Winter Blues: ಇದು ಆರೋಗ್ಯ ಸಮಸ್ಯೆ ಅಲ್ವೇ ಅಲ್ಲ, ಬರೀ ಚಳಿಗಾಲದ ಕಿರಿಕಿರಿ

By Suvarna News  |  First Published Nov 9, 2022, 5:01 PM IST

ಚಳಿಗಾಲದಲ್ಲಿ ಇದ್ದಕ್ಕಿದ್ದ ಹಾಗೆ ಮೂಡು ವ್ಯತ್ಯಾಸವಾಗುತ್ತದೆ. ಬೇಸರ, ಕಿರಿಕಿರಿ ಉಂಟಾಗುತ್ತದೆ. ಮಾಮೂಲಿ ಕೆಲಸ ಮಾಡಲೂ ಸೋಮಾರಿತನ ಕಾಡುತ್ತದೆ. ಎಲ್ಲದರ ಬಗೆಗೂ, ಎಲ್ಲರ ಮೇಲೂ ರೇಗುವಂತಾಗುತ್ತದೆ. ಹೆದರಬೇಕಾಗಿಲ್ಲ, ಇದು ಚಳಿಗಾಲದಲ್ಲಿ ಮಾತ್ರ ಉಂಟಾಗುವ ಕಿರಿಕಿರಿ. ದೂರ ಮಾಡಿಕೊಳ್ಳುವುದು ಸುಲಭ.
 


“ಕೆಲವು ದಿನಗಳಿಂದ ಅದೇನೋ ಮನಸ್ಸಿಗೆ ಖುಷಿಯಿಲ್ಲ. ಏಕೋ ಕಿರಿಕಿರಿ. ಸಾಮಾನ್ಯಕ್ಕಿಂತ ಅಧಿಕ ನಿದ್ರೆ ಮಾಡುವ ಆಸೆ. ನಿದ್ರೆ ಬಾರದಿದ್ದರೂ ಇಡೀ ದಿನ ಬಿದ್ದುಕೊಂಡಿರಬೇಕು ಎನಿಸುತ್ತದೆ. ಆಲಸಿತನ, ಜಡತ್ವ ಆವರಿಸಿಕೊಂಡಿದೆ. ಪರಿಣಾಮವಾಗಿ, ಸಾಮಾಜಿಕ ಚಟುವಟಿಕೆ, ಮನೆಯ ಕೆಲಸಕಾರ್ಯಗಳು ಹಿಂದೆ ಬಿದ್ದಿವೆ. ದೈನಂದಿನ ಕೆಲಸ ಮಾಡಲೂ ಬೇಸರವಾಗಿದೆ’ ಎಂದು ಯಾರಾದರೂ ಹೇಳುವುದನ್ನು ಕೇಳಿರಬಹುದು ಅಥವಾ ನಿಮಗೇ ಈ ಭಾವನೆ ಬಂದಿರಬಹುದು. “ಯಾಕೆ ಹೀಗೆ? ನನಗೆ ಏನಾಯ್ತು’ ಎನ್ನುವ ವಿಮರ್ಶೆಯೂ ನಿಮ್ಮಲ್ಲಿ ಕೆಲವರಿಗಾದರೂ ಆರಂಭವಾಗಿರಬಹುದು. ಇದು ಚಳಿಯ ಪ್ರಭಾವ. ಚಳಿಗಾಲ ಆರಂಭವಾಗಿದೆ. ಚಳಿ ತೀವ್ರವಾಗಿಲ್ಲದೆ ಇದ್ದರೂ ಚುಮುಚುಮು ಚಳಿ ಕೆಲವೊಮ್ಮೆ ಅನುಭವಕ್ಕೆ ಬರುತ್ತಿದೆ. ಋತುಮಾನಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ ಎನ್ನುವುದು ಎಲ್ಲರಿಗೂ ಗೊತ್ತು. ಹಾಗೆಯೇ, ಚಳಿಗಾಲ ಸಹ ನಮ್ಮ ಆರೋಗ್ಯ ಹಾಗೂ ಮುಖ್ಯವಾಗಿ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಉಂಟಾಗುವ ಮಾನಸಿಕ ಬದಲಾವಣೆಯನ್ನು “ವಿಂಟರ್ ಬ್ಲೂಸ್’ ಎನ್ನಲಾಗುತ್ತದೆ. ಇದೇನು ಮಹಾ ರೋಗವಲ್ಲ ಅಥವಾ ದೈಹಿಕ ಸಮಸ್ಯೆಯೂ ಅಲ್ಲ. ಮನಸ್ಥಿತಿಯಲ್ಲಾಗುವ ಸಣ್ಣ ಬದಲಾವಣೆ. ಆದರೆ, ಸಾಕಷ್ಟು ಕಿರಿಕಿರಿಗೆ ಕಾರಣವಾಗಬಹುದು. 

ಸೂರ್ಯನ ಬೆಳಕು (Sunlight) ಕಡಿಮೆ ಇರುವಾಗ ನಮ್ಮಲ್ಲಿ ಖುಷಿಯನ್ನು ಉತ್ಪಾದಿಸುವ ಡೊಪಮೈನ್ ಹಾರ್ಮೋನ್ (Dopamine Horomone) ಸ್ರವಿಕೆ ಕಡಿಮೆಯಾಗುತ್ತದೆ. ಹಾಗೆ ನೋಡಿದರೆ ಈ ಸಮಸ್ಯೆ ಯುರೋಪ್ ಹಾಗೂ ಪಶ್ಚಿಮದ ರಾಷ್ಟ್ರಗಳಲ್ಲಿ ಹೆಚ್ಚು. ಮಳೆಗಾಲ ಹೊರತುಪಡಿಸಿ ವರ್ಷವಿಡೀ ಬಿಸಿಲನ್ನು ಕಾಣುವ ಭಾರತದಂತಹ ದೇಶದಲ್ಲಿ ಈ ಸಮಸ್ಯೆ ಅತಿ ಕಡಿಮೆ. ಆದರೂ ಕೆಲವರಲ್ಲಿ ಚಳಿಗಾಲದಲ್ಲಿ ಮನಸ್ಥಿತಿ ಬದಲಾವಣೆ (Mood Swing) ಆಗುವುದನ್ನು ಕಾಣಬಹುದು. ಚಳಿಗಾಲದ ಈ ಜಡತ್ವವನ್ನು ಹೋಗಲಾಡಿಸಲು ಕೆಲವು ಸಿಂಪಲ್ ಮಾರ್ಗಗಳನ್ನು ಅನುಸರಿಸಿದರೆ ಸಾಕು. 

•    ದೈನಂದಿನ ಕೆಲಸಕ್ಕೆ ಸ್ಟಿಕ್ ಆಗುವುದು (Stick to Daily Work)
ನಿಮ್ಮ ಮೂಡ್ ಹೇಗೇ ಇರಲಿ, ದೇಹದಲ್ಲಿ ಎಷ್ಟೇ ಆಲಸ್ಯ (Lethargic) ತುಂಬಲಿ, ದೈನಂದಿನ ಕೆಲಸಕಾರ್ಯಗಳನ್ನು ಪೂರೈಸಿಯೇ ಸಿದ್ಧ ಎಂದು ನಿಶ್ಚಯಿಸಿಕೊಳ್ಳಿ. ಮಲಗಿದ್ದರೆ ಮಲಗಿಯೇ ಇರುತ್ತೀರಿ. 

Tap to resize

Latest Videos

ಮನಸ್ಸು ಹಿಡಿತದಲ್ಲಿ ಇಲ್ವಾ? ಯಾಕೋ ಮೂಡಿಲ್ಲ ಅನ್ನೋರಿಗೆ ಇಲ್ಲಿವೆ ಟಿಪ್ಸ್

•    ವ್ಯಾಯಾಮ (Exercise) ಅತ್ಯಗತ್ಯ
ಮೂಡ್ ಸುಧಾರಣೆಗೆ ವ್ಯಾಯಾಮ ಅತ್ಯಗತ್ಯ. ಚಳಿಗಾಲದಲ್ಲಿ ಎದ್ದು ವ್ಯಾಯಾಮ ಮಾಡಲು ಬೇಸರ ಎನಿಸಿದರೂ ಖಂಡಿತವಾಗಿ ಮಾಡಲೇಬೇಕು. ವ್ಯಾಯಾಮ ಮಾಡುವುದರಿಂದ ಚಳಿಗಾಲದಲ್ಲಿ (Winter) ಉಂಟಾಗುವ ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ದೂರವಿಡಬಹುದು. ಚಳಿಗಾಲದಲ್ಲಿ ರಕ್ತಪರಿಚಲನೆಗೆ (Blood Circulation) ಧಕ್ಕೆಯಾಗುವುದು, ಹೃದಯ ಸಮಸ್ಯೆ (Heart Problem) ಹೆಚ್ಚುವುದು ಸಾಮಾನ್ಯ. ಹಾಗೆಯೇ, ಕೊಬ್ಬು (Fat) ಕರಗುವುದಿಲ್ಲ. ಹೀಗಾಗಿ, ಈ ಸಮಯದಲ್ಲಿ ಹೃದಯಾಘಾತದ ಅಪಾಯವೂ ಹೆಚ್ಚು. 

•    ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ
ಸಾಧ್ಯವಾದಷ್ಟು ಹೊತ್ತು ದಿನವೂ ಸೂರ್ಯನ ಬೆಳಕಿಗೆ ನಿಮ್ಮನ್ನು ನೀವು ಒಡ್ಡಿಕೊಳ್ಳುವುದು ಮುಖ್ಯ. ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಇದು ಕಷ್ಟವಾದೀತು. ಆದರೂ ಮಧ್ಯಾಹ್ನ ಬಿಡುವಿನ ಸಮಯದಲ್ಲಿ ಹತ್ತು ನಿಮಿಷಗಳ ಕಾಲವಾದರೂ ಸೂರ್ಯನ ಬೆಳಕಿಗೆ ಬನ್ನಿ. ಇದರಿಂದ ಚಳಿಗಾಲದಲ್ಲಿ ಏಕಾಏಕಿ ಕಡಿಮೆ ಆಗುವ ವಿಟಮಿನ್ ಡಿ (Vitamin D) ಕೊರತೆಯನ್ನು (Shortage) ನಿವಾರಣೆ ಮಾಡಿಕೊಳ್ಳಬಹುದು. ಜತೆಗೆ, ಮನಸ್ಥಿತಿ ಕುಸಿಯದಂತೆಯೂ ನೋಡಿಕೊಳ್ಳಬಹುದು. ಚಳಿಗಾಲದಲ್ಲಿ ಖಿನ್ನತೆಯ (Depression) ಸಮಸ್ಯೆ ಹೆಚ್ಚುವುದು ಅಧ್ಯಯನಗಳಿಂದ ಸಾಬೀತಾಗಿರುವ ಅಂಶ. ಈ ಖಿನ್ನತೆ ತಡೆಗಟ್ಟಲು ಸಹ ಸೂರ್ಯನ ಬೆಳಕು ಸಹಾಯಕ. 

ಯಾವಾಗಲೂ ಸ್ಟ್ರೆಸ್ ಅನ್ನೋರ ಗಮನಕ್ಕೆ, ಆಯುರ್ದವೇದದಲ್ಲಿದೆ ಸಿಂಪಲ್ ಮದ್ದು

•    ಆರೋಗ್ಯಕರ ಆಹಾರ (Healthy Food) ಸೇವನೆ
ಬೇರೆ ಕಾಲದಂತೆ ಚಳಿಗಾಲದಲ್ಲೂ ಆಹಾರ ಸೇವನೆಯ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಚಳಿಗಾಲದಲ್ಲಿ ಸಾಧ್ಯವಾದಷ್ಟು ಸಿಹಿ (Sweet) ತಿನಿಸು ಮತ್ತು ಕರಿದ ತಿಂಡಿಗಳಿಂದ (Fried Foods) ದೂರವಿರಬೇಕು. ಆಗ ದೇಹದಲ್ಲಾಗುವ ಕಿರಿಕಿರಿ ಕಡಿಮೆ ಆಗುತ್ತದೆ. ಚಳಿ ಎಂದು ಪದೇ ಪದೆ ಕರಿದ ತಿನಿಸುಗಳನ್ನು ತಿನ್ನುತ್ತಿದ್ದರೆ, ಟೀ-ಕಾಫಿ, ಮದ್ಯಪಾನ ಸೇವನೆ ಹೆಚ್ಚಿಸಿದರೆ ಸಮಸ್ಯೆಯೂ ಹೆಚ್ಚಾಗುತ್ತದೆ. 
 

click me!