World Heart Day : ಕಸ್ತೂರಿ ಬಾ, ಮಣಿಪಾಲ ಆಸ್ಪತ್ರೆಯಲ್ಲಿ ಉಚಿತ ಹೃದಯ ತಪಾಸಣೆ ಶಿಬಿರ

By Ravi Janekal  |  First Published Sep 29, 2022, 3:34 PM IST

ಸೆಪ್ಟೆಂಬರ್ 29 ಪ್ರತಿ ವರ್ಷ 'ವಿಶ್ವ ಹೃದಯ ದಿನ'ವನ್ನಾಗಿ ಆಚರಿಸಲಾಗುತ್ತದೆ.  ಹೃದಯ ರಕ್ತನಾಳದ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ, ಈ ಸಮಸ್ಯೆಯು ಪ್ರಪಂಚದ ಎಲ್ಲಾ ಸಾಂಕ್ರಾಮಿಕವಲ್ಲದ ರೋಗಗಳ ಪಾಲಿನ  ಅರ್ಧದಷ್ಟಿದೆ. 


ಉಡುಪಿ (ಸೆ.29) : ವಿಶ್ವ ಹೃದಯ ದಿನದ 2022 ರ ಘೋಷ ವಾಕ್ಯ 'ಪ್ರತಿ ಹೃದಯಕ್ಕಾಗಿ ಹೃದಯವನ್ನು ಬಳಸಿ' ವಿಶ್ವ ಹೃದಯ ದಿನದ ಅಂಗವಾಗಿ ಮಣಿಪಾಲದ ಕಸ್ತೂರಿ ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ವಿಭಾಗ, ಹೃದಯರಕ್ತನಾಳ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸಾ ವಿಭಾಗ  ಮತ್ತು ಸಮುದಾಯ ವೈದ್ಯಕೀಯ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಹೃದಯದ ಆರೋಗ್ಯದ ಅರಿವು ಮೂಡಿಸಲು  ಕಸ್ತೂರಿ ಬಾ ಆಸ್ಪತ್ರೆ, ಮಣಿಪಾಲದಲ್ಲಿ ಹೃದಯ ಆರೋಗ್ಯ ಜಾಗೃತಿ ಕಲಾ ಶಿಲ್ಪ ಅನಾವರಣ ಮತ್ತು ಸಾರ್ವಜನಿಕರಿಗೆ ಉಚಿತ ಹೃದಯ ತಪಾಸಣಾ  ಶಿಬಿರ ಆಯೋಜಿಸಲಾಗಿತ್ತು.

World Heart Day 2022: ಕಾಲೇಜು ವಿದ್ಯಾರ್ಥಿಗಳಿಗೆ ಹೃದಯಾಘಾತ ತಡೆ ತರಬೇತಿ?

Latest Videos

undefined

ಅಬ್ದುಲ್ ಅಹ್ಮದ್ ಐಪಿಎಸ್, ಪೊಲೀಸ್ ಅಧೀಕ್ಷಕರು- ಕರಾವಳಿ ಭದ್ರತಾ ಪೊಲೀಸ್, ಕರ್ನಾಟಕ ಇವರು ಹೃದಯ ಆರೋಗ್ಯ ಜಾಗೃತಿ ಶಿಲ್ಪವನ್ನು ಅನಾವರಣಗೊಳಿಸಿದರು ಮತ್ತು ಅವರು ಮಾತನಾಡುತ್ತಾ , "ನಮ್ಮನ್ನು ಅವಲಂಬಿಸಿ ಬಹಳಷ್ಟು ಜನ ನಮ್ಮ ಕುಟುಂಬದಲ್ಲಿ ಇರುತ್ತಾರೆ.  ಅಕಾಲಿಕ ಮರಣ ಸಾಕಷ್ಟು ತೊಂದರೆಯನ್ನು ಉಂಟು ಮಾಡುತ್ತದೆ. ಆದ್ದರಿಂದ ಕಾಲ ಕಾಲಕ್ಕೆ ತಕ್ಕಂತೆ ನಮ್ಮ ಹೃದಯ ತಪಾಸಣೆ ಮಾಡುವುದರ ಮೂಲಕ ನಮ್ಮ ಹೃದಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು" ಎಂದರು.

ಡಾ ಶರತ್ ಕುಮಾರ್ ರಾವ್(Dr.Sharath Kumar Rao), ಡೀನ್-ಕೆಎಂಸಿ(KMC) ಇವರು ಹೃದಯ ಆರೋಗ್ಯ ತಪಾಸಣಾ ಪ್ಯಾಕೇಜುಗಳನ್ನು ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾ 'ಹೃದಯವು ವ್ಯಕ್ತಿ ಜೀವಂತವಾಗಿರಲು ಒಂದು ಯಂತ್ರದ ತರಹ ಕೆಲಸ ಮಾಡುತ್ತದೆ  ಮತ್ತು ಇದು ದೇಹದ  ಎಲ್ಲ ಜೀವಕೋಶಗಳಿಗೆ  ರಕ್ತ , ಆಮ್ಲಜನಕ ಮತ್ತು  ಪೌಷ್ಟಿಕಾಂಶಗಳನ್ನು ಪೂರೈಕೆ ಮಾಡುವುದರೊಂದಿಗೆ ರಕ್ತವನ್ನು ಶುದ್ದೀಕರಿಸುವ ಕಾರ್ಯವನ್ನು ಮಾಡುತ್ತದೆ. ಇಂತಹ ಬಹು ಮೂಲ್ಯ ಅಂಗವನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು  ಎಂದರು.

ಈ ಸಂದರ್ಭದಲ್ಲಿ  ಮಾತನಾಡಿದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ(Dr.Avinash Shetty) ಅವರು, ಸಾರ್ವಜನಿಕರ ಬೇಡಿಕೆ ಮೇರೆಗೆ ನಾವು ವಿಶೇಷ ಹೃದಯ ತಪಾಸಣೆ ಪ್ಯಾಕೇಜ್ ಅನ್ನು ರೂ 3000 ಮತ್ತು ಸುಧಾರಿತ ಹೃದಯ ತಪಾಸಣೆ ಪ್ಯಾಕೇಜ್ ರೂ 4000 ನಲ್ಲಿ ಪರಿಚಯಿಸುತ್ತಿದ್ದೇವೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು' ಎಂದರು. ಮುಖ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್(Dr. Anand Venugopala),  ಮಲ್ಪೆ ಭದ್ರತಾ ಪೊಲೀಸ್ ನಿರೀಕ್ಷಕ ಡಾ ಶಂಕರ್ ಎಸ್ ಕೆ(Dr.Shankar S.K.) ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ವಿಶ್ವ ಹೃದಯ ದಿನ(World Heart Day)ದ ಕುರಿತು ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್(Dr.Ashwini Kumar) ಅವಲೋಕನ ನೀಡಿದರು. ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ ಪದ್ಮಕುಮಾರ್ ಸ್ವಾಗತಿಸಿ, ಹೃದ್ರೋಗ ತಪಾಸಣೆ ಪ್ಯಾಕೇಜ್‌ಗಳ ಕುರಿತು ಮಾಹಿತಿ ನೀಡಿದರು. ಹೃದಯನಾಳ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಗಣೇಶ್ ಕಾಮತ್ ವಂದಿಸಿದರು. 

World Heart Day: ಸ್ತಂಭನವಾಗದಂತೆ ಇರಿ ಜೋಪಾನ

ಶ್ರೀನಾಥ್ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಪರಿಸರ ಸ್ನೇಹಿ ವಸ್ತುಗಳಿಂದ ಶಿಲ್ಪವನ್ನು ತಯಾರಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಉಚಿತವಾಗಿ , ಮಧುಮೇಹ , ರಕ್ತದ ಒತ್ತಡ, ಇ ಸಿ ಜಿ ಮತ್ತುವೈದ್ಯರೊಂದಿಗೆ ಸಮಾಲೋಚನೆ  ನಡೆಸಲಾಯಿತು.  ಡಾ ಈಶ್ವರಿ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು.

click me!