Quit Smoking: ಧಮ್ ಎಳೆಯೋದು ಬಿಡ್ಬೇಕೆಂದ್ರೆ ಈ ಯೋಗ ಮಾಡಿ

By Suvarna NewsFirst Published May 31, 2022, 3:11 PM IST
Highlights

ಚಟ ಅಂಟಿದ್ಮೇಲೆ ಬಿಡೋದು ಕಷ್ಟ. ಅದು ಟೀ ಇರಲಿ ಇಲ್ಲ ಧೂಮಪಾನವಿರಲಿ. ಆರೋಗ್ಯಕ್ಕೆ ಹಾಳು ಎಂಬುದು ಗೊತ್ತಿದ್ದರೂ ಮನಸ್ಸು ಕೇಳೋದಿಲ್ಲ. ಅದ್ರಲ್ಲೂ ಧೂಮಪಾನ ಬಿಡ್ಬೇಕಿದ್ರೆ ದೊಡ್ಡ ಸಾಹಸ ಮಾಡ್ಬೇಕು. ನೀವು ತಂಬಾಕು ಬಿಡ್ಬೇಕೆಂಬ ನಿರ್ಧಾರ ಮಾಡಿದ್ರೆ ಈ ಟ್ರಿಕ್ ಉಪಯೋಗಿಸಿ.
 

ಧೂಮಪಾನ (Smoking) ಆರೋಗ್ಯಕ್ಕೆ ಹಾನಿಕರ. ಹೀಗಂತ ಪ್ಯಾಕೆಟ್ (Packet) ಮೇಲೆಯೇ ಬರೆದಿರ್ತಾರೆ. ಆದ್ರೂ ಅದ್ರ ಸೇವನೆಯನ್ನು ಜನರು ಬಿಡೋದಿಲ್ಲ. ದಿನ ದಿನಕ್ಕೂ ಧೂಮಪಾನಿಗಳ ಸಂಖ್ಯೆ ಹೆಚ್ಚಾಗ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಈ ಚಟಕ್ಕೆ ಬೀಳುವ ಜನರು ನಂತ್ರ ಚಟ ಬಿಡಲು ಸಾಧ್ಯವಾಗದೆ ತೊಂದರೆ ಅನುಭವಿಸ್ತಾರೆ.  ಸಣ್ಣ ವಯಸ್ಸಿನಲ್ಲಿಯೇ ಸಾವು ತಂದುಕೊಂಡವರ ಸಂಖ್ಯೆ ಕಡಿಮೆಯೇನಿಲ್ಲ. ಧೂಮಪಾನ ಹಾಗೂ ಗುಟ್ಕಾ (Gutka) ಸೇವನೆಯಿಂದ  ಹಲವು ಗಂಭೀರ ಕಾಯಿಲೆ (Disease) ಗಳು ಬರುವ ಅಪಾಯವಿದೆ. ತಂಬಾಕು, ಸಿಗರೇಟ್ ಸೇವನೆಯಿಂದಾಗುವ ಹಾನಿಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು (World No Tobacco Day)ಆಚರಿಸಲಾಗುತ್ತದೆ. ಈ ದಿನದಂದು ಧೂಮಪಾನವನ್ನು ತ್ಯಜಿಸುವ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತದೆ. ಧೂಮಪಾನದ ಅಭ್ಯಾಸದಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಧೂಮಪಾನ, ತಂಬಾಕು (Tobacco) ಸೇವನೆಯಿಂದ ಕ್ಯಾನ್ಸರ್ (Cancer), ಹೃದ್ರೋಗ, ಪಾರ್ಶ್ವವಾಯು, ಶ್ವಾಸಕೋಶದ ಕಾಯಿಲೆ, ಮಧುಮೇಹ ಮತ್ತು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (COPD) ಅಪಾಯ ಹೆಚ್ಚಾಗುತ್ತದೆ. ಈ ಕಾರಣಕ್ಕಾಗಿ, ಆರೋಗ್ಯ ತಜ್ಞರು ಈ ಹಾನಿಕಾರಕ ಅಭ್ಯಾಸದಿಂದ ದೂರವಿರಲು ಸಲಹೆ ನೀಡುತ್ತಾರೆ. ಆದಾಗ್ಯೂ, ಧೂಮಪಾನವನ್ನು ತ್ಯಜಿಸುವುದು ಸುಲಭವಲ್ಲ ಎಂದು ಅಧ್ಯಯನಗಳು ಹೇಳ್ತವೆ. ಧೂಮಪಾನ ತ್ಯಜಿಸಬೇಕೆಂದು ಬಯಸಿದ ನಂತರವೂ ಅನೇಕ ಜನರು ಧೂಮಪಾನದ ಚಟದಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಧೂಮಪಾನ ಬಿಡಲು ಅನೇಕ ಕಸರತ್ತುಗಳನ್ನು ಮಾಡ್ತಿರುತ್ತಾರೆ. ಏಕಾಏಕಿ ಧೂಮಪಾನ ಬಿಟ್ಟರೆ ಕೆಲ ಮಾನಸಿಕ ಸಮಸ್ಯೆ ಕಾಡುತ್ತದೆ ಎನ್ನುವವರಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಧೂಮಪಾನದ ಅಭ್ಯಾಸದಿಂದ ದೂರವಿರಲು ಕೆಲವು ಯೋಗ ಭಂಗಿಗಳ ನಿಯಮಿತ ಅಭ್ಯಾಸ ಮಾಡಬಹುದು. ಯೋಗಾಭ್ಯಾಸ (Yoga) ನಿಮ್ಮನ್ನು ಚಟದಿಂದ ದೂರವಿಡುತ್ತದೆ. ಯೋಗಾಭ್ಯಾಸ ಮಾಡುವವರಲ್ಲಿ ಧೂಮಪಾನ ಬಯಕೆ ಕಡಿಮೆ. ಇಂದು ಯಾವ ಯೋಗಗಳು ಧೂಮಪಾನದಿಂದ ನಿಮ್ಮನ್ನು ದೂರವಿಡಲು ನೆರವಾಗುತ್ತವೆ ಎಂಬುದನ್ನು ಹೇಳ್ತೇವೆ.

ಕಪಾಲಭಾತಿ ಪ್ರಾಣಾಯಾಮ (Pranayama) : ಕಪಾಲಭಾತಿ ಪ್ರಾಣಾಯಾಮದ ನಿಯಮಿತ ಅಭ್ಯಾಸವು ಸಿಗರೇಟ್, ತಂಬಾಕು ಅಭ್ಯಾಸವನ್ನು ತೊರೆಯಲು ಸಹಾಯ ಮಾಡುತ್ತದೆ. ಕಪಾಲಭಾತಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಈ ಯೋಗವು ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಧೂಮಪಾನ ಮಾಡುವ ಬಯಕೆಯನ್ನು ಕಡಿಮೆ ಮಾಡುತ್ತದೆ. ಮಾನಸಿಕ ಆರೋಗ್ಯವನ್ನು ಸುಧಾರಿಸಲು ಕಪಾಲಭಾತಿಯನ್ನು ಅಭ್ಯಾಸ ಮಾಡಬೇಕು. ನಿಯಮಿತವಾಗಿ ಕಪಾಲಭಾತಿ ಅಭ್ಯಾಸ ಮಾಡ್ತಾ ಬಂದಂತೆ ನಿಮ್ಮ ಮನಸ್ಸು ಸ್ಥಿರವಾಗುತ್ತದೆ. ಧೂಮಪಾನದ ಬಯಕೆ ಕಡಿಮೆಯಾಗಲು ಶುರುವಾಗುತ್ತದೆ. 

Health Tips: ಲಿಚಿ ಹಣ್ಣಿನಲ್ಲಿ ಮಾತ್ರವಲ್ಲ ಎಲೆಯಲ್ಲೂ ಇದೆ ಔಷಧಿ ಗುಣ

ಬಾಲಾಸನ  ಯೋಗ : ಧೂಮಪಾನ ಚಟದಿಂದ ಸಂಪೂರ್ಣವಾಗಿ ಹೊರಗೆ ಬರಬೇಕು ಎನ್ನುವವರು ಬಾಲಾಸನವನ್ನು ಅಭ್ಯಾಸ ಮಾಡಬೇಕು. ಬಾಲಾಸನ ಅನೇಕ ಪ್ರಯೋಜನಗಳನ್ನು ಹೊಂದಿದೆ. ಈ ಆಸನವು ನರಮಂಡಲ ಮತ್ತು ಒತ್ತಡವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಬಾಲಾಸನ ಯೋಗವು ಹೊಟ್ಟೆ ಮತ್ತು ಸೊಂಟದ ಸಮಸ್ಯೆಗಳಿಗೆ ಪ್ರಯೋಜನಕಾರಿಯಾಗಿದೆ. ಈ ಆಸನದ ನಿಯಮಿತ ಅಭ್ಯಾಸವು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ದೇಹವನ್ನು ಶಕ್ತಿಯುತವಾಗಿರಿಸಲು ಸಹಾಯ ಮಾಡುತ್ತದೆ.

113 ವರ್ಷ ಪೂರೈಸಿ ಗಿನ್ನೀಸ್ ದಾಖಲೆ: ಆರೋಗ್ಯದ ಗುಟ್ಟು ರಟ್ಟು!

ಭುಜಂಗಾಸನ : ಧೂಮಪಾನ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಗುಟ್ಕಾ ಸೇವನೆ ಬಿಡಲು ಸಾಧ್ಯವಾಗ್ತಿಲ್ಲ ಎನ್ನುವವರು ಅವಶ್ಯವಾಗಿ ಯೋಗಾಸನ ಅಭ್ಯಾಸ ಮಾಡ್ಬೇಕು. ಅದರಲ್ಲೂ ಇದರ ಸೇವನೆಯನ್ನು ಸಂಪೂರ್ಣವಾಗಿ ಬಿಡಬೇಕೆಂದು ದೃಢ ಸಂಕಲ್ಪ ಮಾಡಿದವರಿಗೆ ವ್ಯಸನದಿಂದ ಮನಸ್ಸನ್ನು ನಿಯಂತ್ರಿಸಲು ಕಷ್ಟವಾಗುತ್ತದೆ. ಹಾಗಾಗಿ ನಾಲ್ಕು ದಿನ ಬಿಟ್ಟ ಚಟ ಮತ್ತೆ ಶುರುವಾಗುತ್ತದೆ. ಅಂಥವರು ಭುಜಂಗಾಸನ ಯೋಗವನ್ನು ಅಭ್ಯಾಸ ಮಾಡಬೇಕು. ಈ ಆಸನವು ಬೆನ್ನು ಮತ್ತು ಸೊಂಟದ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.   


 

click me!