
ಯೋಧನ ಭಿಕ್ಷುಕ ಎಂದು ಕರೆದು ಅವಮಾನಿಸಿದ HDFC ಬ್ಯಾಂಕ್ ಉದ್ಯೋಗಿ
ಪ್ರತಿಷ್ಠಿತ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಮಹಿಳಾ ಉದ್ಯೋಗಿಯೊಬ್ಬರು ದೇಶ ಕಾಯುವ ಯೋಧನಿಗೆ ಭಿಕ್ಷುಕ ಎಂದೆಲ್ಲಾ ಕರೆದು ಹೀನಾಯವಾಗಿ ಅವಮಾನಿಸಿದ ಘಟನೆ ನಡೆದಿದೆ. ಬ್ಯಾಂಕ್‌ಗೆ ಕರೆ ಮಾಡಿದ ಯೋಧರೊಬ್ಬರು ಹೆಚ್ಚಿನ ಬಡ್ಡಿ ವಿಧಿಸುತ್ತಿರುವ ಬಗ್ಗೆ ಬ್ಯಾಂಕ್ ಸಿಬ್ಬಂದಿಯ ಬಳಿ ವಿಚಾರಿಸಿದ್ದಾರೆ. ಇಷ್ಟಕ್ಕೆ ರೊಚ್ಚಿಗೆದ್ದ ಆ ಮಹಿಳಾ ಸಿಬ್ಬಂದಿ ಯೋಧ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೇ ಕೆಟ್ಟ ಭಾಷೆಯಲ್ಲಿ ಹೀನಾಯವಾಗಿ ನಿಂದಿಸಿದ್ದು, ಆಕೆಯ ಯೋಧನನ್ನು ನಿಂದಿಸುತ್ತಿರುವ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಡಿಯೋ ಕೇಳಿದ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಆಡಿಯೋವನ್ನು ಪತ್ರಕರ್ತ ನವಲ್‌ಕಾಂತ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಆಡಿಯೋ ಕೇಳಿದ ನೆಟ್ಟಿಗರು ಈ ಮಹಿಳಾ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದು, ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಆಡಿಯೋದಲ್ಲಿ ಏನಿದೆ...?
ಹೀಗೆ ಯೋಧನಿಗೆ ನಿಂದಿಸಿದ ಮಹಿಳೆಯನ್ನು ಅನುರಾಧಾ ವರ್ಮಾ ಎಂದು ಗುರುತಿಸಲಾಗಿದೆ. ಈಕೆ ಬ್ಯಾಂಕ್‌ನಿಂದ ತೆಗೆದುಕೊಂಡ ಸಾಲದ ಮರುಪಾವತಿಗಾಗಿ ಯೋಧನಿಗೆ ಕರೆ ಮಾಡಿದ್ದಾಳೆ. ಈ ವೇಳೆ ಯೋಧ ಸಾಲದ ಮೇಲಿನ ಹೈ ಇಂಟರೆಸ್ಟ್(ಹೆಚ್ಚಿನ ಬಡ್ಡಿ) ಬಗ್ಗೆ ಆಕೆಯ ಬಳಿ ಪ್ರಶ್ನಿಸಿದ್ದಾನೆ. ಈ ವೇಳೆ ಆಕೆ ಸಿಟ್ಟಿಗೆದ್ದು ಯೋಧನಿಗೆ ನಿಂದಿಸಿದ್ದಾಳೆ.
ನೀನು ಅನಕ್ಷರಸ್ಥ ಅದಕ್ಕೆ ನಿನ್ನ ಗಡಿಗೆ ಕಳುಹಿಸಲಾಗಿದೆ ಎಂದ ಬ್ಯಾಂಕ್ ಉದ್ಯೋಗಿ:
ನೀನು ಅನಕ್ಷರಸ್ಥ ಇದೇ ಕಾರಣಕ್ಕೆ ನಿನ್ನನ್ನು ಗಡಿಗೆ ಕಳುಹಿಸಲಾಗಿದೆ. ನೀನು ಸುಶಿಕ್ಷಿತನಾಗಿದ್ದರೆ ನೀನು ಯಾವುದಾದರೂ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ನೀನು ಬೇರೆಯವರ ಪಾಲನ್ನು ತಿನ್ನುವುದಕ್ಕೆ ನೋಡಬಾರದು ಅದು ಜೀರ್ಣವಾಗುವುದಿಲ್ಲ. ಇದರಿಂದಲೇ ನಿಮ್ಮಂತಹವರಿಗೆ ವಿಶೇಷ ಚೇತನ ಮಕ್ಕಳು ಜನಿಸುತ್ತಾರೆ ಎಂದೆಲ್ಲಾ ಆಕೆ ಯೋಧನನ್ನು ನಿಂದಿಸಿದ್ದಾಳೆ. ಬರೀ ಇಷ್ಟೇ ಅಲ್ಲ, ಆಕೆ ತಾನು ಕೂಡ ಯೋಧನ ಕುಟುಂಬದಿಂದಲೇ ಬಂದಿದ್ದೇನೆ. ನೀನು ಒಳ್ಳೆಯ ಕುಟುಂಬದಿಂದ ಬಂದಿದ್ದರೆ ನೀನು 15ರಿಂದ 16 ಲಕ್ಷ ಲೋನ್ ತೆಗೆದುಕೊಳ್ಳುತ್ತಿರಲಿಲ್ಲ, ಲೋನ್‌ನಲ್ಲಿಯೇ ಬದುಕುತ್ತಿರುವ ನೀನು ನನಗೆ ಬೋದನೆ ಮಾಡ್ತಿದ್ದಿಯಾ? ಎಂದು ಆಕೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಬ್ರಾಂಚ್‌ಗ ಬರುವಂತೆ ಧಮ್ಕಿ
ಅಲ್ಲದೇ ಬ್ಯಾಂಕ್‌ನ ಬ್ರಾಂಚ್‌ಗೆ ಬರುವಂತೆ ಆಕೆ ಯೋಧನಿಗೆ ಸವಾಲು ಹಾಕಿದ್ದು, ನೀನು ಏನ್ ಮಾಡ್ತಿಯೋ ಮಾಡು, ಲೋನ್ ಹಣದಲ್ಲಿ ಬದುಕ್ತಿರುವ ನೀನು ಒಬ್ಬ ಭಿಕ್ಷಕು, ನಾನು ನಿನ್ನ ಅಪ್ಪನಾ ಸೇವಕನಲ್ಲ, ನಾನು ನಿನಗೆ ಹುಚ್ಚನಂತೆ ಕಾಣ್ತಿದ್ದೀನಾ ಎಂದೆಲ್ಲಾ ಬೈದಾಡಿದ್ದಾಳೆ. ಈ ಆಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಆಕ್ರೋಶ ಹೊರಹಾಕಿ ಈಕೆಗೆ ತಕ್ಕ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ. ಸಿನಿಮಾ ನಿರ್ಮಾಪಕಿ ಹಾಗೂ ಪತ್ರಕರ್ತೆ ದೀಪಿಕಾ ನಾರಾಯಣ್ ಎಂಬುವವರು ಕೂಡ ಈ ಆಡಿಯೋವನ್ನು ರೀಪೋಸ್ಟ್ ಮಾಡಿದ್ದು, ಹೆಚ್‌ಡಿಎಫ್‌ಸಿ ಬ್ಯಾಂಕ್‌ಗೆ ಟ್ಯಾಗ್ ಮಾಡಿ, ನಿಮ್ಮ ಈ ಉದ್ಯೋಗಿಯ ಉದ್ಧಟತನದ ವರ್ತನೆ, ಈಕೆ ಲೋನ್ ತೆಗೆದುಕೊಂಡ ಜನರನ್ನು ಭಿಕ್ಷುಕರು ಎನ್ನುತ್ತಿದ್ದಾಳೆ, ಆಕೆ ಲೋನ್ ತೆಗೆದುಕೊಳ್ಳುವ ಯೋಧರ ಮಕ್ಕಳು ವಿಶೇಷಚೇತನರಾಗಿ ಹುಟ್ಟುತ್ತಾರೆ ಎಂದು ಹೇಳುತ್ತಾಳೆ, ಕೂಡಲೇ ಆಕೆಯನ್ನು ಉದ್ಯೋಗದಿಂದ ಉಚ್ಚಾಟಿಸುವಂತೆ ಅವರು ಆಗ್ರಹಿಸಿದ್ದಾರೆ...
ಇದನ್ನೂ ಓದಿ: ಇಷ್ಟೊಂದು ಹೊಟ್ಟೆಉರಿನಾ... ಸೌಂದರ್ಯ ಸ್ಪರ್ಧೆಯಲ್ಲಿ ಕಿರೀಟ ತೊಡಿಸುವ ಬದಲು ಬೀಳಿಸಲು ಯತ್ನಿಸಿದ ಬ್ಯೂಟಿ
ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ ಸೈಟಲ್ಲಿ ಬಂತು ಲಂಡನ್ ಯುವತಿಯ ಪ್ರಪೋಸಲ್: ಮದ್ವೆಯಾಗುವ ಕನಸಲ್ಲಿದ್ದ ಯುವಕನಿಗೆ ದೊಡ್ಡ ನಾಮ...
ಇದನ್ನೂ ಓದಿ: ಅಮೆರಿಕಾದಲ್ಲಿ ಪೊಲೀಸರಿಂದಲೇ ಭಾರತೀಯ ಯುವಕನಿಗೆ ಗುಂಡಿಕ್ಕಿ ಹತ್ಯೆ
ಇದನ್ನೂ ಓದಿ: ನನ್ನ ಪತ್ನಿ ಮಹಿಳೆ ಹೆಣ್ಣು ಹೆಣ್ಣು ಹೆಣ್ಣು.. ಫ್ರಾನ್ಸ್ ಅಧ್ಯಕ್ಷ : ಮ್ಯಾಕ್ರಾನ್‌ಗೆ ಇಂಥಾ ಸ್ಥಿತಿ ಬಂದಿದ್ದೇಕೆ?
ಇದನ್ನೂ ಓದಿ: ಬೋನಿನಲ್ಲಿ ಕರು ಕಟ್ಟಿದ ಅರಣ್ಯ ಇಲಾಖೆ: ಬೋನಿಗೆ ಬಿದ್ದರೂ ಕರುವನ್ನು ತಿನ್ನದೇ ಬಿಟ್ಟ ಚಿರತೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ