World Blood Donor Day 2022: ಭಾರತದಲ್ಲಿ ರಕ್ತದ ಕೊರತೆಯಿಂದ ಹೆಚ್ಚುತ್ತಿದೆ ಸಾವಿನ ಪ್ರಮಾಣ

By Suvarna News  |  First Published Jun 14, 2022, 10:13 AM IST

ಪ್ರತಿ ದಿನ ಸಮಯಕ್ಕೆ ಸರಿಯಾಗಿ ರಕ್ತ ಲಭಿಸದೆ ಅದೆಷ್ಟೋ ಮಂದಿ ಸಾವನ್ನಪ್ಪುತ್ತಾರೆ. ಹೀಗಾಗಿ ರಕ್ತದಾನದ ಮಹತ್ವವನ್ನು ಜನರಿಗೆ ತಿಳಿಯಪಡಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆ (WHO)ಪ್ರತಿ ವರ್ಷ ಜೂನ್‌ 14ರಂದು ವಿಶ್ವ ರಕ್ತದಾನಿಗಳ ದಿನ (World Blood Donor Day)ವನ್ನು ಆಚರಿಸುತ್ತದೆ. ಈ ದಿನ ಆಚರಿಸಲು ಆರಂಭಿಸಿದ್ದು ಯಾವಾಗ ? 2022 ವಿಶ್ವ ರಕ್ತದಾನಿಗಳ ದಿನದ ಥೀಮ್ (Theme) ಏನು ತಿಳಿಯೋಣ.


ದಾನಗಳಲ್ಲಿ ರಕ್ತದಾನವನ್ನು ಸಹ ಬಹಳ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಮಾನವೀಯತೆಯ ಈ ಭಾವನೆಯನ್ನು ಗೌರವಿಸಲು ಪ್ರತಿ ವರ್ಷ ಜೂನ್ 14 ಅನ್ನು ವಿಶ್ವ ರಕ್ತದಾನಿಗಳ ದಿನ (World Blood Donor Day)ವನ್ನಾಗಿ ಆಚರಿಸಲಾಗುತ್ತದೆ. ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿ, ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಬ್ಲಡ್ ಡೋನರ್ ಆರ್ಗನೈಸೇಶನ್ ಮತ್ತು ಇಂಟರ್ನ್ಯಾಷನಲ್ ಸೊಸೈಟಿ ಆಫ್ ಬ್ಲಡ್ ಟ್ರಾನ್ಸ್‌ಫ್ಯೂಷನ್ ಸಹಯೋಗದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಈ ದಿನವನ್ನು ಸ್ಮರಿಸುತ್ತದೆ.   ಈ ವರ್ಷ ವಿಶ್ವ ರಕ್ತದಾನಿಗಳ ದಿನದ ಆತಿಥೇಯರು ಮೆಕ್ಸಿಕೋ (Mexico) ನಗರವಾಗಿದ್ದು, ಜೂನ್ 14, 2022ರಂದು ಅದರ ರಾಷ್ಟ್ರೀಯ ರಕ್ತ ಕೇಂದ್ರದಲ್ಲಿ ಜಾಗತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ವಿಶ್ವ ರಕ್ತದಾನಿಗಳ ದಿನ 2022ರ ಥೀಮ್‌
ವರ್ಲ್ಡ್‌ ಬ್ಲಡ್ ಡೋನರ್ ಡೇ ದಿನವನ್ನು ಪ್ರತಿ ವರ್ಷವೂ ಒಂದೊಂದು ಥೀಮ್‌ (Theme) ಇಟ್ಟುಕೊಂಡು ಆಚರಿಸಲಾಗುತ್ತದೆ. ಈ ಬಾರಿ 'ಇತರರಿಗಾಗಿ ಬದುಕಿ, ರಕ್ತ ನೀಡಿ, ಜೀವವನ್ನೇ ಹಂಚಿಕೊಳ್ಳಿ' ಎಂಬ ಸಂದೇಶದೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ. ಅಪಘಾತ, ಕ್ಯಾನ್ಸರ್‌, ಹೃದಯಸಂಬಂಧಿ ಸಮಸ್ಯೆಗಳು, ಹೆರಿಗೆ ಸಂಬಂಧಿ ಚಿಕಿತ್ಸೆಯ ವೇಳೆ ವ್ಯಾಪಕವಾಗಿ ರಕ್ತ ಬೇಕಾಗುತ್ತದೆ. ಆದರೆ, ಭಾರತವೂ ಸೇರಿದಂತೆ ಇಡೀ ವಿಶ್ವದಾದ್ಯಂತ ಬೇಡಿಕೆಗೆ ತಕ್ಕಂತೆ ರಕ್ತದ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಬದುಕುವ ಎಲ್ಲ ಅವಕಾಶಗಳಿದ್ದರೂ ಎಷ್ಟೋ ಮಂದಿ ರಕ್ತದ ಕೊರತೆಯಿಂದಾಗಿ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿವಿಶ್ವದ ಬಹುತೇಕ ರಾಷ್ಟ್ರಗಳ ಸರಕಾರಗಳು, ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಸಂಘ ಸಂಸ್ಥೆಗಳು ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ (Awareness) ಮೂಡಿಸಲು ಪ್ರಯತ್ನಿಸುತ್ತಿವೆ. 

Tap to resize

Latest Videos

World Blood Donor Day: 106 ಬಾರಿ ರಕ್ತ ನೀಡಿದ ಬೆಂಗಳೂರು ಮಹಿಳೆ!

ವಿಶ್ವ ರಕ್ತದಾನಿಗಳ ದಿನದ ಮಹತ್ವ
ಅಗತ್ಯವಿರುವ ರೋಗಿಗಳಿಗೆ ರಕ್ತ ಲಭಿಸುವಂತೆ ಮಾಡುವುದು, ಅದರ ಸುರಕ್ಷತೆ ಮತ್ತು ಎಲ್ಲೆಡೆ ರಕ್ತ ಲಭ್ಯತೆ ಇರುವಂತೆ ನೋಡಿಕೊಳ್ಳವುದು. ರಕ್ತದಾನ ಬಗ್ಗೆ ಜಾಗೃತಿ ಮೂಡಿಸುವುದು. ಈ ದಿನದ ಮೂಲಕ ರಕ್ತ ದಾನಿಗಳಿಗೆ ಕೃತಜ್ಞತೆ ಸಲ್ಲಿಸುವುದು  ವಿಶ್ವ ರಕ್ತದಾನಿಗಳ ದಿನಾಚರಣೆಯ ಉದ್ದೇಶವಾಗಿದೆ. ರಕ್ತದಾನಿಗಳಿಂದ ಪ್ರತಿ ವರ್ಷ ಕೋಟ್ಯಂತರ ಜನರು ಬದುಕು ಕಂಡಿಕೊಂಡಿದ್ದಾರೆ. 

ಜೂನ್‌.14ರಂದೇ ಆಚರಿಸುವುದು ಯಾಕೆ ? 
ವಿಶ್ವ ಆರೋಗ್ಯ ಸಂಸ್ಥೆಯು ರಕ್ತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿಪ್ರತಿ ವರ್ಷ ಜೂನ್‌ 14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತದೆ. ಇದಲ್ಲದೆ, ಆಸ್ಟ್ರಿಯಾ ವೈದ್ಯ ಕಾರ್ಲ್ ಲ್ಯಾಂಡ್‌ಸ್ಟೇನರ್‌ ಅವರು ಮಾನವನ ರಕ್ತದ ಮೊದಲ ಮೂರು ಗ್ರೂಪ್‌ಗ್ಳನ್ನು ಸಂಶೋಧಿಸಿದರು. ಈ ಹಿನ್ನೆಲೆಯಲ್ಲೂ ಅವರ ಜನ್ಮದಿನವಾದ ಜೂನ್‌ 14 ಅನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದಲ್ಲಿಅಕ್ಟೋಬರ್‌ 1ಅನ್ನು ಪ್ರತಿ ವರ್ಷ ರಾಷ್ಟ್ರೀಯ ರಕ್ತದಾನ ದಿನವನ್ನಾಗಿ ಆಚರಿಸಲಾಗುತ್ತದೆ.

ಹೈ ಬ್ಲಡ್ ಪ್ರೆಷರ್ ಸಮಸ್ಯೆ ಹೊಂದಿರೋರು ಈ ಭಂಗಿಯಲ್ಲಿ ನಿದ್ರಿಸಿ

ಭಾರತದಲ್ಲಿ ರಕ್ತದ ಕೊರತೆ ಹೆಚ್ಚು
ಭಾರತದಲ್ಲಿ ಪ್ರತಿ ವರ್ಷ 5 ಕೋಟಿ ಯೂನಿಟ್‌ ರಕ್ತ ಬೇಕಾಗುತ್ತದೆ. ಆದರೆ, ಕೇವಲ 2.5 ಕೋಟಿ ಯೂನಿಟ್‌ ಮಾತ್ರ ರಕ್ತ ಲಭ್ಯವಾಗುತ್ತದೆ. ದೇಶದಲ್ಲಿ ಪ್ರತಿ 2 ಸೆಕೆಂಡ್‌ಗೆ ಯಾರಿಗಾದರೂ ರಕ್ತದ ಅಗತ್ಯ ಬಿದ್ದೇ ಬೀಳುತ್ತದೆ. ಪ್ರತಿ ವರ್ಷ ಅಂದಾಜು 3 ಕೋಟಿ ರಕ್ತದ ಘಟಕಗಳನ್ನು ಪೂರಣ ಮಾಡಲಾಗುತ್ತದೆ. ರಕ್ತಪೂರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗಳಿಂದ ಹೆಚ್ಚಾಗಿ ಬೇಡಿಕೆ ಬರುವುದು ಒ ಗುಂಪಿನ ರಕ್ತಕ್ಕೆ ಸಿಕ್ಲ್‌ ಸೆಲ್‌ ರೋಗಿ(ರಕ್ತಕ್ಕೆ ಸಂಬಂಧಿಸಿದ ಕಾಯಿಲೆ)ಗಳಿಗೆ ಅವರ ಜೀವನಪರ್ಯಂತ ರಕ್ತಪೂರಣ ಮಾಡಲೇಬೇಕು. ಪ್ರತಿ ವರ್ಷ ಭಾರತದಲ್ಲಿಅಂದಾಜು 10 ಲಕ್ಷ ಜನರಿಗೆ ಕ್ಯಾನ್ಸರ್‌ ಪತ್ತೆಯಾಗುತ್ತದೆ. ಈ ಜನರ ಪೈಕಿ ಹೆಚ್ಚಿನವರಿಗೆ ಕೆಲವೊಮ್ಮೆ ಆಗಾಗ, ದಿನನಿತ್ಯ, ಕಿವೋಥೆರಪಿ ಮಾಡುವಾಗ ರಕ್ತಪೂರಣ ಮಾಡಲೇಬೇಕಾಗುತ್ತದೆ.

click me!