ಒಬ್ಬರಿಗೆ ಕತ್ತಿಗೆ ನೋವು,ಇನ್ನೊಬ್ಬರಿಗೆ ಸೊಂಟ ನೋವು. ಮತ್ತೊಬ್ಬರಿಗೆ ಇಡೀ ದೇಹವೇ ನೋವು. ಕೇಳಿದ್ರೆ, ಕುಳಿತು ಕೆಲಸ ಮಾಡ್ತಿವಲ್ಲ. ಹಾಗಾಗಿ ಅಂತಾರೆ. ನೋವು ಬರ್ತಿರೋದು ಕುಳಿತು ಕೆಲಸ ಮಾಡ್ತಿರೋದಕ್ಕೆ ಅಲ್ಲ,ಸರಿಯಾಗಿ ಕುಳಿತು ಕೆಲಸ ಮಾಡದೆ ಇರೋದಕ್ಕೆ.
ಕೊರೊನಾ (Corona) ಜನರ ಜೀವನವನ್ನು, ಆರ್ಥಿಕ ಪರಿಸ್ಥಿತಿಯನ್ನು ತಲೆಕೆಳಗಾಗಿಸಿದೆ. ಇದರ ದುಷ್ಪರಿಣಾಮವನ್ನು ಒಂದಲ್ಲ ಒಂದು ರೀತಿ ಎಲ್ಲರೂ ಅನುಭವಿಸುತ್ತಿದ್ದಾರೆ. ಜನರ ಜೀವನ ಶೈಲಿ(Lifestyle)ಯೇ ಬದಲಾಗಿಹೋಗಿದೆ. ಎಷ್ಟರ ಮಟ್ಟಿಗೆ ಕೊರೊನಾ ನಮ್ಮನ್ನು ಪರೋಕ್ಷವಾಗಿ ಕಾಡಿದೆ ಎಂದರೆ ಜನರು ಕುಳಿತುಕೊಳ್ಳುವ ಸರಿಯಾದ ಭಂಗಿಯನ್ನೇ ಮರೆತು ಬಿಟ್ಟಿದ್ದಾರೆ. ಇದರಿಂದ ಬೆನ್ನು (Back), ಶರೀರ, ಕಾಲು (Foot), ತಲೆ (Head), ಕುತ್ತಿಗೆ (Neck)ಯಲ್ಲಿ ನೋವು (Pain ) ಮುಂತಾದವು ಪ್ರತಿಶತ 70-80 ರಷ್ಟು ಹೆಚ್ಚಾಗಿದೆ. ಇಂದು ಈ ಸಮಸ್ಯೆಯನ್ನು ಮಕ್ಕಳು (Children), ಯುವಕರು, ನೌಕರರು ಹೀಗೆ ಎಲ್ಲರೂ ಅನುಭವಿಸುತ್ತಿದ್ದಾರೆ. ಆರೋಗ್ಯ (Health ) ತಜ್ಞರು ಹೇಳುವ ಪ್ರಕಾರ ಇಂದು ಅನೇಕ ಜನರು ಸ್ಪಾಂಡಿಲೈಟಿಸ್, ಸಂಧಿವಾತ, ಸ್ಲಿಪ್ ಡಿಸ್ಕ್, ಬೊಜ್ಜು ಮತ್ತು ಮೊಣಕಾಲು ನೋವು ಮುಂತಾದ ದೈಹಿಕ ನೋವನ್ನು ಅನುಭವಿಸುತ್ತಿದ್ದಾರೆ ಮತ್ತು ಮಹಿಳೆಯರಲ್ಲಿ ಪಿಸಿಒಡಿ (PCOD ) ಸಮಸ್ಯೆಗಳು ಉಂಟಾಗುತ್ತಿವೆ. ನಮ್ಮ ಬದಲಾದ ಜೀವನಶೈಲಿಯಿಂದ ಮತ್ತು ನಮ್ಮ ಕುಳಿತುಕೊಳ್ಳುವ (Posture) ಭಂಗಿಯಿಂದಲೇ ಇವೆಲ್ಲ ಸಮಸ್ಯೆಗಳು ಆರಂಭವಾಗಿದೆ.
ನಮ್ಮ ಶರೀರ ಮತ್ತು ಮನಸ್ಸಿ (Mind)ಗೆ ನಿಕಟ ಸಂಬಂಧವಿದೆ. ಅದರಿಂದ ಮನಸ್ಸಿಗೆ ನೋವಾದರೆ ಶರೀರಕ್ಕೆ ಹಾಗೂ ಶರೀರಕ್ಕೆ ನೋವಾದರೆ ಅದು ಮನಸ್ಸಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಕುಳಿತುಕೊಳ್ಳುವ ಭಂಗಿಯಿಂದ ಒತ್ತಡ (Stress )ಹೆಚ್ಚಿ ಅದರಿಂದ ಸ್ನಾಯು(Muscle)ಗಳು ಮತ್ತು ಮೂಳೆಗಳು ಸಂಕುಚಿತಗೊಳ್ಳುತ್ತವೆ. ಇದರಿಂದ ಬೆನ್ನು, ಸೊಂಟ, ಕಾಲು, ಮೊಣಕಾಲು, ಹಿಮ್ಮಡಿಯ ನೋವು ಮತ್ತು ಕೈ ತನ್ನ ಸೆನ್ಸೇಷನ್ ಅನ್ನು ಕಳೆದುಕೊಳ್ಳುತ್ತದೆ.
undefined
ಈ ಭಂಗಿಯಲ್ಲಿ ಕುಳಿತುಕೊಳ್ಳುವುದು ತಪ್ಪು
- ಕುತ್ತಿಗೆ ಮತ್ತು ತಲೆಯನ್ನು ತಗ್ಗಿಸಿ ಕುಳಿತುಕೊಳ್ಳುವುದು ಸರಿಯಾದ ಭಂಗಿಯಲ್ಲ. ಆದರೆ ಈಗ ಬಹತೇಕ ಮಂದಿ ಹೀಗೇ ಕುಳಿತುಕೊಳ್ಳುತ್ತಾರೆ. ಇದಕ್ಕೆ ಬಹುಮುಖ್ಯ ಕಾರಣ ಮೊಬೈಲ್ (Mobile). ಬಹುತೇಕ ಎಲ್ಲರ ಕೈನಲ್ಲೂ ದಿನದ 12 ಗಂಟೆ ಮೊಬೈಲ್ ಇರುತ್ತದೆ. ಮೊಬೈಲ್ ಆಪರೇಟ್ ಮಾಡುವವರು ಕುತ್ತಿಗೆ ಮತ್ತು ತಲೆಯನ್ನು ತಗ್ಗಿಸಿರುತ್ತಾರೆ. ವಿಡಿಯೋ ಗೇಮ್ (Video Game), ಸಾಮಾಜಿಕ ಜಾಲತಾಣ (Social networking site) ವೀಕ್ಷಣೆ ಸೇರಿದಂತೆ ಕಚೇರಿ (Office) ಕೆಲಸವನ್ನೂ ಮೊಬೈಲ್ ನಲ್ಲಿ ಮಾಡುವವರೇ ಹೆಚ್ಚು. ಇದರಿಂದ ಸರ್ವೈಕಲ್ ಸಮಸ್ಯೆ ಉಂಟಾಗುತ್ತದೆ.
- ವರ್ಕ್ ಫ್ರಂ ಹೋಮ್ (Work From Home )ಈಗ ಸಾಮಾನ್ಯವಾಗಿದೆ. ಮನೆಯಲ್ಲಿ ಸರಿಯಾದ ಖುರ್ಚಿ, ಮೇಜಿನ ವ್ಯವಸ್ಥೆ ಅನೇಕರಿಗೆ ಇಲ್ಲ. ಹಾಗಾಗಿ ಕುಳಿತುಕೊಳ್ಳುವ ಭಂಗಿ ಸರಿಯಾಗಿರುವುದಿಲ್ಲ. ಖುರ್ಚಿಯಲ್ಲಿ ಸರಿಯಾಗಿ ಕುಳಿತುಕೊಳ್ಳುವುದಿಲ್ಲ.ಖುರ್ಚಿಯಲ್ಲಿ ಮಲಗಿ ಲ್ಯಾಪ್ ಟಾಪ್ (Lap top )ಆಪರೇಟ್ ಮಾಡುವುದು ಸೂಕ್ತವಲ್ಲ. ಇದು ಕೂಡ ಸೊಂಟನೋವಿಗೆ ಕಾರಣವಾಗುತ್ತದೆ.
- ಇನ್ನೂ ಕೆಲವರು ಹಾಸಿಗೆ(Bed)ಯಲ್ಲೇ ಲ್ಯಾಪ್ ಟಾಪ್ ಇಟ್ಟು ಕೆಲಸ ಮಾಡುತ್ತಾರೆ. ಮಲಗಿದ ಭಂಗಿಯಲ್ಲಿ ಕೆಲಸ ಮಾಡುತ್ತಾರೆ.ಮಕ್ಕಳ ಪಾಠ ಕೂಡ ಇದೇ ರೀತಿಯಲ್ಲಿ ನಡೆಯುತ್ತದೆ. ಇದರಿಂದ ದೈಹಿಕ ವ್ಯಾಯಾಮ ಕಡಿಮೆಯಾಗಿ ನರ್ವ್ ಕಂಪ್ರೆಶನ್ ಹೆಚ್ಚುತ್ತದೆ.
- ಕೆಲವರು ಟೇಬಲ್ (Table) ಮೇಲೆ ಕುಳಿತು ಕುತ್ತಿಗೆಯನ್ನು ಪೂರ್ತಿಯಾಗಿ ಬಗ್ಗಿಸುತ್ತಾರೆ. ಇದರಿಂದ ಸೊಂಟ ಮತ್ತು ಬೆನ್ನು ಹುರಿಯ ನೋವುಗಳು ಹೆಚ್ಚಾಗುತ್ತಿವೆ. ಕುತ್ತಿಗೆ ನೋವಿನ ಸಮಸ್ಯೆಗಳೂ ಶುರುವಾಗುತ್ತವೆ.
- ಗೂನು ಬೆನ್ನು ಮಾಡಿಕೊಂಡು ಕುಳಿತುಕೊಳ್ಳುವುದು ಕೂಡ ಯೋಗ್ಯವಲ್ಲ. ಹಾಗೆ ಕುಳಿತುಕೊಳ್ಳುವ ಬದಲು ನಮ್ಮ ಶರೀರದ ಹಿಂಭಾಗವನ್ನು, ಕುತ್ತಿಗೆಯನ್ನು ನೇರವಾಗಿಟ್ಟುಕೊಂಡು ಕುಳಿತರೆ ಸಿಯಾಟಿಕಾ ಸಮಸ್ಯೆಗಳಿಂದ ದೂರವಿರಬಹುದು ಎಂದು ತಜ್ಞರು ಹೇಳುತ್ತಾರೆ.|
ಎಲ್ಲ ನೋವುಗಳಿಗೆ ಮುಕ್ತಿ ಹಾಡಬೇಕೆಂದರೆ ನಮ್ಮ ಕುಳಿತುಕೊಳ್ಳುವ ಭಂಗಿಯನ್ನು ತಿದ್ದಿಕೊಳ್ಳಬೇಕು. ಕೆಲಸದ ಮಧ್ಯೆ ಬಿಡುವು ತೆಗೆದುಕೊಂಡು ಕೈ ಮತ್ತು ಕಾಲುಗಳನ್ನು ಸ್ಟ್ರೆಚ್ ಮಾಡಬೇಕು. ಹಾಗೆಯೇ ಬಹಳ ಸಮಯದವರೆಗೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳಬಾರದು.