
ವಯಸ್ಸು ಹೆಚ್ಚಾದಂತೆ ಕೂದಲು ಬಿಳಿಯಾಗುವುದು ಸಹಜ ಪ್ರಕ್ರಿಯೆ. ಆದರೆ, ಅದನ್ನು ಒಪ್ಪಿಕೊಳ್ಳುವುದು ಅಷ್ಟು ಸುಲಭವಲ್ಲ. ಇದೇ ಕಾರಣಕ್ಕೆ ನಮ್ಮ ತಲೆಯಲ್ಲಿ ಒಂದೆರಡು ಬಿಳಿ ಕೂದಲು ಕಾಣಿಸಿಕೊಂಡ ತಕ್ಷಣ ಅವುಗಳನ್ನು ಬುಡಸಮೇತ ಕಿತ್ತು ಹಾಕುವುದು ಉತ್ತಮ ಎಂದು ಭಾವಿಸುತ್ತೇವೆ. ಹೀಗೆ ಮಾಡುವುದರಿಂದ ಬಿಳಿ ಕೂದಲಿನ ಸಂಖ್ಯೆ ಕಡಿಮೆಯಾಗುವುದಿಲ್ಲ. ಬದಲಿಗೆ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಆಗಾಗ್ಗೆ ಬಿಳಿ ಕೂದಲನ್ನು ಹುಡುಕಿ ಕಿತ್ತು ಹಾಕುವುದರಿಂದ ಕೂದಲಿನ ಕಿರುಚೀಲಗಳಿಗೆ (Hair Follicles) ಹಾನಿಯಾಗಬಹುದು. ಇದರಿಂದ ಕೂದಲು ತೆಳುವಾಗಲು ಪ್ರಾರಂಭಿಸುತ್ತದೆ. ಅಲ್ಲದೆ, ಹೈಪರ್ಪಿಗ್ಮೆಂಟೇಶನ್ (Inflammatory Hyperpigmentation) ಉಂಟಾಗಬಹುದು. ಸಮಸ್ಯೆ ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಾಗಬಹುದು. ಅಷ್ಟೇ ಅಲ್ಲ ಹೊಸ ಕೂದಲು ಬೆಳೆಯುವ ವೇಗ ಕಡಿಮೆಯಾಗಬಹುದು. ಶಾಶ್ವತವಾಗಿ ಕೂದಲು ಉದುರುವ ಸಮಸ್ಯೆ ಎದುರಾಗಬಹುದು.
ಈ ಕಾರಣಗಳಿಂದಲೂ ಕೂದಲು ಬೇಗ ಬಿಳಿಯಾಗಬಹುದು
ಬಿಳಿ ಕೂದಲನ್ನು ಕಿತ್ತು ಹಾಕಿದರೆ ಕಪ್ಪು ಕೂದಲು ಬೆಳೆಯುವುದಿಲ್ಲ!
ಬಿಳಿ ಕೂದಲನ್ನು ಕಿತ್ತು ಹಾಕಿದರೆ ಮತ್ತಷ್ಟು ಬಿಳಿ ಕೂದಲು ವೇಗವಾಗಿ ಬೆಳೆಯುತ್ತದೆ ಎಂಬುದು ಒಂದು ತಪ್ಪು ಕಲ್ಪನೆ. ಅಮೆರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ (American Academy of Dermatology) ಪ್ರಕಾರ, ಕೂದಲಿನ ಕಿರುಚೀಲಗಳಲ್ಲಿರುವ ಮೆಲನಿನ್ ಅಂಶವು ವಯಸ್ಸು ಹೆಚ್ಚಾದಂತೆ ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ಕೂದಲಿನ ಬಣ್ಣ ಬಿಳಿಯಾಗಲು ಪ್ರಾರಂಭಿಸುತ್ತದೆ. ಒಮ್ಮೆ ಈ ಪ್ರಕ್ರಿಯೆ ಆರಂಭವಾದರೆ ಅದನ್ನು ಹಿಂದಿನ ಸ್ಥಿತಿಗೆ ತರುವುದು ಸಾಧ್ಯವಿಲ್ಲ. ನೀವು ಬಿಳಿ ಕೂದಲನ್ನು ಕಿತ್ತು ಹಾಕಿದರೂ, ಅದೇ ಜಾಗದಲ್ಲಿ ಮತ್ತೆ ಬಿಳಿ ಕೂದಲೇ ಬೆಳೆಯುತ್ತದೆ. ಕಪ್ಪು ಕೂದಲು ಬೆಳೆಯುವುದಿಲ್ಲ.
ಬಿಳಿ ಕೂದಲಿನ ಆರೈಕೆಯನ್ನು ಹೀಗೆ ಮಾಡಿ
1. ಕೂದಲನ್ನು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳಿ
ಕಪ್ಪು ಕೂದಲಿಗೆ ಹೋಲಿಸಿದರೆ ಬಿಳಿ ಕೂದಲು ಬೇಗನೆ ಒಣಗುತ್ತದೆ. ಅವು ಆರೋಗ್ಯಕರವಾಗಿರಲು ಸಾಕಷ್ಟು ತೇವಾಂಶವನ್ನು ಕಾಪಾಡಿಕೊಳ್ಳುವುದು ಮುಖ್ಯ. ಇದಕ್ಕಾಗಿ ಪ್ರೌಢ ಕೂದಲಿನ ಆರೈಕೆಗಾಗಿ ತಯಾರಿಸಲಾದ ಶಾಂಪೂ ಮತ್ತು ಕಂಡೀಷನರ್ಗಳನ್ನು ಬಳಸಿ.
2. ಸೂರ್ಯನ ಹಾನಿಯಿಂದ ಕೂದಲನ್ನು ರಕ್ಷಿಸಿ
ಬಿಸಿಲಿಗೆ ಹೋಗುವ ಮೊದಲು ಟೋಪಿ ಅಥವಾ ಛತ್ರಿಯನ್ನು ಬಳಸಿ. ದೀರ್ಘಕಾಲ ನೇರವಾಗಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ.
3. ಕೂದಲನ್ನು ಸರಿಯಾಗಿ ಸ್ಟೈಲಿಂಗ್ ಮಾಡಿ
ಕೂದಲಿಗೆ ಹಾನಿಯಾಗುವುದನ್ನು ತಪ್ಪಿಸಲು ಅಗಲವಾದ ಹಲ್ಲುಗಳ ಬಾಚಣಿಗೆ ಬಳಸಿ. ಶಾಂಪೂ ಮಾಡಿದ ತಕ್ಷಣ ಕೂದಲನ್ನು ಜೋರಾಗಿ ಬಾಚುವುದನ್ನು ತಪ್ಪಿಸಿ. ಸಾಧ್ಯವಾದಷ್ಟು ಹೀಟ್ ಇಲ್ಲದ ಸ್ಟೈಲಿಂಗ್ ಅನುಸರಿಸಿ.
4. ನಿಯಮಿತವಾಗಿ ಕೂದಲನ್ನು ಟ್ರಿಮ್ ಮಾಡಿಸಿ
ಕೂದಲಿನ ತುದಿಗಳು ಸೀಳುವುದನ್ನು ತಪ್ಪಿಸಲು ಮತ್ತು ಆರೋಗ್ಯಕರ ಬೆಳವಣಿಗೆಗೆ ನಿಯಮಿತವಾಗಿ ಕೂದಲನ್ನು ಟ್ರಿಮ್ ಮಾಡಿಸುತ್ತಿರಿ.
5. ಸಮತೋಲಿತ ಆಹಾರ ಸೇವಿಸಿ
ನಿಮ್ಮ ಆಹಾರದಲ್ಲಿ ವಿಟಮಿನ್ ಇ, ವಿಟಮಿನ್ ಬಿ12, ಕಬ್ಬಿಣಾಂಶ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳು ಹಾಗೂ ಖನಿಜಾಂಶಗಳು ಸರಿಯಾದ ಪ್ರಮಾಣದಲ್ಲಿರುವುದು ಅತ್ಯಗತ್ಯ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.