ಎಣ್ಣೆ (Drinks) ಹೊಡೆಯೋರು ಹಾಗೇ ಸುಮ್ನೆ ಕೂತ್ಕೊಂಡಿರುವಾಗ ಮಾತನಾಡುವುದನ್ನು ನೀವು ಕೇಳಿಸ್ಕೊಂಡಿದ್ದೀರಾ ? ಏನೆಲ್ಲಾ ಮಾತಾಡ್ತಾರೆ ನೋಡಿ. ಅದ್ರಲ್ಲಿ ಸಾಮಾನ್ಯವಾಗಿ ಕೇಳಿ ಬರೋ ಮಾತು ಡ್ರಿಂಕ್ಸ್ ಮಾಡಿಯಾದ್ಮೇಲೆ ಸಿಕ್ಕಾಪಟ್ಟೆ ಹಸಿವಾಗುತ್ತೆ (Hungry) ಅನ್ನೋದು. ಇಷ್ಟಕ್ಕೂ ಮದ್ಯಪಾನದ ನಂತರ ಸಿಕ್ಕಾಪಟ್ಟೆ ಹಸಿವಾಗೋದಕ್ಕೆ ಕಾರಣವೇನು ?
ಇವತ್ತಿನ ದಿನಗಳಲ್ಲಿ ಕುಡಿಯೋದೆ ನನ್ ವೀಕ್‌ನೆಸ್ಸು ಅನ್ನೋರೆ ಹೆಚ್ಚಿನವರು. ಕೆಲವೊಬ್ರಿಗೆ ದಿನದಲ್ಲಿ ಮೂರು ಹೊತ್ತು ಅಲ್ಕೋಹಾಲ್ (Alcohol) ಹೊಟ್ಟೆಗೆ ಹೋಗದಿದ್ರೆ ಆಗೋದೆ ಇಲ್ಲ. ಇನ್ನು ಕೆಲವರು ಸೋಷಿಯಲ್ ಡ್ರಿಂಕಿಂಗ್ ಅಂತ ಎಲ್ಲರೂ ಜತೆಯಾಗಿ ಸೇರಿದಾಗಲೊಮ್ಮೆ ಕುಡಿಯುತ್ತಾರೆ. ಎಣ್ಣೆ ಹೊಡೆಯೋರು ಹಾಗೇ ಸುಮ್ನೆ ಕೂತ್ಕೊಂಡಿರುವಾಗ ಮಾತನಾಡುವುದನ್ನು ನೀವು ಕೇಳಿಸ್ಕೊಂಡಿದ್ದೀರಾ ? ಏನೆಲ್ಲಾ ಮಾತಾಡ್ತಾರೆ ನೋಡಿ. ಅದ್ರಲ್ಲಿ ಸಾಮಾನ್ಯವಾಗಿ ಕೇಳಿ ಬರೋ ಮಾತು ಡ್ರಿಂಕ್ಸ್ ಮಾಡಿಯಾದ್ಮೇಲೆ ಸಿಕ್ಕಾಪಟ್ಟೆ ಹಸಿವಾಗುತ್ತೆ (Hungry) ಅನ್ನೋದು. ಅದು ನಿಜಾ ಕೂಡಾ. ಎಷ್ಟೋ ಮಂದಿ ಡ್ರಿಂಕ್ಸ್ ಪಾರ್ಟಿಯಾದ್ಮೇಲೆ ಸಿಕ್ಕಾಪಟ್ಟೆ ತಿನ್ತಾರೆ. ಈ ರೀತಿ ಹಸಿವಾಗೋದಕ್ಕೆ ಕಾರಣವೇನು ? ಈ ರೀತಿ ಹಸಿವಾಗದಂತೆ ಏನು ಮಾಡಬಹುದು ತಿಳಿಯೋಣ.
ಸುದೀರ್ಘ ದಿನದ ನಂತರ ಒಂದು ಗ್ಲಾಸ್ ಡ್ರಿಂಕ್ಸ್ ಸೇವನೆ ಬಹುತೇಕರಿಗೆ ಇಷ್ಟವಾಗುತ್ತದೆ. ಮದ್ಯಸೇವನೆ ರಿಲ್ಯಾಕ್ಸ್ ಉಂಟು ಮಾಡುತ್ತದೆಯಾದರೂ ಹೆಚ್ಚು ಡ್ರಿಂಕ್ಸ್ ಮಾಡೋ ಅಭ್ಯಾಸ ಆರೋಗ್ಯಕ್ಕೆ (Health) ಒಳ್ಳೆಯದಲ್ಲ. ಹೆಚ್ಚು ಕುಡಿಯುವುದರಿಂದ ಅಪಾಯ (Danger) ಸಹ ಹೆಚ್ಚು.ಇದು ಹೃದಯ ಸಂಬಂಧಿ ಸಮಸ್ಯೆ, ಅಧಿಕ ರಕ್ತದೊತ್ತಡ ಮತ್ತು ವಿವಿಧ ಕ್ಯಾನ್ಸರ್ (Cancer)ಗಳ ಸಮಸ್ಯೆಗೆ ಕಾರಣವಾಗುತ್ತದೆ. ಇಷ್ಟು ಮಾತ್ರವಲ್ಲ ತ್ವರಿತವಾಗಿ ಅಲ್ಕೋಹಾಲ್ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವು ಯೋಚಿಸುವುದಕ್ಕಿಂತ ವೇಗವಾಗಿ ನಿಮಗೆ ವಯಸ್ಸಾಗುತ್ತದೆ ಮತ್ತು ಚರ್ಮ (Skin)ದಲ್ಲಿ ಹೆಚ್ಚು ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಬೆಳೆಸುತ್ತದೆ ಏಕೆಂದರೆ ಅಲ್ಕೋಹಾಲ್ ಸೇವನೆ ನಿಮ್ಮನ್ನು ನಿರ್ಜಲೀಕರಣಗೊಳಿಸುತ್ತದೆ. ಇದು ನಿಮ್ಮಲ್ಲಿ ಹೊಟ್ಟೆ ಉಬ್ಬುವುದು ಮತ್ತು ಹೆಚ್ಚು ಹಸಿವಾಗುವ ಸಮಸ್ಯೆಗೆ ಕಾರಣವಾಗುತ್ತದೆ. ಡ್ರಿಂಕ್ಸ್ ಮಾಡುವಾಗ ಯಾಕೆ ತುಂಬಾ ಹಸಿವಾಗುತ್ತದೆ ಎಂಬುದಕ್ಕೆ ಕಾರಣ ಇಲ್ಲಿದೆ.
Drinking Ritual: ಕುಡಿಯುವ ಮೊದಲು ಮದ್ಯವನ್ನು ನೆಲಕ್ಕೆ ಸಿಂಪಡಿಸುವುದೇಕೆ ?
ಅತಿಯಾದ ಮದ್ಯಪಾನ ಪ್ರತಿಬಂಧಕಗಳನ್ನು ಕಡಿಮೆ ಮಾಡುತ್ತದೆ: ಮದ್ಯಪಾನ ಮಾಡುವಾಗ ನೀವು ಅತಿರೇಕವನ್ನು ಅನುಭವಿಸುವ ಒಂದು ಕಾರಣವೆಂದರೆ ಅಲ್ಕೋಹಾಲ್ ದೇಹದಲ್ಲಿ ಪ್ರತಿಬಂಧಕಗಳನ್ನು ಕಡಿಮೆ ಮಾಡುತ್ತದೆ. ಇದು ನೀವು ಸಾಮಾನ್ಯವಾಗಿ ಮಾಡದಂತಹ ಕೆಲಸಗಳನ್ನು ಮಾಡಲು ಕಾರಣವಾಗುತ್ತದೆ. ಉದಾಹರಣೆಗೆ ಆಹಾರವನ್ನು ಅತಿಯಾಗಿ ಸೇವಿಸುವಂತಾಗುವುದು. ನೀವು ಸಾಮಾನ್ಯವಾಗಿ ತಿನ್ನದಿರುವ ಆಹಾರವನ್ನು ಸಹ ಸೇವಿಸಬಹುದು.
ಮೆದುಳಿನ ನ್ಯೂರಾನ್‌ಗಳು ಹೆಚ್ಚು ಸಕ್ರಿಯವಾಗುತ್ತವೆ: ಮದ್ಯಪಾನದ ಬಳಿಕ ಹೆಚ್ಚು ಹಸಿವಾಗುವುದರ ಹಿಂದೆ ನಿರ್ಧಿಷ್ಟ ಕಾರಣವೂ ಇದೆ. ಹೆಲ್ತ್‌ಲೈನ್ ಪ್ರಕಾರ, ಆಲ್ಕೋಹಾಲ್ ಸೇವಿಸಿದಾಗ, ಮೆದುಳಿನ ನ್ಯೂರಾನ್‌ಗಳು ಹೆಚ್ಚು ಸಕ್ರಿಯವಾಗುತ್ತವೆ. ನಿಮ್ಮ ದೇಹವು ಹಸಿವನ್ನು ನೀಗಿಸಲು ಮತ್ತು ಮೆದುಳಿಗೆ ಬೇಕಾದುದನ್ನು ನೀಡಲು ಪ್ರಯತ್ನಿಸಿದಾಗ ಅದು ಹೆಚ್ಚು ಹಸಿವನ್ನು ತೋರಿಸುತ್ತದೆ. ಹೆಚ್ಚುವರಿಯಾಗಿ, ಆಲ್ಕೋಹಾಲ್ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ, ಇದು ನಷ್ಟವನ್ನು ತುಂಬಲು ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆ ಪದಾರ್ಥಗಳನ್ನು ತಿನ್ನುವಂಥಾ ಪ್ರಚೋದನೆ ಉಂಟಾಗಬಹುದು.
Side Effects of Wine: ಒಂದು ಪೆಗ್ ವೈನ್ ಕುಡಿದರೆ ಆರೋಗ್ಯಕ್ಕೆ ಎಷ್ಟು ಹಾನಿಯಿದೆ ಗೊತ್ತಾ ?
ನೀವು ಕುಡಿಯುವಾಗ ಅತಿಯಾಗಿ ತಿನ್ನದಿರುವಂತೆ ಮಾಡುವುದು ಹೇಗೆ ?
ಅಲ್ಕೋಹಾಲ್ ಸೇವನೆಯ ಸಂದರ್ಭ ಹೆಚ್ಚು ಹಸಿವಾಗದಿರಲು ನೀವು ಕೆಲವೊಂದು ಕ್ರಮವನ್ನು ಅನುಸರಿಸಬಹುದು. ಈ ಮೂಲಕ ಯಾವುದೇ ಸಮಸ್ಯೆಯಿಲ್ಲದದೆ ಮದ್ಯಪಾನ ಮಾಡಬಹುದು.
ಡ್ರಿಂಕ್ಸ್ ಪಾರ್ಟಿಗೆ ಹೋಗುವಾಗ ಊಟ ಮಾಡದೆ ಹೋಗಬೇಡಿ: ಹೆಚ್ಚಿನವರು ಡ್ರಿಂಕ್ಸ್ ಪಾರ್ಟಿ ಎಂದ ತಕ್ಷಣ ಏನನ್ನೂ ಸೇವಿಸದೆ ಹೊರಟು ಬಿಡುತ್ತಾರೆ. ಹಾಗೆ ಮಾಡಬೇಡಿ. ಬದಲಿಗೆ ಹೊಟ್ಟೆ ತುಂಬಾ ತಿಂದು ನಂತರವಷ್ಟೇ ಮದ್ಯಪಾನ ಮಾಡಿ. ಇದರಿಂದ ಆಗಾಗ ಹಸಿವಾಗುವ ಸಮಸ್ಯೆ ಇರುವುದಿಲ್ಲ. ಪ್ರೋಟೀನ್, ತರಕಾರಿಗಳು ಮತ್ತು ಕಾರ್ಬೋಹೈಡ್ರೇಟ್‌ಗಳೊಂದಿಗೆ ಸಮರ್ಥನೀಯ ಮತ್ತು ಸಮತೋಲಿತ ಊಟವನ್ನು ಮಾಡಿ.
ಕಡಿಮೆ ಮದ್ಯಪಾನ ಮಾಡಿ: ಒಬ್ಬೊಬ್ಬರ ದೇಹಕ್ಕೆ ಇಂತಿಷ್ಟೇ ಮದ್ಯಪಾನವನ್ನು ಅರಗಿಸಿಕೊಳ್ಳುವ ಶಕ್ತಿಯಿರುತ್ತದೆ. ಹೀಗಾಗಿ ಮತ್ತೊಬ್ಬರು ಕುಡಿಯುತ್ತಾರೆಂದು ನೀವು ಅತಿಯಾಗ ಕುಡಿಯಲು ಹೋಗಬೇಡಿ. ಬದಲಿಗೆ ನಿಮ್ಮನ್ನು ನೀವು ನಿಯಂತ್ರಿಸಲು ಸಾಧ್ಯವಾಗುವಷ್ಟು ಮಾತ್ರ ಮದ್ಯಪಾನ ಮಾಡಿ. ಇದರಿಂದ ಯಾವುದೇ ಸಮಸ್ಯೆಗಳನ್ನು ಕಾಡುವುದಿಲ್ಲ.
ಹೆಚ್ಚು ನೀರು ಕುಡಿಯಿರಿ: ಮದ್ಯಪಾನವನ್ನು ಯಾವಾಗಲೂ ಅದೇ ರೂಪದಲ್ಲಿ ಕುಡಿಯಲು ಹೋಗಬೇಡಿ. ಬದಲಿಗೆ ಅದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇರಿಸಿ. ಮದ್ಯದಲ್ಲಿರುವ ಮತ್ತು ಕಡಿಮೆಯಾಗುವಂತೆ ನೋಡಿಕೊಳ್ಳಿ. ಅಥವಾ ಮದ್ಯಪಾನ ಮಾಡಿ ನಂತರವಾರೂ ಸರಿ. ಒಟ್ನಲ್ಲಿ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹೋಗಲಿ. ಇದರಿಂದ ಹ್ಯಾಂಗೋವರ್ ಸಮಸ್ಯೆ ಕಾಡುವುದಿಲ್ಲ.