
ಚಳಿಗಾಲ ಆರಂಭವಾಗ್ತಿದ್ದಂತೆ ಬಹುತೇಕರಿಗೆ ತಲೆಹೊಟ್ಟಿನ ಸಮಸ್ಯೆ ಕಾಡಲು ಶುರುವಾಗುತ್ತೆ. ತುರಿಕೆ, ಬಿಳಿ ಪದರ ಹಾಗೂ ನೆತ್ತಿ ಒಣಗೋಸು ಸಾಮಾನ್ಯ. ಚಳಿಗಾಲದಲ್ಲಿ ಬೀಸುವ ತಂಪಾದ ಮತ್ತು ಒಣ ಗಾಳಿಯಿಂದ ನೆತ್ತಿಯ ತೇವಾಂಶ ಕಡಿಮೆಯಾಗುತ್ತದೆ. ಇದರಿಂದ ತಲೆಹೊಟ್ಟಿನ ಸಮಸ್ಯೆ ಹೆಚ್ಚಾಗಬಹುದು. ಈ ಟೈಂನಲ್ಲಿ ತಲೆಗೂದಲಿನ ಆರೈಕೆ ಬಹಳ ಮುಖ್ಯ
ಕೂದಲಿನ ಆರೈಕೆಗೆ ಮೆಂತ್ಯೆ ಕಾಳು ಹೇಳಿ ಮಾಡಿಸಿದ ಮನೆ ಮದ್ದು. ಅನೇಕ ವರ್ಷಗಳಿಂದ ಜನರು ಇದನ್ನು ಬಳಸ್ತಿದ್ದಾರೆ. ನಿಮಗೂ ತಲೆಹೊಟ್ಟಿದ್ದರೆ ಮೆಂತ್ಯೆ ಹೇರ್ ಪ್ಯಾಕ್ ಮಾಡ್ಕೊಳ್ಳಿ. ಇದಕ್ಕೆ ಎರಡು ದೊಡ್ಡ ಚಮಚ ಮೆಂತ್ಯೆ ಕಾಳುಗಳನ್ನು ಅರ್ಧ ಕಪ್ ನೀರಿನಲ್ಲಿ ರಾತ್ರಿ ಇಡೀ ನೆನೆಸಿಡಿ. ಬೆಳಗ್ಗೆ ಅವುಗಳನ್ನು ನುಣ್ಣಗೆ ರುಬ್ಬಿ ಗಟ್ಟಿಯಾದ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಕೂದಲಿನ ಬುಡ ಮತ್ತು ನೆತ್ತಿಗೆ ಹಚ್ಚಿ. ಸುಮಾರು 20ರಿಂದ 30 ನಿಮಿಷಗಳ ಬಳಿಕ ಮೃದುವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಇದರಿಂದ ನೆತ್ತಿಗೆ ತೇವಾಂಶ ದೊರೆಯುತ್ತದೆ. ಒಣಗುವಿಕೆಯಿಂದ ಉಂಟಾಗುವ ತುರಿಕೆ ಕಡಿಮೆಯಾಗುತ್ತದೆ.
ಕೂದಲಿನ ಆರೈಕೆಗೆ ಮೊಸರು ಮತ್ತು ತೆಂಗಿನೆಣ್ಣೆಯನ್ನೂ ಬಳಸಲಾಗುತ್ತದೆ. ಮೊಸರಿನಲ್ಲಿರುವ ತೇವಾಂಶ ನೆತ್ತಿಯ ಒಣಗುವಿಕೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇದಕ್ಕಾಗಿ ನಾಲ್ಕು ದೊಡ್ಡ ಚಮಚ ಮೊಸರಿಗೆ ಸ್ವಲ್ಪ ನಿಂಬೆ ರಸ ಸೇರಿಸಿ ಮಿಕ್ಸ್ ಮಾಡಿ. ಇದನ್ನು ನೆತ್ತಿಗೆ ಹಚ್ಚಿ ಸುಮಾರು 20 ನಿಮಿಷಗಳ ಬಳಿಕ ಕೂದಲನ್ನು ಕ್ಲೀನ್ ಮಾಡಿ. ನಿಂಬೆ ರಸ ಹಚ್ಚುತ್ತಿದ್ದಂತೆ ಉರಿ ಕಾಣಿಸಿಕೊಂಡ್ರೆ ತಕ್ಷಣ ಕ್ಲೀನ್ ಮಾಡಿ.
ಇದರ ಜೊತೆಗೆ ಎರಡು ದೊಡ್ಡ ಚಮಚ ತೆಂಗಿನೆಣ್ಣೆಯನ್ನು ಸ್ವಲ್ಪ ಉಗುರುಬೆಚ್ಚಗೆ ಮಾಡಿ, ನೆತ್ತಿಗೆ ನಿಧಾನವಾಗಿ ಮಸಾಜ್ ಮಾಡಬಹುದು. ಇದನ್ನು 30 ನಿಮಿಷದಿಂದ ಒಂದು ಗಂಟೆಯವರೆಗೆ ಬಿಟ್ಟು ಬಳಿಕ ಕೂದಲನ್ನು ಕ್ಲೀನ್ ಮಾಡಿ.
ಈ ವಿಷಯಗಳು ನೆನಪಿರಲಿ
ಚಳಿಗಾಲದಲ್ಲಿ ಕೂದಲು ಕ್ಲೀನ್ ಮಾಡುವಾಗ ಅತಿಯಾದ ಬಿಸಿ ನೀರನ್ನು ಬಳಸಬೇಡಿ. ಇದರಿಂದ ನೆತ್ತಿಯ ಒಣಗುವಿಕೆ ಮತ್ತಷ್ಟು ಹೆಚ್ಚಾಗಬಹುದು. ಯಾವಾಗಲೂ ಉಗುರುಬೆಚ್ಚಗಿನ ನೀರಿನಿಂದ ತಲೆ ಸ್ನಾನ ಮಾಡುವುದು ಉತ್ತಮ ಅಗತ್ಯಕ್ಕೆ ತಕ್ಕಂತೆ ಮೃದುವಾದ ಶಾಂಪೂ ಬಳಸಿ. ಕೂದಲನ್ನು ಒಣಗಿಸುವಾಗ ಅತಿಯಾಗಿ ಉಜ್ಜಬೇಡಿ. ನೆತ್ತಿಯನ್ನು ಸ್ವಚ್ಛವಾಗಿಟ್ಟುಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.