ಆಕೆಯ ಮದುವೆಯಾಗಿ ಒಂದು ತಿಂಗಳಷ್ಟೇ ಆಗಿದೆ. ಆದ್ರೆ ಆರಂಭದಲ್ಲಿ ಚೆನ್ನಾಗಿದ್ದ ಮ್ಯಾರೀಡ್ ಲೈಫ್ ಈಗ್ಯಾಕೋ ಬೋರಿಂಗ್ ಅನಿಸ್ತಿದ್ಯಂತೆ. ಇಷ್ಟಕ್ಕೂ ಆಕೆಯ ಸಮಸ್ಯೆಯೇನು ? ಗಂಡ ಬೇಡ ಅಂತನಿಸ್ತಿರೋದು ಯಾಕೆ ?
ಸಂಬಂಧ ಅನ್ನೋದು ತುಂಬಾ ಸೂಕ್ಷ್ಮವಾದುದು. ಅದು ಸರಿಯಾಗಿ ಮುನ್ನಡೆಯಬೇಕಾದರೆ ಸಮರ್ಪಕವಾದ ರೀತಿಯಲ್ಲಿ ನಿಭಾಯಿಸುವುದು ತುಂಬಾ ಮುಖ್ಯ. ಆದರೆ ಕೆಲವೊಮ್ಮೆ ಸಣ್ಣಪುಟ್ಟ ವಿಚಾರಗಳು ಸಹ ದಾಂಪತ್ಯವನ್ನು ಹಾಳು ಮಾಡಿ ಬಿಡುತ್ತವೆ. ಇನ್ನೊಬ್ಬರಿಗೆ ತುಂಬಾ ಸಿಲ್ಲಿ ಅನಿಸಿದ ರೀಸನ್ ಆ ಸಮಸ್ಯೆಯನ್ನು ಅನುಭವಿಸುವವರಿಗೆ ಸಿಕ್ಕಾಪಟ್ಟೆ ಇರಿಟೇಟ್ ಮಾಡುತ್ತಿರುತ್ತದೆ. ಇಲ್ಲೊಬ್ಬಾಕೆಗೆ ಹಾಗೇ ಆಗಿದೆ. ಗಂಡನ ಗೊರಕೆ ಹೊಡೆಯುವ ಸಮಸ್ಯೆಯಿಂದ ದಾಂಪತ್ಯವೇ ಬೇಡವೆನಿಸಿದೆಯಂತೆ. ಮುಂದೇನ್ಮಾಡ್ಲಿ ಅಂತಿದ್ದಾಳೆ. ಅದಕ್ಕೆ ತಜ್ಞರು ಏನ್ ಉತ್ತರ ನೀಡಿದ್ದಾರೆ. ತಿಳಿಯೋಣ.
ಪ್ರಶ್ನೆ: ನಾನು ವಿವಾಹಿತ ಮಹಿಳೆ. ಮದುವೆ (Marriage)ಯಾಗಿ ಒಂದು ತಿಂಗಳಷ್ಟೇ ಆಗಿದೆ. ನಮ್ಮದು ಆರೇಂಜ್ಡ್ ಮ್ಯಾರೇಜ್. ಹೀಗಾಗಿ ಮದ್ವೆಗೂ ಮೊದಲು ನಮ್ಮಿಬ್ಬರಿಗೂ ಪರಸ್ಪರ ಪರಿಚಯವಿರಲ್ಲಿಲ್ಲ. ಹೀಗಿದ್ದೂ ಮದ್ವೆಯಾದ ಮೇಲೂ ನನಗೆ ಆಪ್ತವಾಗಿರಲು ಯಾವುದೇ ರೀತಿಯಲ್ಲಿ ತೊಂದರೆಯಾಗಲ್ಲಿಲ್ಲ. ಆದರೆ ಮದ್ವೆಯಾಗಿ ಒಂದು ತಿಂಗಳು ಕಳೆದ ಮೇಲೆ ನನಗೆ ಈ ಸಂಬಂಧ (Relationship)ದಲ್ಲಿರುವುದು ಕಷ್ಟವೆನಿಸುತ್ತದೆ. ನನ್ನ ಪತಿ (Husband) ತುಂಬಾ ಗೊರಕೆ ಹೊಡೆಯುತ್ತಾನೆ. ಅವನು ನಿದ್ರೆಯಲ್ಲಿ ಜೋರಾಗಿ ಮಾತನಾಡುತ್ತಾನೆ. ಆರಂಭದಲ್ಲಿ ನಾನು ಅದನ್ನು ನಿರ್ಲಕ್ಷಿಸಿದೆ ಆದರೆ ಈಗ ಅದು ನನಗೆ ತುಂಬಾ ಅಸಹನೀಯವಾಗಿದೆ. ಒಂದು ದಿನ ನಾನು ತುಂಬಾ ಬೇಸತ್ತು ಅವನೊಂದಿಗೆ ಮಲಗಲು ಸಾಧ್ಯವಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲ ಈ ಬಗ್ಗೆ ನನ್ನ ಅತ್ತೆಯ ಬಳಿಯೂ ಮಾತನಾಡಿದ್ದೆ ಆದರೆ ಇದು ತುಂಬಾ ಸಹಜ ಎಂಬುದು ಅವರ ಉತ್ತರವಾಗಿತ್ತು.
ಐಷಾರಾಮಿ ಜೀವನಕ್ಕೆ ಬಾಸ್ ಜೊತೆ ಮಲಗ್ತೇನೆ, ಅದಕ್ಕೆಲ್ಲ ಬೇಜಾರಿಲ್ವಂತೆ ಇವ್ಳಿಗೆ!
ಗಂಡನಿಗೆ ಗೊರಕೆಯ (Snoring) ಮೇಲೆ ನಿಯಂತ್ರಣವಿಲ್ಲ. ಅವನು ವೈದ್ಯರ ಬಳಿಗೆ ಹೋಗಬಹುದು ಎಂದು ನನಗೆ ತಿಳಿದಿದೆ. ನಾನು ಅದನ್ನು ಸೂಚಿಸಿದೆ, ಆದರೆ ನನ್ನ ಪತಿ ಸಂಪೂರ್ಣವಾಗಿ ನಿರಾಕರಿಸಿದರು. ನಾನು ಕೆಲಸ ಮಾಡುವ ಮಹಿಳೆ (Woman). ನನಗೆ ಗಂಡನ ಗೊರಕೆಯಿಂದ ನಿದ್ದೆ ಸರಿಯಾಗಿ ಬರುತ್ತಿಲ್ಲ. ಪ್ರತಿ ದಿನ ಮಲಗುವುದೇ ಹಿಂಸೆಯಾಗಿದೆ. ಆದರೆ ನನ್ನ ಪತಿಗೆ ಇದ್ಯಾವುದೂ ಅರ್ಥವಾಗುತ್ತಿಲ್ಲ ಎಂದು ವಿವಾಹಿತ ಮಹಿಳೆ ಹೇಳಿದ್ದಾರೆ.
ತಜ್ಞರ ಉತ್ತರ: ವಿವಾಹಿತ ಮಹಿಳೆಯ ಪ್ರಶ್ನೆಗೆ ತಜ್ಞರು ಉತ್ತರ ನೀಡಿದ್ದಾರೆ. ನಿಮ್ಮ ಸಮಸ್ಯೆಗಳ (Probelm) ಬಗ್ಗೆ ನನಗೆ ಚೆನ್ನಾಗಿ ಅರಿವಿದೆ. 25 ಪ್ರತಿಶತ ಜನರು ನಿಯಮಿತವಾಗಿ ಗೊರಕೆ ಹೊಡೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಹೆಚ್ಚು ಸಾಮಾನ್ಯವಾಗಿದೆ. ಆದರೆ ಕೆಲವೊಮ್ಮೆ ಇದು ನಿಮ್ಮ ಸಂಗಾತಿಗೆ ದೊಡ್ಡ ಸಮಸ್ಯೆಯಾಗುತ್ತದೆ. ನಿಮಗೆ ಮದುವೆಯಾಗಿ ಕೇವಲ ಒಂದು ತಿಂಗಳಷ್ಟೇ ಆಗಿರುವುದರಿಂದ ಇದು ಅಭ್ಯಾಸವಿಲ್ಲ. ಹಾಗಂತ ಇದು ನಿಮ್ಮ ಗಂಡನ ತಪ್ಪು ಅಲ್ಲ ಎಂದು ತಜ್ಞರು ಹೇಳಿದ್ದಾರೆ.
ಇದು ನಿಮ್ಮ ಗಂಡನ ತಪ್ಪು ಅಲ್ಲ: ಗಂಡ ವಿಪರೀತ ಗೊರಕೆ ಹೊಡೆಯುತ್ತಿರುವುದಾಗಿ ನೀವು ದೂರು ನೀಡಿದ್ದೀರಿ. ಆದರೆ ಇದರಲ್ಲಿ ಅವ್ರದ್ದು ಯಾವುದೇ ತಪ್ಪಿಲ್ಲ (Mistake). ಯಾಕೆಂದರೆ ಯಾರು ಸಹ ತಮ್ಮ ಗೊರಕೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಹೀಗಾಗಿ ಗಂಡನ ಗೊರಕೆ ಹೊಡೆಯುವ ಚಟದ ಬಗ್ಗೆ ನೀವು ಅತ್ತೆಯೊಂದಿಗೆ ದೂರಿದರೂ ಯಾವುದೇ ಪ್ರಯೋಜನವಿಲ್ಲ. ಪ್ರೀತಿಯಿಂದ ಮಾತನಾಡುವ ಮೂಲಕ ಮಾತ್ರ ಈ ಸಮಸ್ಯೆಯನ್ನು ಕೊನೆಗೊಳಿಸಬಹುದು. ಅವರ ಜೋರಾಗಿ ಗೊರಕೆ ಹೊಡೆಯುವುದರಿಂದ, ನಿಮ್ಮ ನಿದ್ರೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದಾಗಿ ನೀವು ಮಧ್ಯರಾತ್ರಿಯಲ್ಲಿ (Night) ಎಚ್ಚರಗೊಳ್ಳಲು ಪ್ರಾರಂಭಿಸಿದ್ದೀರಿ ಎಂದು ನೀವು ಅವರಿಗೆ ಹೇಳಬಹುದು. ಅಷ್ಟೇ ಅಲ್ಲ, ಗೊರಕೆಯ ಸಮಸ್ಯೆಯನ್ನು ನಿವಾರಿಸಲು ಶಸ್ತ್ರಚಿಕಿತ್ಸೆಯ (Operation) ಅಗತ್ಯವಿಲ್ಲ. ಕೆಲವೊಂದು ಔಷಧಿಯ ಹಂತಗಳನ್ನು ಪಾಲಿಸಿದರೆ ಸಾಕಾಗುತ್ತದೆ.
ಗಂಡ ಎಷ್ಟು ಕ್ಲೋಸಾಗಿದ್ರೂ ಹೆಂಡ್ತಿ ಲೈಂಗಿಕ ಜೀವನದ ಈ ವಿಷ್ಯ ಹೇಳೋಲ್ಲ
ಸಂಬಂಧದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಬೇಡಿ: ಪ್ರತಿಯೊಬ್ಬ ಮನುಷ್ಯನಿಗೆ, ವಿಶೇಷವಾಗಿ ಕೆಲಸ ಮಾಡುವ ವೃತ್ತಿಪರರಿಗೆ ಉತ್ತಮ ನಿದ್ರೆ ಅತ್ಯಗತ್ಯ. ನೀವು ಈ ಸಮಸ್ಯೆಯನ್ನು ಎತ್ತುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಇದು ನಿಮ್ಮ ಪತಿಗೆ ಸಹ ನಿಯಂತ್ರಣವಿಲ್ಲದ ವಿಷಯ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಇಎನ್ಟಿಗೆ ಹೋಗಲು ನಿಮ್ಮ ಪತಿಯನ್ನು ನೀವು ಪ್ರೋತ್ಸಾಹಿಸಬೇಕು. ಆದರೆ ಇದನ್ನು ನಿಮ್ಮ ಗಂಡನಿಗೆ ಹೇಳುವ ರೀತಿ ಸರಿಯಾಗಿರಲಿ. ಇಲ್ಲದಿದ್ದರೆ ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಉಂಟಾಗಬಹುದು. ನೀವಿಬ್ಬರೂ ನಿಮ್ಮ ಸಂಬಂಧದ ಆರಂಭಿಕ ಹಂತಗಳಲ್ಲಿರುತ್ತೀರಿ, ಇದರಲ್ಲಿ ಸಮಸ್ಯೆಗಳು ಪ್ರೀತಿಯನ್ನು ತ್ವರಿತವಾಗಿ ಬದಲಾಯಿಸಬಹುದು.