ದೇಹದಲ್ಲಿರುವ ಅಧಿಕ ಕೊಬ್ಬು ಭಾರೀ ಅನಾಹುತ ಸೃಷ್ಟಿಸಬಹುದು. ರಕ್ತನಾಳಗಳಲ್ಲಿ ರಕ್ತದ ಹರಿಯುವಿಕೆಗೆ ಧಕ್ಕೆ ತಂದು ಹೃದಯದ ಸಮಸ್ಯೆ ಹಾಗೂ ಪಾರ್ಶ್ವವಾಯುವಿಗೆ ಕಾರಣವಾಗಬಲ್ಲದು. ರಕ್ತದಲ್ಲಿ ಅಧಿಕ ಕೊಬ್ಬು ಶೇಖರಣೆ ಆಗುತ್ತಿದೆ ಎನ್ನುವುದು ಕೆಲವು ಲಕ್ಷಣಗಳಿಂದ ತಿಳಿದುಬರುತ್ತದೆ. ಆಗ ಎಚ್ಚೆತ್ತುಕೊಳ್ಳಬೇಕು.
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೊಲೆಸ್ಟ್ರಾಲ್ ಮಟ್ಟದ ಬಗ್ಗೆ ಮಾತನಾಡುತ್ತಾರೆ. ಇದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವೂ ಹೌದು. ಏಕೆಂದರೆ, ಕೊಬ್ಬು ದೇಹಕ್ಕೆ ಎಷ್ಟು ಅಗತ್ಯವೋ, ಪ್ರಮಾಣ ಹೆಚ್ಚಾದರೆ ಅಷ್ಟೇ ಸಮಸ್ಯೆಯನ್ನೂ ತರುತ್ತದೆ. ಉತ್ತಮ ಕೊಬ್ಬು ದೇಹದ ಚಟುವಟಿಕೆಗೆ ಅತ್ಯಗತ್ಯ. ಆದರೆ, ಕೆಟ್ಟ ಕೊಬ್ಬಿನ ಪ್ರಮಾಣದ ಹೆಚ್ಚಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ, ರಕ್ತನಾಳಗಳಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಅಸಲಿಗೆ ಕೊಬ್ಬು ಎನ್ನುವುದು ರಕ್ತದಲ್ಲಿ ವ್ಯಾಕ್ಸ್ ನಂತೆ ಇರುತ್ತದೆ. ರಕ್ತನಾಳಗಳಲ್ಲಿ ಕೊಬ್ಬು ಹೆಚ್ಚುವುದರಿಂದ ಹೃದಯದವರೆಗೆ ರಕ್ತದ ಹರಿವು ನಿಧಾನವಾಗುತ್ತದೆ. ಇದರಿಂದ ಹೃದಯದ ರೋಗ, ಪಾರ್ಶ್ವವಾಯುವಿನ ಅಪಾಯ ಹೆಚ್ಚುತ್ತದೆ. ಜತೆಗೆ, ಪೆರಿಫೆರಲ್ ಆರ್ಟರಿ ಡಿಸೀಸ್ ಎನ್ನುವ ಸಮಸ್ಯೆಗೂ ತುತ್ತಾಗಬೇಕಾಗುತ್ತದೆ. ಅಷ್ಟಕ್ಕೂ ರಕ್ತನಾಳಗಳಲ್ಲಿ ಕೊಬ್ಬು ಶೇಖರವಾಗುತ್ತಿರುವುದು ಕೆಲವು ಲಕ್ಷಣಗಳ ಮೂಲಕ ಗೊತ್ತಾಗುತ್ತದೆ. ಇದೊಂದು ಸೈಲೆಂಟ್ ಕಿಲ್ಲರ್ ಆಗಿರುವುದರಿಂದ ಸಣ್ಣದೊಂದು ಲಕ್ಷಣಕ್ಕೂ ಎಚ್ಚೆತ್ತುಕೊಳ್ಳುವುದು ಅಗತ್ಯ. ತೀರ ಆರಂಭಿಕ ಲಕ್ಷಣವೆಂದರೆ, ಕಾಲುಗಳಲ್ಲಿ ಉಂಟಾಗುವ ಸೆಳೆತ. ಇನ್ನೂ ಹಲವು ಲಕ್ಷಣಗಳನ್ನು ಕಾಣಬಹುದು. ಅವು ಕಂಡುಬಂದಾಗ ನಿರ್ಲಕ್ಷ್ಯ ವಹಿಸದೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಕಾಲುಗಳಲ್ಲಿ ಸೆಳೆತ (Spasms)
ಕಾಲುಗಳಲ್ಲಿ ಸೆಳೆತ (Cramp) ಬರುವುದು ಪೆರಿಫೆರಲ್ (Peripheral Artery Disease) ರೋಗದ ಮೊದಲ ಲಕ್ಷಣ. ಕಾಲುಗಳ ಮಾಂಸಖಂಡಗಳಲ್ಲಿ (Muscles) ಇದ್ದಕ್ಕಿದ್ದ ಹಾಗೆ ನೋವು (Pain), ಸೆಳೆತ ಉಂಟಾಗುತ್ತದೆ. ಇದರಿಂದ ಕೆಲವೊಮ್ಮೆ ಭಾರೀ ನೋವಾಗಬಹುದು. ಇದು ಯಾವಾಗ ಉಂಟಾಗುತ್ತದೆ ಎಂದರೆ, ನೀವು ವಿಶ್ರಾಂತಿ (Rest) ಸ್ಥಿತಿಯಿಂದ ಯಾವುದಾದರೊಂದು ಕೆಲಸಕ್ಕೆ ಮೇಲೆದ್ದಾಗ ಸೆಳೆತವಾಗುತ್ತದೆ. ರೆಸ್ಟ್ ಮಾಡಿದ ಬಳಿಕ ಕೆಲಸ ಆರಂಭಿಸಲು ಮುಂದಾಗುವ ಸಮಯದಲ್ಲಿ, ದೀರ್ಘ ನಿದ್ರೆಯಿಂದ ಎದ್ದ ಬಳಿಕ ಕಂಡುಬರುತ್ತದೆ. ರಕ್ತದ ಪರಿಚಲನೆಯಲ್ಲಿ (Blood Flow) ಉಂಟಾಗುವ ಸಮಸ್ಯೆಯಿಂದ ಹೀಗಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ, ರಕ್ತನಾಳಗಳಲ್ಲಿ ಬ್ಲಾಕ್ (Block) ಆಗುವುದು.
undefined
Fitness Tips : ಕುರ್ಚಿಯಲ್ಲಿ ಕುಳಿತೇ ಹೊಟ್ಟೆ ಬೊಜ್ಜು ಕಡಿಮೆ ಮಾಡ್ಕೊಳ್ಳಿ
ಸೆಳೆತಕ್ಕೆ ಕೊಬ್ಬೇ ಹೇಗೆ ಕಾರಣ?
ಕಾಲು ಸೆಳೆತ ಯಾವುದಾದರೂ ಬೇರೆ ಸಮಸ್ಯೆಯಿಂದ ಉಂಟಾಗಿರಬಹುದು, ಕೊಬ್ಬೇ ಕಾರಣವೆಂದು ಹೇಗೆ ಪರಿಗಣಿಸಬೇಕು ಎನ್ನುವ ಪ್ರಶ್ನೆಗೆ ಉತ್ತರವಿದೆ. ಕೆಲಸ ಮಾಡುತ್ತಿರುವಾಗ ಅಥವಾ ಮಲಗಿದಾಗ ಹೀಗಾದರೆ ಅದು ಬೇರೆ ಸಮಸ್ಯೆ ಎನ್ನಬಹುದು. ಆದರೆ, ರೆಸ್ಟ್ ಮಾಡಿದ ಬಳಿಕ ಸೆಳೆತ ಉಂಟಾಗುವುದು ಪೆರಿಫೆರಲ್ ರೋಗದ ಲಕ್ಷಣವೇ ಆಗಿರುತ್ತದೆ ಎನ್ನುವುದು ಹಲವು ಅಧ್ಯಯನಗಳಿಂದ ಸಾಬೀತಾಗಿದೆ. ಅಲ್ಲದೆ, ಈ ರೋಗದಿಂದ ವ್ಯಕ್ತಿ ಕುಂಟು ಹಾಕಬಹುದು, ಕುಂಟು ನಡಿಗೆಯೂ ಉಂಟಾಗಬಹುದು. ಇದರಿಂದ ಕಾಲು ನಡುಗಬಹುದು, ದುರ್ಬಲವಾದಂತೆ (Weak), ಭಾರವಾದಂತೆ ಅನಿಸಬಹುದು. ಅಲ್ಲದೆ ಕಾಲುಗಳ ಸೆಳೆತ ಹಿಂಭಾಗದಿಂದ ಅಂದರೆ ಹಿಪ್ಸ್ (Hips) ಬಳಿಯಿಂದ ಶುರುವಾಗಬಹುದು. ಇದರಿಂದ ದೇಹ ಕ್ರಿಯಾಶೀಲತೆಯನ್ನು ಇನ್ನಷ್ಟು ಕಳೆದುಕೊಂಡು ಕೊಬ್ಬಿನ ಸಮಸ್ಯೆ ಹೆಚ್ಚುತ್ತದೆ.
ಇತರೆ ಲಕ್ಷಣಗಳು
• ಪಾದಗಳ ಅಡಿಯಲ್ಲಿ ನೋವು ಉಂಟಾಗಬಹುದು. ರಾತ್ರಿ ನೇರವಾಗಿ ಮಲಗಿದ್ದಾಗ ಹೆಚ್ಚು ನೋವಾಗಬಹುದು.
• ಕಾಲುಗಳ ಚರ್ಮ ತಣ್ಣಗಾಗಬಹುದು.
• ಕಾಲುಗಳಲ್ಲಿ ಪದೇ ಪದೆ ಹುಣ್ಣಾಗಬಹುದು ಹಾಗೂ ಬೇಗ ವಾಸಿಯಾಗದೆ ಇರಬಹುದು.
Health Tips: ಈ ಜನರಲ್ಲಿ ಕೆಟ್ಟ ಕೊಲೆಸ್ಟ್ರಾಲ್ 100 ಪಟ್ಟು ವೇಗದಲ್ಲಿ ಹೆಚ್ಚುತ್ತೆ
ಆಹಾರದಲ್ಲೂ ಇರಲಿ ಎಚ್ಚರಿಕೆ
ಇಷ್ಟೆಲ್ಲ ಲಕ್ಷಣಗಳಿದ್ದರೂ ರಕ್ತನಾಳಗಳಲ್ಲಿ ಕೊಬ್ಬು (Fat) ಹೆಚ್ಚಾಗುವುದು ಕೆಲವೊಮ್ಮೆ ಅರಿವಿಗೆ ಬರುವುದಿಲ್ಲ. ಅದಕ್ಕಾಗಿ ಕಾಲಕಾಲಕ್ಕೆ ರಕ್ತದ ಪರೀಕ್ಷೆ (Blood Test) ಮಾಡಿಸುವುದು ಅಗತ್ಯ. ಕೊಬ್ಬಿನ ಮಟ್ಟ (Cholesterol Level) ಕಡಿಮೆ ಮಾಡಲು ಮಾಂಸಾಹಾರಿಗಳು ಮೀನು ಸೇವನೆ ಮಾಡಬಹುದು. ಲಿವರ್, ಆರ್ಗನ್ ಮಿಟ್, ಮೊಟ್ಟೆಯ ಹಳದಿ ಭಾಗ, ಕೊಬ್ಬುಯುಕ್ತ ಡೇರಿ ಉತ್ಪನ್ನಗಳನ್ನು ಸೇವಿಸಲೇಬಾರದು. ಬೇಳೆಕಾಳು, ಧಾನ್ಯಗಳು, ಹಸಿರು ಸೊಪ್ಪು, ಸೇಬು, ಕಿತ್ತಳೆ, ಪೇರಳೆ ತಿನ್ನಬೇಕು. ಹೆಚ್ಚು ಉಪ್ಪು ತಿನ್ನಬಾರದು. ಮದ್ಯಪಾನ ಮಾಡಬಾರದು.