ಪಿಂಕ್ ಸಿಟಿಯಾದ ಉದ್ಯಾನ ನಗರಿ, ಯಶ್ ಕ್ರಿಯೆಟ್ ಮಾಡಲಿದ್ದಾರೆ ಹಿಸ್ಟರಿ; ಜ.3ರ ಟಾಪ್ 10 ಸುದ್ದಿ!

By Suvarna News  |  First Published Jan 3, 2020, 4:26 PM IST

ವಿವಿದ ಬೇಡಿಕೆ ಈಡೇರಿಕೆ ಆಗ್ರಹಿಸಿ ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತರ ಬೃಹತ್ ಪ್ರತಿಭಟನೆ ನೆಡಸಿದರು. ಇದರಿಂದ ಉದ್ಯಾನ ನಗರಿ ಪಿಂಕ್ ಸಿಟಿಯಾಗಿ ಮಾರ್ಪಟ್ಟಿತು. ಸಾವರ್ಕರ್ ಹಾಗೂ ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಮಧ್ಯೆ ದೈಹಿಕ ಸಂಬಂಧ ಕುರಿತ ಕಾಂಗ್ರೆಸ್ ಕೈಪಿಡಿ ಭಾರಿ ವಿವಾದ ಸೃಷ್ಟಿಸಿದೆ. ಮಗಳ ಹುಟ್ಟ ಹಬ್ಬಕ್ಕೆ ಕೇಕ್‌ನಲ್ಲಿ ಇತಿಹಾಸ ರಚಿಸಲು ಯಶ್ ಸಜ್ಜಾಗಿದ್ದಾರೆ. ಜನವರಿ 3ರಂದು ಸಂಚಲನ ಮೂಡಿಸಿದ  ಟಾಪ್ 10 ಸುದ್ದಿ ಇಲ್ಲಿವೆ.
 


ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ : ಬೆಂಗಳೂರಲ್ಲಿ ಎಲ್ಲೆಡೆ ಟ್ರಾಫಿಕ್ ಜಾಮ್...

Tap to resize

Latest Videos

undefined

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಸಿಕ ವೇತನ 12 ಸಾವಿರಕ್ಕೆ ಏರಿಕೆ ಮಾಡಬೇಕು ಎಂದು ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಭಟನೆ ನಡೆಸುತ್ತಿದ್ದು, ಪ್ರೀಡಂ ಪಾರ್ಕಿಗೆ ಜಾಥಾ ನಡೆಸಿದ್ದಾರೆ. 

ಸಾವರ್ಕರ್-ಗೋಡ್ಸೆ ಮಧ್ಯೆ ದೈಹಿಕ ಸಂಬಂಧ: ವಿವಾದದ ಕಿಡಿ ಹೊತ್ತಿಸಿದ ’ಕೈ’ಪಿಡಿ!

ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಹಾಗೂ ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಮಧ್ಯೆ ದೈಹಿಕ ಸಂಬಂಧ ಇತ್ತೆಂಬ ಕಾಂಗ್ರೆಸ್ ಕೈಪಿಡಿ ಇದೀಗ ತೀವ್ರ ವಿವಾದ ಸೃಷ್ಟಿಸಿದೆ.

ಜ.1 ಕ್ಕೆ ಭಾರತದಲ್ಲಿ 67385 ಮಕ್ಕಳ ಜನನ: ವಿಶ್ವದಲ್ಲೇ ನಂ.1

ಜನಸಂಖ್ಯೆ ಆಧಾರದಲ್ಲಿ ವಿಶ್ವದಲ್ಲೇ ಎರಡನೇ ಅತೀ ದೊಡ್ಡ ರಾಷ್ಟ್ರವಾಗಿರುವ ಭಾರತದಲ್ಲಿ, ಹೊಸ ವರ್ಷದ ದಿನದಂದು ಬರೋಬ್ಬರಿ 67,385 ಮಕ್ಕಳು ಜನಿಸಿದ್ದಾರೆ. ಆ ಮೂಲಕ ಜ.1ರಂದು ಅತೀ ಹೆಚ್ಚು ಮಕ್ಕಳು ಜನಿಸಿದ ದೇಶಗಳ ಪೈಕಿ ಭಾರತ ಮೊದಲ ಸ್ಥಾನ ಪಡೆದಿದೆ.

ಪೌರತ್ವ ಕಾಯ್ದೆ ಬೆಂಬಲಿಸುತ್ತೀರಾ?: ಈ ನಂಬರ್‌ಗೆ ಮಿಸ್ಡ್ ಕಾಲ್ ಕೊಡಿ ಎಂದ ಬಿಜೆಪಿ!

ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ  ವಿರೋಧಿ ಹೋರಾಟ ತೀವ್ರವಾಗುತ್ತಿದ್ದಂತೆ, ಕಾಯ್ದೆಗೆ ಜನತೆಯ ಬೆಂಬಲ ಪಡೆಯಲು ಬಿಜೆಪಿ ಟೋಲ್-ಫ್ರೀ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಪೌರತ್ವ ಕಾನೂನಿಗೆ ತಮ್ಮ ಬೆಂಬಲವನ್ನು ನೋಂದಾಯಿಸಲು 8866288662 ನಂಬರ್’ಗೆ  ಮಿಸ್ಡ್ ಕಾಲ್ ನೀಡುವಂತೆ ಬಿಜೆಪಿ ಅಭಿಯಾನ ಆರಂಭಿಸಿದೆ.

ಸಂಜನಾ ಬಿಡ್ರಿ! ನಟರೊಂದಿಗೆ ಕಿರಿಕ್ ಮಾಡ್ಕೊಳೊ ವಂದನಾ ಜೈನ್ ಅಸಲಿ ಮುಖವಿದು!...

ನಿರ್ದೇಶಕಿ, ಉದ್ಯಮಿ ಹಾಗೂ ನಟಿ ವಂದನಾ ಜೈನ್ ನೋಡ್ತಾ ನೋಡ್ತಾ ಒಂದೊಂದೇ ಕಿರಿಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಬೆಂಗಳೂರಿನ ಈ ಬೆಡಗಿ ಮುಂಬೈನಲ್ಲಿ ಇದ್ದುಕೊಂಡು ಈಗ ಮಾಡ್ತಿರೋದಾದ್ರು ಏನು? ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು. 


8ರ ಬದಲು 7 ಗಂಟೆಗೆ IPL ಪಂದ್ಯ ಆರಂಭ? ಫ್ರಾಂಚೈಸಿ ವಿರೋಧ!

IPL ಟೂರ್ನಿಯ ರಾತ್ರಿ ಪಂದ್ಯಗಳು 8 ಗಂಟೆಗೆ ಆರಂಭವಾಗುತ್ತಿತ್ತು. ಆದರೆ 2020ರ ಐಪಿಎಲ್ ಟೂರ್ನಿಯಲ್ಲಿ ಕೆಲ ಬದಲಾವಣೆಗೆ ಪ್ರಸ್ತಾವನೆ ಮುಂದಿಡಲಾಗಿದೆ. ಇದರ ಪ್ರಕಾರ 8ಗಂಟೆ ಬದಲು 7 ಗಂಟೆಗೆ ಪಂದ್ಯ ಆರಂಭಿಸಲು ಪ್ಲಾನ್ ಹಾಕಿಕೊಂಡಿದೆ. 

ವಿಮಾನದಲ್ಲೂ ರಜನಿಯದ್ದೇ 'ದರ್ಬಾರ್'; ತಲೈವಾ ಸಿನಿಮಾಗಷ್ಟೆ ಇಂಥಾ ಕ್ರೇಜ್!

ಹೊಸವರ್ಷ ಆಗಮನವಾಗುತ್ತಿದ್ದಂತೆ ಈಗ  ಎಲ್ಲೆಲ್ಲೂ  ಸೂಪರ್​ಸ್ಟಾರ್ ರಜಿನಿಕಾಂತ್ ಮೇನಿಯಾ ಶುರುವಾಗಿದೆ.  ತಲೈವಾ 'ದರ್ಬಾರ್' ಮಾಡೋಕೆ ರೆಡಿಯಾಗಿದ್ದಾರೆ.  'ದರ್ಬಾರ್' ಚಿತ್ರದ ಪೋಸ್ಟರ್ ಗಳನ್ನು ವಿಮಾನಗಳಲ್ಲಿ ಅಂಟಿಸಲಾಗಿದೆ. ಎರಡು ವಿಮಾನಕ್ಕೆ ದರ್ಬಾರ್ ಹೆಸರು ಇಡಲಾಗಿದೆ. ಸೂಪರ್ ಸ್ಟಾರ್ ದರ್ಬಾರ್ ಪೋಸ್ಟರ್ ಅನ್ನು ವಿಮಾನದ ಮೇಲೆ ದೊಡ್ಡದಾಗಿ ಹಾಕಲಾಗಿದೆ. 

ಕೆಜಿಎಫ್ ಆಯ್ತು, ಬರ್ತಡೇ ಕೇಕ್‌ನಲ್ಲಿ ಹಿಸ್ಟರಿ ಕ್ರಿಯೆಟ್ ಮಾಡಲಿದ್ದಾರೆ ರಾಕಿಭಾಯ್!

ರಾಕಿಂಗ್ ಸ್ಟಾರ್ ಯಶ್ ಇದೇ ತಿಂಗಳು ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ತಿದ್ದಾರೆ.  ಕಳೆದ ವರ್ಷ ಅಂಬಿ ಇಲ್ಲದ ಕಾರಣ ಬರ್ತಡೇ ಮಾಡಿಕೊಳ್ಳದ ರಾಜಾಹುಲಿಯ ಬರ್ತಡೇಗೆ ವಾರಕ್ಕೂ ಮುನ್ನವೇ ತಯಾರಿ ಶುರುವಾಗಿದೆ. ಈಗಾಗಲೇ ಸಿನಿಮಾ ಮೂಲಕ ದಾಖಲೆ ಬರೆದಿರೋ ರಾಕಿ ಬಾಯ್ ಈಗ ತಮ್ಮ ಬರ್ತಡೇ ಕೇಕ್ ಮೂಲಕ ಹೊಸ ಹಿಸ್ಟರಿ ಕ್ರಿಯೇಟ್ ಮಾಡಲಿದ್ದಾರೆ. 

ಮಂಜು ಮುಸುಕಿದ ದಾರಿಯಲ್ಲಿ ಡ್ರೈವಿಂಗ್; 5 ತಪ್ಪು ಮಾಡದಿರಿ!

ಭಾರತದಲ್ಲಿ ಡ್ರೈವಿಂಗ್ ಹೆಚ್ಚು ಚಾಲೆಂಜಿಂಗ್. ಸರಿಯಾದ ಸಿಗ್ನಲ್ ನೀಡುವುದರ ಬದಲು ಕೈ ಕಾಲಿನಲ್ಲೇ ಸೂಚನೆ ಅಥವಾ ಯಾವುದೇ ಸಿಗ್ನಲ್ ನೀಡದೆ ಬಲಕ್ಕೆ ಎಡಕ್ಕೆ ತಿರುಗಿಸುವವರ ಸಂಖ್ಯೆ ಹೆಚ್ಚು. ಇನ್ನು ಮಂಜು ಮುಸುಕಿದ ದಾರಿಯಲ್ಲಿನ ಡ್ರೈವಿಂಗ್ ಕೂಡ ಚಾಲೆಂಜಿಂಗ್. ಕಾರಣ ಮಂಜಿನ ದಾರಿಯಲ್ಲಿ ಹೆಚ್ಚಿನ ಗಮನಕೇಂದ್ರಿಕರಿಸಬೇಕು. ಈ ವೇಳೆ ಈ 5 ತಪ್ಪುಗಳನ್ನು ಮಾಡಲೇಬಾರದು. 

ಆರ್‌ಜೆ ನೇತ್ರಾ ಧ್ವನಿ ಕೇಳಿರುತ್ತೀರಿ, ಆದ್ರೆ ಅವ್ರು ಹೇಗಿದ್ದಾರೆ ನೋಡಿದ್ದೀರಾ?...

ವಿಭಿನ್ನ ಧ್ವನಿ ಮೂಲಕ ಮನೆ-ಮನಗಳ ಮಾತಾಗಿರುವ ಆರ್‌ಜೆ ನೇತ್ರಾ ನಟಿಯಾಗಿಯೂ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನೇತ್ರಾ ಬಗ್ಗೆ ಇಂಟ್ರೆಸ್ಟಿಂಗ್ ಫ್ಯಾಕ್ಟ್ಸ್ ಇಲ್ಲಿದೆ.  ಇನ್‌ಸ್ಟಾಗ್ರಾಂನಲ್ಲಿ ನೇತ್ರಾ ಶೇರ್ ಮಾಡಿಕೊಂಡಿರುವ ಪೋಟೋಗಳಿಗೆ ದಾಖಲೆ ಲೈಕ್ ಕಮೆಂಟ್ ಬಂದಿವೆ.

click me!