಸ್ಥರು ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ರಾವತ್ ಪುತ್ರಿಯರಾದ ಕೃತಿಕಾ ರಾವತ್ ಹಾಗೂ ತಾರಿಣಿ ರಾವತ್ ಅಂತಿ ವಿಧಿವಿಧಾನಗಳನ್ನು ನೇರವೇರಿಸಿದರು.ಬಳಿಕ ಬಿಪಿನ್ ರಾವತ್ ಅವರ ಪಾರ್ಥೀವ ಶರೀರದ ಮೇಲಿದ್ದ ಭಾರತದ ತ್ರಿವರ್ಣ ಧ್ವಜವನ್ನು ತೆಗೆದು ಕುಟುಂಬಸ್ಥರಿಗೆ ಹಸ್ತಾಂತರಿಸಾಯಿತು. ಬಿಪಿನ್ ರಾವತ್ ಹಾಗೂ ಪತ್ನಿ ಮಧುಲಿಕಾ ರಾವತ್ ಅವರನ್ನು ಒಂದೇ ಚಿತೆಯಲ್ಲಿಟ್ಟು ಅಂತ್ಯಸಂಸ್ಕಾರ ಮಾಡಲಾಯಿತು. ರಾವತ್ ಪುತ್ರಿಯರಿಬ್ಬರು ಚಿತಿಗೆ ಅಗ್ನಿಸ್ಪರ್ಶ ಮಾಡಿದರು.
ತಮಿಳುನಾಡಿನ ಕೂನೂರು ನೀಲರಿಗಿರಿ ಅರಣ್ಯದಲ್ಲಿ ವಾಯುಸೇನಾ ಹೆಲಿಕಾಪ್ಟರ್ ಪತನದಲ್ಲಿ ರಾವತ್ ದಂಪತಿ ಹಾಗೂ ಇತರ 12 ಸೇನಾಧಿಕಾರಿಗಳು ನಿಧನರಾಗಿದ್ದರು. ಇಂದು(ಡಿ.10) ರಾವತ್ ದಂಪತಿ ಪಾರ್ಥೀವ ಶರೀರವನ್ನು ಅವರ ನಿವಾಸದಲ್ಲಿ 11.30 ರಿಂದ 12.30ರ ವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬಳಿಕ ರಾವತ್ ನಿವಾಸ ರಾಜಮಾರ್ಗ್‌ದಿಂದ ಬ್ರಾರ್ ಸ್ಕ್ವೇರ್ ಸ್ಮಶಾನಕ್ಕೆ ಅಂತಿಮ ಯಾತ್ರೆ ವಾಹನದ ಮೂಲಕ ಪಾರ್ಥೀವ ಶರೀರವನ್ನು ತರಲಾಯಿತು.
Bipin Rawat Chopper Crash: ಹೇಗಿತ್ತು ನೀಲಗಿರಿ ಅರಣ್ಯದ ಹವಾಮಾನ? ದುರಂತಕ್ಕೆ ಇದೂ ಕಾರಣವೇ?
ಪಾರ್ಥೀವ ಶರೀರ ಸಾಗುವ ದಾರಿಯುದ್ದಕ್ಕೂ ಜನರು ಸೂರ್ಯ ಚಂದ್ರ ಇರುವವರೆಗೆ ಬಿಪಿನ್ ರಾವತ್ ಹೆಸರು ಅಜರಾಮರವಾಗಿರಲಿದೆ. ಭಾರತ್ ಮಾತಾ ಕಿ ಜೈ ಘೋಷಣೆಗಳನ್ನು ಕೂಗಿದರು. ಪುಷ್ಪಾರ್ಚನೆ ಮೂಲಕ ರಾವತ್‌ಗೆ ಜನ ಕಣ್ಮೀರ ವಿದಾಯ ಹೇಳಿದ್ದಾರೆ.