ಮೆಟ್ರೋ ನಿಲ್ದಾಣದಲ್ಲಿ ಗೆಳತಿಯ ಜೊತೆ ಕೂತಿದ್ದ ಮಗನನ್ನ ನೋಡಿದ ಅಮ್ಮ ಅಲ್ಲೇ ಎಂಗೇಜ್‌ಮೆಂಟ್ ಮಾಡೇಬಿಟ್ಲು!

Published : Feb 07, 2026, 04:35 PM IST
viral video

ಸಾರಾಂಶ

Delhi Metro Viral Video: ಮೆಟ್ರೋ ನಿಲ್ದಾಣದಲ್ಲಿ ನಡೆದ ಈ ಘಟನೆ ಸದ್ಯ ಕೌಟುಂಬಿಕ ವಿಚಾರವಾಗಿ ಉಳಿದಿಲ್ಲ. ಬದಲಾಗಿ ಸಾಮಾಜಿಕ ಚಿಂತನೆ ಮತ್ತು ಲಿಂಗ ದ್ವಂದ್ವ ಮಾನದಂಡದ ಕುರಿತು ಚರ್ಚೆ ನಡೆಯುತ್ತಲೇ ಇದೆ. ಇದು ಯಾವುದೇ ಚಲನಚಿತ್ರ ದೃಶ್ಯಕ್ಕಿಂತ ಕಡಿಮೆಯಿಲ್ಲ. 

ನನಿಬಿಡ ದೆಹಲಿ ಮೆಟ್ರೋ ಪ್ಲಾಟ್‌ಫಾರ್ಮ್‌ನಲ್ಲಿ ನಡೆದ ಘಟನೆಯು ಪ್ರಯಾಣಿಕರನ್ನು ಒಂದು ಕ್ಷಣ ದಿಗ್ಭ್ರಮೆಗೊಳಿಸಿದೆ. ಒರ್ವ ತಾಯಿ ತನ್ನ ಮಗ ಗೆಳತಿಯೊಂದಿಗೆ ಪ್ಲಾಟ್‌ಫಾರ್ಮ್‌ನಲ್ಲಿ ಕುಳಿತಿರುವುದನ್ನು ಗಮನಿಸಿದಳು. ನೋಡಿದ ಜನರು ಅವನನ್ನು ಗದರಿಸಬಹುದು ಅಂದುಕೊಂಡರು. ಜಗಳ ಮಾಡಬಹುದು ಅಂದುಕೊಂಡರು ಅಥವಾ ಅವನನ್ನು ಸದ್ದಿಲ್ಲದೆ ಮನೆಗೆ ಕರೆದೊಯ್ಯುತ್ತಾರೆಯೇ ಎಂದು ಚಿಂತಿಸುತ್ತಿದ್ದರು. ಆದರೆ ಕಥೆ ಇದ್ದಕ್ಕಿದ್ದಂತೆ ಯಾರೂ ಊಹಿಸದ ತಿರುವು ಪಡೆದುಕೊಂಡಿತು.

ಹೌದು. ಯಾವುದೇ ವಾದ ಮಾಡದೆ, ಕೋಪ ಮಾಡಿಕೊಳ್ಳದೆ ಹುಡುಗನ ತಾಯಿ ಹುಡುಗಿಯ ತಲೆಯ ಮೇಲೆ ಸ್ಕಾರ್ಫ್ ಹೊದಿಸಿ, ಸಿಹಿತಿಂಡಿಗಳು ಮತ್ತು ಇತರ ವಸ್ತುಗಳನ್ನು ಅವಳ ಮಡಿಲಲ್ಲಿ ಇರಿಸಿ, ಅಲ್ಲಿಯೇ 'ರೋಕಾ' (ಎಂಗೇಜ್‌ಮೆಂಟ್) ಆಚರಣೆಯನ್ನು ಪೂರ್ಣಗೊಳಿಸಿದಳು. ಮೆಟ್ರೋ ನಿಲ್ದಾಣದಲ್ಲಿ ತಕ್ಷಣ ವಾತವರಣವೇ ಬದಲಾಯ್ತು. ವಿಡಿಯೋ ವೈರಲ್ ಆದ ತಕ್ಷಣ ಇಂಟರ್ನೆಟ್‌ನಲ್ಲಿ ಬಳಕೆದಾರರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಕೆಲವರು ಇದನ್ನು ಬುದ್ಧಿವಂತರ ಲಕ್ಷಣ ಎಂದು ಕೊಂಡಾಡಿದರೆ, ಮತ್ತೆ ಕೆಲವರು ಅದೇ ಮಗಳಾಗಿದ್ದರೆ ಇಂತಹ ನಿರ್ಧಾರ ತೆಗೆದುಕೊಳ್ಳಲಾಗುತ್ತಿತ್ತೇ? ಎಂದು ಪ್ರಶ್ನಿಸುತ್ತಿದ್ದಾರೆ.

ಯಾವುದೇ ಚಲನಚಿತ್ರ ದೃಶ್ಯಕ್ಕಿಂತ ಕಡಿಮೆಯಿಲ್ಲ!

ಮೆಟ್ರೋ ನಿಲ್ದಾಣದಲ್ಲಿ ನಡೆದ ಈ ಘಟನೆ ಸದ್ಯ ಕೌಟುಂಬಿಕ ವಿಚಾರವಾಗಿ ಉಳಿದಿಲ್ಲ. ಬದಲಾಗಿ ಸಾಮಾಜಿಕ ಚಿಂತನೆ ಮತ್ತು ಲಿಂಗ ದ್ವಂದ್ವ ಮಾನದಂಡದ ಕುರಿತು ಚರ್ಚೆ ನಡೆಯುತ್ತಲೇ ಇದೆ. ಇದು ಯಾವುದೇ ಚಲನಚಿತ್ರ ದೃಶ್ಯಕ್ಕಿಂತ ಕಡಿಮೆಯಿಲ್ಲ.

ಸ್ವಲ್ಪವೂ ಗಲಾಟೆ ಮಾಡದೆ ತಾಯಿ 'ಎಂಗೇಜ್‌ಮೆಂಟ್' ಸಮಾರಂಭವನ್ನು ಅಲ್ಲಿಯೇ ಮುಗಿಸಿದಳು. ತಾಯಿಯ ಈ ಅನಿರೀಕ್ಷಿತ ನಿರ್ಧಾರವು ಅಲ್ಲಿದ್ದವರಿಗೆ ಆಘಾತಗೊಳಿಸಿತು. ಅನೇಕರು ಈ ಉಪಕ್ರಮವನ್ನು ಬುದ್ಧಿವಂತ ನಡೆ ಎಂದು ಕರೆಯುತ್ತಿದ್ದರೆ, ಇತರರು ಇದನ್ನು ಆತುರದ ಕ್ರಮ ಎಂದು ಕರೆಯುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗಿ, ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿ, ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ನಾಂದಿ ಹಾಡಿತು. ಈ ಘಟನೆಯ ವಿಡಿಯೋವನ್ನು ಯಾರೋ ರೆಕಾರ್ಡ್ ಮಾಡಿದ್ದು, ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಇದನ್ನು 100,000 ಕ್ಕೂ ಹೆಚ್ಚು ಬಳಕೆದಾರರು ಲೈಕ್ ಮಾಡಿದ್ದಾರೆ ಮತ್ತು ಸಾವಿರಾರು ಕಾಮೆಂಟ್ಸ್‌ ಪಡೆದುಕೊಳ್ಳುತ್ತಿದೆ. ಕೆಲವರು ತಾಯಿಯ ನಿರ್ಧಾರವನ್ನು "ಸಮಸ್ಯೆಗೆ ತಕ್ಷಣದ ಪರಿಹಾರ" ಎಂದು ಶ್ಲಾಘಿಸಿದರೆ, ಇನ್ನು ಕೆಲವರು ಅದು ಮಗ, ಮಗಳಾಗಿದ್ದರೆ ಹಾಗೇ ಮಾಡುತ್ತಿದ್ದರೆ ಎಂದು ಟೀಕಿಸುತ್ತಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ

ಬಳಕೆದಾರರು ಹೇಳಿದ್ದೇನು?

"ಮಗನ ಬದಲು ಮಗಳಾಗಿದ್ದರೆ ಇಷ್ಟೊಂದು ಆತುರ ಇರುತ್ತಿತ್ತೇ?" ಎಂದು ಬಿ.ಕೆ. ಗಧವಿ ಎಂಬ ಬಳಕೆದಾರ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಕಾಮೆಂಟ್ ಮಾಡಿದರೆ, ಸಂಜಯ್ ಕುಮಾರ್ ಎಂಬುವವರು ಇದನ್ನು ತಾಯಿಯ ಧೈರ್ಯಶಾಲಿ ನಿರ್ಧಾರ ಎಂದು ಕರೆದಿದ್ದಾರೆ. ಹಾಗೆಯೇ ತಮಾಷೆಯಾಗಿ ಕೆಲವರು "ಲೈಲಾ-ಮಜ್ನು ಆಟ ಮುಗಿದಿದೆ, ಈಗ ನೇರವಾಗಿ ನಿಮ್ಮ ಹನಿಮೂನ್‌ಗೆ ಹೋಗಿ", "ಇದು ಸಂಪ್ರದಾಯವೋ ಅಥವಾ ಸಾಮಾಜಿಕ ಒತ್ತಡವೋ?" ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಘಟನೆ ಕೇವಲ ಕುಟುಂಬದ ನಿರ್ಧಾರವಲ್ಲ, ಬದಲಾಗಿ ಸಮಾಜದ ಮನಸ್ಥಿತಿಗಳ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂಬ ಚರ್ಚೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿದೆ. ಅಷ್ಟೇ ಅಲ್ಲ, ಇದು ಪ್ರೇಮ ಸಂಬಂಧವನ್ನು ಸ್ವೀಕರಿಸುವ ಆಧುನಿಕ ವಿಧಾನವೇ? ಅಥವಾ ಇದು ಸಾರ್ವಜನಿಕ ಒತ್ತಡದ ಅಡಿಯಲ್ಲಿ ತೆಗೆದುಕೊಂಡ ಭಾವನಾತ್ಮಕ ನಿರ್ಧಾರವೇ? ಎಂದೂ ಕೇಳಲಾಗುತ್ತಿದೆ.

ಅದೇನೇ ಇರಲಿ, ದೆಹಲಿ ಮೆಟ್ರೋ ವೈರಲ್ ಘಟನೆಗಳ ಕೇಂದ್ರಬಿಂದುವಾಗುತ್ತಿದೆ. ಇಂತಹ ವಿಚಿತ್ರ ಘಟನೆಗಳು ಪ್ರತಿದಿನ ವೈರಲ್ ಆಗುತ್ತವೆ. ಕೆಲವೊಮ್ಮೆ ನೃತ್ಯ, ಕೆಲವೊಮ್ಮೆ ಜಗಳ, ಕೆಲವೊಮ್ಮೆ ಪ್ರೇಮ ಪ್ರಕರಣಗಳು. ನಗರದ ಅತ್ಯಂತ ಜನನಿಬಿಡ ಮಾರ್ಗಗಳಲ್ಲಿ ಒಂದಾದ ಹಳದಿ ಮಾರ್ಗವು ಹೆಚ್ಚಾಗಿ ಸಾಮಾಜಿಕ ಮಾಧ್ಯಮದ ಕೇಂದ್ರಬಿಂದುವಾಗುತ್ತದೆ. ಇತ್ತೀಚೆಗೆ ಮೆಟ್ರೋದಿಂದ ಬಂದ ವಿಡಿಯೋ ವೈರಲ್ ಆಗಿತ್ತು. ವಿಡಿಯೋದಲ್ಲಿ ಪ್ರಯಾಣಿಕನೊಬ್ಬ ಟಿಕೆಟ್ ವಿತರಣಾ ಯಂತ್ರಕ್ಕೆ ಹಣವನ್ನು ನಮೂದಿಸಿದಾಗ ಒಳ ಉಡುಪು ಹೊರಬರುವುದನ್ನು ತೋರಿಸಲಾಗಿದೆ.

ಈ ವಿಡಿಯೋದ ಸುತ್ತಲಿನ ಚರ್ಚೆಯೆಂದರೆ ತಾಯಿ ತನ್ನ ಮಗನ ಸಮಸ್ಯೆಯನ್ನು ಪರಿಹರಿಸಿದಳೇ ಅಥವಾ ಹೊಸ ಚರ್ಚೆಯನ್ನು ಹುಟ್ಟುಹಾಕಿದಳೇ ಎಂಬುದು. ಇದು ವೀಕ್ಷಕರ ದೃಷ್ಟಿಕೋನವನ್ನು ಅವಲಂಬಿಸಿದ್ದರೂ, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಂಬಂಧಗಳು, ಸಂಪ್ರದಾಯ ಮತ್ತು ಲಿಂಗ ಸಮಾನತೆಯ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ ಎಂಬುದು ಖಚಿತ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪತ್ನಿಗೆ ತೃಪ್ತಿ ನೀಡಲು ಸಾಧ್ಯವಾಗದ್ದಕ್ಕೆ ಜನನಾಂಗ ಕತ್ತರಿಸಿಕೊಂಡ ಗಂಡ; ಜೋಡಣೆಗೆ ವೈದ್ಯರ ಕಸರತ್ತು
ಮತ್ತೆ ವೈರಲ್ ಆಯ್ತು ಕೇಂದ್ರ ಸಚಿವ ಹಾಗೂ ಸಂಸದೆಯ ವೀಡಿಯೋ: ಮದ್ವೆಯಾಗುವಂತೆ ಸಲಹೆ ನೀಡಿದ ನೆಟ್ಟಿಗರು