
ಭಾರತದ ಸ್ಲೀಪರ್ ಕೋಚ್ ಬಸ್‌ಗಳು ಯಾವುದೇ ಐಷಾರಾಮಿ ಹೊಟೇಲ್‌ಗಳಿಗಿಂತ ಕಡಿಮೆ ಏನಿಲ್ಲ. ಹಲವು ಖಾಸಗಿ ಬಸ್‌ಗಳಲ್ಲಿ ಮಲಗುವ ಹಾಸಿಗೆಯಿಂದ ಹಿಡಿದು, ಕುಡಿಯುವ ನೀರು, ಬೆಡ್‌ಶಿಟ್ ಹೀಗೆ ಬಹುತೇಕ ಪ್ರಯಾಣಕ್ಕೆ ಬೇಕಾದ ಎಲ್ಲಾ ಸವಲತ್ತುಗಳು ಪ್ರಯಾಣಿಕರಿಗೆ ಸಿಗುತ್ತದೆ. ಈ ರೀತಿ ಭಾರತೀಯ ಬಸ್‌ನಲ್ಲಿ ಐಷಾರಾಮಿ ಸೌಲಭ್ಯ ನೋಡಿ ವಿದೇಶಿ ಪ್ರಯಾಣಿಕರೊಬ್ಬರು ಶಾಕ್ ಆಗಿದ್ದಾರೆ. ಕೆನಡಾ ಮೂಲದ ಟ್ರಾವೆಲರ್ ಒಬ್ಬರು ತಮ್ಮ ಸೋಶಿಯಲ್ ಮೀಡಿಯಾ ರೆಡ್‌ಇಟ್‌ನಲ್ಲಿ ಈ ಭಾರತೀಯ ಸ್ಲೀಪರ್ ಕೋಚ್ ಬಸ್ ಬಗ್ಗೆ ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದು, ಆ ವೀಡಿಯೋ ಈಗ ಭಾರಿ ವೈರಲ್ ಆಗಿದೆ.
ವೀಡಿಯೋದಲ್ಲಿ ಅವರು ಬಸ್ಸೊಳಗಿನ ಸವಲತ್ತುಗಳನ್ನು ತೋರಿಸುತ್ತಾ ಹೀಗೆ ಹೇಳಿದ್ದಾರೆ. ಭಾರತೀಯ ಸ್ಲೀಪರ್ ಕೋಚ್ ಬಸ್‌ಗಳಿಗೆ ಹೋಲಿಸಿದರೆ ಯುರೋಪಿಯನ್ ಬಸ್‌ಗಳು ಏನೇನೂ ಅಲ್ಲ, ಇಲ್ಲಿ ನಿಮಗೆ ಸಂಪೂರ್ಣವಾದ ಹಾಸಿಗೆ ಸಿಗುತ್ತದೆ. ಜೊತೆಗೆ ಸ್ವಲ್ಪ ಬೇಯಿಸಿದ ಆಹಾರ, ನೀರಿನ ಬಾಟಲ್, ಬೆಡ್ಶೀಟ್ ಹೀಗೆ ಯುರೋಪಿಯನ್ ಬಸ್‌ಗಳು ಇಷ್ಟೊಂದು ಚೆನ್ನಾಗಿ ನನ್ನನ್ನು ನಡೆಸಿಕೊಂಡಿಲ್ಲ, ನಿಜವಾಗಿಯೂ ಸ್ಲೀಪರ್ ಕೋಚ್ ಬಸ್‌ಗಳು ಅತ್ಯುತ್ತಮ ಬಸ್‌ಗಳು, ನೀವು ಬಸ್ ಹತ್ತಿ ನಿದ್ದೆ ಹೋದರೆ, ನಿಮ್ಮ ಜಾಗ ತಲುಪುವ ವೇಳೆಯೇ ಎಚ್ಚರವಾಗಿ ಬಸ್‌ನಿಂದ ಇಳಿಯಬಹುದು. ಹೀಗಾಗಿ ನೀವು ಮುಂದಿನ ಬಾರಿ ಭಾರತಕ್ಕೆ ಬಂದರೆ 15 ಡಾಲರ್ ರೂಪಾಯಿ ನೀಡಿ ಈ ಸ್ಲೀಪರ್ ಕೋಚ್ ಬಸ್‌ನಲ್ಲಿ ಪಯಣಿಸಿ ಇದು ನಿಮಗೆ ಮನೆಯ ಅನುಭವ ನೀಡುತ್ತದೆ ಎಂದು ಆ ವಿದೇಶಿ ಪ್ರವಾಸಿಗರು ಹೇಳಿಕೊಂಡಿದ್ದು, ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 7 ಬಸ್ 3 ಕಾರುಗಳ ಮಧ್ಯೆ ಸರಣಿ ಅಪಘಾತ : ನಾಲ್ವರು ಬೆಂಕಿಗಾಹುತಿ
ಈ ವಿದೇಶಿ ಪ್ರವಾಸಿಗರು ಸ್ಲೀಪರ್ ಕೋಚ್‌ನಲ್ಲಿ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಪಯಣಿಸಿದ್ದಾರೆ. ಈ ಮೂವರು ವಿದೇಶಿ ಪ್ರವಾಸಿಗರು ಭಾರತ ಪ್ರವಾಸ ಮಾಡುತ್ತಿದ್ದು, ಭಾರತದಲ್ಲಿ ಇವರ ಸ್ಲೀಪರ್ ಕೋಚ್ ಬಸ್‌ನ ಪಯಣ ಸಾಕಷ್ಟು ವೈರಲ್ ಆಗಿದೆ. ವಿದೇಶಿ ಪ್ರವಾಸಿಗರ ಜಸ್ಟಿನ್ ಎಂಬುವವರ ಈ ವೀಡಿಯೋ ನೋಡಿದ ಅನೇಕರು ಕಾಮೆಂಟ್ ಮಾಡಿದ್ದಾರೆ. ಅನೇಕರು ಈ ಸ್ಲೀಪರ್ ಕೋಚ್ ಬಸ್‌ಗಳು ದುಬಾರಿ ಎಂದು ಕಾಮೆಂಟ್ ಮಾಡಿದ್ದರೆ ಇನ್ನೂ ಕೆಲವರು ಈ ಬಸ್‌ಗಳು ಬಹಳ ಅಪಾಯಕಾರಿ ಎಂದು ಕಾಮೆಂಟ್ ಮಾಡಿದ್ದು, ಇತ್ತಿಚೆಗೆ ನಡೆದ ಹೈದರಾಬಾದ್ ಬಸ್ ಬೆಂಕಿ ದುರಂತವನ್ನು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: 7 ವರ್ಷಗಳ ನಂತರ ಪ್ರಧಾನಿ ಮೋದಿ ಜೋರ್ಡಾನ್‌ಗೆ: ಭಾರತ ಮಧ್ಯಪ್ರಾಚ್ಯ ಯುರೋಪ್ ಆರ್ಥಿಕ ಕಾರಿಡಾರ್ ಕುರಿತು ಚರ್ಚೆ ನಿರೀಕ್ಷೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ