ಶ್ರೀ ರಾಮ ನವಮಿ ಬಳಿಕ ಕಡಿಮೆಯಾಗುತ್ತಾ ಕೊರೊನಾ ವೈರಸ್‌?

By Suvarna News  |  First Published Apr 1, 2020, 5:45 PM IST

ಶ್ರೀರಾಮ ನವಮಿಯ ಬಳಿಕ ನಮ್ಮ ದೇಶದಲ್ಲಿ ಬಿಸಿಲು ಹೆಚ್ಚಾಗುತ್ತದೆ. ಇಲ್ಲಿ ನವಮಿಯಂದು ಪಾನಕ ಪನಿವಾರ ಮಾಡಿ ಹಂಚುವುದು, ಈ ಉಷ್ಣತೆಯ ಉಗ್ರ ಪ್ರತಾಪವನ್ನು ಸಹಿಸಿಕೊಳ್ಳುವುದಕ್ಕಾಗಿಯೇ ಆಗಿದೆ. ಸದ್ಯ ನಾವು ಬಿಸಿಲನ್ನು ಸಹಿಸಿಕೊಳ್ಳೋಣ, ಆದರೆ ವೈರಸ್ಸನ್ನು ಈ ಬಿಸಿಲು ಕೊಂದು ಹಾಕಲಿದೆ.


ಭಾರತದಲ್ಲಿ ಸಾವಿರದ ಐನೂರಕ್ಕೂ ಹೆಚ್ಚು ಮಂದಿ ಕೊರೋನಾ ವೈರಸ್‌ ಸೋಂಕಿಗೆ ಒಳಗಾಗಿದ್ದಾರೆ. ೪೫ ಮಂದಿ ಸತ್ತಿದ್ದಾರೆ. ಇನ್ನಷ್ಟು ಸಾವು ನೋವು ಆಗುವ ಸಂಭವ ಇದೆ. ಈಗಾಗಲೇ ಸೋಂಕಿಗೆ ಒಳಗಾದವರು ತಮ್ಮ ಸುತ್ತಮುತ್ತಲಿನವರಿಗೆ ಸೋಂಕು ಹಬ್ಬಿಸುವ ಎಲ್ಲ ಸಾಧ್ಯತೆಯೂ ಇದೆ. ಆದರೆ, ಇಟಲಿ, ಸ್ಪೇನ್‌, ಅಮೆರಿಕ ಮುಂತಾದ ದೇಶಗಳಿಗೆ ಹೋಲಿಸಿದರೆ, ಅಷ್ಟೇ ವೇಗದಲ್ಲಿ ನಮ್ಮ ದೇಶದಲ್ಲಿ ಸೋಂಕು ಹಾಗೂ ಸಾವಿನ ಪ್ರಮಾಣ ಏರುವ ಸಾಧ್ಯತೆಗಳು ಕಡಿಮೆ ಎನ್ನುತ್ತಾರೆ ತಜ್ಞರು. ಅದಕ್ಕೆ ಅವರು ಕೊಡುತ್ತಿರುವ ಕಾರಣಗಳೂ ವೈಜ್ಞಾನಿಕವಾಗಿವೆ ಎಂದು ಕಾಣಿಸುತ್ತದೆ.
 

ಮೊದಲನೆಯದಾಗಿ, ಭಾರತ ಬಲು ಬೇಗನೆ ಎಚ್ಚೆತ್ತುಕೊಂಡು ಲಾಕ್‌ಡೌನ್‌ ಘೋಷಿಸಿದೆ. ಇಲ್ಲಿ ಯುಗಾದಿಯಂದು ಪ್ರಧಾನ ಮಂತ್ರಿಗಳು ಲಾಕ್‌ಡೌನ್‌ ಘೋಷಿಸಿದಾಗ ಇನ್ನೂ ಸಾವಿನ ಸಂಖ್ಯೆ ಹತ್ತು ಆಗಿರಲಿಲ್ಲ. ಸೋಂಕಿತರ ಸಂಖ್ಯೆಯೂ ಹೆಚ್ಚಾಗಿರಲಿಲ್ಲ. ಅದೇ ಸಂದರ್ಭದಲ್ಲಿ ಲಾಕ್‌ಡೌನ್‌ ಘೋಷಿಸಲಾಯಿತು. ಸಾರ್ವಜನಿಕ ಸಾರಿಗೆ ಸಂಪರ್ಕಗಳನ್ನು ಬಂದ್‌ ಮಾಡಲಾಯಿತು. ಚೀನಾ ಮುಂತಾದೆಡೆ ವೈರಸ್‌ ಹರಡಿದ್ದೇ ಸಾರಿಗೆಯ ಮೂಲಕ. ಆರಂಭದಲ್ಲೇ ಸಾರಿಗೆಯನ್ನು ನಿಯಂತ್ರಿಸಿರುವುದು ಈ ನಿಟ್ಟಿನಲ್ಲಿ ಮಾಸ್ಟರ್‌ ಸ್ಟ್ರೋಕ್‌.
 

Tap to resize

Latest Videos

undefined

ಎರಡನೆಯದು, ಭಾರತ ಉಷ್ಣವಲಯದ ದೇಶ. ಚೀನಾ ಆಗಲೀ, ಇಟಲಿ ಆಗಲೀ ಶೀತ ವಲಯದಲ್ಲಿರುವ ದೇಶಗಳು. ಅಲ್ಲಿನ ತಾಪಮಾನ ಸದಾ ಕಾಲ ೨೦ ಡಿಗ್ರಿ ಸೆಂಟಿಗ್ರೇಡ್‌ಗಿಂತ ಕೆಳಗೇ ಇರುತ್ತದೆ. ಅಮೆರಿಕವೂ ಅಷ್ಟೇ. ಆದರೆ ಉಷ್ಣವಲಯದ ದೇಶಗಳಾದ ಅರಬ್‌ ದೇಶಗಳು, ಭಾರತ, ಆಫ್ರಿಕದ ದೇಶಗಳು, ದಕ್ಷಿಣ ಅಮೆರಿಕದ ದೇಶಗಳು ಇನ್ನೂ ಅಷ್ಟೊಂದು ಸಾವು ನೋವು ದಾಖಲಿಸಿಲ್ಲ. ಇದಕ್ಕೆ ಕಾರಣ, ಅಲ್ಲಿಗೆ ಇನ್ನೂ ಸೋಂಕು ಸಾಕಷ್ಟು ಹರಡಿಲ್ಲ ಎನ್ನುವುದಕ್ಕಿಂತಲೂ ಬಿಸಿಲು ನಾಡಿನಲ್ಲಿ ವೈರಸ್‌ ಹೆಚ್ಚು ಕಾಲ ಬದುಕುವುದಿಲ್ಲ ಎನ್ನುವುದೇ ಕಾರಣ ಆಗಿರಬಹುದು. ಉದಾಹರಣೆಗೆ, ಕಬ್ಬಿಣ ಉಕ್ಕಿನಿಂದ ಮಾಡಿದ ಗ್ರಿಲ್‌ಗಳು ಮುಂತಾದ ಲೋಹದ ಮೇಲೆ ಈ ವೈರಸ್‌ ಮೂರು ದಿನಗಳ ಕಾಲ ಬದುಕಿರಬಲ್ಲದು. ಯಾಕೆಂದರೆ ಅವು ತಂಪಾಗಿರುತ್ತವೆ. ಆದರೆ ಪೇಪರ್‌, ಕಾರ್ಡ್‌ಬೋರ್ಡ್ ಮುಂತಾದ ಅಷ್ಟೇನೂ ತಂಪಲ್ಲದ, ವಾತಾವರಣದ ಉಷ್ಣತಾಮಾನವನ್ನೇ ಹೊಂದಿರುವ ಸಾಮಗ್ರಿಗಳ ಮೇಲೆ ಇವುಗಳ ಆಯುರ್ಮಾನ ನಾಲ್ಕು ಗಂಟೆಗೂ ಕಡಿಮೆ. ಈಗಾಗಲೇ ನಮ್ಮ ದೇಶದಲ್ಲಿ ಬಿಸಿಲು ಬಾರಿಸುತ್ತಿದೆ. ಕಲಬುರಗಿ ಮುಂತಾದ ಕಡೆ ಹೊರಗೆ ಹೋದರೆ ಬಿಸಿಲಿನಲ್ಲೇ ಸಾಯುವ ಭಯ. ಇಂಥ ಬಿಸಿಲಿನಲ್ಲಿ, ತಾಪಮಾನದಲ್ಲಿ ವೈರಸ್‌ ಹೆಚ್ಚು ಕಾಲ ಬದುಕಿ ಉಳಿಯುವುದಿಲ್ಲ ಹಾಗೂ ವರ್ಧಿಸಲು ಅಗತ್ಯವಾದ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಇದೊಂದು ಭರವಸೆಯ ವಿದ್ಯಮಾನ.
 

ಶ್ರೀರಾಮ ನವಮಿಯ ಬಳಿಕ ನಮ್ಮ ದೇಶದಲ್ಲಿ ಬಿಸಿಲು ಹೆಚ್ಚಾಗುತ್ತದೆ. ಇಲ್ಲಿ ನವಮಿಯಂದು ಪಾನಕ ಪನಿವಾರ ಮಾಡಿ ಹಂಚುವುದು, ಈ ಉಷ್ಣತೆಯ ಉಗ್ರ ಪ್ರತಾಪವನ್ನು ಸಹಿಸಿಕೊಳ್ಳುವುದಕ್ಕಾಗಿಯೇ ಆಗಿದೆ. ಸದ್ಯ ನಾವು ಬಿಸಿಲನ್ನು ಸಹಿಸಿಕೊಳ್ಳೋಣ, ಆದರೆ ವೈರಸ್ಸನ್ನು ಈ ಬಿಸಿಲು ಕೊಂದು ಹಾಕಲಿದೆ.

 

ಕೊರೊನಾ: ಮಕ್ಕಳಿಗೆ ಏನ್‌ ಹೇಳ್ಬೇಕು, ಏನ್‌ ಹೇಳ್ಬಾರ್ದು?

 

ವಿಜ್ಞಾನಿಗಳು ಹೇಳುತ್ತಿರುವ ಇನ್ನೊಂದು ವಿಚಾರ ಎಂದರೆ ರೋಗ ನಿರೋಧಕ ಶಕ್ತಿಯದ್ದು. ಉಷ್ಣವಲಯದ ದೇಶಗಳು, ಅದರಲ್ಲೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಜನತೆಗೆ ರೋಗ ನಿರೋಧಕ ಶಕ್ತಿ ಹೆಚ್ಚು. ಉದಾಹರಣೆಗೆ, ಉಷ್ಣವಲಯದಲ್ಲಿ ರೋಗಕಾರಕ ಬ್ಯಾಕ್ಟೀರಿಯಾ, ವೈರಸ್‌ಗಳು ಅಧಿಕ. ಆದರೆ ಅವು ಇಲ್ಲಿ ಹಾವಳಿ ಮಾಡುವುದಕ್ಕಿಂತಲೂ ಶೀತ ವಲಯದ ದೇಶಗಳಲ್ಲೇ ಹಾವಳಿ ಮಾಡುವುದು ಹೆಚ್ಚು. ಉದಾಹರಣೆಗೆ, ಸಾಮಾನ್ಯ ಫ್ಲೂ ನೆಗಡಿ ಜ್ವರದಲ್ಲೇ ವರ್ಷದಲ್ಲಿ ಸಾವಿರಾರು ಅಮೆರಿಕನ್ನರು ಸಾಯುತ್ತಾರೆ. ಆದರೆ ನಮ್ಮಲ್ಲಿ ಅಷ್ಟೆಲ್ಲ ಮಂದಿ ಸಾಯುವುದೇ ಇಲ್ಲ. ಅಮೆರಿಕದಲ್ಲಿ ಸಾಮಾನ್ಯ ಮಲೇರಿಯಾ, ನ್ಯುಮೋನಿಯಾ ಬಂದರೇ ಸರಕಾರಗಳು ಕಂಗಾಲಾಗುತ್ತವೆ. ಆದರೆ ನಮ್ಮ ದೇಶಗಳು ಅದನ್ನು ಕ್ಯಾರೇ ಮಾಡುವುದಿಲ್ಲ. ಕಳೆದ ಸಲ ಯುರೋಪ್, ಅಮೆರಿಕದಲ್ಲಿ ಹಾವಳಿ ಎಬ್ಬಿಸಿದ ಸಾರ್ಸ್ ಕೊರೊನಾ ವೈರಸ್‌ ಕೂಡ ಭಾರತಕ್ಕೆ ಕಾಲಿಡುವುದಕ್ಕೇ ಅಂಜಿಕೊಂಡಿತು. ಈ ಸಲವು ವೈರಸ್ಸೇನೋ ಬಂದಿದೆ. ಆದರೆ ನಾವು ಅದನ್ನು ಎದುರಿಸಲು ಸಾಕಷ್ಟು ಪ್ರತಿರೋಧ ಶಕ್ತಿ ಹೊಂದಿದ್ದೇವೆ.

 

ಮನೆಯಲ್ಲೇ ಕುಳಿತು ಖಿನ್ನತೆ ಬೇಕಿದೆ ಎಚ್ಚರ, ತಜ್ಞರ ಸಲಹೆ

 

ಇನ್ನೊಂದು ವಿಚಾರ ಎಂದರೆ ನಮ್ಮಲ್ಲಿರುವ ಯುವಜನತೆ ಹಾಗೂ ವಯಸ್ಕರ ಪ್ರಮಾಣ. ಈ ರೋಗ ಹೆಚ್ಚಾಗಿ ಅರುವತ್ತಕ್ಕೂ ಹೆಚ್ಚು ವಯಸ್ಸಾದವರು ಮತ್ತು ಕ್ಯಾನ್ಸರ್, ಹೃದಯರೋಗ, ಮಧುಮೇಹ ಮುಂತಾದ ಆರೋಗ್ಯ ಸಮಸ್ಯೆ ಇರುವವರನ್ನು ಕಾಡುವುದು ಹೆಚ್ಚು. ಯುವಜನತೆಯನ್ನು ಬಾಧಿಸುವುದು ಕಡಿಮೆ. ಭಾರತ ಯುವಜನರ ದೇಶ. ಇಲ್ಲಿ ವೃದ್ಧರು ಕಡಿಮೆ. ಹೀಗಾಗಿ ವೈರಸ್‌ಗೆ ಇಲ್ಲಿ ಅವಕಾಶವಿಲ್ಲ.
 

ಮುಖ್ಯವಾಗಿ, ರೋಗ ಪ್ರತಿರೋಧ ಶಕ್ತಿಯ ಜೊತೆಗೆ, ಮಾನಸಿಕ ಆರೋಗ್ಯವೂ ಗಟ್ಟಿಯಾಗಿ ಇರಬೇಕು ಅನ್ನುತ್ತಾರೆ ತಜ್ಞರು. ಆಗ ಎಂಥ ವೈರಸ್ಸನ್ನೂ ಎದುರಿಸಬಹುದು. ಶ್ರೀ ರಾಮ ನವಮಿ ನಮಗೆ ಅಂಥ ನಿರೋಗ ದೃಢಕಾಯತ್ವವನ್ನು ಕೊಡಲಿ.

click me!