ಯೋಗ ಆರೋಗ್ಯಕ್ಕೆ ಒಳ್ಳೆಯದು ಎಂಬ ಸಂಗತಿ ಪ್ರತಿಯೊಬ್ಬರಿಗೂ ತಿಳಿದಿದೆ. ಯೋಗಾಭ್ಯಾಸ ಮಾಡಲು ಅನೇಕರು ಬಯಸ್ತಾರೆ. ಆದ್ರೆ ಸಮಯದ ಅಭಾವದಿಂದ ಕ್ಲಾಸ್ ಗೆ ಹೋಗಲು ಸಾಧ್ಯವಾಗುವುದಿಲ್ಲ. ಮನೆಯಲ್ಲಿಯೇ ಯೋಗ ಶುರು ಮಾಡುವ ಜನರು ಕೆಲ ತಪ್ಪು ಮಾಡಿ ಆರೋಗ್ಯ ಹಾಳು ಮಾಡಿಕೊಳ್ತಾರೆ.
ಯೋಗಾಸನ (Yogasana)ಗಳು ಮತ್ತು ವ್ಯಾಯಾಮ (Exercise)ಗಳು ಆರೋಗ್ಯ (Health) ಮತ್ತು ಫಿಟ್ನೆಸ್ (Fitness) ಗೆ ಪ್ರಯೋಜನಕಾರಿ. ನಿಯಮಿತ ವ್ಯಾಯಾಮ ಹಾಗೂ ಯೋಗ ದೇಹವನ್ನು ಸದೃಢವಾಗಿರಿಸುವುದು ಮಾತ್ರವಲ್ಲದೆ ಅನೇಕ ರೋಗಗಳಿಂದ ನಮ್ಮನ್ನು ದೂರವಿಡುತ್ತದೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗ್ತಿಲ್ಲ. ಜಿಮ್ ಹಾಗೂ ತರಬೇತಿ ಕ್ಲಾಸ್ ಗಳಿಗೆ ಹೋಗದೆ ಜನರು, ತಮ್ಮನ್ನು ತಾವು ಸದೃಢವಾಗಿರಿಸಿಕೊಳ್ಳಲು ಮನೆಯಲ್ಲಿ ವ್ಯಾಯಾಮ ಮತ್ತು ಯೋಗ ಮಾಡುತ್ತಾರೆ. ಆರೋಗ್ಯ ವೃದ್ಧಿಗಾಗಿ ನಾವು ಯಾವುದೇ ಮಾರ್ಗದರ್ಶಿ ಅಥವಾ ತರಬೇತುದಾರರಿಲ್ಲದೆ ಮಾಡುವ ವ್ಯಾಯಾಮವು ದೇಹದ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತದೆ. ಮಾರ್ಗದರ್ಶಿ ಅಥವಾ ತರಬೇತುದಾರರ ಅನುಪಸ್ಥಿತಿಯಲ್ಲಿ, ಮನೆಯಲ್ಲಿ ಯೋಗಾಭ್ಯಾಸ ಅಥವಾ ವ್ಯಾಯಾಮ ಮಾಡುವಾಗ ಕೆಲವು ತಪ್ಪುಗಳು ಆಗುವ ಸಾಧ್ಯತೆಯಿದೆ. ಈ ತಪ್ಪುಗಳು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಮನೆಯಲ್ಲಿ ಯೋಗ ಅಥವಾ ವ್ಯಾಯಾಮ ಮಾಡುವಾಗ ಹೆಚ್ಚಿನ ಜಾಗ್ರತೆ ವಹಿಸಬೇಕು. ಮನೆಯಲ್ಲಿ ವ್ಯಾಯಾಮ ಮಾಡುವಾಗ ನೆನಪಿನಲ್ಲಿಡಬೇಕಾದ ಕೆಲವು ವಿಷಯಗಳಿವೆ. ಆರೋಗ್ಯಕ್ಕೆ ಸಂಬಂಧಿಸಿದ ಈ ಪ್ರಮುಖ ವಿಷಯಗಳನ್ನು ನಾವಿಂದು ಹೇಳ್ತೆವೆ.
ಮನೆಯಲ್ಲಿ ವ್ಯಾಯಾಮ ಮಾಡುವಾಗ ಇವುಗಳು ನೆನಪಿರಲಿ
undefined
ಯೋಗದ ಬಗ್ಗೆ ಜ್ಞಾನ : ಯೋಗದ ಭಂಗಿ ಜನರಿಗೆ ಗೊತ್ತಿರುತ್ತದೆ. ಯುಟ್ಯೂಬ್ ನೋಡಿ ವ್ಯಾಯಾಮ ಮಾಡುತ್ತಿರುತ್ತಾರೆ. ಪ್ರತಿ ದಿನ ಅದೇ ವ್ಯಾಯಾಮ ಮಾಡಿದ್ರೂ ಏನು ತಪ್ಪು ಮಾಡ್ತಿದ್ದೇವೆ ಎಂಬುದು ಗೊತ್ತಿರುವುದಿಲ್ಲ. ಉಸಿರಾಟದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ತಪ್ಪಾಗಿ ಉಸಿರಾಡುತ್ತೇವೆ. ಇದ್ರಿಂದ ಆರೋಗ್ಯ ಸುಧಾರಿಸುವ ಬದಲು ಹದಗೆಡುವ ಅಪಾಯವಿರುತ್ತದೆ.
ಮನೆಯಲ್ಲಿ ಎಲ್ಲಿ ಮತ್ತು ಹೇಗೆ ವ್ಯಾಯಾಮ : ಮನೆಯಲ್ಲಿ ವ್ಯಾಯಾಮ ಮಾಡುವಾಗ, ಮಾಡುವ ಜಾಗದ ಬಗ್ಗೆ ಗಮನವಿರಬೇಕು. ಎಲ್ಲೆಂದರಲ್ಲಿ ವ್ಯಾಯಾಮ ಮಾಡುವುದು ಸೂಕ್ತವಲ್ಲ. ಮೊದಲನೆಯದಾಗಿ, ತೆರೆದ ಜಾಗದಲ್ಲಿ ವ್ಯಾಯಾಮ ಮಾಡಬೇಕು. ವ್ಯಾಯಾಮ ಮಾಡುವಾಗ ಮ್ಯಾಟ್ ಬಳಸಬೇಕು. ಮುಚ್ಚಿದ ಕೋಣೆಯಲ್ಲಿ ವ್ಯಾಯಾಮ ಅಥವಾ ಯೋಗ ಮಾಡುವುದು ಒಳ್ಳೆಯದಲ್ಲ. ಟೆರೇಸ್, ಲಾನ್ ಅಥವಾ ದೊಡ್ಡ ಹಾಲ್‌ನಲ್ಲಿ ವ್ಯಾಯಾಮ ಮಾಡುವುದು ಪ್ರಯೋಜನಕಾರಿ. ಮ್ಯಾಟ್ ಖರೀದಿಸುವಾಗ ನೀವು ಕಡಿಮೆ ಬೆಲೆಯ ಮ್ಯಾಟ್ ಗೆ ಮಹತ್ವ ನೀಡುವ ಬದಲು ಒಳ್ಳೆಯ ಗುಣಮಟ್ಟದ ಮ್ಯಾಟ್ ಖರೀದಿ ಮಾಡಿ. ಇದು ಯೋಗ ಮಾಡುವಾಗ ನಿಮಗೆ ಆರಾಮದಾಯಕ ಅನುಭವ ನೀಡುತ್ತದೆ.
ನೋವಿನ ಅನುಭವವಾದ್ರೆ ಅಭ್ಯಾಸ ಬಿಡಿ : ವ್ಯಾಯಾಮ ಮಾಡುವಾಗ ಅನೇಕ ಬಾರಿ ವಿಪರೀತ ನೋವು ಕಾಡುತ್ತದೆ. ಅಂಥ ಸಂದರ್ಭದಲ್ಲಿ ಯೋಗ ಮಾಡದಿರುವುದು ಒಳ್ಳೆಯದು. ಒಂದು ವೇಳೆ ನೋವಿನಲ್ಲೂ ನೀವು ಯೋಗ ಬಯಸಿದ್ರೆ ನಿಮಗೆ ಸೂಕ್ತವಾದ ಯೋಗ ಯಾವುದು ಎಂಬುದನ್ನು ಅರಿತು ನೀವು ಯೋಗಾಭ್ಯಾಸ ಮಾಡಬೇಕು.
Hearing Loss: ಶೀತದಿಂದ ಕಿವಿ ಕೆಪ್ಪಾದೀತು ಎಚ್ಚರ!
ನಿಯಮಿತ ಅಭ್ಯಾಸ ಅಗತ್ಯ : ವಾರಕ್ಕೊಮ್ಮೆ ಯೋಗಾಭ್ಯಾಸ ಮಾಡುವುದು ಯೋಗ್ಯವಲ್ಲ. ನೀವು ವಾರದಲ್ಲಿ ಮೂರು ದಿನವಾದ್ರೂ ಅಭ್ಯಾಸ ಮಾಡಬೇಕು. ನಿಯಮಿತ ಯೋಗಾಭ್ಯಾಸ ಮಾಡಿದ್ರೆ ಲಾಭ ಹೆಚ್ಚು. ನಿಮ್ಮ ಗುರಿ ಸಾಧಿಸಬಹುದು. ದಿನದಲ್ಲಿ 10 ನಿಮಿಷವಾದ್ರೂ ಸರಿ ನಿಯಮಿತವಾಗಿ ವ್ಯಾಯಾಮ ಮಾಡುವ ಅಭ್ಯಾಸ ಮಾಡಿಕೊಳ್ಳಿ.
ದೇಹಕ್ಕೆ ವಿಶ್ರಾಂತಿ ಅಗತ್ಯ : ಕೊರೊನಾ ನಂತ್ರ ಮನೆಯಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಮನೆಯಲ್ಲಿಯೇ ಇರುವ ಜನರು ದಿನದ ಬಹಳ ಸಮಯ ಯೋಗಾಭ್ಯಾಸ ಮಾಡುವವರಿದ್ದಾರೆ. ದೇಹವನ್ನು ಸದಾ ದಣಿಸುತ್ತಿರುತ್ತಾರೆ. ಆದ್ರೆ ಇದು ಒಳ್ಳೆಯದಲ್ಲ. ವಾರದಲ್ಲಿ ಒಂದು ದಿನವಾದ್ರೂ ದೇಹಕ್ಕೆ ವಿಶ್ರಾಂತಿಯ ಅಗತ್ಯವಿದೆ.
Sleep Tips: ನೀವೆಷ್ಟು ಗಂಟೆ ನಿದ್ದೆ ಮಾಡಬೇಕು ಅಂದ್ರೆ..
ನಿಮ್ಮ ಅಭ್ಯಾಸವನ್ನು ಆನಂದಿಸಿ : ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಬರದ ಭಂಗಿಯ ಅಭ್ಯಾಸ ಮಾಡಲು ಹೋಗಿ ಯಡವಟ್ಟು ಮಾಡಿಕೊಳ್ಳಬೇಡಿ. ಹಾಗೆ ಯೋಗಾಭ್ಯಾಸವನ್ನು ಮನಸ್ಸಿಲ್ಲದ ಮನಸ್ಸಿನಲ್ಲಿ ಮಾಡಿದ್ರೆ ಪ್ರಯೋಜನವಿಲ್ಲ. ಯೋಗಾಭ್ಯಾಸವನ್ನು ನೀವು ಆನಂದಿಸದಿದ್ದರೆ ಅದ್ರ ಪ್ರಯೋಜನ ಸಿಗುವುದಿಲ್ಲ. ಪ್ರತಿ ಭಂಗಿಯನ್ನು ನೀವು ಸಂತೋಷದಿಂದ ಮಾಡಿದಲ್ಲಿ ಮಾತ್ರ ಅದ್ರ ದುಪ್ಪಟ್ಟು ಲಾಭ ಪಡೆಯಬಹುದು.