
ಕ್ಯಾಲಿಫೋರ್ನಿಯಾ(ಸೆ.19) ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹಿಂದೆ ವಿವಾದಿತ ಹೇಳಿಕೆ ನೀಡಿ ಪಕ್ಷದಿಂದ ನಾಮಕವಾಸ್ತಾಗೆ ಉಚ್ಚಾಟನೆಗೊಂಡಿದ್ದ ಸ್ಯಾಮ್ ಪಿತ್ರೋಡ ಇದೀಗ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನನಗೆ ಮನೆ ಇದ್ದಂತೆ. ಈ ದೇಶಗಳಿಗೆ ಭೇಟಿ ನೀಡಿದಾಗ ನನಗೆ ವಿದೇಶಿಗ ಅನ್ನೋ ಭಾವನೆ ಬರವುದಿಲ್ಲ ಎಂದು ಸ್ಯಾಮ್ ಪಿತ್ರೋಡ ಹೇಳಿದ್ದಾರೆ. ಪೆಹಲ್ಗಾಂ ದಾಳಿ ನಡೆಸಿದ ಪಾಕಿಸ್ತಾನ, ನಿರಂತರ ಹಿಂದೂಗಳ ಮೇಲೆ ದಾಳಿ ನಡೆಸುತ್ತಿರುವ ಬಾಂಗ್ಲಾದೇಶ ಮನೆಯಂತೆ ಅತ್ಯಂತ ಸುರಕ್ಷಿತ ಹಾಗೂ ಸುಂದರ ಎಂದು ಪರೋಕ್ಷವಾಗಿ ಹೇಳಿಕೆ ನೀಡಿರುವ ಸ್ಯಾಮ್ ಪಿತ್ರೋಡಾಗೆ ಬಿಜೆಪಿ ತಿರುಗೇಟು ನೀಡಿದೆ.
ಭಾರತದ ವಿದೇಶಾಂಗ ನೀತಿ ಪರಿಣಾಮಕಾರಿಯಾಗಬೇಕು. ಪ್ರಮುಖವಾಗಿ ನಮ್ಮ ನೆರೆಯ ದೇಶಗಳ ಜೊತೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು. ಈ ನಿಟ್ಟಿನಲ್ಲಿ ವಿದೇಶಾಂಗ ನೀತಿಗಳು ಕಾರ್ಯಪ್ರವೃತ್ತರಾಗಬೇಕು. ಆದರೆ ಈಗಿನ ಸರ್ಕಾರದ ವಿದೇಶಾಂಗ ನೀತಿಗಳಿಂದ ನಮ್ಮ ನೆರೆಯ ರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ವೃದ್ಧಿಸಲು ಸಾಧ್ಯವೇ ಎಂದು ಸ್ಯಾಮ್ ಪಿತ್ರೋಡ ಪ್ರಶ್ನಿಸಿದ್ದಾರೆ. ಇದೇ ವೇಳೆ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ದೇಶಗಳಿಗೆ ನಾನು ಭೇಟಿ ನೀಡಿದ್ದೇನೆ. ಈ ಸಂದರ್ಭದಲ್ಲಿ ನನಗೆ ಈ ದೇಶಗಳು ನನ್ನ ಮನೆಯಂತೆ ಭಾಸವಾಗಿತ್ತು ಎಂದು ಸ್ಯಾಮ್ ಪಿತ್ರೋಡ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರ ಚೀನಾ ಪ್ರೇಮ: ಭಾರತಕ್ಕೆ ಚೀನಾ ಶತ್ರುವೇ ಅಲ್ಲ: ರಾಹುಲ್ ಅತ್ಯಾಪ್ತ ಪಿತ್ರೋಡಾ
ಅವೆಲ್ಲಾ ಸಣ್ಣ ದೇಶಗಳು, ಸಾಕಷ್ಟು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಕಷ್ಟದ ಸಂದರ್ಭದಲ್ಲಿ ನಾವು ಯುದ್ದಕ್ಕೆ ಹೋಗುವುದಲ್ಲ. ಭಯೋತ್ಪಾದನೆ ಸೇರಿದಂತೆ ಹಲವು ಸಮಸ್ಯೆಗಳು ಆ ದೇಶಗಳಲ್ಲಿದೆ. ಆದರೆ ನಮಗೆ ಅವರು ನೆರೆ ರಾಷ್ಟ್ರಗಳು, ನಾವು ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು ಎಂದು ಭಾರತಕ್ಕೆ ಸ್ಯಾಮ್ ಪಿತ್ರೋಡ ಪಾಠ ಮಾಡಿದ್ದಾರೆ.
ಸ್ಯಾಮ್ ಪಿತ್ರೋಡ ವಿವಾದಿತ ಹೇಳಿಕೆಯನ್ನು ಬಿಜೆಪಿ ಪ್ರಶ್ನಿಸಿದೆ. ರಾಹುಲ್ ಗಾಂಧಿಯ ಮಾರ್ಗದರ್ಶಕ, ವಿದೇಶದ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡ ಹೇಳಿಕೆಯಿಂದ ಕಾಂಗ್ರೆಸ್ ನಡೆ ಸ್ಪಷ್ಟವಾಗಿದೆ.2008ರಲ್ಲಿ ಮಂಬೈನ ಮೇಲೆ ಅಜ್ಮಲ್ ಕಸಬ್ ಸೇರಿ ಉಗ್ರರು ದಾಳಿ ನಡೆಸಿ ಮಾರಣಹೋಮ ನಡೆಸಿದ್ದರು. ಪಾಕಿಸ್ತಾನ ಸೇನೆ, ಐಎಸ್ಐ ನೆರವಿನಿಂದ ಈ ದಾಳಿ ನಡೆದಿತ್ತು. ಎಲ್ಲಾ ದಾಖಲೆ ಮುಂದಿದ್ದರೂ ಕಾಂಗ್ರೆಸ್ ಪಾಕಿಸ್ತಾನಕ್ಕೆ ಪಾಠ ಕಲಿಸಲಿಲ್ಲ. ಪ್ರತಿ ದಾಳಿ ನಡೆಸಲಿಲ್ಲ. ಕಾರಣ ಪಾಕಿಸ್ತಾನ ಕಾಂಗ್ರೆಸ್‌ಗೆ ಮನೆ ಇದ್ದಂತೆ. ಹೀಗಾಗಿ ದಾಳಿ ನಡೆಸುವ ಮಾತೇ ಇರಲಿಲ್ಲ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಹೇಳಿದ್ದಾರೆ.
ಬಾಂಗ್ಲಾ ಹಿಂದೂ ಬಗ್ಗೆ ರಾಹುಲ್ ಗಾಂಧಿಯನ್ನ ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ನಾಯಕರಿಂದ ಪತ್ರಕರ್ತನ ಮೇಲೆ ಹಲ್ಲೆ!
ಐಎನ್‌ಸಿ ಎಂದರೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂದಲ್ಲ ಎಂದು ಬಿಜೆಪಿ ಹೇಳಿದೆ. ಐಎನ್‌ಸಿ ಎಂದರೆ ಇಸ್ಲಾಮಾಬಾದ್ ನ್ಯಾಷನಲ್ ಕಾಂಗ್ರೆಸ್ ಎಂದು ಬಿಜೆಪಿ ಹೇಳಿದೆ. ಕಾಂಗ್ರೆಸ್‌ಗೆ ಪಾಕಿಸ್ತಾನದ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ. ಇದು ಇಂದು ನಿನ್ನೆಯಿಂದಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ