
ಫ್ರಾನ್ಸ್(ಫೆ.18) ಹಲವು ಬಣ್ಣ, ಫ್ಲೇವರ್‌ಗಳಲ್ಲಿ ಕಾಂಡೋಮ್ ಲಭ್ಯವಿದೆ. ಭಾರತದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಕಾಂಡೋಮ್ ಸೌಲಭ್ಯವೂ ಇದೆ. ಆದರೆ ಇದರ ನಡುವೆ ವಿಶ್ವದ ಅತೀ ದುಬಾರಿ ಕಾಂಡೋಮ್ ಬಗ್ಗೆ ಕೇಳಿದ್ದೀರಾ? ಹೌದು ವಿಶ್ವದಲ್ಲಿ ಅತೀ ದುಬಾರಿ ಕಾಂಡೋಮ್ ಹಲವರ ನಿದ್ದಿಗೆಡಿಸಿದೆ. ಕಾರಣ ಒಂದು ಕಾಂಡೋಮ್ ಬೆಲೆ 44,000 ರೂಪಾಯಿ. ಇಷ್ಟೇ ಅಲ್ಲ, ಮತ್ತೊಂದು ಪ್ರಮುಖ ವಿಷಯ ಅಂದರೆ 200 ವರ್ಷದ ಇತಿಹಾಸವಿರುವ ಈ ಕಾಂಡೋಮ್ ಕುರಿತು ರೋಚಕ ಮಾಹಿತಿ ಇಲ್ಲಿದೆ.
200 ವರ್ಷ ಹಳೆಯದು ವಿಶ್ವದ ಅತ್ಯಂತ ದುಬಾರಿ ಕಾಂಡೋಮ್
ವರದಿಗಳ ಪ್ರಕಾರ, ವಿಶ್ವದ ಅತ್ಯಂತ ದುಬಾರಿ ಕಾಂಡೋಮ್ ಸುಮಾರು 200 ವರ್ಷ ಹಳೆಯದು. ಇದನ್ನು 18 ನೇ ಶತಮಾನದಲ್ಲಿ ತಯಾರಿಸಲಾಯಿತು ಎಂದು ವರದಿಗಳು ಹೇಳುತ್ತಿದೆ. ಆ ಕಾಲದಲ್ಲಿ ಕಾಂಡೋಮ್‌ಗಳನ್ನು ಕುರಿ, ಹಂದಿ, ಕರು ಮತ್ತು ಮೇಕೆಗಳಂತಹ ಪ್ರಾಣಿಗಳ ಕರುಳಿನಿಂದ ತಯಾರಿಸಲಾಗುತ್ತಿತ್ತು. ಪ್ರಾಣಿಗಳ ಕರುಳುಗಳನ್ನು ಹಲವು ರೀತಿಯಲ್ಲಿ ಸಂಸ್ಕರಿಸಿ ಕಾಂಡೋಮ್ ತಯಾರಿಸುತ್ತಿದ್ದರು. ಈ ಕಾಂಡೋಮ್‌ಗಳ ಬೆಲೆ ತುಂಬಾ ಹೆಚ್ಚಿದ್ದರಿಂದ ಶ್ರೀಮಂತರು ಮಾತ್ರ ಇವುಗಳನ್ನು ಬಳಸುತ್ತಿದ್ದರು. ಹೀಗಾಗಿ ಜನಸಮಾನ್ಯರು ಕಾಂಡೋಮ್ ಕಡೆ ತಿರುಗಿ ನೋಡುತ್ತಿರಲಿಲ್ಲ.
ಚಾಕ್ಲೇಟ್, ಸ್ಟ್ರಾಬೆರಿ, ಪಾನ್, ಭಾರತದ ಒಂದೊಂದು ರಾಜ್ಯದ ಕಾಂಡೋಮ್ ಫ್ಲೇವರ್ ಎಲ್ಲರಿಗಿಂತ ಭಿನ್ನ
ವಿಶ್ವದ ಅತ್ಯಂತ ದುಬಾರಿ ಕಾಂಡೋಮ್‌ನ ಬೆಲೆ ಎಷ್ಟು?
ವಿಶ್ವದ ಅತ್ಯಂತ ದುಬಾರಿ ಕಾಂಡೋಮ್‌ನ ಬೆಲೆ ಸುಮಾರು 460 ಪೌಂಡ್‌ಗಳು ಅಂದರೆ ಸುಮಾರು 44,000 ರೂಪಾಯಿಗಳು. ಇದನ್ನು ಕುರಿಯ ಕರುಳಿನಿಂದ ವಿಶೇಷವಾಗಿ ತಯಾರಿಸಲಾಗಿತ್ತು. 19 ಸೆಂ.ಮೀ (7 ಇಂಚು) ಉದ್ದದ ಈ ಕಾಂಡೋಮ್ ಫ್ರಾನ್ಸ್‌ನಲ್ಲಿ ಪತ್ತೆಯಾಗಿತ್ತು. 200 ವರ್ಷ ಹಳೆಯ ಕಾಂಡೋಮ್ ಪತ್ತೆಯಾದ ಬೆನ್ನಲ್ಲೇ ಭಾರಿ ಸುದ್ದಿಯಾಗಿತ್ತು. ಇಷ್ಟೇ ಅಲ್ಲ ಈ ಕಾಂಡೋಮ್‌ನ್ನು ಹರಾಜು ಹಾಕಲಾಯಿತು. ಆಮ್‌ಸ್ಟರ್‌ಡ್ಯಾಮ್‌ನ ಖರೀದಿದಾರರೊಬ್ಬರು ಅತಿ ಹೆಚ್ಚು ಬಿಡ್ ಮೂಲಕ ಅಂದರೆ 44,000 ರೂಪಾಯಿಗೆ ಖರೀದಿಸಿದ್ದಾರೆ.
ಹರಾಜು ಹಾಕುವ ಮೊದಲು ವಿವಿಧ ವಸ್ತುಸಂಗ್ರಹಾಲಯಗಳಲ್ಲಿ ಇಡಲಾಗಿತ್ತು
ಹರಾಜು ವೇದಿಕೆ Catawiki ಪ್ರಕಾರ, ಕುರಿಯ ಕರುಳಿನಿಂದ ಮಾಡಿದ ವಿಶ್ವದ ಅತ್ಯಂತ ಹಳೆಯ ಮತ್ತು ದುಬಾರಿ ಕಾಂಡೋಮ್ ಗಮನಾರ್ಹ ಕಲಾಕೃತಿ. ಇದು ಗರ್ಭನಿರೋಧಕದ ವಿಕಾಸ ಮತ್ತು ನಮ್ಮ ಇತಿಹಾಸದ ಬಗ್ಗೆ ಬೆಳಕು ಚೆಲ್ಲುತ್ತದೆ. ಹರಾಜಿನ ಸಮಯದಲ್ಲಿ, ವಿವಿಧ ವಸ್ತುಸಂಗ್ರಹಾಲಯಗಳು ಈ ವಿಶಿಷ್ಟ ಕಾಂಡೋಮ್ ಅನ್ನು ಪ್ರದರ್ಶಿಸಲು ಹೆಚ್ಚಿನ ಆಸಕ್ತಿ ತೋರಿಸಿದ್ದವು.
ವಿಶ್ವದಲ್ಲಿ ಕಾಂಡೋಮ್‌ಗಳನ್ನು ಹೆಚ್ಚು ಬಳಸುವ ದೇಶ ಯಾವುದು?
Statista ನಡೆಸಿದ ಸಮೀಕ್ಷೆಯ ಪ್ರಕಾರ, ಕಾಂಡೋಮ್ ಬಳಕೆಯಲ್ಲಿ ಬ್ರೆಜಿಲ್ ಮುಂಚೂಣಿಯಲ್ಲಿದೆ. ಅಲ್ಲಿನ ಶೇ.65 ರಷ್ಟು ಜನರು ಕಾಂಡೋಮ್‌ಗಳನ್ನು ಬಳಸುತ್ತಾರೆ ಎನ್ನಲಾಗಿದೆ. ನಂತರ ದಕ್ಷಿಣ ಆಫ್ರಿಕಾ, ಥೈಲ್ಯಾಂಡ್, ಇಂಡೋನೇಷ್ಯಾ, ಜಪಾನ್ ಮತ್ತು ಚೀನಾದಂತಹ ದೇಶಗಳು ಬರುತ್ತವೆ.
ಭಾರತದಲ್ಲಿ ಕಾಂಡೋಮ್‌ಗಳ ಬಳಕೆ ಎಷ್ಟಿದೆ?
ವರದಿಗಳ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ಸರಾಸರಿ 33.07 ಕೋಟಿ ಕಾಂಡೋಮ್‌ಗಳನ್ನು ಖರೀದಿಸಲಾಗುತ್ತದೆ. ಅತಿ ಹೆಚ್ಚು ಬಳಕೆಯನ್ನು ಹೊಂದಿರುವ ರಾಜ್ಯ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ ಹವೇಲಿ. ಅಂದಾಜಿನ ಪ್ರಕಾರ, ಇಲ್ಲಿ ಪ್ರತಿ 10 ಸಾವಿರ ದಂಪತಿಗಳಲ್ಲಿ 993 ದಂಪತಿಗಳು ಸಂಭೋಗದ ಸಮಯದಲ್ಲಿ ಕಾಂಡೋಮ್‌ಗಳನ್ನು ಬಳಸುತ್ತಾರೆ. ನಂತರ ಆಂಧ್ರಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ಬರುತ್ತವೆ.
ಸಂಚಲನ ಸೃಷ್ಟಿಸುತ್ತಿದೆ ಡಿಜಿಟಲ್ ಕಾಂಡೋಮ್; ಇದು ಹೇಗೆ ಕೆಲಸ ಮಾಡುತ್ತೆ? ಬಳಸೋದೇಗೆ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.