World No Tobacco Day: ತಂಬಾಕಿನಿಂದ ಪ್ರತಿ ವರ್ಷ ಸಾಯುತ್ತಿದ್ದಾರೆ 80 ಲಕ್ಷ ಮಂದಿ !

Published : May 31, 2022, 12:52 PM ISTUpdated : May 31, 2022, 12:53 PM IST
World No Tobacco Day: ತಂಬಾಕಿನಿಂದ ಪ್ರತಿ ವರ್ಷ ಸಾಯುತ್ತಿದ್ದಾರೆ 80 ಲಕ್ಷ ಮಂದಿ !

ಸಾರಾಂಶ

ತಂಬಾಕು ಸೇವನೆಯಿಂದಾಗುವ ಹಾನಿಯ ಕುರಿತು ಜಾಗೃತಿ ಮೂಡಿಸಲು ಮೇ 31ರಂದು ವಿಶ್ವ ತಂಬಾಕು ರಹಿತ ದಿನ (World No Tobacco Day)ವನ್ನು ಆಚರಿಸಲಾಗುತ್ತದೆ. ಧೂಮಪಾನ (Smoking) ಸೇವನೆಯಿಂದ ಪ್ರಪಂಚದಾದ್ಯಂತ ಪ್ರತಿ ವರ್ಷ 80 ಲಕ್ಷಕ್ಕೂ ಹೆಚ್ಚು ಜನರು ಸಾಯುತ್ತಾರೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ. ಈ ದಿನದ ಕುರಿತು ಇನ್ನಷ್ಟು ಮಾಹಿತಿ ತಿಳಿದುಕೊಳ್ಳೋಣ.

ಪ್ರತಿ ವರ್ಷವೂ ಮೇ 31ರಂದು ವಿಶ್ವ ತಂಬಾಕು ನಿಷೇಧ ದಿನ (World No Tobacco Day)ವನ್ನು ಆಚರಿಸಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ತಂಬಾಕು ಸೇವನೆಯಿಂದಾ ಉಂಟಾಗುವ ಹಾನಿಯ ಬಗ್ಗೆ ಜಾಗೃತಿ (Awareness) ಮೂಡಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಪ್ರಪಂಚದಾದ್ಯಂತ ಪ್ರತಿ ವರ್ಷ ತಂಬಾಕು ಸೇವನೆಯಿಂದ 80 ಲಕ್ಷಕ್ಕೂ ಹೆಚ್ಚು ಜನರು ಸಾವಿನ ಮನೆ ಸೇರುತ್ತಾರೆ. ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುವುದರ ಜೊತೆಗೆ ತಂಬಾಕುಯುಕ್ತ ವಸ್ತುಗಳು ಪರಿಸರವನ್ನೂ ಕೆಡಿಸುತ್ತದೆ. 

ವಿಶ್ವ ತಂಬಾಕು ನಿಷೇಧ ದಿನದ ಇತಿಹಾಸ
1987 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಏಪ್ರಿಲ್ 7, 1988 ರಂದು ವಿಶ್ವ ಧೂಮಪಾನ ರಹಿತ ದಿನ ಎಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತು. ಕನಿಷ್ಠ 24 ಗಂಟೆಗಳ ಕಾಲ ತಂಬಾಕು ಸೇವನೆಯನ್ನು ತಡೆಯಲು ಜನರನ್ನು ಪ್ರೇರೇಪಿಸಲು ಈ ಕಾಯ್ದೆಯನ್ನು ಅಂಗೀಕರಿಸಲಾಗಿದೆ. ಒಂದು ವರ್ಷದ ನಂತರ, WHO ಮತ್ತೊಂದು ನಿರ್ಣಯವನ್ನು ಅಂಗೀಕರಿಸಿತು, ಮೇ 31 ಅನ್ನು ವಾರ್ಷಿಕವಾಗಿ 'ವಿಶ್ವ ತಂಬಾಕು ರಹಿತ ದಿನ' ಎಂದು ಆಚರಿಸಲಾಗುತ್ತದೆ ಎಂದು ತಿಳಿಸಿತು.

ಚಟ ಬಿಡದ, ಹಠ ಇರೋ ಗಂಡಸಿಗೆ ಬಂಜೆತನ ಕಾಡೋದು ಕಾಮನ್

2008ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (WHO)ತಂಬಾಕಿನ ಕುರಿತಾದ ಯಾವುದೇ ರೀತಿಯ ಪ್ರಚಾರ ಅಥವಾ ತಂಬಾಕಿನ ಜಾಹೀರಾತುಗಳನ್ನು ನಿಷೇಧಿಸಲು ನಿರ್ಧರಿಸಿತು. ಯುವಕರನ್ನು ಧೂಮಪಾನದತ್ತ ಆಕರ್ಷಿಸುವ ಜಾಹೀರಾತುಗಳು ನಿಷೇಧಿಸಿತು. ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ತಂಬಾಕು ಸೇವನೆಯ ಆರೋಗ್ಯದ ಅಪಾಯಗಳನ್ನು ಎತ್ತಿ ತೋರಿಸಲು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲು ಉತ್ತೇಜಿಸುತ್ತದೆ ಮತ್ತು ಧೂಮಪಾನ ಮತ್ತು ಇತರ ತಂಬಾಕು ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ನೀತಿಗಳನ್ನು ಜಾರಿಗೆ ತರಲು ಸರ್ಕಾರಗಳನ್ನು ಪ್ರೋತ್ಸಾಹಿಸುತ್ತದೆ.

2022ನೇ ಸಾಲಿನ ಧ್ಯೇಯವಾಕ್ಯ 'ಪರಿಸರವನ್ನು ರಕ್ಷಿಸಿ'
2022ನೇ ಸಾಲಿನ ಗುರಿ "ಪರಿಸರವನ್ನು ರಕ್ಷಿಸಿ ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳು 1987ರಲ್ಲಿ ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲು ಒಪ್ಪಿಕೊಂಡವು. ಅಂದಿನಿಂದ ಈ ದಿನವನ್ನು ಪ್ರತಿ ವರ್ಷವೂ ಒಂದು ಸಂಬಂಧಿತ ವಿಷಯದೊಂದಿಗೆ ಗುರುತಿಸಲಾಗುತ್ತದೆ. ಈ ವರ್ಷದ "ಪರಿಸರವನ್ನು ರಕ್ಷಿಸಿ" ಎನ್ನುವ ಗುರಿ ಇಟ್ಟುಕೊಳ್ಳಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, "ಪರಿಸರದ ಮೇಲೆ ತಂಬಾಕು ಉದ್ಯಮದ ಹಾನಿಕಾರಕ ಪರಿಣಾಮ ವಿಶಾಲವಾಗಿದೆ. ನಮ್ಮ ಗ್ರಹವು ಈಗಾಗಲೇ ವಿರಳವಾದ ಸಂಪನ್ಮೂಲ ಮತ್ತು ದುರ್ಬಲ ಪರಿಸರ ವ್ಯವಸ್ಥೆಗಳಿಗೆ ಅನಗತ್ಯ ಒತ್ತಡವನ್ನು ಹೆಚ್ಚಿಸುತ್ತದೆ.

ಧೂಮಪಾನದಿಂದ ಕಣ್ಣಿನ ದೃಷ್ಟಿಯೂ ಹೋಗ್ಬೋದು ಹುಷಾರ್..!

ಪ್ರತಿವರ್ಷ, ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕು ಬಳಕೆಯನ್ನು ನಿಗ್ರಹಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿಭಿನ್ನ ಪ್ರಯತ್ನಗಳನ್ನು ಗುರುತಿಸಿ ಗೌರವಿಸುತ್ದೆ. ಈ ಸಂಬಂಧ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಗುರುತಿಸಿ ಈ ದಿನ ಗೌರವಿಸಲಾಗುತ್ತದೆ. ಈ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ತಂಬಾಕು ರಹಿತ ದಿನ (WNTD) ಪ್ರಶಸ್ತಿ-2022ಕ್ಕೆ ಜಾರ್ಖಂಡ್ ರಾಜ್ಯವನ್ನು ಆಯ್ಕೆ ಮಾಡಿದೆ.

2030ರ ವೇಳೆಗೆ ವಿಶ್ವಸಂಸ್ಥೆಯ ಗುರಿ
ವಿಶ್ವ ತಂಬಾಕು ರಹಿತ ದಿನ 2022ರ ಥೀಮ್ ಪರಿಸರವನ್ನು ರಕ್ಷಿಸಿ ಎಂಬುದಾಗಿದೆ. ಪರಿಸರದ ಮೇಲೆ ತಂಬಾಕು ಉದ್ಯಮವು ಹೆಚ್ಚು ಪರಿಣಾಮವನ್ನು ಬೀರುತ್ತದೆ. ತಂಬಾಕು ಸೇವನೆಯು 2030ರ ವೇಳೆಗೆ ವಿಶ್ವಸಂಸ್ಥೆಯು ಅಳವಡಿಸಿಕೊಂಡ ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿಯನ್ನು ಸಾಧಿಸುವ ಪ್ರಯತ್ನಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಆದರೆ, 2030ರ ಹೊತ್ತಿಗೆ ತಂಬಾಕು-ಸಂಬಂಧಿತ ರೋಗಗಳಿಂದ ಸಾವನ್ನಪ್ಪುವವರ ಸಂಖ್ಯೆಯನ್ನು ಮೂರನೇ ಒಂದು ಭಾಗದಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!
ಒಂದು ಗ್ಲಾಸ್ ನೀರಿನ ಜೊತೆ ಇದನ್ನ ಬೆರೆಸಿದ್ರೆ ಅದೆಷ್ಟೋ ಸಮಸ್ಯೆ ನಿವಾರಣೆಯಾಗುತ್ತೆ