ಶ್ವಾನ ಪ್ರಿಯರೇ ಎಚ್ಚರ: ನಾಯಿ ನೆಕ್ಕಿದ್ದರಿಂದ ಕೈಕಾಲು ಕಳೆದುಕೊಂಡ ಮಹಿಳೆ- 11.3 ದಶಲಕ್ಷ ಪ್ರಕರಣ ದಾಖಲು!

Published : Feb 24, 2026, 05:15 PM IST
sepsis

ಸಾರಾಂಶ

ಸಾಕು ನಾಯಿಗಳು ಪ್ರೀತಿಯಿಂದ ನೆಕ್ಕುವುದು ಸಾಮಾನ್ಯ, ಆದರೆ ಇದು ಅಪಾಯಕಾರಿಯಾಗಬಹುದು.  ಮಹಿಳೆಯೊಬ್ಬರು ನಾಯಿ ನೆಕ್ಕಿದ್ದರಿಂದ 'ಸೆಪ್ಸಿಸ್' ಎಂಬ ಗಂಭೀರ ಸೋಂಕಿಗೆ ತುತ್ತಾಗಿ ತಮ್ಮ ಕೈ-ಕಾಲುಗಳನ್ನು ಕಳೆದುಕೊಂಡಿದ್ದಾರೆ. ಭಾರತದಲ್ಲಿ 11.3 ದಶಲಕ್ಷ ಪ್ರಕರಣ ದಾಖಲಾಗಿವೆ.  ಏನಿದು ಸಮಸ್ಯೆ?

ನಂಬಿಗಸ್ಥ ಎಂದೇ ಅಂದುಕೊಂಡಿರುವ, ನಿಯತ್ತಿಗೆ ಪ್ರತಿರೂಪ ಆಗಿರುವ ಪ್ರಾಣಿಯೆಂದರೆ ಅದು ನಾಯಿ. ಶ್ವಾನ ಪ್ರಿಯರು ನಮ್ಮಲ್ಲಿ ಅಸಂಖ್ಯ ಜನರಿದ್ದಾರೆ. ಎಷ್ಟೋ ಮನೆಗಳಲ್ಲಿ ನಾಯಿಗಳೇ ಮಕ್ಕಳು. ಅದರಲ್ಲಿಯೂ ಮಕ್ಕಳು ಇಲ್ಲದ ದಂಪತಿಗೆ ನಾಯಿಯೇ ಮಕ್ಕಳ ರೂಪದಲ್ಲಿ ಪ್ರೀತಿ ಕೊಡುವುದು ಉಂಟು. ಆದ್ದರಿಂದ ಹಲವು ಮನೆಗಳಲ್ಲಿ ನಾಯಿಗೆ ನಾಯಿ ಎಂದರೆ ಸಿಟ್ಟು ಬರುವುದು ಉಂಟು. ಅವುಗಳನ್ನು ತಮ್ಮ ಮಕ್ಕಳಂತೆಯೇ ಹೆಸರುಗಳಿಂದ ಕರೆಯುತ್ತಾರೆ, ಅವನು, ಅವಳು ಎಂದೇ ಸಂಬೋಧಿಸುತ್ತಾರೆ. ಇದೇ ಕಾರಣಕ್ಕೆ ನಾಯಿಗೂ, ಮನುಷ್ಯನಿಗೂ ಅವಿನಾಭಾವ ಸಂಬಂಧವಿದೆ. ಆದರೆ ಶ್ವಾನ ಪ್ರಿಯರಿಗೆ ಶಾಕಿಂಗ್​ ಎನ್ನುವಂಥ ವಿಷಯವೊಂದು ಇದೀಗ ವರದಿಯಾಗಿದೆ.

ಪ್ರೀತಿಯಿಂದ ನೆಕ್ಕುವ ನಾಯಿಗಳು

ಸಾಮಾನ್ಯವಾಗಿ ಸಾಕು ನಾಯಿಗಳು ತಮ್ಮ ಮನೆಯವರನ್ನು ಪ್ರೀತಿಯಿಂದ ನೆಕ್ಕುವುದು ಉಂಟು. ಅದು ಯಜಮಾನರಿಗೆ ತೋರಿಸುವ ಪ್ರೀತಿಯ ಸಂಕೇತ. ಆದರೆ ಹೀಗೆ ನಾಯಿ ನೆಕ್ಕಿದ್ದರಿಂದ ಓರ್ವ ಮಹಿಳೆ ಕೈ-ಕಾಲು ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ಇಂಗ್ಲೆಂಡ್​ ಮೂಲಕ ಮಹಿಳೆಯೊಬ್ಬಳು ನಾಯಿಯ ನೆಕ್ಕುವಿಕೆಯಿಂದ ಕೈಕಾಲುಗಳನ್ನು ಕಳೆದುಕೊಂಡಿದ್ದಾರೆ. ಫೆಬ್ರವರಿ 19 ರಂದು ಬಿಬಿಸಿ ವರದಿ ಮಾಡಿರುವ ಪ್ರಕಾರ, ಮಂಜಿತ್ ಎನ್ನುವವರು 32 ವಾರಗಳ ಸುದೀರ್ಘ ಆಸ್ಪತ್ರೆಯಲ್ಲಿ ಹೋರಾಟ ನಡೆಸಿದರು. ಅವರಿಗೆ ಹಲವಾರು ಬಾರಿ ಹಾರ್ಟ್​ ಎಟ್ಯಾಕ್​ ಕೂಡ ಆಯಿತು. ಕೊನೆಗೆ ಅವರು ತಮ್ಮ ಎರಡೂ ಕೈ ಮತ್ತು ಎರಡೂ ಕಾಲುಗಳನ್ನು ತೆಗೆಸಿಕೊಳ್ಳುವ ಸ್ಥಿತಿ ಬಂದಿದೆ.

ವರದಿಯಲ್ಲಿ ಶಾಕ್​

ಅಹಮದಾಬಾದ್‌ನ ಎಚ್‌ಸಿಜಿ ಆಸ್ಪತ್ರೆಗಳ ಹಿರಿಯ ಸಲಹೆಗಾರ ವೈದ್ಯ ಮನೋಜ್ ವಿಥ್ಲಾನಿ ಅವರನ್ನು ಮಹಿಳೆ ಸಂಪರ್ಕಿಸಿದಾಗ, ಅವರು ಈ ಬಗ್ಗೆ ಅಧ್ಯಯನ ಮಾಡಿದಾಗ ಶಾಕ್​ ಆಗಿದ್ದರು. ಏಕೆಂದರೆ, ಮಹಿಳೆಯ ಈ ಸ್ಥಿತಿಗೆ ನಾಯಿಯ ನೆಕ್ಕುವಿಕೆ ಕಾರಣವಾಗಿದ್ದು, ವರದಿಯಲ್ಲಿ ತಿಳಿಸಿದೆ. ಮನುಷ್ಯನ ದೇಹದ ಮೇಲೆ ಗಾಯವಾಗಿದ್ದರೆ ಅಥವಾ ಯಾವುದೋ ಕಾರಣಕ್ಕೆ ಚಿಕ್ಕ ಗೀರು ಬಿದ್ದಿದ್ದರೂ, ನಾಯಿ ಅದನ್ನು ನೆಕ್ಕಿದಾಗ ಸೋಂಕು ಉಂಟಾಗುತ್ತದೆ. ನಾಯಿಯ ಲಾಲಾರಸದಲ್ಲಿರುವ ಬ್ಯಾಕ್ಟೀರಿಯಾ ದೇಹದೊಳಗೆ ಪ್ರವೇಶಿಸಿ ಮನುಷ್ಯನ ರಕ್ತದಲ್ಲಿ ಹರಡುತ್ತದೆ. ಇದರಿಂದ ‘ಸೆಪ್ಸಿಸ್’ ಎಂಬ ಗಂಭೀರ ಸ್ಥಿತಿ ಉಂಟಾಗುತ್ತದೆ ಎನ್ನುತ್ತಾರೆ ವೈದ್ಯರು.

ಏನಿದು ಸೆಪ್ಸಿಸ್​?

ಕುತೂಹಲದ ವಿಷಯ ಏನೆಂದರೆ, ಲಂಡನ್​ನಲ್ಲಿ ಇದಕ್ಕಾಗಿಯೇ ಒಂದು ಆಸ್ಪತ್ರೆ ಇದೆ. ಅದರ ಹೆಸರು ಸೆಪ್ಸಿಸ್ ಟ್ರಸ್ಟ್. ಅಲ್ಲಿ ಇಂಥ ಹಲವಾರು ಪ್ರಕರಣಗಳು ದಾಖಲಾಗುತ್ತವಂತೆ. ಇಂಗ್ಲೆಂಡ್​ನಲ್ಲಿ ಪ್ರತಿ ವರ್ಷ ಸುಮಾರು 50 ಸಾವಿರ ಸೆಪ್ಸಿಸ್-ಸಂಬಂಧಿತ ಸಾವುಗಳು ಸಂಭವಿಸುತ್ತಿವೆ ಎಂದು ವರದಿ ಹೇಳಿದೆ. ಏತನ್ಮಧ್ಯೆ, ಭಾರತದಲ್ಲಿ ಸೆಪ್ಸಿಸ್ ಪ್ರಕರಣಗಳು 11.3 ದಶಲಕ್ಷ ಎಂದು ಅಂದಾಜಿಸಲಾಗಿದೆ, 2017 ರಲ್ಲಿ 2.9 ದಶಲಕ್ಷ ಸಾವುಗಳು ಸಂಭವಿಸಿವೆ ಎಂದು CHEST ಜರ್ನಲ್ ವರದಿ ಮಾಡಿದೆ.

ದೇಹದ ಮೇಲೆ ಗಾಯವಾದಾಗ, ಅದನ್ನು ನಾಯಿ ನೆಕ್ಕಿದಾಗ, ರಕ್ತನಾಳಗಳಲ್ಲಿ ಸಣ್ಣ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಿ ಕಿಡ್ನಿ, ಯಕೃತ್ತು, ಶ್ವಾಸಕೋಶ ಮತ್ತು ಮೆದುಳಿಗೆ ರಕ್ತ ಹಾಗೂ ಆಮ್ಲಜನಕ ಸರಬರಾಜು ಕಡಿಮೆಯಾಗುತ್ತದೆ. ಇದರಿಂದ ಅಂಗಾಂಗ ವೈಫಲ್ಯ ಸಂಭವಿಸಬಹುದು ಎಂದು ವೈದ್ಯರು ಹೇಳಿದ್ದಾರೆ. ರಕ್ತದೊತ್ತಡ ತೀವ್ರವಾಗಿ ಹೃದಯ ಸ್ತಂಭನವೂ ಆಗುತ್ತದೆ. ಇದನ್ನು ‘ಸೆಪ್ಟಿಕ್ ಶಾಕ್’ ಎಂದು ಕರೆಯುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೂ, ಸಾಕುಪ್ರಾಣಿಗಳು ಗಾಯವನ್ನು ನೆಕ್ಕದಂತೆ ಎಚ್ಚರಿಕೆ ನೀಡಲಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Weight Loss: ತೂಕ ಇಳಿಸೋಕೆ ಟ್ರೈ ಮಾಡ್ತಿದ್ದೀರಾ? ಹೆಚ್ಚು ಪ್ರೋಟೀನ್ ಇರುವ ಈ 6 ಸ್ನ್ಯಾಕ್ಸ್ ತಿನ್ನಿ!
ಭುಸ್ ಭುಸ್ ಅಂತ ಉಸಿರಾಡೋ ಬದ್ಲು ಹೀಗೆ breath ಮಾಡಿದ್ರೆ ಗಟ್ಟಿಯಾಗುತ್ತೆ ಹಾರ್ಟ್