Yoga Tips : ಮಧುಮೇಹಿಗಳು ಈ ಯೋಗ ಮಾಡಿದ್ರೆ ಹೆಚ್ಚುತ್ತೆ ಸಮಸ್ಯೆ

Published : Dec 20, 2022, 04:08 PM IST
Yoga Tips : ಮಧುಮೇಹಿಗಳು ಈ ಯೋಗ ಮಾಡಿದ್ರೆ ಹೆಚ್ಚುತ್ತೆ ಸಮಸ್ಯೆ

ಸಾರಾಂಶ

ಯೋಗ ಆರೋಗ್ಯ ವೃದ್ಧಿಸುತ್ತದೆ. ಪ್ರತಿ ದಿನ ಯೋಗ ಮಾಡುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ಹಾಗಂತ ಎಲ್ಲರೂ ಎಲ್ಲ ಆಸನ ಮಾಡಲು ಸಾಧ್ಯವಿಲ್ಲ. ತಪ್ಪಾದ ಯೋಗದಿಂದ ಕೆಲವೊಂದು ರೋಗ ಹೆಚ್ಚಾಗಬಹುದು. ಮಧುಮೇಹಿಗಳು ಯೋಗ ಮಾಡುವ ಮುನ್ನ ಯಾವುದು ಯೋಗ್ಯವಲ್ಲ ಎಂಬುದನ್ನು ತಿಳಿದಿರಬೇಕು.    

ದೊಡ್ಡವರಿಂದ ಹಿಡಿದು ಸಣ್ಣವರವರೆಗೆ ಕಾಡ್ತಿರುವ ರೋಗಗಳಲ್ಲಿ ಮಧುಮೇಹ ಕೂಡ ಒಂದು. ಹಿಂದೆ ವಯಸ್ಸಾಗ್ತಿದ್ದಂತೆ ಕಾಣಿಸಿಕೊಳ್ತಿದ್ದ ಮಧುಮೇಹ ಈಗ ಪುಟಾಣಿಗಳನ್ನು ಬಿಡ್ತಿಲ್ಲ. ಮಧುಮೇಹಿಗಳು ಸಾಮಾನ್ಯವಾಗಿ ಔಷಧಿಗಳು ಮತ್ತು ಚುಚ್ಚುಮದ್ದುಗಳನ್ನು ಆಶ್ರಯಿಸುತ್ತಾರೆ. ಬರೀ ಇದ್ರಿಂದ ಮಾತ್ರವಲ್ಲ ಯೋಗದಿಂದಲೂ ಮಧುಮೇಹವನ್ನು ನಿಯಂತ್ರಿಸಬಹುದು. ಡಯಾಬಿಟಿಸ್ ರೋಗಿಗಳಿಗೆ ಯೋಗಾಸನ ಮಾಡುವಂತೆ ಸಲಹೆ ನೀಡಲಾಗುತ್ತದೆ. ಯೋಗ ಮಾಡುವುದು ಒಳ್ಳೆಯದು. ಆದ್ರೆ ಎಲ್ಲ ಯೋಗಾಸನಗಳು ಮಧುಮೇಹಿಗಳಿಗೆ ಒಳ್ಳೆಯದಲ್ಲ.  

ಯೋಗ (Yoga) ಮಾಡುವ ಮೊದಲು ಡಯಾಬಿಟಿಸ್ (Diabetes) ರೋಗಿಗಳು ಯಾವ ಆಸನ ಮಾಡಿದ್ರೆ ಒಳ್ಳೆಯದು ಎಂಬುದನ್ನು ತಿಳಿದಿರಬೇಕು. ಹಾಗೆ ಯಾವುದನ್ನು ಅಪ್ಪಿತಪ್ಪಿಯೂ ಮಾಡಬಾರದು ಎಂಬ ಅರಿವು ಇರಬೇಕು. ನಾವಿಂದು ಮಧುಮೇಹಿಗಳು ಯಾವ ಯೋಗಾಸನ ಮಾಡಬಾರದು ಎಂಬುದನ್ನು ನಿಮಗೆ ಹೇಳ್ತೆವೆ.  

ಮಧುಮೇಹಿಗಳು ಮಾಡ್ಬೇಡಿ ಈ ಆಸನ :
ಪಿಂಚ ಮಯೂರಾಸನ (Pincha Mayurasana) ಮಾಡಬೇಡಿ :
ಮಧುಮೇಹ ರೋಗಿಗಳು ಪಿಂಚ ಮಯೂರಾಸನವನ್ನು ಅಭ್ಯಾಸ ಮಾಡಬಾರದು. ನೀವು ಪಿಂಚ ಮಯೂರಾಸನವನ್ನು ಅಭ್ಯಾಸ ಮಾಡಿದಾಗ  ನಿಮ್ಮ ರಕ್ತದೊತ್ತಡ ತಕ್ಷಣವೇ ಹೆಚ್ಚಾಗುತ್ತದೆ. ಪಿಂಚ ಮಯೂರಾಸನದ ಅಭ್ಯಾಸದ ಸಮಯದಲ್ಲಿ  ನಿಮ್ಮ ತಲೆ ಕೆಳಗಿರುತ್ತದೆ. ಇದರಿಂದಾಗಿ ತಲೆಯ ಕಡೆಗೆ ರಕ್ತದ ಹರಿವು ಹೆಚ್ಚಾಗುತ್ತದೆ. ತಲೆಯ ಕಡೆಗೆ ರಕ್ತದ ಹರಿವು ಹೆಚ್ಚಾಗುವುದರಿಂದ ಮಧುಮೇಹ ರೋಗಿಗಳು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

ಚಕ್ರಾಸನ (Chakrasana) ದಿಂದ ದೂರವಿರಿ : ಚಕ್ರಾಸನ ಮಧುಮೇಹ ರೋಗಿಗಳಿಗೆ ಸೂಕ್ತವೆಂದು ಪರಿಗಣಿಸಲಾಗುವುದಿಲ್ಲ. ಈ ಆಸನವನ್ನು ಅಭ್ಯಾಸ ಮಾಡುವಾಗ ಸೊಂಟವನ್ನು ಸಂಪೂರ್ಣವಾಗಿ ತಿರುಗಿಸಬೇಕಾಗುತ್ತದೆ. ಇದರಿಂದಾಗಿ  ಉಸಿರಾಟ ಮತ್ತು ಹೃದಯ ಬಡಿತ ಹೆಚ್ಚಾಗಬಹುದು. ಮಧುಮೇಹ ರೋಗಿಗಳ ಹೃದಯ ಬಡಿತವು ಇದ್ದಕ್ಕಿದ್ದಂತೆ ಹೆಚ್ಚಾದರೆ  ಅದು ಹೃದಯರಕ್ತನಾಳದ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆಯಿರುತ್ತದೆ. 

ದೀರ್ಘಾವಧಿಯ ಕೋವಿಡ್ ಸೋಂಕಿನಿಂದ ಯುವಜನರಲ್ಲಿ ಹೆಚ್ತಿದೆ ಹೃದಯ ಸ್ತಂಭನ

ಶಿರ್ಷಾಸನ ಅಭ್ಯಾಸ ಬೇಡ : ದೀರ್ಘಕಾಲದಿಂದ ನಿಮಗೆ ಮಧುಮೇಹ ಸಮಸ್ಯೆ ಕಾಡ್ತಿದೆ, ನಿಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟ ತುಂಬಾ ಹೆಚ್ಚಿದೆ ಎಂದಾದ್ರೆ ನೀವು ಶಿರ್ಷಾಸನದಂತಹ ತಲೆಕೆಳಗಾದ ಭಂಗಿಯನ್ನು ಅಭ್ಯಾಸ ಮಾಡುವುದನ್ನು ತಪ್ಪಿಸಬೇಕು. ಶಿರ್ಷಾಸನವನ್ನು ಅಭ್ಯಾಸ ಮಾಡುವಾಗ ನಿಮ್ಮ ತಲೆಯ ಕಡೆಗೆ ರಕ್ತದ ಹರಿವು ಹೆಚ್ಚಾಗುತ್ತದೆ. ತಲೆ ಕೆಳಗಾಗಿ ನಿಲ್ಲುವ ಭಂಗಿಯಲ್ಲಿ ಕಣ್ಣುಗಳ ಸಣ್ಣ ರಕ್ತನಾಳಗಳು ಗಟ್ಟಿಯಾಗುತ್ತವೆ. ಇದು ನಿಮ್ಮ ದೃಷ್ಟಿಗೆ ಪ್ರತಿಕೂಲ ಪರಿಣಾಮ ಬೀರಬಹುದು. ನಿಮ್ಮ ಕಣ್ಣುಗಳು ಕ್ರಮೇಣ ದುರ್ಬಲಗೊಳ್ಳುವ ಸಾಧ್ಯತೆಯಿರುತ್ತದೆ. ಹಾಗಾಗಿ ಸಕ್ಕರೆ ಖಾಯಿಲೆಯುಳ್ಳವರು ಶಿರ್ಷಾಸನ ಅಭ್ಯಾಸ ಮಾಡದಿರುವುದು ಒಳ್ಳೆಯದು. 

ಮಧುಮೇಹಿಗಳಿಗೆ ಬೇಡ ಶಲಭಾಸನ : ಶಲಭಾಸನವನ್ನು ಸಾಮಾನ್ಯ ವ್ಯಕ್ತಿ ಪ್ರತಿ ನಿತ್ಯ ಅಭ್ಯಾಸ ಮಾಡಬೇಕು. ಶಲಭಾಸನದಿಂದ ಅನೇಕ ರೋಗಗಳು ದೂರವಾಗುತ್ತವೆ. ಇದ್ರಿಂದ ಅನೇಕ ಪ್ರಯೋಜನಗಳಿವೆ.  ಆದರೆ  ದೀರ್ಘಕಾಲದಿಂದ ಸಕ್ಕರೆ ಖಾಯಿಲೆ ಸಮಸ್ಯೆ ಹೊಂದಿದ್ದರೆ   ಶಲಭಾಸನವನ್ನು ಅಭ್ಯಾಸ ಮಾಡದಿರುವುದು ಒಳ್ಳೆಯದು. ಶಲಭಾಸನವನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಒಂದ್ವೇಳೆ ಶಲಭಾಸನ ಬೇಕೇಬೇಕು ಎನ್ನುವವರು ಇದನ್ನು ಅಭ್ಯಾಸ ಮಾಡುವ ಮುನ್ನ ಯೋಗ ತಜ್ಞರನ್ನು ಭೇಟಿಯಾಗಿ ಮಾಹಿತಿ ಪಡೆಯುವುದು ಒಳ್ಳೆಯದು. 

ಆಯುರ್ವೇದ ಔಷಧಿ ಲೇಟ್ ಆಗಿ ಪರಿಣಾಮ ಬೀರುತ್ತಾ? ತಪ್ಪು ಕಲ್ಪನೆನಾ ಇದು?

ಸರ್ವಾಂಗಾಸನದ ಸಹವಾಸ ಬೇಡ : ಅನೇಕ ವರ್ಷಗಳಿಂದ ಮಧುಮೇಹ ಖಾಯಿಲೆಯಿದೆ ಎನ್ನುವವರು ಸರ್ವಾಂಗಾಸನ ಅಭ್ಯಾಸ ಮಾಡದಿದ್ದರೆ ಒಳ್ಳೆಯದು. ಸರ್ವಾಂಗಾಸನವನ್ನು ಅಭ್ಯಾಸ ಮಾಡುವಾಗ ತಲೆ ಕೆಳಗಿರುತ್ತದೆ. ಕಾಲು ಮೇಲಕ್ಕಿರುತ್ತದೆ. ಇದ್ರಿಂದ ತಲೆಯ ಕಡೆಗೆ ರಕ್ತದ ಹರಿವು ಹೆಚ್ಚಾಗುತ್ತದೆ. ಮಧುಮೇಹ ರೋಗಿಗಳ ತಲೆಗೆ ರಕ್ತದ ಹರಿವು ಹೆಚ್ಚಾದಾಗ ಅದು ಅವರ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ. 

ಮಧುಮೇಹ ರೋಗಿಗಳು ತಲೆಗೆ ರಕ್ತದ ಹರಿವು ಹೆಚ್ಚಾಗುವ ಯಾವುದೇ ಯೋಗವನ್ನು ಮಾಡಬಾರದು. ಹಾಗೆಯೇ ಯೋಗಾಭ್ಯಾಸ ಶುರು ಮಾಡುವ ಮುನ್ನ ವೈದ್ಯರು ಹಾಗೈ ಯೋಗ ತಜ್ಞರ ಸಲಹೆ ಪಡೆಯಬೇಕು. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?