ಲಂಚ ಕೊಡೋದರಲ್ಲಿ ಭಾರತ ಏಷ್ಯಾದಲ್ಲೇ ನಂ.1: ಜಪಾನ್‌, ನೇಪಾಳಕ್ಕೆ ಕೊನೆಯ ಸ್ಥಾನ!

By Kannadaprabha NewsFirst Published Nov 27, 2020, 7:32 AM IST
Highlights

ಲಂಚ ಕೊಡೋದರಲ್ಲಿ ಭಾರತ ಏಷ್ಯಾದಲ್ಲೇ ನಂ.1!| ಸಾರ್ವಜನಿಕ ಸೇವೆಗಾಗಿ ಶೇ.39ರಷ್ಟುಜನರಿಂದ ಲಂಚ ಪಾವತಿ| ಜಪಾನ್‌, ನೇಪಾಳಕ್ಕೆ ಕೊನೆಯ ಸ್ಥಾನ: ಟ್ರಾನ್ಸ್‌ಪರೆನ್ಸಿ ವರದಿ

ನವದೆಹಲಿ(ನ.27): ಸಾರ್ವಜನಿಕ ಸೇವೆ ಪಡೆಯಲು ಲಂಚ ನೀಡಬೇಕಾದ ಅನಿವಾರ್ಯತೆ ಹೆಚ್ಚಿರುವ ಏಷ್ಯಾದ ದೇಶಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. ಜೊತೆಗೆ ಬಹಳಷ್ಟುಜನರು ಇಂಥ ಸೇವೆ ಪಡೆಯಲು ತಮ್ಮ ವೈಯಕ್ತಿಕ ಪರಿಚಯವನ್ನು ಬಳಕೆ ಮಾಡುತ್ತಾರೆ ಎಂದು ಭ್ರಷ್ಟಾಚಾರ ಕಣ್ಗಾವಲು ಸಂಸ್ಥೆಯಾದ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ ವರದಿ ತಿಳಿಸಿದೆ.

ಬಳ್ಳಾರಿ: ಅಧಿಕಾರ ವಹಿಸಿಕೊಂಡ ಹತ್ತೇ ದಿನದಲ್ಲಿ ಆಯುಕ್ತೆ ವರ್ಗಾವಣೆ

ವರದಿಯ ಪ್ರಕಾರ, ಭಾರತದಲ್ಲಿ ಶೇ.39ರಷ್ಟುಜನರು ಸರ್ಕಾರಿ ಸೇವೆ ಪಡೆಯಲು ಲಂಚ ನೀಡಿದ್ದಾಗಿ ಹೇಳಿದ್ದಾರೆ. ಜೊತೆಗೆ ಶೇ.32ರಷ್ಟುಜನರು ಸರ್ಕಾರಿ ಸೇವೆ ಪಡೆಯಲು ತಮ್ಮ ವೈಯಕ್ತಿಕ ಸಂಪರ್ಕ ಬಳಸಿದ್ದಾಗಿ ತಿಳಿಸಿದ್ದಾರೆ. ಈ ಮೂಲಕ ಸಾರ್ವಜನಿಕ ಸೇವೆ ಪಡೆಯಲು ಲಂಚ ನೀಡಿಕೆ ಮತ್ತು ವೈಯಕ್ತಿಕ ಸಂಪರ್ಕ ಬಳಸುವುದರಲ್ಲಿ ಭಾರತ ಏಷ್ಯಾ ದೇಶಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಲಂಚ ನೀಡುವುದರಲ್ಲಿ ಕಾಂಬೋಡಿಯಾ (ಶೇ.37), ಇಂಡೋನೇಷ್ಯಾ (ಶೇ.30) ಭಾರತದ ನಂತರದ ಸ್ಥಾನದಲ್ಲಿವೆ. ಮಾಲ್ಡೀವ್‌್ಸ ಮತ್ತು ಜಪಾನ್‌ (ತಲಾ ಶೇ.2), ದಕ್ಷಿಣ ಕೊರಿಯಾ (ಶೇ.10) ಹಾಗೂ ನೇಪಾಳ (ಶೇ.12) ಕೊನೆಯ ಸ್ಥಾನದಲ್ಲಿವೆ ಎಂದು ವರದಿ ವಿವರಿಸಿದೆ.

ಸರ್ಕಾರಿ ಸೇವೆಗೆ ವೈಯಕ್ತಿಕ ಸಂಪರ್ಕ ಬಳಸುವುದರಲ್ಲಿ ಭಾರತದ ನಂತರ ಇಂಡೋನೇಷ್ಯಾ (ಶೇ.36) ಇದ್ದರೆ, ಜಪಾನ್‌ (ಶೇ.4) ಹಾಗೂ ಕಾಂಬೋಡಿಯಾ (ಶೇ.6) ಕೊನೆಯ ಸ್ಥಾನದಲ್ಲಿವೆ ಎಂದು ಹೇಳಿದೆ.

ಪೊಲೀಸರು ಲಂಚ ಕೇಳಿದ್ರೆ ವಾಟ್ಸಾಪ್‌ ಮಾಡಿ..!

ಜೂ.17ರಿಂದ ಜು.17ರ ಅವಧಿಯಲ್ಲಿ ದೇಶಾದ್ಯಂತ 2000 ಜನರನ್ನು ಸಂದರ್ಶಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಇದೇ ವೇಳೆ ಭ್ರಷ್ಟಾಚಾರ ನಿರ್ಮೂಲನೆಗೆ ದೂರು ನೀಡುವುದು ಮುಖ್ಯವಾದರೂ, ಅಂಥ ಕ್ರಮದಿಂದ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗಿ ಬರುತ್ತದೆ ಎಂದು ಶೇ.63ರಷ್ಟುಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಶೇ.89ರಷ್ಟುಜನರು ಸರ್ಕಾರದ ಭ್ರಷ್ಟಾಚಾರ ಅತಿದೊಡ್ಡ ಸಮಸ್ಯೆ ಎಂದು ಹೇಳಿದ್ದರೆ, ಶೇ.18ರಷ್ಟುಜನರು ಮತಕ್ಕಾಗಿ ಲಂಚ ನೀಡಿದ್ದಾಗಿ ಹೇಳಿದ್ದಾರೆ. ಶೇ.11ರಷ್ಟುಜನರು ತಮಗೆ ಪರಿಚಯ ಇರುವವರಿಂದಲೇ ಲೈಂಗಿಕ ಸುಲಿಗೆ ಕಿರುಕುಳ ಎದುರಿಸಿದ್ದಾಗಿ ಹೇಳಿದ್ದಾರೆ.

ಶೇ.63ರಷ್ಟುಜನರು ಭ್ರಷ್ಟಾಚಾರ ನಿಗ್ರಹಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರೆ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಬಗ್ಗೆ ಇದೇ ರೀತಿಯ ಅಭಿಪ್ರಾಯವನ್ನು ಶೇ.73ರಷ್ಟುಜನರು ವ್ಯಕ್ತಪಡಿಸಿದ್ದಾರೆ.

5 ಲಕ್ಷ ಲಂಚ ಪಡೆದ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಸಸ್ಪೆಂಡ್‌..!

ಆನ್‌ಲೈನ್‌ ಪರಿಹಾರ

ಸಾರ್ವಜನಿಕ ಸೇವೆಯಲ್ಲಿ ಲಂಚದ ಸಮಸ್ಯೆ ದೇಶವನ್ನು ಬಹುವಾಗಿ ಕಾಡುತ್ತಿದೆ. ಅಧಿಕಾರಶಾಹಿಯ ನಿಧಾನಗತಿ ಮತ್ತು ಸಂಕೀರ್ಣ ಪ್ರಕ್ರಿಯೆ, ಅನಗತ್ಯ ವಿಳಂಬ ಮತ್ತು ಅಸ್ಪಷ್ಟನಿಯಂತ್ರಣ ಚೌಕಟ್ಟುಗಳು ಸಾರ್ವಜನಿಕರು ತಮ್ಮ ಸೇವೆಯನ್ನು ಪಡೆಯಲು ಪರ್ಯಾಯ ಮಾರ್ಗ ಬಳಸುವಂತೆ ಮಾಡುತ್ತಿದೆ. ಇದನ್ನು ನಿವಾರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಡಳಿತವನ್ನು ಮತ್ತಷ್ಟುಸರಳೀಕರಣ ಮಾಡಬೇಕು. ಲಂಚ ಮತ್ತು ಸ್ವಜನಪಕ್ಷಪಾತ ನಿವಾರಿಸಲು ಕ್ರಮ ಕೈಗೊಳ್ಳಬೇಕು. ಬಳಕೆದಾರ ಸ್ನೇಹಿ ಆನ್‌ಲೈನ್‌ ವೇದಿಕೆ ಸೃಷ್ಟಿಸಬೇಕು ಮತ್ತು ಸೇವೆ ವಿತರಣೆ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಟ್ರಾನ್ಸ್‌ಪರೆನ್ಸಿ ಸಲಹೆ ನೀಡಿದೆ.

click me!