ಉತ್ತರ ಕೊರಿಯಾದಲ್ಲಿ ಒಂದೂ ಕೊರೋನಾ ಕೇಸು ಇಲ್ವಾ? ಯಾಕೆ ಅಲ್ಲಿಂದ ಕೊರೋನಾದ ಸುದ್ದಿಯೇ ಬರ್ತಿಲ್ಲ? ಹೀಗೊಂದು ಕುತೂಹಲಕಾರಿ ಪ್ರಶ್ನೆ ಎಲ್ಲರಲ್ಲಿ ಇದೆ.
ಜಗತ್ತಿನ ಬಹುತೇಕ ಎಲ್ಲ ದೇಶಗಳಿಗೂ ಕೊರೋನಾ ವೈರಸ್ ಹಬ್ಬಿದೆ. ದಕ್ಷಿಣ ಕೊರಿಯಾದಲ್ಲೂ ಹಾವಳಿ ಎಬ್ಬಿಸಿದೆ. ಆದರೆ ಅವರು ಕೂಡಲೇ ಎಚ್ಚೆತ್ತುಕೊಂಡು, ಗಡಿ ಬಂದ್ ಮಾಡಿದ್ದಾರೆ. ವಿಮಾನ ಪ್ರಯಾಣಕರನ್ನೆಲ್ಲ ಕ್ವಾರಂಟೈನ್‌ನಲ್ಲಿ ಮಡಗಿದ್ದಾರೆ. ಆದ್ರೂ ಇಲ್ಲಿ ಸಾವಿರಾರು ಸೋಂಕಿತರು ಕಂಡುಬಂದಿದ್ದು, ನೂರಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ. ಆದರೆ ಉತ್ತರ ಕೊರಿಯಾದಲ್ಲಿ ಒಂದೂ ಕೊರೋನಾ ಕೇಸು ಇಲ್ವಾ? ಯಾಕೆ ಅಲ್ಲಿಂದ ಕೊರೋನಾದ ಸುದ್ದಿಯೇ ಬರ್ತಿಲ್ಲ? ಹೀಗೊಂದು ಕುತೂಹಲಕಾರಿ ಪ್ರಶ್ನೆ ಎಲ್ಲರಲ್ಲಿ ಇದೆ.
ಉತ್ತರ ಕೊರಿಯಾದಿಂಧ ಸುದ್ದಿಗಳೇ ಬರದೇ ಇರುವುದು ನಿಜ. ಯಾಕೆಂದರೆ ಅದು ಕಮ್ಯುನಿಸ್ಟ್ ಆಡಳಿತದ ಸರಕಾರ. ಅಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ನ ಕಣ್ಣು ತಪ್ಪಿಸಿ ಒಂದು ಸೊಳ್ಳೆಯೂ ಹೊರ ಹೋಗುವಂತಿಲ್ಲ, ಒಳ ಬರುವಂತಿಲ್ಲ. ಹೀಗಾಗಿ ಕೊರೋನಾ ವೈರಸ್‌ಗೆ ಸಂಬಂಧಿಸಿದ ಎಲ್ಲ ಕ್ರಮಗಳನ್ನೂ ಸ್ವತಃ ಕಿಮ್ ನಿರ್ದೇಶಿಸ್ತಿದಾನೆ. ವೈದ್ಯರಿಗೂ ವಿಜ್ಞಾನಿಗಳಿಗೂ ತಾಕೀತು ಕೊಟ್ಟುಬಿಟ್ಟಿದ್ದಾನೆ- ಒಂದೇ ಒಂದು ಕೊರೋನಾ ಡೆತ್ ಆದ್ರೂ ಸುಮ್ಮನಿರಲ್ಲ ಅಂತ. ಕಿಮ್‌ನ ದೇಶದಲ್ಲಿ ಅಂಥ ಆಜ್ಞೆಗಳ ಅಂತಿಮ ಪರಿಣಾಮ ಗೊತ್ತಲ್ಲ. ತನ್ನ ಆಡಳಿತಕ್ಕೆ ದ್ರೋಹ ಬಗೆದ ಸಂಬಂಧಿಗಳನ್ನೇ ಹಿಂಧೆ ಮಂದೆ ನೋಡದೆ ಕೊಲ್ಲಿಸಿದ ಖ್ಯಾತಿ ಈತನದು. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನಹಾನಿ ಆದರೆ ಸುಮ್ಮನೆ ಬಿಡ್ತಾನಾ?
ಶ್ರೀ ರಾಮ ನವಮಿ ಬಳಿಕ ಕಡಿಮೆಯಾಗುತ್ತಾ ಕೊರೊನಾ ವೈರಸ್?
ಇದೆಲ್ಲದರ ನಡುವೆ ಇಲ್ಲಿನ ಆರೋಗ್ಯ ಸೇವೆ ಬಲಿಷ್ಠವಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಅದು ಪೊಲೀಸ್ ವ್ಯವಸ್ಥೆಯ ಜೊತೆಗೆ ಚೆನ್ನಾಗಿ ಹೊಂದಾಣಿಕೆ ಮಾಡಿಕೊಂಡಿದೆ. ಪ್ರತಿ ಮನೆ ಮನೆ ತಪಾಸಣೆ ನಡೆಸಲಾಗುತ್ತಿದೆ. ಅಲ್ಲಿನ ಮನೆಗಳನ್ನು ಸ್ಯಾನಿಟೈಸೇಷನ್ ಮಾಡಲಾಗ್ತಿದೆ. ಅಡ್ಡಿ ಪಡಿಸಿದವರಿಗೆ ನಿರ್ದಾಕ್ಷಿಣ್ಯವಾಗಿ ಜೈಲು ಶಿಕ್ಷೆ ಅಥವಾ ಮರಣದಂಡನೆ. ಚೀನಾದ ಜೊತೆಗೆ ಉತ್ತರ ಕೊರಿಯಾಗೆ ಸಾಕಷ್ಟು ವಹಿವಾಟುಗಳಿವೆ. ಸಾಕಷ್ಟು ಜನ ಹೋಗಿ ಬರುತ್ತಾರೆ.
ಆದರೆ ಚೀನಾದಲ್ಲಿ ಕೊರೋನಾ ಕೇಸುಗಳು ಹೆಚ್ಚತೊಡಗಿದಾಗ ಕಿಮ್ ಎಚ್ಚೆತ್ತುಕೊಂಡ. ಸ್ವತಃ ತಾನೇ ಭೂಗತನಾದ. ಭೂಮಿಯಡಿಯ ಬಂಕರ್‌ನಲ್ಲಿ ಹೋಗಿ ಕುಳಿತು ಅಲ್ಲಿಂದಲೇ ಆಡಳಿತ ಮಾಡತೊಡಗಿದ. ಎಲ್ಲ ವಿಮಾನ ಹಾರಾಟಗಳನ್ನು ಬಂದ್ ಮಾಡಲಾಯಿತು. ಕಳೆದ ಎರಡು ತಿಂಗಳಿನಿಂದ ದೇಶದೊಳಗೆ ಆಗಮಿಸಿದ ಎಲ್ಲ ಪ್ರಯಾಣಿಕರ ವಿವರ ತೆಗೆಯಲಾಯಿತು. ಪ್ರತಿಯೊಬ್ಬನನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ಸ್ವಲ್ಪವೇ ಸ್ವಲ್ಪ ಆರೋಗ್ಯ ಏರುಪೇರು, ಜ್ವರ, ಕೆಮ್ಮು ಕಂಡುಬಂದರೂ ಆಸ್ಪತ್ರೆಗೆ ದಾಖಲಿಸಲಾಯಿತು ಅಥವಾ ಕ್ವಾರಂಟೈನ್‌ನಲ್ಲಿ ಇಡಲಾಯಿತು. ಉತ್ತರ ಕೊರಿಯಾ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರಿದಿದೆ. ಹೀಗಾಗಿ ದೇಶದ ಪ್ರತಿ ಪ್ರಜೆಯನ್ನೂ ಕೊರೋನಾ ಟೆಸ್ಟ್‌ಗೆ ಒಳಪಡಿಸುವುದು ಇಲ್ಲಿ ಸಾಧ್ಯ. ಹಾಗೇ ಆರೋಗ್ಯ ಸೇವೆ ಖಾಸಗಿಯವರ ಬಳಿ ಇಲ್ಲ. ಅದು ಸರಕಾರದ ಬಳಿಯೇ ಇದೆ. ಎಲ್ಲವೂ ಸರಕಾರದ ಆಡಳಿತದಡಿಯೇ ನಡೆಯುತ್ತಿದೆ. ಮತ್ತು ಇಲ್ಲಿ ಏನು ನಡೆಯುತ್ತಿದೆ ಎಂಬುದು ಕೂಡ ಹೊರಜಗತ್ತಿಗೆ ಗೊತ್ತಾಗುವುದೇ ಇಲ್ಲ.
undefined
ಆದರೆ ಅಮೆರಿಕ ಬೇರೆಯದೇ ಕತೆ ಹೇಳುತ್ತಿದೆ. ಅಲ್ಲಿನ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ವರದಿಯಾದಂತೆ, ಉತ್ತರ ಕೊರಿಯಾದ ಆರೋಗ್ಯ ವ್ಯವಸ್ಥೆ ಹದಗೆಟ್ಟು ಹೋಗಿದೆ. ಯಾಕೆಂದರೆ ಆ ದೇಶದ ಮೇಲೆ ಎಷ್ಟೋ ವರ್ಷಗಳಿಂದ ಅಂತಾರಾಷ್ಟ್ರೀಯ ನಿಷೇಧ ನಿರ್ಬಂಧಗಳು ಇವೆ. ಉತ್ತರ ಕೊರಿಯಾ ಏನೋ ತನ್ನಲ್ಲಿ ಒಂದೇ ಒಂದು ಕೊರೋನಾ ಮರಣ ಕೂಡ ಇಲ್ಲವೆಂದು ಹೇಳಿಕೊಳ್ಳುತ್ತಿದೆ. ಅಲ್ಲಿನ ಪ್ರಜೆಗಳೂ ಕೂಡ ಆಡಳಿತದ ಭಯಕ್ಕೆ ಹೆದರಿ ಸುಮ್ಮನಿದ್ದಾರೆ. ಆದರೆ ಈ ಸರಕಾರದ ಮಾತನ್ನು ನಂಬುವಂತೆ ಇಲ್ಲ. ಎಷ್ಟಿದ್ದರೂ ಕಮ್ಯುನಿಸ್ಟ್ ಸರಕಾರ.
ಕೊರೋನಾ ವೈರಸ್ ಪೀಡಿತರ ಸೇವೆಗೆ ಮದ್ವೆಯನ್ನೇ ಮುಂದೂಡಿದ ವೈದ್ಯೆ!
ಉತ್ತರ ಕೊರಿಯಾಕ್ಕೆ ಸಂಬಂಧಿಸಿ ಒಂದು ಜೋಕ್ ವಾಟ್ಸ್ಯಾಪ್‌ನಲ್ಲಿ ಹರಿದಾಡುತ್ತಿದೆ: ಅಲ್ಲಿ ಬೆಳಗ್ಗೆ ಹತ್ತು ಗಂಟೆಗೆ ಒಂದು ಕೊರೋನಾ ಸೋಂಕು ಕಂಡುಬಂದರೆ, ಹತ್ತೂ ಇಪ್ಪತ್ತಕ್ಕೆ ಜೀರೋ ಕೇಸ್. ಮತ್ತೆ ಹನ್ನೊಂದು ಗಂಟೆಗೆ ಒಂದು ಕೇಸ್. ಹನ್ನೊಂದೂ ಇಪ್ಪತ್ತಕ್ಕೆ ಮತ್ತೆ ಜೀರೋ ಕೇಸ್! ಸೋಂಕಿತರ ಕತೆ ಏನಾಯಿತು ಎಂದು ಹೇಳುವುದು ಬೇಕಿಲ್ಲ.
ಕೊರೋನಾಗೆ ಸಂಬಂಧಿಸಿ ಉತ್ತರ ಕೊರಿಯಾ, ಚೀನಾದಿಂದ ಪಡೆದಿರುವ ಒಂದು ಸಹಾಯ ಎಂದರೆ ಅಲ್ಲಿನ ಟ್ರ್ಯಾಕಿಂಗ್ ಸಿಸ್ಟಮ್. ಸೋಂಕಿತರು ಹಾಗೂ ಶಂಕಿತರನ್ನು ಅವರ ಮೊಬೈಲ್‌ಗಳ ಮೂಲಕ ಟ್ರ್ಯಾಕ್ ಮಾಡುವ ಈ ವ್ಯವಸ್ಥೆ ಅಲ್ಲಿನ ಆಡಳಿತದ ಕಪಿಮುಷ್ಟಿಯನ್ನು ಇನ್ನಷ್ಟು ಬಿಗಿ ಮಾಡುವುದಕ್ಕೆ ನೆರವಾಗಿದೆ.