ಹೊತ್ತಿಲ್ಲದ ಹೊತ್ತಿಗೆ ಮಲಗಿದರೆ ಆರೋಗ್ಯಕ್ಕೆ ಕುತ್ತು, ಹಾಗಾದರೆ ಮಲಗಲು ಯಾವುದು ಬೆಸ್ಟ್ ಟೈಮ್?

By Suvarna News  |  First Published Nov 1, 2022, 2:48 PM IST

ರಾತ್ರಿ 12 ಆದ್ರೂ ಅನೇಕರು ಮಲಗೋದಿಲ್ಲ. ಹಾಸಿಗೆ ಮೇಲೆ ಹೋದ್ಮೇಲೂ ಮೊಬೈಲ್ ನೋಡ್ತಾ ಸಮಯ ಕಳೆಯುತ್ತಾರೆ. ಬೆಳಿಗ್ಗೆ ಕಣ್ಣು ಕೂರೋದ್ರಿಂದ ಬೇಗ ಏಳಲು ಸಾಧ್ಯವಾಗೋದಿಲ್ಲ. ಆಯುರ್ವೇದದ ಪ್ರಕಾರ, ಬೇಗ ಏಳ್ಬೇಕೆಂದ್ರೆ ಕೆಲ ಟಿಪ್ಸ್ ಅನುಸರಿಸಬೇಕು. 
 


ಬೇಗ ಮಲಗಿ ಬೇಗ ಏಳು ಎಂಬ ನಿಯಮವಿದೆ. ಇದನ್ನು ಬಾಯಲ್ಲಿ ಸುಲಭವಾಗಿ ಹೇಳಬಹುದು. ಆದ್ರೆ ಅದನ್ನು ಪಾಲಿಸೋದು ಬಹಳ ಕಷ್ಟ. ಕೆಲಸದ ಕಾರಣ ಜನರು ಮನೆಗೆ ಬರೋದು ತಡವಾಗುತ್ತದೆ. ಮನೆಯಲ್ಲಿದ್ದವರು ಬೇರೆ ಬೇರೆ ಕೆಲಸದ ಕಾರಣ ತಡವಾಗಿ ಮಲಗ್ತಾರೆ. ಇದ್ರಿಂದ ಬೇಗ ಏಳಲು ಸಾಧ್ಯವಾಗೋದಿಲ್ಲ. ಬೇಗ ಎದ್ದಿಲ್ಲವೆಂದ್ರೆ ಒತ್ತಡ ಹೆಚ್ಚಾಗುತ್ತದೆ. ವ್ಯಾಯಾಮ ಸೇರಿದಂತೆ ಯಾವುದೇ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ.  ಬೇಗ ಏಳಲು ಸಾಧ್ಯವಾಗದೆ ಹೋಗೋದನ್ನು ವೈದ್ಯಕೀಯ ವಿಜ್ಞಾನದಲ್ಲಿ ಇದನ್ನು ಅಬ್ ನಾರ್ಮಲ್ ಸಿರ್ಕಾಡಿಯನ್ ರಿದಮ್‌ನಲ್ಲಿ ಅಡಚಣೆ ಎಂದು ಕರೆಯಲಾಗುತ್ತದೆ.

ಹೇಗಾದ್ರೂ ಮುಂಜಾನೆ ಬೇಗ ಏಳ್ಬೇಕು ಅಂತಾ ಪ್ಲಾನ್ (Plan) ಮಾಡ್ತೇವೆ. ಆದ್ರೆ ಏನು ಮಾಡಿದ್ರೂ ಸೂರ್ಯ (Sun) ಬರುವ ಮೊದಲು ಏಳಲು ಸಾಧ್ಯವಾಗುವುದಿಲ್ಲ. ಮುಂಜಾನೆ ಬೇಗ ಏಳಬೇಕೆಂದ್ರೆ ಕೆಲ ಟಿಪ್ಸ್ ನಾವು ಹೇಳ್ತೇವೆ. ಅದನ್ನು ಪಾಲನೆ ಮಾಡಿದ್ರೆ ಬೆಳಿಗ್ಗೆ ನೀವು ಬೇಗ  ಏಳಬಹುದು ಈ ಟ್ರಿಕ್ ನಾವು ಹೇಳ್ತಿಲ್ಲ. ಆಯುರ್ವೇದದಲ್ಲಿ ಹೇಳಲಾಗಿದೆ.   .

Latest Videos

undefined

ಪಿತ್ತ ಅವಧಿಯ ಮೊದಲು ಮಲಗಿ : ಆಯುರ್ವೇದ (Ayurveda) ದ ಪ್ರಕಾರ ಪ್ರತಿ ರಾತ್ರಿ ಪಿತ್ತ ಕಾಲದ ಮೊದಲು ಮಲಗಬೇಕು ಎಂದು ಆಯುರ್ವೇದ ತಜ್ಞ (Expert) ರು ಹೇಳಿದ್ದಾರೆ. ಈ ಸಮಯ ರಾತ್ರಿ 11 ಗಂಟೆಯಿಂದ ರಾತ್ರಿ 2 ಗಂಟೆಯವರೆಗೆ ಇರುತ್ತದೆ. ಈ ಸಮಯವು ನಿಮ್ಮ ಮೆದುಳಿ (Brain) ಗೆ ಹೆಚ್ಚಿನ ಶಕ್ತಿ ನೀಡುವ ಸಮಯವಾಗಿದೆ. ಹಾಗಾಗಿ ನೀವು 11 ಗಂಟೆಯ ಮೊದಲು ಮಲಗಬೇಕು. 11 ಗಂಟೆಗೆ ಮಲಗಬೇಕೆಂದ್ರೆ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬಳಸುವುದನ್ನು ಮೊದಲು ನಿಲ್ಲಿಸಬೇಕು.

ಈ ರೀತಿಯಾಗಿ ನಿಮ್ಮ ಸ್ಕ್ರೀನ್ ಟೈಮ್ ಕಡಿಮೆ ಮಾಡೋದನ್ನು ಕಲಿಯಿರಿ

ರಾತ್ರಿ 11 ಗಂಟೆಯಿಂದ 2 ಗಂಟೆಯವರೆಗೆ ಗಾಢ ನಿದ್ರೆ ಬರಬೇಕೆಂದ್ರೆ ಏನು ಮಾಡ್ಬೇಕು ? : ಮಲಗುವ ಒಂದು ಅಥವಾ ಎರಡು ಗಂಟೆಗಳ ಮೊದಲು ಸಂತೋಷ ಮತ್ತು ಶಾಂತಿಯನ್ನು ನೀಡುವ ಕೆಲಸವನ್ನು ನೀವು ಮಾಡಬೇಕು. ಸಂಜೆ 6 ಗಂಟೆಯ ನಂತರ ವ್ಯಾಯಾಮ ಮಾಡದಿರುವುದು ಒಳ್ಳೆಯದು. ಹಾಗೆಯೇ ಕೆಫೀನ್ ತೆಗೆದುಕೊಳ್ಳಬಾರದು. ರಾತ್ರಿಯಲ್ಲಿ ಮನಸ್ಸಿಗೆ ಶಾಂತಿ ನೀಡುವ ಶಬ್ಧವನ್ನು ಆಲಿಸಬೇಕು. ಒಳ್ಳೊಳ್ಳೆ ಪುಸ್ತಕವನ್ನು ಓದಬೇಕು.

ಸೂರ್ಯನ ಬೆಳಕು ಕೂಡ ಬಹಳ ಮುಖ್ಯ : ಸೂರ್ಯನ ಬೆಳಕು ನಮ್ಮ ಮೈಗೆ ಸೋಕುತ್ತಿದ್ದಂತೆ ದೇಹದ ಸಿರ್ಕಾಡಿಯನ್ ಲಯ  ಸುಧಾರಿಸುತ್ತದೆ. ಇದ್ರಿಂದ ರಾತ್ರಿ ಸರಿಯಾದ ನಿದ್ರೆ ಬರುತ್ತದೆ.  ಹಾಗಾಗಿ ಬೆಳಿಗ್ಗೆ 10 ರಿಂದ 20 ನಿಮಿಷಗಳ ಕಾಲ ಬಿಸಿಲಿನಲ್ಲಿ ನಡೆಯುವುದು ಒಳ್ಳೆಯದು. ನೀವು ಮನೆಯ ಕಿಟಕಿ, ಬಾಗಿಲುಗಳನ್ನು ತೆರೆದು ಸೂರ್ಯನ ಬೆಳಕು ಹಾಗೂ ಗಾಳಿ ಮನೆಯೊಳಗೆ ಬರುವಂತೆ ನೋಡಿಕೊಳ್ಳಿ. 

ಜೀವನಶೈಲಿ ಬದಲಿಸಿ : ಬೆಳಿಗ್ಗೆ ಬೇಗ ಏಳಲು ಸಾಧ್ಯವಾಗ್ತಿಲ್ಲ ಎನ್ನುವವರು ದಿನಚರಿಯನ್ನು ಬದಲಿಸಬೇಕು. ಬೆಳಿಗ್ಗೆ ವ್ಯಾಯಾಮ ಮಾಡಬೇಕು. ಅಲಾರಾಂ ಗಡಿಯಾರವನ್ನು ನಾವು ಸಾಮಾನ್ಯವಾಗಿ ತಲೆ ಬದಿಯಲ್ಲಿ ಇಟ್ಟುಕೊಳ್ತೆವೆ. ಹಾಗಾಗಿ ಅಲಾರಾಂ ಆದ ತಕ್ಷಣ ಬಂದ್ ಮಾಡಿ ಮತ್ತೆ ಮಲಗ್ತೇವೆ. ಅದೇ ಅಲಾರಾಂ ಬೇರೆ ರೂಮಿನಲ್ಲಿದ್ದರೆ ಅದನ್ನು ಬಂದ್ ಮಾಡಲು ಎದ್ದು ಬರೋದು ಅನಿವಾರ್ಯವಾಗುತ್ತದೆ. ಒಮ್ಮೆ ಎದ್ದ ನಂತ್ರ ಮತ್ತೆ ಸುಲಭವಾಗಿ ನಿದ್ರೆ ಬರೋದಿಲ್ಲ. ಎದ್ದ ಮೇಲೆ ಹಾಸಿಗೆ ಕಡೆ ಹೋಗದೆ ನೀವು ಮುಖ ತೊಳೆದು ವ್ಯಾಯಾಮ ಮಾಡಿದ್ರೆ ಒಳ್ಳೆಯದು.   

ಈ ಗಿಡಮೂಲಿಕೆ ಬಳಸಿದ್ರೆ 5 ನಿಮಿಷಗಳಲ್ಲಿ ನಿದ್ರೆ ಬರುತ್ತೆ! ಟ್ರೈ ಮಾಡಿ ನೋಡಿ

ನಿಮ್ಮ ನಿರ್ಧಾರ ಬದಲಿಸಬೇಡಿ : ಪ್ರತಿ ದಿನ ಈ ಸಮಯಕ್ಕೆ ಮಲಗಬೇಕು, ಈ ಸಮಯಕ್ಕೆ ಏಳಬೇಕು ಎಂಬ ನಿಯಮವನ್ನು ಮಾಡಿ. ಅದನ್ನು ಎಂದೂ ಮುರಿಯಬೇಡಿ. ಭಾನುವಾರ ಜಾಸ್ತಿ ನಿದ್ರೆ ಮಾಡಿದ್ರೆ ಸೋಮವಾರ ಕೂಡ ನಿದ್ರೆ ಎಳೆಯುತ್ತದೆ.   
 

click me!