ಅಶೋಕ ಚಕ್ರ ಬದಲು ಇಸ್ಲಾಂ ಸಂದೇಶದ ತ್ವಿವರ್ಣ ಧ್ವಜ ಹಾರಿಸಿದ ಮಹಿಳೆ, ಇಬ್ಬರು ಮಕ್ಕಳು ವಶಕ್ಕೆ!

Published : Nov 26, 2020, 05:59 PM IST
ಅಶೋಕ ಚಕ್ರ ಬದಲು ಇಸ್ಲಾಂ ಸಂದೇಶದ ತ್ವಿವರ್ಣ ಧ್ವಜ ಹಾರಿಸಿದ ಮಹಿಳೆ, ಇಬ್ಬರು ಮಕ್ಕಳು ವಶಕ್ಕೆ!

ಸಾರಾಂಶ

ಭಾರತದಲ್ಲಿ ತ್ರಿವರ್ಣಕ್ಕೆ ಅವಮಾನದ ಮಾಡಿದ ಸೆಲೆಬ್ರೆಟಿಗಳು ಕಾನೂನಿನ ಮುಂದೆ ತಲೆ ಬಾಗಿದ ಉದಾಹರಣೆಗಳಿವೆ. ಇದೀಗ ಮಹಿಳೆ ಹಾಗೂ ಇಬ್ಬರು ಮಕ್ಕಳು ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ ಹಾಗೂ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಬಂಧನಕ್ಕೊಳಗಾಗಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.

ಗುಜರಾತ್(ನ.26): ಭಾರತದ ರಾಷ್ಟ್ರಧ್ವಜಕ್ಕೆ ಯಾವುದೇ ರೀತಿ ಅವಮಾನ, ರಾಷ್ಟ್ರಧ್ವಜದಲ್ಲಿ ಬದಲಾವಣೆ ಮಾಡುವುದು ಅಪರಾಧವಾಗಿದೆ. ಈ ರೀತಿ ರಾಷ್ಟ್ರಧ್ವಜದಲ್ಲಿ ಕೆಲ ಬದಲಾವಣೆ ಮಾಡಿ ಧ್ವಜ ಹಾರಿಸಿದ ಕಾರಣಕ್ಕೆ ಇಬ್ಬರು ಮಕ್ಕಳನ್ನು ವಶಕ್ಕೆ ಪಡೆಯಲಾಗಿದ್ದು, 30 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ.

ರೋಣ:ರಾಷ್ಟ್ರ ಧ್ವಜವನ್ನ ಕಸದಂತೆ ನೆಲದ ಮೇಲೆ ಎಸೆದ ಪಿಡಿಒ..!..

ಗುಜರಾತ್‌ನ ಆನಂದ್‌ ಜಿಲ್ಲೆಯ ಉಮ್ರೇತ್ ನಗರದ ಇಬ್ಬರು ಮಕ್ಕಳು ( 10 ರಿಂದ 14 ವರ್ಷದೊಳಗಿನ) ರಾಷ್ಟ್ರ ಧ್ವಜ ಹಾರಿಸಿದ್ದಾರೆ. ಆದರೆ ಈ ಧ್ವಜದಲ್ಲಿ ಅಶೋಖ ಚಕ್ರದ ಬದಲು ಇಸ್ಲಾಂ ಚಿಹ್ನೆಗಳು, ಇಸ್ಲಾಂ ಸಂದೇಶಗಳನ್ನು ಹೊಂದಿರುವ ಧ್ವಜ ಇದಾಗಿದೆ. 30 ವರ್ಷದ ಮಹಿಳೆಯ ಹಾಗೂ ಮಹಿಳೆಯ 10 ವರ್ಷದ ಪುತ್ರ ಹಾಗೂ ಆತನ ಗೆಳೆಯ ಸೇರಿ ಧ್ವಜರೋಹಣ ಮಾಡಿದ್ದಾರೆ.

ಮಂಡ್ಯ: ತ್ರಿವರ್ಣ ಧ್ವಜ ಹಿಡಿದು, ಕಪ್ಪು ಪಟ್ಟಿ ಧರಿಸಿ ನಮಾಜ್‌ ಸಲ್ಲಿಕೆ

ತ್ರಿವರ್ಣ ಧ್ವಜದಲ್ಲಿ ಮಾರ್ಪಡು ಮಾಡಿ ಹಾರಾಟ ಮಾಡಿದ ಕಾರಣಕ್ಕೆ ಆನಂದ್ ಡಿವಿಶನ್ ಡೆಪ್ಯೂಟಿ ಸೂಪರಿಡೆಂಟ್ ಪೊಲೀಸ್ ಬಿಡಿ ಜಡೇಜಾ, ಮಹಿಳೆಯನ್ನು ಬಂಧಿಸಿದ್ದಾರೆ. ಇನ್ನು ಮಕ್ಕಳಿಬ್ಬರನ್ನು ವಶಕ್ಕೆ ಪಡೆದು ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಿದ್ದಾರೆ. ಮಕ್ಕಳು ಅರಿವಿಲ್ಲದೆ ಮಾಡಿದ್ದರೂ, ಈ ಯತ್ನವನ್ನು ಮಹಿಳೆಗೆ ತಡೆಯುವ ಅವಕಾಶವಿತ್ತು. ಆದರೆ ಈ ಮಹಿಳೆ ಧ್ವಜಾರೋಹಣಕ್ಕೆ ಎಲ್ಲಾ ನೆರವು ನೀಡಿದ್ದಾರೆ ಎಂದು ಜಡೇಜಾ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !
ಇನ್ನೂ 3 ದಿನ ತಗ್ಗುವುದಿಲ್ಲ ಇಂಡಿಗೋಳು! - ನಿನ್ನೆ ಮತ್ತೆ 650 ವಿಮಾನ ರದ್ದು