Pitta Dosha: ಪಿತ್ತ ದೋಷವೇ? ಜೀವನಶೈಲಿ ಹೀಗಿದ್ರೆ ನಿಮ್ಗೆ ಒಳ್ಳೇದು

By Suvarna News  |  First Published Oct 20, 2022, 5:05 PM IST

ಮನುಷ್ಯನ ದೇಹ ಪ್ರಮುಖವಾಗಿ ಮೂರು ಪ್ರಕೃತಿಯಿಂದ ನಿರ್ಮಾಣವಾಗಿದೆ ಎನ್ನುತ್ತದೆ ಆಯುರ್ವೇದ. ಪ್ರತಿಯೊಂದು ಪ್ರಕೃತಿಯೂ ವಿಭಿನ್ನವಾದ ಗುಣ-ಚಹರೆಗಳನ್ನು ನೀಡುತ್ತವೆ. ಪಿತ್ತದ ಪ್ರಕೃತಿ ನಿಮ್ಮದಾಗಿದ್ದರೆ ಅಥವಾ ನಿಮಗೆ ಪಿತ್ತ ದೋಷವಿದ್ದರೆ ಜೀವನಶೈಲಿ ಹೇಗಿರಬೇಕು ಎಂದು ಅರಿತುಕೊಳ್ಳಿ.
 


ಯಾವುದಾದರೂ ದೀರ್ಘಕಾಲದ ಅರೋಗ್ಯ ಸಮಸ್ಯೆಯನ್ನಿಟ್ಟುಕೊಂಡು ನೀವು ಆಯುರ್ವೇದ ವೈದ್ಯರ ಬಳಿಗೆ ಹೋದರೆ ಅವರು “ನಿಮಗೆ ಪಿತ್ತ ದೋಷವಿದೆ. ನಿಮ್ಮದು ಪಿತ್ತ ಪ್ರಕೃತಿ, ಕಫ ಅಥವಾ ವಾತ ಪ್ರಕೃತಿ’ ಎಂದು ಹೇಳಿರುತ್ತಾರೆ. ಆಯುರ್ವೇದದ ಪ್ರಕಾರ, ಮನುಷ್ಯನ ದೇಹ ಮೂರು ವಿಧವಾದ ಪ್ರಕೃತಿಗಳಿಂದ ನಿರ್ಮಾಣವಾಗಿರುತ್ತದೆ. ಈ ಪ್ರಕೃತಿಯ ಆಧಾರದ ಮೇಲೆ ನಮ್ಮ ಆರೋಗ್ಯ ವ್ಯವಸ್ಥೆ, ದೈಹಿಕ ರೂಪುರೇಷೆ ಹಾಗೂ ಮನೋಸ್ಥಿತಿಯೂ ರೂಪುಗೊಂಡಿರುತ್ತದೆ ಎನ್ನಲಾಗುತ್ತದೆ. ನಮ್ಮ ದೇಹ ಪ್ರಕೃತಿಯನ್ನು ಆಧರಿಸಿ ಮನಸ್ಸು ಮತ್ತು ದೇಹದ ವಿವಿಧ ಸಮಸ್ಯೆಗಳಿಗೆ ಸಮಗ್ರ ದೃಷ್ಟಿಕೋನದೊಂದಿಗೆ ಚಿಕಿತ್ಸೆ ನೀಡುವುದು ಆಯುರ್ವೇದದ ವಿಶಿಷ್ಟತೆ. ಹೀಗಾಗಿಯೇ, ಆಯುರ್ವೇದ ಅಷ್ಟು ಪುರಾತನ ಕಾಲದಿಂದಲೂ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಪಂಚಮಹಾಭೂತಗಳಿಂದ ನಮ್ಮ ದೇಹ ನಿರ್ಮಾಣವಾಗಿದೆ. ಇವುಗಳ ವಿಲೀನದಲ್ಲಾಗುವ ಏರಿಳಿತದಿಂದ ಮೇಲಿನ ಮೂರು ದೋಷಗಳು ಉಂಟಾಗುತ್ತವೆ. ಇವುಗಳಿಂದಾಗಿಯೇ ವ್ಯಕ್ತಿಯ ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಆರೋಗ್ಯಸ್ಥಿತಿ ನಿರ್ಮಾಣವಾಗುತ್ತದೆ. ಇದು ಪ್ರತಿ ವ್ಯಕ್ತಿಯಿಂದ ವ್ಯಕ್ತಿಗೆ  ಭಿನ್ನವಾಗಿ ರೂಪುಗೊಂಡಿರುತ್ತದೆ. ಆದರೂ ಇವುಗಳನ್ನು ಸರಿಸುಮಾರಾಗಿ ಮೂರು ದೋಷಗಳೆಂದು ವಿಭಾಗಿಸಲಾಗಿದೆ. ನಿಮ್ಮದು ಪಿತ್ತದ ಪ್ರಕೃತಿಯಾಗಿದ್ದರೆ ಜೀವನಶೈಲಿ ಹೇಗಿದ್ದರೆ ಉತ್ತಮ ಎಂದು ನೋಡಿಕೊಳ್ಳಿ. 

ಪಿತ್ತ ದೋಷದವರು ಹೇಗಿರ್ತಾರೆ?
ನಿಮ್ಮ ದೇಹ ಪ್ರಕೃತಿ ಪಿತ್ತದಿಂದ (Pitta) ಕೂಡಿದೆ ಎಂದಾದರೆ, ನಿಮ್ಮ ವ್ಯಕ್ತಿತ್ವವನ್ನು (Personality) ಸಮಗ್ರವಾಗಿ ಗ್ರಹಿಸಬಹುದು. ಇದು ಅಗ್ನಿ (Fire) ಹಾಗೂ ಜಲ (Water) ತತ್ವದ ವಿಲೀನದಿಂದ ಉಂಟಾಗಿರುವ ದೋಷ (Dosha). ಈ ಪ್ರಕೃತಿಯನ್ನು ಉಳ್ಳವರು ದೃಢವಾದ ವ್ಯಕ್ತಿತ್ವ ಹೊಂದಿರುತ್ತಾರೆ. ಚುರುಕು ಬುದ್ಧಿ (Sharp), ಉಷ್ಣ (Hot) ಪ್ರಕೃತಿ ಇರುತ್ತದೆ. ಹಾಗೂ ಚಲನಶೀಲತೆ (Mobile) ಉಳ್ಳವರಾಗಿರುತ್ತಾರೆ. ಅಂದರೆ, ಇವರಿಗೆ ಕುಳಿತಲ್ಲಿ ಕೂರಲು ಸಾಧ್ಯವಿಲ್ಲ. ಮಾಂಸಖಂಡಗಳಲ್ಲಿ ಅಪಾರ ಶಕ್ತಿ ಇರುತ್ತದೆ. ಸಾಮಾನ್ಯವಾಗಿ ಕ್ರೀಡಾ (Sports) ಕ್ಷೇತ್ರ ಅಥವಾ ಹೆಚ್ಚು ಚಲನಶೀಲತೆಯುಳ್ಳ ಕ್ಷೇತ್ರದಲ್ಲಿ ಇರುತ್ತಾರೆ. ಇದರಲ್ಲಿ ನಾಯಕತ್ವದ ಗುಣವಿರುತ್ತದೆ. ಸ್ವಪ್ರೇರಣೆಯ (Self-Motivate) ಸ್ವಭಾವ ಇರುತ್ತದೆ. ಗುರಿ ತಲುಪುವಲ್ಲಿ ಬದ್ಧತೆ ಹೊಂದಿದ್ದು, ಇವರ ಜೀವನದಲ್ಲಿ ಕೆಲವೊಮ್ಮೆ ಅಸ್ತವ್ಯಸ್ತತೆ ಕಂಡುಬರುತ್ತದೆ. ಈ ದೋಷದ ಪ್ರಕಾಶಮಾನವಾದ ಉಷ್ಣ ಗುಣದಿಂದಾಗಿ, ಬೇಸಿಗೆ (Summer) ಕಾಲ ಇವರಿಗೆ ಆಗಿಬರುವುದಿಲ್ಲ. ಬೇಸಿಗೆಯನ್ನು ಪಿತ್ತದ ಕಾಲವೆಂದು ಪರಿಗಣಿಸಲಾಗಿದೆ. 

Latest Videos

undefined

ತುಪ್ಪದ ಜೊತೆಗೆ, ಈ 5 ವಸ್ತುಗಳನ್ನು ಸೇರಿಸಿ ತಿನ್ನಿ… ಆರೋಗ್ಯಕ್ಕೆ ಹೇಳಿ ಮಾಡಿಸಿದಂಥ ಮದ್ದು

ಪಿತ್ತ ದೋಷವುಳ್ಳವರ ಸಾಮರ್ಥ್ಯ (Strengths) 
ಬುದ್ಧಿವಂತಿಕೆ, ಕೇಂದ್ರೀಕೃತ ಚಿಂತನೆ (Focused) ಇವರ ಉತ್ತಮ ಗುಣ. ಅದ್ಭುತ ಶಿಕ್ಷಣಾರ್ಥಿ ಆಗಿದ್ದು ಹೊಸತನ್ನು ಬಹುಬೇಗ ಕಲಿತುಕೊಳ್ಳುವ ಆಸಕ್ತಿ ಹೊಂದಿರುತ್ತಾರೆ. ಇವರ ದೇಹದ ರಕ್ತಸಂಚಾರ ಉತ್ತಮವಾಗಿದ್ದು, ಸಾಮಾನ್ಯವಾಗಿ ಉತ್ತಮ ಆರೋಗ್ಯವನ್ನೇ (Good Healt) ಹೊಂದಿರುತ್ತಾರೆ. 

ದೌರ್ಬಲ್ಯವೇನು (Weakness) ಗೊತ್ತೇ?
ಪಿತ್ತ ದೋಷವುಳ್ಳವರು ಬಹುಬೇಗ ಕಿರಿಕಿರಿ ಮಾಡಿಕೊಳ್ಳುತ್ತಾರೆ. ಬಹುಬೇಗ ಅಸಹನೆ ತೋರುತ್ತಾರೆ. ಸಂಘರ್ಷದಲ್ಲಿ ಸಿಲುಕುತ್ತಾರೆ. ಹಸಿವು ಹೆಚ್ಚು. ಖಾಲಿ ಹೊಟ್ಟೆಯಲ್ಲಿದ್ದರೆ ಇವರ ಮನಸ್ಥಿತಿ ಪದೇ ಪದೆ ಏರಿಳಿತವಾಗುತ್ತದೆ. ಬೇಸಿಗೆ ಅಥವಾ ಉಷ್ಣತೆಗೆ ಸೂಕ್ಷ್ಮತೆ ಹೊಂದಿರುತ್ತಾರೆ. ಬೇಸಿಗೆಯ ಬಿಸಿಲಿಗೆ  ಬಸವಳಿಯುತ್ತಾರೆ. 

ಇಂಥಾ ಬೇಳೆ ತಿಂದ್ರೆ ಖಂಡಿತಾ ಅಸಿಡಿಟಿ ಆಗುತ್ತೆ, ತಿನ್ನೋ ಮುಂಚೆ ಹುಷಾರು 

ಇವರಿಗೆ ಯಾವ ಆಹಾರ (Food) ಸೂಕ್ತ?
ಪಚನಕ್ರಿಯೆಗೆ ಹಗುರವಾದ ಆಹಾರವನ್ನು ಇವರು ಸೇವಿಸಬೇಕು. ತಂಪಾದ ಪದಾರ್ಥ, ಸಿಹಿ ಮತ್ತು ದೇಹಕ್ಕೆ ಶಕ್ತಿ ನೀಡುವ ಆಹಾರ ಸೂಕ್ತ. ತರಕಾರಿ, ಹಣ್ಣುಗಳು, ಓಟ್ಸ್, ಮೊಟ್ಟೆ ತಿನ್ನಬಹುದು. 

ಯಾವ ಆಹಾರ ಬೇಡ?
ಅತಿಯಾದ ಮಸಾಲೆ ಪದಾರ್ಥವನ್ನು ಜೀರ್ಣಿಸಿಕೊಳ್ಳಲು ಇವರಿಗೆ ಸಾಧ್ಯವಿಲ್ಲ. ಹಾಗೆಯೇ ಅತಿಯಾದ ಒಗರು, ಉಪ್ಪು, ಆಲೂಗಡ್ಡೆ, ಮಸಾಲೆಯುಕ್ತ ಯಾವುದೇ ತಿನಿಸುಗಳಿಂದ ದೂರ ಇರುವುದು ಉತ್ತಮ.

ದೈಹಿಕ ಚಟುವಟಿಕೆ (Activities) ಹೀಗಿರಲಿ
ಪಿತ್ತ ದೋಷವುಳ್ಳವರು ಉಷ್ಣ ಹವಾಮಾನದಲ್ಲಿ ವ್ಯಾಯಾಮ ಮಾಡುವುದು ಸೂಕ್ತವಲ್ಲ. ಗುಂಪು ಆಟದಲ್ಲಿ (Group Sports) ಭಾಗಿಯಾಗುವುದು ಇವರಿಗೆ ಹೊಂದುತ್ತದೆ. ಹಾಗೆಯೇ, ಉದ್ಯೋಗ (Professional) ಮತ್ತು ಖಾಸಗಿ ಬದುಕನ್ನು ಸಮತೋಲನದಲ್ಲಿ ಇರಿಸಿಕೊಳ್ಳಲು ಆದ್ಯತೆ ನೀಡಬೇಕು. ಹಾಗೆಯೇ ಹೆಚ್ಚು ಸಮಯ ಬಿಸಿಲಿನಲ್ಲಿ ಇರುವುದನ್ನು ಅವಾಯ್ಡ್ (Avoid) ಮಾಡಬೇಕು. 

click me!