ಕಿತ್ತಳೆ ಸೀಸನ್ ಇದು, ಸಿಪ್ಪೆಯಿಂದ ನಿಮ್ಮ ತ್ವಚಾ ಸೌಂದರ್ಯ ಹೆಚ್ಚಿಸಿಕೊಳ್ಳಿ!

By Suvarna NewsFirst Published Dec 19, 2022, 5:29 PM IST
Highlights

ಚಳಿಗಾಲದಲ್ಲಿ ಚರ್ಮ(Skin) ಹಾಗೂ ತ್ವಚೆಯ(Face) ಆರೈಕೆ ಬಹಳ ಮುಖ್ಯ. ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಕಿತ್ತಳೆ ಹಣ್ಣಿನ ಸಿಪ್ಪೆ(Orange Peels) ಈ ಸಮಸ್ಯೆಗೆ ಉತ್ತಮ ಮದ್ದಾಗಿದೆ. ಕೊರೆಯುವ ಚಳಿಯಲ್ಲೂ ಹೊಳೆಯುವ ತ್ವಚೆ, ಚರ್ಮ ನಿಮ್ಮದಾಗಬೇಕೆಂದರೆ ಮನೆಯಲ್ಲೇ ಈ ಆರೈಕೆ ಮಾಡಿ ನೋಡಿ.

ಹೊಳೆಯುವ ಚರ್ಮಕ್ಕೆ ವಿಟಮಿನ್ ಸಿ(Vitamin C) ರಕ್ಷಣೆಗೆ ಬರುತ್ತದೆ. ಏಕೆಂದರೆ ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಚರ್ಮವನ್ನು ಪೋಷಿಸುವ ಮತ್ತು ಹೊಳೆಯುವಂತೆ ಮಾಡುವ ಗುಣವಿದೆ. ಕಿತ್ತಳೆ ಹಣ್ಣಿನ ಸಂದರ್ಭದಲ್ಲಿ ಸಿಪ್ಪೆಯು ಕಿತ್ತಳೆಗಿಂತ(Orange) ಹೆಚ್ಚು ವಿಟಮಿನ್ ಸಿ ಹೊಂದಿದೆ. ಅಲ್ಲದೆ ಈ ಸಿಪ್ಪೆಯಲ್ಲಿ ಉತ್ಕರ್ಷಣ ನಿರೋಧಕ ಹೊಂದಿದ್ದು, ನಿಯಮಿತವಾಗಿ ಬಳಸುವುದರಿಂದ ಹೊಳೆಯುವ ಚರ್ಮವನ್ನು ಸಾಧಿಸಲು ಸಹಾಯ ಮಾಡುತ್ತದೆ. 

ಕಿತ್ತಳೆ ಸಿಪ್ಪೆಯು ಬ್ಯಾಕ್ಟೀರಿಯಾ(Bacteria) ವಿರೋಧಿ ಮತ್ತು ಆಂಟಿಮೈಕ್ರೊಬಿಯಲ್(Anti Microbial) ಗುಣಲಕ್ಷಣಗಳನ್ನು ಹೊಂದಿದ್ದು, ಮೊಡವೆ(Acne) ಮತ್ತು ಎಣ್ಣೆಯುಕ್ತ ಚರ್ಮಕ್ಕೆ(Oily Skin) ಉತ್ತಮ ಚಿಕಿತ್ಸೆ ನೀಡುತ್ತದೆ. ಕಿತ್ತಳೆ ಸಿಪ್ಪೆಯು ಮುಖದ ಮೇಲಿನ ಗುರುತುಗಳು ಮತ್ತು ಪಿಗ್ಮೆಂಟೇಶನ್‌ಗಾಗಿ(Pigmentation) ಅದ್ಭುತಗಳನ್ನು ಮಾಡಬಹುದು. ಕಿತ್ತಳೆ ಸಿಪ್ಪೆಯನ್ನು ಪುಡಿ(Powder) ರೂಪದಲ್ಲಿ ಉತ್ತಮವಾಗಿ ಬಳಸಲಾಗುತ್ತದೆ. ಕಾಂತಿಯುತ ಚರ್ಮವನ್ನು ಪಡೆಯಲು ಕಿತ್ತಳೆ ಸಿಪ್ಪೆಯನ್ನು ಹೀಗೆ ಬಳಸಿ. 
ನೈಸರ್ಗಿಕವಾಗಿ ಮುಖದ(Natural Face) ಹೊಳಪನ್ನು ಹೆಚ್ಚಿಸಬಹುದು ಮತ್ತು ಚರ್ಮದ ಬಣ್ಣವನ್ನು ಸುಧಾರಿಸಬಹುದು. ಅಲ್ಲದೆ ಕಿತ್ತಳೆ ಸಿಪ್ಪೆಯಿಂದ ತ್ವರಿತ ಮತ್ತು ಪರಿಣಾಮಕಾರಿ ಫಲಿತಾಂಶಗಳನ್ನು ಪಡೆಯಲು ಹೀಗೆ ಮಾಡಿ.

ಕಿತ್ತಳೆ ಸಿಪ್ಪೆ ಬಿಸಾಕ್ಬೇಡಿ… ಚಹಾ ಮಾಡಿ ಕುಡಿದ್ರೆ ಹಲವು ರೋಗಕ್ಕೆ ಮದ್ದು

1. ಕಿತ್ತಳೆ ಸಿಪ್ಪೆ ಮತ್ತು ಮೊಸರು(Orange Peel and Yogurt)
ಒಂದು ಚಮಚ ಕಿತ್ತಳೆ ಸಿಪ್ಪೆಯ ಪುಡಿ(Orange Peel Powder), ಎರಡು ಚಮಚ ಮೊಸರು(Curd) ಹಾಕಿ ಚಿನ್ನಾಗಿ ಕಲಸಿ. ಇದನ್ನು ಮುಖಕ್ಕೆ ಫೇಸ್ ಪ್ಯಾಕ್(Face Pack) ರೀತಿ ಹಚ್ಚಿ 20 ನಿಮಿಷದ ನಂತರ ತಣ್ಣೀರಿನಲ್ಲಿ ಮುಖ ತೊಳೆಯಿರಿ. ಇದು ತಾಜಾ(Fresh), ಸ್ಪಷ್ಟ(Clear), ಬಿಗಿಯಾಗಿ ಕಾಣುವ ಚರ್ಮವನ್ನು ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ತ್ವರಿತ ಪುನರ್ಯೌವನಗೊಳಿಸುವುದಕ್ಕೆ ಸಹಾಯ ಮಾಡುವುದರಿಂದ ಪಾರ್ಟಿ(Party) ಅಥವಾ ದೊಡ್ಡ ಕಾರ್ಯಕ್ರಮಕ್ಕೂ ಮೊದಲು ಇದನ್ನು ಬಳಸಬಹುದು.

2. ಕಿತ್ತಳೆ ಸಿಪ್ಪೆ, ಜೇನುತುಪ್ಪ, ಅರಿಶಿಣ(Orange Peel, Honey, Turmeric)
ಒಂದು ಚಮಚ ಕಿತ್ತಳೆ ಸಿಪ್ಪೆ ಪುಡಿ, ಚಿಟಿಕೆ ಅರಿಶಿಣ, ಒಂದು ಚಮಚ ನೈಸರ್ಗಿಕ ಜೇನುತುಪ್ಪ(Natural Honey) ಹಾಕಿ ಚೆನ್ನಾಗಿ ಕಲಸಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖ(Face) ಮತ್ತು ಕುತ್ತಿಗೆಗೆ(Neck) ಹಚ್ಚಿ 5 ರಿಂದ 10 ನಿಮಿಷಗಳ ನಂತರ ರೋಸ್ ವಾಟರ್‌ನಲ್ಲಿ(Rose Water) ಮುಖ ತೊಳೆಯಿರಿ. ಇದು ಚರ್ಮದ ಮೇಲಿನ ಟ್ಯಾನ್(Tan) ಅನ್ನು ತೆಗೆದುಹಾಕುತ್ತದೆ. ಜೊತೆಗೆ ಮೊಡವೆ(Acne) ಪೀಡಿತ ಚರ್ಮದ ಮೇಲೆ ಬಳಸಬೇಡಿ. 

3. ಕಿತ್ತಳೆ ಸಿಪ್ಪೆ ಮತ್ತು ನಿಂಬೆ(Orange Peel and Lemon)
ಎರಡು ಚಮಚ ಕಿತ್ತಳೆ ಸಿಪ್ಪೆ ಪುಡಿ, ಚಿಟಿಕೆ ಸುಣ್ಣ, ಶ್ರೀಗಂಧದ ಪುಡಿ(Sandalwood Powder), ನಿಂಬೆ ರಸ(Lemon Juice) ಸೇರಿಸಿ ನಯವಾದ ಪೇಸ್ಟ್(Soft Paste) ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ 30 ನಿಮಿಷದ ನಂತರ ತೊಳೆಯಿರಿ. ಹೀಗೆ ಮಾಡುವುದರಿಂದ ಎಣ್ಣೆಯುಕ್ತ ಮೊಡವೆ(Oily Acne) ಪೀಡಿತ ಚರ್ಮಕ್ಕೆ ಉತ್ತಮವಾಗಿದೆ. ಅಲ್ಲದೆ ಟ್ಯಾನ್ ಅನ್ನು ತೆಗೆದುಹಾಕಿ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ತಾಜಾ ಮೊಡವೆಗಳು ಇದ್ದಲ್ಲಿ ನಿಂಬೆ ರಸ ಮತ್ತು ಕಿತ್ತಳೆ ಸಿಪ್ಪೆ ಪುಡಿಯನ್ನು ಹೆಚ್ಚು ಸೇರಿಸಿ.

ಚಳಿಗಾಲದಲ್ಲಿ ದಿನಕ್ಕೊಂದು ಕಿತ್ತಳೆ ತಿಂದ್ರೆ ಅಜೀರ್ಣದ ಸಮಸ್ಯೆ ಕಾಡಲ್ಲ

ಈ ಸಮಸ್ಯೆಗಳು ದೂರವಾಗುತ್ತವೆ
ವಾರಕ್ಕೆ ಎರಡರಿಂದ ಮೂರು ಬಾರಿ ಕಿತ್ತಳೆ ಸಿಪ್ಪೆಯ ಫೇಸ್ ಮಾಸ್ಕ್ ಹಚ್ಚುವುದರಿಂದ, ಮುಖವು ಸಂಪೂರ್ಣವಾಗಿ ಪೋಷಣೆಯಿಂದ ಉಳಿಯುತ್ತದೆ. ಇದರೊಂದಿಗೆ ಮೊಡವೆ, ವೈಟ್ ಹೆಡ್ಸ್(White Heads), ಬ್ಲ್ಯಾಕ್ ಹೆಡ್ಸ್(Black Heads) ನಂತಹ ಸಮಸ್ಯೆಗಳೂ ದೂರಾಗುತ್ತವೆ. ತ್ವಚೆಯ ಮೇಲೆ ಕಾಣಿಸುವ ವಯಸ್ಸಾಗುವಿಕೆಯನ್ನು(Agning) ಕಡಿಮೆ ಮಾಡುತ್ತದೆ. ಸಣ್ಣ ಗೆರೆಗಳು ದೂರ ಮಾಡಿ ಚರ್ಮದಲ್ಲಿ ಮಂದ ಮತ್ತು ಶುಷ್ಕತೆ ಉಂಟಾಗುವುದಿಲ್ಲ.

click me!