ಚಳಿ ಅಂದ್ರೆ ಚರ್ಮ ಒರಟಾಗೋದು ಕಾಮನ್ ಬಿಡಿ, ಆದರೆ ಹೀಗ್ ಕಾಪಾಡಿಕೊಳ್ಳಿ

By Suvarna News  |  First Published Nov 1, 2022, 2:28 PM IST

ಚಳಿಗಾಲ(Winter) ಆರಂಭವಾಗಿ ಕೆಲವೇ ದಿನಗಳಾಗಿವೆ. ಆಗಲೇ ಮೈ ಕೈನಲ್ಲೆಲ್ಲಾ ಬಿರುಕು, ಉರಿ, ಚರ್ಮ ಒಣಗುವುದು, ಒಡಕುಗಳು ಕಾಣಿಸಿಕೊಳ್ಳುತ್ತಿವೆ. ಬೇಸಿಗೆಗಿಂತ(Summer) ಚಳಿಗಾಲದಲ್ಲಿ ನಮ್ಮ ಚರ್ಮದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಶೀತ(Cold) ವಾತಾವರಣದಲ್ಲಿ ಚರ್ಮದ ಆರೈಕೆಗೆ(Skin Care) ಸಲಹೆಗಳು ಇಲ್ಲಿವೆ.


ಚಳಿಗಾಲ ಆರಂಭವಾಗಿ ಕೆಲವೇ ದಿನಗಳಾಗಿವೆ. ಆಗಲೇ ಮೈ ಕೈನಲ್ಲೆಲ್ಲಾ ಬಿರುಕು, ಉರಿ, ಚರ್ಮ ಒಣಗುವುದು, ಒಡಕುಗಳು ಕಾಣಿಸಿಕೊಳ್ಳುತ್ತಿವೆ. ಶೀತ ವಾತಾವರಣವು ಚರ್ಮದ ಶತ್ರುವಾಗಿದೆ. ಚಳಿಗಾಲ ಎಲ್ಲರೂ ಇಷ್ಟವಾದರೂ, ಇತರೆ ಋತುವಿನಂತೆ(Seasons) ಇದು ತನ್ನದೇ ಆದ ನ್ಯೂನ್ಯತೆಗಳನ್ನು ಹೊಂದಿದೆ. ಚಳಿಗಾಲದಲ್ಲಿ ಗಾಳಿಯಲ್ಲಿ ತೇವಾಂಶವು ಬಹಳ ಕಡಿಮೆ ಇರುತ್ತದೆ. ಶುಷ್ಕ ಗಾಳಿಯು ನಮ್ಮ ಚರ್ಮದಿಂದ ತೇವಾಂಶವನ್ನು ಕಸಿದುಕೊಳ್ಳುತ್ತವೆ. ಹಾಗಾಗಿ ಬೇಸಿಗೆಗಿಂತ ಚಳಿಗಾಲದಲ್ಲಿ ನಮ್ಮ ಚರ್ಮದ ಬಗ್ಗೆ ಹೆಚ್ಚು ಗಮನ ಹರಿಸಬೇಕು. 

ಶೀತ ವಾತಾವರಣದಲ್ಲಿ ಚರ್ಮದ ಆರೈಕೆಗೆ ಸಲಹೆಗಳು ಇಲ್ಲಿವೆ.
1. ವಿಟಮಿನ್ ಇ ಹೊಂದಿರುವ ಮಾಯಿಶ್ಚರೈಸರ್(Moisturise)

ಶೀತ ವಾತಾವರಣದಲ್ಲಿ ಒಣ ಚರ್ಮವನ್ನು(Dry Skin) ತಪ್ಪಿಸಲು, ವಿಟಮಿನ್ ಇ(Vitamin E) ಹೊಂದಿರುವ ಮಾಯಿಶ್ಚರೈಸರ್ ಅನ್ನು ಬಳಸಬೇಕು. ದಿನಕ್ಕೆ ಎರಡರಿಂದ ಮೂರು ಬಾರಿ ಮಾಯಿಶ್ಚರೈಸರ್ ಬಳಸಿ ಮತ್ತು ರಾತ್ರಿ ಮಲಗುವ ಮುನ್ನವೂ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಮುಖದಲ್ಲಿ ಹಾಗೂ ಚರ್ಮದ ಮೇಲೆ ತೇವಾಂಶವಿದ್ದು, ಚರ್ಮ ಒಣಗಿ ಉರಿ, ಬಿರುಕು ಬಿಡುವುದು ಕಡಿಮೆಯಾಗುತ್ತದೆ.

Beauty Tips: ಇದ್ದಿಲಿನ ಮಾಸ್ಕ್ನಲ್ಲಿ ಅಡಗಿದೆ ತ್ವಚೆಯ ಸೌಂದರ್ಯ

Tap to resize

Latest Videos

2. ಸೌಮ್ಯವಾದ ಸ್ಕ್ರಬ್ (Soft Scrub)
ಚಳಿಗಾಲದಲ್ಲಿ ಡೆಡ್ ಸ್ಕಿನ್(Dead kin) ಕೂಡ ಮುಖದ ಮೇಲೆ ಸಂಗ್ರಹವಾಗುತ್ತವೆ. ಅದನ್ನು ಹೋಗಲಾಡಿಸಲು, ವಾರಕ್ಕೆ ಮೂರು ಬಾರಿ ಸೌಮ್ಯವಾದ ಸ್ಕ್ರಬ್ ಬಳಸಿ. ಇದು ಡೆಡ್ ಸ್ಕಿನ್ ಅನ್ನು ತೆಗೆದುಹಾಕುತ್ತದೆ ಮತ್ತು ಮುಖವು ಪೋಷಣೆಯಿಂದ ಉಳಿಯುತ್ತದೆ.

3. ತೆಂಗಿನ ಎಣ್ಣೆ (Coconut Oil)
ತೆಂಗಿನ ಎಣ್ಣೆಯು ತೇವಾಂಶ ಉಳಿಸಿಕೊಳ್ಳುವಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಸ್ನಾನದ ನಂತರ ಅದನ್ನು ನಿಮ್ಮ ಚರ್ಮದ ಮೇಲೆ ಅನ್ವಯಿಸಬಹುದು. ಇದಕ್ಕಾಗಿ ಸ್ನಾನದ ಒಂದು ಗಂಟೆ ಮೊದಲು ಕೊಬ್ಬರಿ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿ ಸ್ವಲ್ಪ ಹೊತ್ತು ಮಸಾಜ್ ಮಾಡಿ ಸ್ನಾನ ಮಾಡಿದ ನಂತರ ಚರ್ಮ ಒಣಗುವುದಿಲ್ಲ. 

4. ಸ್ನಾನಕ್ಕೆ ಬೆಚ್ಚಗಿನ ನೀರು (Warm Water)
ಚಳಿಗಾಲದಲ್ಲಿ ಚಳಿ ಹೆಚ್ಚೆಂದು ಬಿಸಿ ಬಿಸಿ ನೀರನ್ನು ಬಳಸುವುದು ಚರ್ಮಕ್ಕೆ ಒಳ್ಳೆಯದಲ್ಲ. ಈ ಋತುವಿನಲ್ಲಿ, ಸ್ನಾನಕ್ಕೆ ಬಿಸಿನೀರನ್ನು ಬಳಸಬೇಡಿ. ಇದು ಚರ್ಮದ ತೇವಾಂಶವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಉಗುರು ಬೆಚ್ಚಗಿನ ನೀರಿನಿಂದ ಮಾತ್ರ ಸ್ನಾನ ಮಾಡಿ. ಮುಖವನ್ನು ತೊಳೆಯಲು ಬಿಸಿ ಅಥವಾ ತಣ್ಣನೆಯ ನೀರನ್ನು ಬಳಸಬೇಡಿ. ಬದಲಿಗೆ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.

Winter Tips : ಚಳಿಗಾಲದಲ್ಲಿ ಮೆಂತ್ಯ ಸೊಪ್ಪು ತಿಂದು ಆರೋಗ್ಯ ಕಾಪಾಡ್ಕೊಳ್ಳಿ

5. ಹಾಲಿನ ಬಳಕೆ (Milk)
ಚಳಿಗಾಲದಲ್ಲಿ ಮುಖ ಹೆಚ್ಚು ಗಾಳಿಗೆ ತೆರೆದುಕೊಳ್ಳುತ್ತದೆ. ಮುಖವು ಬಹುಬೇಗ ಒಡೆಯುತ್ತದೆ, ಉರಿ ಕಾಣಿಸಿಕೊಳ್ಳುತ್ತದೆ. ಮುಖವು ಶುಷ್ಕವಾಗಿದ್ದರೆ ಅದಕ್ಕೆ ಹಾಲನ್ನು ಬಳಸಿ. ಇದನ್ನು ಮುಖಕ್ಕೆ ಪೂರ್ತಿ ಹಚ್ಚಿ ಸ್ವಲ್ಪ ಹೊತ್ತು ಮಸಾಜ್ ಮಾಡಿ ನಂತರ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಮುಖದ ತೇವಾಂಶ ಕಾಯ್ದುಕೊಳ್ಳುತ್ತದೆ. ರಾತ್ರಿ ಹಾಲನ್ನು ಮುಖಕ್ಕೆ ಹಚ್ಚಿಕೊಂಡು ಮಲಗುವುದು ಸಹ ಒಳ್ಳೆಯ ಫಲಿತಾಂಶ ಕಾಣಬಹುದು.

6. ಸಾಕಷ್ಟು ನೀರು ಕುಡಿಯಿರಿ(Drink Water) 
ದೇಹದಲ್ಲಿನ ತೇವಾಂಶ ಹೀರಿಕೊಳ್ಳುವುದು ಚಳಿಗಾಲದಲ್ಲಿ ಹೆಚ್ಚು. ಅಲ್ಲದೆ ಈ ಸಮಯದಲ್ಲಿ ಹೆಚ್ಚು ಚಳಿ ಇರುವುದರಿಂದ ಚಳಿಗಾಲದಲ್ಲಿ ಬಾಯಾರಿಕೆ ಕಾಣಿಸಿಕೊಳ್ಳುವುದಿಲ್ಲ. ನೀರು ಕುಡಿಯುವುದು ಸಹ ಕಡಿಮೆ. ಇದು ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಅದು ಒಣಗಲು (Dry) ಪ್ರಾರಂಭಿಸುತ್ತದೆ. ಹಾಗಾಗಿ ನೀರು ಕುಡಿಯುವುದನ್ನು ಕಡಿಮೆ ಮಾಡಬೇಡಿ. ಆದರೆ ದಿನಕ್ಕೆ ಎಂಟರಿAದ ಹತ್ತು ಲೋಟ ನೀರು ಕುಡಿಯಿರಿ. ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಚಳಿಗಾಲದಲ್ಲಿ ಪ್ರಯೋಜನಕಾರಿಯಾಗಿದೆ.

7. ಸುಗಂಧ ರಹಿತ ಡಿಟರ್ಜೆಂಟ್ ಬಳಸಿ(Detergent)
ಸುಗಂಧ ರಹಿತ ಲಾಂಡ್ರಿ ಡಿಟರ್ಜೆಂಟ್‌ಗಳು ನಿಮ್ಮ ಚರ್ಮಕ್ಕೆ ಉತ್ತಮ. ಪರಿಮಳವನ್ನು ಹೊಂದಿರುವ ಉತ್ಪನ್ನಗಳು ಬಟ್ಟೆಯಿಂದ ಚರ್ಮಕ್ಕೆ ವರ್ಗಾಯಿಸಬಹುದು ಮತ್ತು ಶುಷ್ಕತೆಯನ್ನು ಉಂಟುಮಾಡಬಹುದು. ಬಟ್ಟೆಯನ್ನು ಮೆದುಗೊಳಿಸುವ ಡ್ರೈಯರ್ ಶೀಟ್‌ಗಳು(Dryer Sheets) ಸಹ ಕೆಟ್ಟದಾಗಿವೆ. ಏಕೆಂದರೆ ಅವುಗಳಲ್ಲಿ ಹುದುಗಿರುವ ಸುಗಂಧ ದ್ರವ್ಯಗಳು ಚರ್ಮಕ್ಕೆ ಹಾನಿಯುಂಟುಮಾಡುತ್ತದೆ.

click me!