ತಲೆಗೆ ಒಟ್ಟು 1.61 ಕೋಟಿ ಬಹುಮಾನ ಘೋಷಿಸಲ್ಪಟ್ಟಿದ್ದ 51 ಮಾವೋವಾದಿ ನಕ್ಸಲರ ಶರಣಾಗತಿ

Published : Feb 07, 2026, 09:03 PM IST
naxal surrender

ಸಾರಾಂಶ

2026ರ ಒಳಗೆ ನಕ್ಸಲ್‌ ಚಟುವಟಿಕೆಯಿಂದ ದೇಶವನ್ನು ಮುಕ್ತ ಮಾಡುವ ಪಣ ತೊಟ್ಟಿದ್ದು, ನಕ್ಸಲರ ವಿರುದ್ಧ ಕಾರ್ಯಾಚರಣೆ ತೀವ್ರಗೊಂಡಿದೆ. ಇದರ ಭಾಗವಾಗಿ ಛತ್ತೀಸ್‌ಗಢದಲ್ಲಿ 1.61 ಕೋಟಿ ಬಹುಮಾನ ಘೋಷಿಸಲ್ಪಟ್ಟಿದ್ದ 51 ಮಾವೋವಾದಿ ನಕ್ಸಲರು ಶರಣಾಗಿದ್ದಾರೆ. ಶರಣಾದವರಲ್ಲಿ 34 ಮಹಿಳೆಯರೂ ಸೇರಿದ್ದಾರೆ.

51 ನಕ್ಸಲರು ಶರಣಾಗತಿ

ಛತ್ತೀಸ್‌ಗಢ: ತಲೆಗೆ ಒಟ್ಟು 1.61 ಕೋಟಿ ಬಹುಮಾನ ಘೋಷಿಸಲ್ಪಟ್ಟಿದ್ದ 51 ಮಾವೋವಾದಿ ನಕ್ಸಲರು ಭದ್ರತಾ ಪಡೆ ಮುಂದೆ ಶರಣಾಗಿದ್ದಾರೆ. ನಕ್ಸಲರ ನಿರ್ಮೂಲನೆಗೆ ಕೇಂದ್ರದ ಭದ್ರತಾ ಪಡೆಗಳು ನಕ್ಸಲ್‌ಪೀಡಿತ ಛತ್ತೀಸ್‌ಗಢದ ಸುಕ್ಮಾದಲ್ಲಿ ನಡೆಸುತ್ತಿರುವ ನಿರಂತರ ಕಾರ್ಯಾಚರಣೆಯಿಂದಾಗಿ ಸಾಕಷ್ಟು ನಕ್ಸಲರು ಈಗಾಗಲೇ ಭದ್ರತಾ ಪಡೆಯ ಮುಂದೆ ಶರಣಾಗಿದ್ದರು. ನಕ್ಸಲರ ಮುಂದೆ ಶರಣಾಗತಿ ಇಲ್ಲವೇ ಸಾವು ಎಂಬ ಎರಡೇ ಆಯ್ಕೆಗಳಿಂದಾಗಿ ಈಗ ಮತ್ತೆ 51 ನಕ್ಸಲರ ಶರಣಾಗತಿ ಆಗಿದೆ.

ಬಸ್ತಾರ್ ವಿಭಾಗದಲ್ಲಿ ಬರುವ ಬಿಜಾಪುರ ಹಾಗೂ ಸುಕ್ಮಾ ಜಿಲ್ಲೆಯಲ್ಲಿ ಒಟ್ಟು 51 ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಗದಲ್‌ಪುರದಲ್ಲಿ ಬಸ್ತರ್ ಪಾಂಡುಮ್ 2026 ಉತ್ಸವದ ಉದ್ಘಾಟನೆ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೂರು ದಿನಗಳ ಭೇಟಿಗಾಗಿ ರಾಯ್‌ಪುರಕ್ಕೆ ಆಗಮಿಸಿದ ಸಮಯದಲ್ಲೇ ಈ ಶರಣಾಗತಿ ನಡೆಯಿತು.

ಇದನ್ನೂ ಓದಿ: ಭಾರತ-ಅಮೆರಿಕ ಒಪ್ಪಂದ: ಇನ್ಮುಂದೆ ಅಮೆರಿಕಾದ ಈ ವಸ್ತುಗಳು ಭಾರತದಲ್ಲಿ ಅಗ್ಗ?

ಶರಣಾದ 51 ನಕ್ಸಲರಲ್ಲಿ ಮಹಿಳೆಯರೇ ಹೆಚ್ಚು ಒಟ್ಟು 34 ಮಂದಿ ಮಹಿಳೆಯರು ಈಗ ಶರಣಾದವರಲ್ಲಿ ಸೇರಿದ್ದಾರೆ. ಬಿಜಾಪುರ ಜಿಲ್ಲೆಯಲ್ಲಿ 20 ಮಹಿಳೆಯರು ಸೇರಿದಂತೆ ಒಟ್ಟು 30 ಮಾವೋವಾದಿಗಳು ಶರಣಾಗಿದ್ದರೆ. 14 ಮಹಿಳೆಯರು ಸೇರಿದಂತೆ 21 ಮಂದಿ ಬಸ್ತರ್ ಪೊಲೀಸರಿಗೆ ಶರಣಾಗಿದ್ದಾರೆ. 'ಪೂನಾ ಮಾರ್ಗಮ್ ಹೆಸರಿನ ಪುನರ್ವಸತಿಯಿಂದ ಸಾಮಾಜಿಕ ಪುನರ್ಜೋಡಣೆಯಲ್ಲಿ ಇವರು ನೆರೆಯ ಸುಕ್ಮಾ ಜಿಲ್ಲೆಯಲ್ಲಿ ಮುಖ್ಯವಾಹಿನಿಗೆ ಸೇರಿದರು ಎಂದು ಬಸ್ತರ್ ರೇಂಜ್‌ನ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಿ ಹೇಳಿದ್ದಾರೆ.

ಬಿಜಾಪುರದಲ್ಲಿ ದಕ್ಷಿಣ ಉಪ-ವಲಯ ಬ್ಯೂರೋಗೆ ಸೇರಿದ ಮಾವೋವಾದಿಗಳು ಹಿರಿಯ ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಅಧಿಕಾರಿಗಳ ಮುಂದೆ ಶರಣಾದರು. 30 ಕೇಡರ್‌ಗಳಲ್ಲಿ, ಪ್ಲಟೂನ್ ಪಕ್ಷದ ಸಮಿತಿ ಸದಸ್ಯರಾದ ಬೋಟಿ ಪೊಡಿಯಮ್ ಅಲಿಯಾಸ್ ಮಲ್ಲಾ (23), ವಿವಿಧ ಮಾವೋವಾದಿ ಸಂಘಗಳ ಸದಸ್ಯರಾದ ಸುಖ್ರಾಮ್ ಮಡ್ಕಮ್ (24) ಮತ್ತು ರೀನಾ ಪುನೆಮ್ (25) ಅವರ ತಲೆಗೆ ತಲಾ ₹8 ಲಕ್ಷ ನಿಗದಿ ಮಾಡಲಾಗಿತ್ತು.

ಇದನ್ನೂ ಓದಿ: ಸದಾ ಸಿಡುಕುವ ಜಯಾ ಬಚ್ಚನ್‌ಗೆ ಬಾಲಿವುಡ್ ಡ್ರಾಮಾ ಕ್ವೀನ್ ನೀಡಿದ ಬಿಟ್ಟಿ ಸಲಹೆಗೆ ನೆಟ್ಟಿಗರ ಶಹಭಾಷ್

ಶರಣಾದ ಮಾವೋವಾದಿಗಳು ಮಾವೋವಾದಿ ಸಿದ್ಧಾಂತದ ಬಗ್ಗೆ ಭ್ರಮನಿರಸನಗೊಂಡಿದ್ದಾರೆ ಮತ್ತು ರಾಜ್ಯ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಯಿಂದ ಪ್ರಭಾವಿತರಾಗಿದ್ದಾರೆ. ರಾಜ್ಯ ಸರ್ಕಾರದ ಸಮಗ್ರ ಮಾವೋವಾದಿ ವಿರೋಧಿ ನೀತಿ, ಭದ್ರತಾ ಪಡೆಗಳ ನಿರಂತರ ಕಾರ್ಯಾಚರಣೆಗಳು ಮತ್ತು ಶಾಂತಿ, ಸಂವಾದ ಮತ್ತು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದ ಸಂಘಟಿತ ಪ್ರಯತ್ನಗಳ ಪರಿಣಾಮವೇ ಈ ಬೆಳವಣಿಗೆ ಎಂದು ಅವರು ಎಂದು ಸುಂದರರಾಜ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತ ಅಮೆರಿಕಾ ವ್ಯಾಪಾರ ಒಪ್ಪಂದ: ಅಮೆರಿಕಾದ ಈ ಉತ್ಪನ್ನಗಳಿಗೆ ಝಿರೋ ಟ್ಯಾಕ್ಸ್
ಪೊಲೀಸ್​ ರೂಪದ ರಕ್ಕಸರು! ಎಂಜಲು ಕಾಸಿಗೆ ಬಾಲಕನ ಜೀವದ ಜೊತೆ ಚೆಲ್ಲಾಟವಾಡಿದ ಕ್ರೂರ ಅಧಿಕಾರಿಗಳು