ದೇಶದ ಎಲ್ಲರಿಗೂ ಉಚಿತ ಲಸಿಕೆ?: ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಸಂಭವ!

By Kannadaprabha NewsFirst Published Nov 27, 2020, 7:10 AM IST
Highlights

ದೇಶದ ಎಲ್ಲರಿಗೂ ಉಚಿತ ಲಸಿಕೆ?| ಕೇಂದ್ರದಿಂದ ಬಜೆಟ್‌ನಲ್ಲಿ ಘೋಷಣೆ ಸಂಭವ| ಫೆಬ್ರವರಿ ಅಂತ್ಯಕ್ಕೆ ಕೊರೋನಾ ಲಸಿಕೆ ವಿತರಣೆ ನಿರೀಕ್ಷೆ

ನವದೆಹಲಿ(ನ.27): ಕೊರೋನಾ ನಿಯಂತ್ರಣ ಸಂಬಂಧ ಹಲವಾರು ತುರ್ತು ಕ್ರಮಗಳ ಮೂಲಕ ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡಿರುವ ಭಾರತ ಸರ್ಕಾರ, ತನ್ನೆಲ್ಲಾ ನಾಗರಿಕರಿಗೂ ಉಚಿತವಾಗಿಯೇ ಕೊರೋನಾ ಲಸಿಕೆ ವಿತರಿಸಲು ಮುಂದಾಗಿದ್ದು ಈ ಸಂಬಂಧ ಬಜೆಟ್‌ನಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇದೆ.

ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಲಸಿಕೆ ಸಂಗ್ರಹ ಸಿದ್ಧತೆ ಹೇಗಿದೆ?

ಸದ್ಯ ಜಾಗತಿಕ ಮಟ್ಟದಲ್ಲಿ 3 ಕಂಪನಿಗಳ ಲಸಿಕೆಗಳು ಉತ್ತಮ ಫಲಿತಾಂಶ ನೀಡಿವೆ. ಈ ಪೈಕಿ ಕೆಲ ಲಸಿಕೆಗಳು ಡಿಸೆಂಬರ್‌ನಲ್ಲೇ ತುರ್ತು ಬಳಕೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಅದರ ಬೆನ್ನಲ್ಲೇ ಕೇಂದ್ರ ಸರ್ಕಾರ ತನ್ನೆಲ್ಲಾ ನಾಗರಿಕರಿಗೂ ಉಚಿತವಾಗಿ ಲಸಿಕೆ ವಿತರಿಸಲು ನಿರ್ಧರಿಸಿದ್ದು, ಈ ಕುರಿತು ಅದು ಫೆ.1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ. ಜೊತೆಗೆ ಫೆಬ್ರವರಿ ಮಾಸಾಂತ್ಯದಿಂದ ದೇಶಾದ್ಯಂತ ಲಸಿಕೆ ವಿತರಣೆ ಆರಂಭವಾಗುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟ​ರ್‍ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಲಸಿಕೆ ವಿತರಣೆಗೆ 3 ಸಮಿತಿ: ಮೋದಿ ಸೂಚನೆ

ಈ ಸುದ್ದಿಗೆ ಪೂರಕವೆಂಬಂತೆ ಮಂಗಳವಾರ ಸಿಎಂಗಳ ಜೊತೆಗಿನ ಸಭೆ ವೇಳೆ, ಎಲ್ಲಾ ರಾಜ್ಯಗಳು ಲಸಿಕೆ ವಿತರಣೆಗೆ ಅನುವು ಮಾಡಿಕೊಡಲು ಅಗತ್ಯಪ್ರಮಾಣದ ಶೀತಲೀಕೃತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದರು.

click me!